ಶಶಿರೇಖಾ ತನ್ನ 5 ವರ್ಷದ ಮಗನೊಂದಿಗೆ ಸ್ನೇಹಿತೆಯ ಮನೆಗೆ ಹೋದಳು. ಅಲ್ಲಿ ತಲುಪುತ್ತಿದ್ದಂತೆ ಶಶಿರೇಖಾ ಹಾಗೂ ಮಗನಿಗೆ ಬಗೆಬಗೆಯ ಉಪಚಾರಗಳು ದೊರೆಯಲಾರಂಭಿಸಿದವು. ತಟ್ಟೆಯಲ್ಲಿ ಇಟ್ಟಿದ್ದ ಆಹಾರ ವಸ್ತುಗಳನ್ನು ಮಗು ತನ್ನ ಜೇಬಿಗೆ ಹಾಕಿಕೊಳ್ಳಲಾರಂಭಿಸಿತು. ಬಳಿಕ ಶಶಿರೇಖಾಳ ಗೆಳತಿಯ 4 ವರ್ಷದ ಮಗುವನ್ನು ನೂಕಿತು. ಶಶಿರೇಖಾ ಮಗುವನ್ನು ಗದರಿದಾಗ ಅದು ಪ್ರತಿಯಾಗಿ ಏನೇನೋ ಕೂಗಾಡಿತು. ಮಗುವಿನ ಈ ರೀತಿಯ ವರ್ತನೆಯಿಂದ ಶಶಿರೇಖಾಗೆ ಬಹಳ ಇರಸುಮುರಸಾಯಿತು.

ನೀವು ನಿಮ್ಮ ಮಗುವನ್ನು ಕರೆದುಕೊಂಡು ಯಾರ ಮನೆಗಾದರೂ ಹೋದರೆ, ಅದು ಯಾವ ರೀತಿಯಲ್ಲಿ ವರ್ತಿಸಬಹುದು ಎಂದು ಹೇಳಲು ಸಾಧ್ಯವಿಲ್ಲ. ಎಷ್ಟೋ ಸಲ ಮಗು ಮನೆಯಲ್ಲಿ ಚೆನ್ನಾಗಿ ವರ್ತಿಸುತ್ತದೆ. ಆದರೆ ಹೊರಗೆ ಹೋದಾಗ ಅದು ವಿಚಿತ್ರವಾಗಿ ವರ್ತಿಸುತ್ತದೆ.

ಈ ಕುರಿತಂತೆ ಮನೋತಜ್ಞ ಡಾ. ಅನಿಲ್ ‌ಅವರು ಹೀಗೆ ಹೇಳುತ್ತಾರೆ, ``ಮಗು ಹೇಗೆಯೇ ವರ್ತಿಸಲಿ, ಅದನ್ನೆಲ್ಲ ಅದು ಕುಟುಂಬದವರಿಂದಲೇ ಕಲಿತುಕೊಳ್ಳುತ್ತದೆ. ನೀವು ಮನೆಯಲ್ಲಿ ಯಾರೊಂದಿಗೆ ಹೇಗೆ ವರ್ತಿಸುತ್ತೀರೊ ಮಗು ಅದನ್ನು ಅನುಕರಣೆ ಮಾಡುತ್ತದೆ. ಎಷ್ಟೋ ಸಲ ಅದು ಗಮನ ಸೆಳೆಯಲು ಹೇಗ್ಹೇಗೊ ಮಾತನಾಡುತ್ತದೆ.

``ಪೇರೆಂಟಿಂಗ್‌' ಅಂದರೆ ಮಗುವಿನ ಸಮಂಜಸ ಅಸಮಂಜಸ ಬೇಡಿಕೆಗಳನ್ನು ಈಡೇರಿಸುವುದಷ್ಟೇ ಅಲ್ಲ, ಮಗುವನ್ನು ಗಮನದಲ್ಲಿಟ್ಟುಕೊಂಡು ಅದರದ್ದೇ ಆದ ರೀತಿಯಲ್ಲಿ ಅದು ನಿಮ್ಮ ಸರಿಯಾದ ಮಾತನ್ನು ಇಷ್ಟಪಡುವ ರೀತಿಯಲ್ಲಿ ತಿಳಿಸಿ ಹೇಳುವುದಾಗಿದೆ. ನೀವು ನಿಮ್ಮ ಮಕ್ಕಳಿಗೆ ಒಳ್ಳೆಯದು ಕೆಟ್ಟದರ ಬಗ್ಗೆ ಅರಿವು ಮೂಡಿಸುತ್ತೀರಾ? ಆದರೆ ಆ ಮಗುವಿಗೆ ಚಿಕ್ಕವರು ದೊಡ್ಡವರ ಜೊತೆ ಹೇಗೆ ಸಂಯಮದಿಂದ ನಡೆದುಕೊಳ್ಳಬೇಕು ಎಂಬುದನ್ನು ಕಲಿಸಲು ಮರೆತುಬಿಡುತ್ತೀರಾ. ಈ ಕಾರಣದಿಂದಾಗಿ ಮಗು ಯಾರ ಜೊತೆಗೆ ಯಾವಾಗ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿತುಕೊಳ್ಳುವುದಿಲ್ಲ.

ನಿಮ್ಮನ್ನು ಬದಲಿಸಿಕೊಳ್ಳಿ....

ನಿಮ್ಮ ಮಗುವನ್ನು ಉತ್ತಮ ವರ್ತನೆಗೆ ಪ್ರೇರೇಪಿಸಲು ಎಲ್ಲಕ್ಕೂ ಮೊದಲು ನಿಮ್ಮನ್ನು ನೀವು ಬದಲಿಸಿಕೊಳ್ಳಬೇಕಾಗುತ್ತದೆ. ನೀವು ನಿಮ್ಮ ಕುಟುಂಬದವರೊಂದಿಗೆ ಹೇಗೆ ವರ್ತಿಸುತ್ತೀರೋ, ಮಗು ಅದನ್ನೇ ಅನುಕರಣೆ ಮಾಡುವುದನ್ನು ಕಲಿತುಕೊಳ್ಳುತ್ತದೆ. ನಿಮ್ಮ ಪ್ರೀತಿಯ ಪುತ್ರ ಕುಟುಂಬದವರನ್ನು ಗೌರವಿಸಬೇಕು, ಯಾರೊಂದಿಗೂ ಜೋರು ಧ್ವನಿಯಲ್ಲಿ ಮಾತನಾಡಬಾರದೆಂದು ನೀವು ಬಯಸುವಿರಾದರೆ, ನೀವು ಮೊದಲು ನಿಮ್ಮ ಕುಟುಂಬದವರನ್ನು ಗೌರವಿಸಬೇಕು. ಅವರೊಂದಿಗೆ ಏರಿದ ಧ್ವನಿಯಲ್ಲಿ ಮಾತನಾಡಬಾರದು. ನಿಮ್ಮ ಅತ್ತೆ ಮಾವ ಹಾಗೂ ಕುಟುಂಬದ ಇತರೆ ಸದಸ್ಯರ ಜೊತೆ ಸ್ನೇಹಪೂರ್ವಕ ಹಾಗೂ ಗೌರವಪೂರ್ಕವಾಗಿ ವರ್ತಿಸಬೇಕು. ನೀವು ಮಗುವಿಗೆ ದೊಡ್ಡವರೊಂದಿಗೆ ಚೆನ್ನಾಗಿ ವರ್ತಿಸು, ಸುಳ್ಳು ಹೇಳಬೇಡ ಎಂದೆಲ್ಲ ಹೇಳಿದರೆ ಅದು ನಿಮ್ಮ ಮಾತನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳದು. ಮಗುವಿಗೆ ಸರಿಯಾಗಿ ಮನದಟ್ಟಾಗಲು ನಿಮ್ಮಲ್ಲಿ ನೀವು ಪರಿವರ್ತನೆ ತಂದುಕೊಳ್ಳಬೇಕಾಗುತ್ತದೆ. ಏಕೆಂದರೆ ಮಗುವಿನ ಬುದ್ಧಿ ಅಷ್ಟೊಂದು ಬೆಳವಣಿಗೆ ಆಗಿರುವುದಿಲ್ಲ. ನೀವು ಹೇಳಿದಂತೆ ಅದನ್ನು ಅನುಷ್ಠಾನಕ್ಕೆ ತರುವುದು ಅದಕ್ಕೆ ಗೊತ್ತಾಗುವುದಿಲ್ಲ. ನೀವು ಮಗುವಿನ ಮುಂದೆಯೇ ಯಾರಿಗಾದರೂ ಸುಳ್ಳು ಹೇಳುತ್ತಿದ್ದರೆ, ಮಗು ಸುಳ್ಳು ಹೇಳಬಾರದೆಂದು ನೀವು ಅಪೇಕ್ಷಿಸುವುದು ತಪ್ಪು.

ನಿಯಮಗಳಿಗೆ ಬದ್ಧರಾಗಿರಿ

ನೀವು ನಿಮ್ಮ ಮಗುವಿಗಾಗಿ ಕೆಲವೊಂದು ನಿಯಮಗಳನ್ನು ರೂಪಿಸಿರಬಹುದು. ಉದಾಹರಣೆಗಾಗಿ ಅದಕ್ಕೆ ವಾರದಲ್ಲಿ ಎರಡೇ ದಿನ ಚಾಕ್ಲೇಟ್‌ ತಿನ್ನಬೇಕು ಅಥವಾ ದಿನಕ್ಕೆ 2 ಗಂಟೆ ಮಾತ್ರ ತನ್ನ ಮೆಚ್ಚಿನ ಕಾರ್ಟೂನ್‌ ಶೋ ನೋಡಬೇಕು ಎಂದು ನೀವು ಇಚ್ಛಿಸುವುದಾದರೆ, ನೀವು ರೂಪಿಸಿದ ನಿಯಮಗಳಿಗೆ ನೀವು ಬದ್ಧರಾಗಿರಬೇಕಾಗುತ್ತದೆ. ನೀವು ಯಾವುದಾದರೂ ಕೆಲಸದಲ್ಲಿ ಮಗ್ನರಾಗಿರಬಹುದು ಅಥವಾ ನಿಮಗೆ ಮೂಡ್‌ ಇಲ್ಲವೆಂದು ನೀವು ನಿಯಮಗಳಲ್ಲಿ ಸಡಿಲ ನೀತಿ ಅನುಸರಿಸುವಂತಾಗಬಾರದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ