ರಜನಿ ತನ್ನ ಅಕ್ಕನನ್ನು ನೋಡಲೆಂದು ಅವಳ ಮನೆಗೆ ಹೋದಳು. ಅಕ್ಕನ ಚಿಂತಿತ ಮುಖವನ್ನು ಕಂಡು ಕಾರಣ ಕೇಳಿದಳು. ಅದಕ್ಕೆ ನಳಿನಿ ನೋವಿನಿಂದ ಹೇಳಿದಳು, ``ನಿಕಿತಾ (ಅವಳ 13 ವರ್ಷದ ಮಗಳು) ಕಳೆದ ಕೆಲವು ದಿನಗಳಿಂದ ಸಪ್ಪಗಿರುತ್ತಾಳೆ. ಮಾತು ಕಡಿಮೆ ಮಾಡಿಬಿಟ್ಟಿದ್ದಾಳೆ. ಮೊದಲಿನ ಹಾಗೆ ನಗುನಗುತ್ತಾ ಇರೋದಿಲ್ಲ. ಗೆಳತಿಯರ ಜೊತೆ ಬೆರೆಯುತ್ತಿಲ್ಲ. ಕೇಳಿದರೆ ಸರಿಯಾಗಿ ಉತ್ತರ ಕೊಡೋದಿಲ್ಲ.''

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ತಾಯಂದಿರು ತಮ್ಮ ಟೀನೇಜ್‌ ಮಕ್ಕಳ ಬಗ್ಗೆ ಚಿಂತಿತರಾಗಿರುವುದು ಕಂಡುಬರುತ್ತಿದೆ. `ಸ್ನೇಹಿತರ ಜೊತೆಯಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾರೆ. ಚ್ಯಾಟಿಂಗ್‌ ಮಾಡುತ್ತಾರೆ. ನಾವು ಕೇಳಿದರೆ ಏನೂ ಇಲ್ಲ ಅಮ್ಮ ಎಂದು ಬಿಡುತ್ತಾರೆ,' ಎಂದು ತಾಯಂದಿರು ಬೇಸರಿಸಿಕೊಳ್ಳುತ್ತಾರೆ.

``ನಮ್ಮ ಕಾಲದಲ್ಲಿ ಹೀಗಿರಲಿಲ್ಲ ರಜನಿ. ಅಮ್ಮ ನಮಗೆ ಸ್ನೇಹಿತೆಯ ಹಾಗೆ ಇದ್ದರು. ನಮ್ಮ ಒಳ್ಳೆಯದು ಕೆಟ್ಟದ್ದು ಎಲ್ಲ ಅವರಿಗೆ ಚೆನ್ನಾಗಿ ಗೊತ್ತಿತ್ತು. ನಮ್ಮ ಗೆಳೆತಿಯರು ಮನೆಗೆ ಬಂದರೆ ಅಮ್ಮ ಅವರ ಜೊತೆ ಕುಳಿತು ಎಲ್ಲ ವಿಷಯವನ್ನೂ ಮಾತನಾಡುತ್ತಿದ್ದರು. ಈಗಿನ ಮಕ್ಕಳು ತಂದೆ ತಾಯಿ ಜೊತೆ ವ್ಯವಹರಿಸುವುದನ್ನು ನೋಡಿದರೆ ನನಗೆ ಬೇಸರವಾಗುತ್ತದೆ,'' ಎಂದು ನಳಿನಿ ದುಗುಡದಿಂದ ಹೇಳಿದಳು.

ಕಾರಣವೇನು?

ಈ ಬಗ್ಗೆ ವಾಸ್ತವಾಂಶವನ್ನು ತಿಳಿಯಲು ಯುವಜನರನ್ನು ಸಂದರ್ಶಿಸಲಾಯಿತು.

ಪ್ರಶ್ನೆ ಹಾಕುತ್ತಿದ್ದಂತೆ 14 ವರ್ಷದ ನೇಹಾ ದೂರಿದಳು, ``ನಮ್ಮ ಅಮ್ಮನಿಗೆ ಗೊತ್ತಿರೋದೆಲ್ಲ ಒಂದೇ. ಇದು ಮಾಡಬೇಡ. ಅಲ್ಲಿಗೆ ಹೋಗಬೇಡ, ಅಡುಗೆಮನೆ ಕೆಲಸ ಕಲಿತುಕೊ ಅನ್ನುವುದು.''

10ನೇ ತರಗತಿಯಲ್ಲಿ ಓದುತ್ತಿರುವ ಸ್ವಾತಿ ತನ್ನ ತಾಯಿ ಬಗ್ಗೆ ಗೌರವವನ್ನೇನೋ ಇರಿಸಿಕೊಂಡಿದ್ದಾಳೆ. ಆದರೆ ಎಲ್ಲ ವಿಷಯಗಳನ್ನೂ ಅವರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. 17 ವರ್ಷದ ಶೈಲಾಳ ದೂರೆಂದರೆ, ``ಅಣ್ಣ ರಾತ್ರಿ 9 ಗಂಟೆಗೆ ಮನೆಗೆ ಬಂದರೂ ಅಮ್ಮ ಏನೂ ಅನ್ನುವುದಿಲ್ಲ. ಆದರೆ ನನಗೆ ಮಾತ್ರ, ನೀನು ಹೆಣ್ಣು ಹುಡುಗಿ, ಟೈಮಿಗೆ ಸರಿಯಾಗಿ ಮನೆಗೆ ಬರಬೇಕು. ನಾವು ತಲೆ ತಗ್ಗಿಸುವ ಹಾಗೆ ಮಾಡಬೇಡ,'' ಎನ್ನುತ್ತಾರೆ.

ಯಾವುದೇ ವೈಯಕ್ತಿಕ ಸಮಸ್ಯೆ ಅಥವಾ ಶಾಲೆಯ ಬಗೆಗಿನ ಸಮಸ್ಯೆ ಉಂಟಾದಾಗ ಆ ಬಗ್ಗೆ ಯಾರೊಡನೆ ಚರ್ಚಿಸಲು ಇಷ್ಟಪಡುತ್ತೀಯೆ ಎಂದು 17 ವರ್ಷದ ಮುಕ್ತಾಳನ್ನು ಪ್ರಶ್ನಿಸಲು, ``ಜ್ವರ ಬಂದಾಗ ಅಥವಾ ಯಾವುದಾದರೂ ಸಮಸ್ಯೆ ಉಂಟಾದಾಗ ಎಲ್ಲಕ್ಕೂ ಮೊದಲು ತಾಯಿಯ ನೆನಪಾಗುತ್ತದೆ. ಅವರು ತಾಳ್ಮೆಯಿಂದ ಕೇಳುವರಲ್ಲದೆ, ಕೆಲವೇ ನಿಮಿಷಗಳಲ್ಲಿ ಪರಿಹಾರ ಸೂಚಿಸಿ ಟೆನ್ಶನ್‌ಫ್ರೀಗೊಳಿಸುತ್ತಾರೆ. ಅಮ್ಮನಂತೆ ಬೇರೆ ಯಾರೂ ಇರಲಾರರು,'' ಎಂದು ಹೇಳುತ್ತಾಳೆ. ಈ ಯುವತಿಯರೊಂದಿಗೆ ಮಾತನಾಡಿದ ನಂತರ ತಿಳಿದು ಬಂದುದೆಂದರೆ ಇವರೆಲ್ಲ ತಿರುಗಾಡಲು, ಸಿನಿಮಾ ನೋಡಲು, ಹರಟೆ ಹೊಡೆಯಲು ಅಥವಾ ಮಜಾ ಮಾಡಲು ಸ್ನೇಹಿತರನ್ನು ಹುಡುಕುತ್ತಾರೆ, ಅದರೆ ಯಾವುದಾದರೂ ಸಮಸ್ಯೆ ಎದುರಾದಾಗ ತಾಯಿಯ ಬಳಿಗೆ ಓಡುತ್ತಾರಲ್ಲದೆ  ತಂದೆ, ಸೋದರ ಸೋದರಿಯರು ಅಥವಾ ಆಪ್ತ ಸ್ನೇಹಿತರ ಬಳಿಗಲ್ಲ. ಹೀಗಾಗಿ ಟೀನೇಜರ್ಸ್ ಗೆ ತಾಯಿಯೇ ಗೈಡ್‌ಮತ್ತು ಬೆಸ್ಟ್ ಫ್ರೆಂಡ್‌ಆಗಿರುತ್ತಾರೆ.

ಹಾಗಾದರೆ ಈ ಹದಿ ವಯಸ್ಸಿನ ಮಕ್ಕಳು ತಮ್ಮ ತಾಯಿಯೊಂದಿಗಿನ ಸ್ನೇಹ ಸಂಬಂಧವನ್ನು ಉಳಿಸಕೊಳ್ಳುವುದಿಲ್ಲವೇಕೆ? ಎಂದರೆ, ಈ ಕಾಲಕ್ಕೆ ತಕ್ಕಂತೆ ತಾವು ಎಲ್ಲವನ್ನೂ ತಿಳಿದಿದ್ದೇವೆ ಮತ್ತು ತಮ್ಮ ತಾಯಿಗೆ ಆಧುನಿಕ ವಿಚಾರಗಳು ಏನೂ ತಿಳಿದಿಲ್ಲ ಎಂಬ ಭಾವನೆ ಅವರಿಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ