ಸಾಕಷ್ಟು ಪರಿಶ್ರಮ ಪಟ್ಟು ಕೂಡ ರಮೇಶನಿಗೆ ನೌಕರಿ ದೊರಕಲಿಲ್ಲ. ಆಗ ಅವನ ತಂದೆ ಅವನಿಗೆ ಒಂದು ಸಣ್ಣ ಅಂಗಡಿ ಹಾಕಿಕೊಟ್ಟರು. ಆದರೆ 6 ತಿಂಗಳಾದರೂ ಆ ಅಂಗಡಿ ಸರಿಯಾಗಿ ನಡೆಯಲಿಲ್ಲ. ಕೆಲವು ತಿಂಗಳುಗಳ ಬಳಿಕ ರಮೇಶನಿಗೆ ವಿವಾಹವಾಯಿತು.

ಅವನ ಹೆಂಡತಿ ಓದಿದವಳು. ಹೆಚ್ಚಾಗಿ ವ್ಯವಹಾರ ಜ್ಞಾನವುಳ್ಳವಳು. ಕೆಲವು ತಿಂಗಳುಗಳ ಬಳಿಕ ರಮೇಶನ ಹೆಂಡತಿ ಅಂಗಡಿಗೆ ಹೋಗತೊಡಗಿದಳು. ಅಲ್ಲಿ ಅವಳು ಗಮನಿಸಿದ್ದೇನೆಂದರೆ, ರಮೇಶನ ಸಿಡಿಮಿಡಿತನ ಹಾಗೂ ಶುಷ್ಕ ವರ್ತನೆಯಿಂದ ಗ್ರಾಹಕರು ಅವನ ಅಂಗಡಿಗೆ ಬರಲು ಇಷ್ಟಪಡುತ್ತಿರಲಿಲ್ಲ. ಆದರೆ ಅವನ ಹೆಂಡತಿಯ ಹಸನ್ಮುಖಿ ವರ್ತನೆ, ಗ್ರಾಹಕರ ಪ್ರತಿಯೊಂದು ಮಾತಿನ ಬಗೆಗೂ ಗಮನ ಹಾಗೂ ಎಲ್ಲರಿಗೂ ಗೌರವ ಕೊಡುವ ರೀತಿ ಗ್ರಾಹಕರು ಪುನಃ ಆ ಅಂಗಡಿಗೆ ಬರುವಂತಾಯಿತು. ಅವನ ಸ್ಮಾರ್ಟ್ ಪತ್ನಿ ನಗರದ ದೊಡ್ಡ ದೊಡ್ಡ  ಸ್ಟೋರ್‌ಗಳಲ್ಲಿ ಲಭ್ಯವಾಗುವ ಆಫರ್ಸ್‌ಗಳ ಬಗ್ಗೆ ಗಮನ ಇಟ್ಟಿರುತ್ತಿದ್ದಳು. ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸಾಮಾನುಗಳನ್ನು ತಂದು ಅಂಗಡಿಯಲ್ಲಿ ಇರಿಸುತ್ತಿದ್ದಳು. ಹಿಂದೆ ತಿಂಗಳಿಗೆ 50,000 ವ್ಯಾಪಾರ ಆಗುತ್ತಿತ್ತು. ಈಗ ಅದು 1 ಲಕ್ಷ ರೂ. ದಾಟಿತ್ತು.

ಹೆಂಡತಿಯ ಕೌಶಲ ಮತ್ತು ಬುದ್ಧಿಮತ್ತೆಯಿಂದಾಗಿ ತನ್ನ ಅಂಗಡಿಯಲ್ಲಿ ಇಷ್ಟೊಂದು ಸಮೃದ್ಧಿಯಾಗುತ್ತಿರುವುದನ್ನು ಕಂಡು ರಮೇಶ್ ಚಕಿತನಾದ. ಅವನೀಗ ಹೆಂಡತಿಯ ಸಲಹೆಯ ಮೇರೆಗೆ ಕೆಲಸ ಮಾಡಲು ಶುರು ಮಾಡಿದ. ತನ್ನ ಸ್ವಭಾವದಲ್ಲೂ ಸಾಕಷ್ಟು ಬದಲಾವಣೆ ತಂದುಕೊಂಡ. ಅದರಿಂದಾಗಿ  ಗ್ರಾಹಕ ವಲಯದಲ್ಲಿ ಖುಷಿ ಎದ್ದು ಕಾಣುತ್ತಿತ್ತು.

ರಮೇಶನಿಗೆ ವಿವಾಹವಾಗಿ ಈಗ 10 ವರ್ಷಗಳೇ ಆಗಿವೆ. ಇಬ್ಬರು ಮಕ್ಕಳಿದ್ದಾರೆ. ಅಂದು ಸಣ್ಣ ಪ್ರಮಾಣದಲ್ಲಿ ಶುರುವಾಗಿದ್ದ ರಮೇಶ್‌ ಸ್ಟೋರ್ಸ್‌ ಈಗ ಮೂರು ಮಹಡಿಯ `ರಮೇಶ್‌ ಜನರಲ್ ಸ್ಟೋರ್ಸ್‌' ಆಗಿ ಪರಿವರ್ತನೆಯಾಗಿದೆ. ರಮೇಶ್‌ ಈ ಶ್ರೇಯಸ್ಸನ್ನು ತನ್ನ ಹೆಂಡತಿಗೆ ಕೊಡಲು ಇಷ್ಟಪಡುತ್ತಾನೆ. ಕೋಚಿಂಗ್‌ ಸಂಚಾಲಕ ಅಜಯ್‌ ಹೀಗೆ ಹೇಳುತ್ತಾರೆ, ``ನನ್ನ ಹೆಂಡತಿ ನನ್ನ ಕೋಚಿಂಗ್‌ಗೆ ಜೊತೆ ಕೊಡಲು ಶುರು ಮಾಡಿದಾಗ, ನನ್ನ ವಿದ್ಯಾರ್ಥಿಗಳ ಸಂಖ್ಯೆ ನಿರಂತರಾಗಿ ಹೆಚ್ಚುತ್ತಾ ಹೋಯಿತು. ಇದಕ್ಕೆ ಕಾರಣವೇನೆಂದರೆ, ಅವಳಿಗೆ ಪ್ರತಿಯೊಂದು ವಿಷಯದ ಮೇಲಿನ ಹಿಡಿತ ಹಾಗೂ ಮಕ್ಕಳ ಮಾನಸಿಕ ಮಟ್ಟಕ್ಕೆ ತಕ್ಕಂತೆ ಬೋಧನೆಯ ವಿಧಾನ ಅನುಸರಿಸುವುದು ಹಾಗೂ ವ್ಯವಹಾರ ಕುಶಲತೆ, ಎಲ್ಲರ ಜೊತೆ ಸಕಾರಾತ್ಮಕ ವರ್ತನೆಯಿಂದಾಗಿ ಅವಳು ಎಟಿಎಂಗಿಂತ ಹೆಚ್ಚು ಮೌಲ್ಯವುಳ್ಳವಳು ಎಂದಾಗಿತ್ತು. ಒಂದು ಎಟಿಎಂ ಹಣ ತೆಗೆದ ಬಳಿಕ ಬ್ಯಾಲೆನ್ಸ್ ತೋರಿಸುತ್ತದೆ. ಆದರೆ ನನ್ನ ಹೆಂಡತಿ ಯಾವುದೇ ಕೆಲಸದಲ್ಲಿ ಬ್ಯಾಲೆನ್ಸ್ ತೋರಿಸುವುದಿಲ್ಲ. ಅವಳಿಂದಾಗಿ ನಾವಿಂದು ಒಳ್ಳೆಯ ಜೀವನ ಸಾಗಿಸಲು ಸಾಧ್ಯವಾಗಿದೆ.''

ಸ್ಮಾರ್ಟ್‌ ಪತ್ನಿ ಎಟಿಎಂ ಏಕೆ?

ಎಟಿಎಂ ಒಂದು ಸ್ವಯಂ ಚಾಲಿತ ಯಂತ್ರ. ಅದರಲ್ಲಿ ಕೇವಲ ಒಂದು ಕಾರ್ಡ್‌ ಹಾಕುವ ಅವಶ್ಯಕತೆ ಇರುತ್ತದೆ. ಬಳಿಕ ಪಿನ್ ಹಾಕಿದರೆ ಹಣ ಬರುವ ಪ್ರಕ್ರಿಯೆ ನಡೆಯುತ್ತದೆ. ಅದೇ ಪ್ರಕಾರ ಒಬ್ಬ ಪತಿಗೆ ಸ್ಮಾರ್ಟ್‌ ಹೆಂಡತಿ ಎಂತಹ ಒಂದು ಎಟಿಎಂ ಎಂದರೆ, ಅವಳು ತನ್ನ ಗುಣ ಹಾಗೂ ಸಾಮರ್ಥ್ಯದ ಬಲದ ಮೇಲೆ ಕೇವಲ ಒಂದೇ ಸಮಯಕ್ಕೆ ಅಲ್ಲ, ಪ್ರತಿ ಸಲ ಕೌಶಲಪೂರ್ವಕವಾಗಿ ಮನೆ ನಡೆಸಿ, ಹಣ ಉಳಿಸಲು ನೆರವಾಗುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ