ದೀಪಾವಳಿ ಹಬ್ಬವಾಗಲಿ ಅಥವಾ ಬೇರೆ ಯಾವುದೇ ಕಾರ್ಯಕ್ರಮವಾಗಲಿ, 10-20 ಜನರು ಸಡಗರದಿಂದ ಕೂಡಿರದಿದ್ದರೆ, ಸಂತೋಷದ ವಾತಾವರಣ ಇರುವುದಿಲ್ಲ. ಉತ್ಸಾಹ ಹೆಚ್ಚಲು ಉತ್ಸಾಹಿತ ಮಂದಿಯೂ ಅಗತ್ಯ. ಈಗಿನ ಕಾಲದಲ್ಲಿ ಮಕ್ಕಳು ವಿದ್ಯೆ ಮತ್ತು ಉದ್ಯೋಗಕ್ಕಾಗಿ ಮನೆಯಿಂದ ದೂರದಲ್ಲಿರುತ್ತಾರೆ. ವಿಶಾಲವಾದ ಮನೆಗಳಲ್ಲಿ ಒಂಟಿತನವನ್ನು ಅನುಭವಿಸುವ ಹಿರಿಯರು ಮಕ್ಕಳು ಮನೆಗೆ ಬಂದು ಮನೆಯನ್ನು ಕಲರವಗೊಳಿಸುವ ಅವಕಾಶಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ಮಕ್ಕಳೊಂದಿಗೆ ಇತರೆ ಆಪ್ತ ವರ್ಗದವರನ್ನೂ ಸೇರಿಸಿ ಸಂತಸಪಡುವ ಸಮಯ ಇದಾಗಿರುತ್ತದೆ.

ಸಂಭ್ರಮದ ಸಾಮೂಹಿಕ ಸೆಲೆಬ್ರೇಶನ್

ನೆರೆಹೊರೆಯರೊಂದಿಗೆ ಸೆಲೆಬ್ರೇಶನ್‌: ಈ ಬಾರಿ ನಿಮ್ಮ ನೆರೆಹೊರೆಯವರೊಡನೆ ಹಬ್ಬವನ್ನಾಚರಿಸಲು ಆಲೋಚಿಸಿ. ನಿಮ್ಮ ಮನೆಯ ಹತ್ತಿರದ ಪಾರ್ಕ್‌ಅಥವಾ ಆಟದ ಮೈದಾನದಲ್ಲಿ ಪಾರ್ಟಿಯನ್ನು ಏರ್ಪಡಿಸಿ. ಮಿಠಾಯಿ, ಪಟಾಕಿ, ಲೈಟಿಂಗ್‌ಗಳ ಖರ್ಚನ್ನು ಎಲ್ಲರೂ ಸೇರಿ ಹಂಚಿಕೊಳ್ಳಿ. ನಿಮ್ಮೆಲ್ಲರ ಮಕ್ಕಳು ಒಟ್ಟಿಗೆ ಸೇರಿ ಪಟಾಕಿ ಹತ್ತಿಸಿ ಆನಂದಿಸುವ ದೃಶ್ಯ ಅಪೂರ್ವವಾಗಿರುತ್ತದೆ. ಇದೇ ರೀತಿ ನೀವಿರುವ ಊರಿನಲ್ಲಿ ವಾಸಿಸುತ್ತಿರುವ ನಿಮ್ಮೆಲ್ಲ ಬಂಧುಮಿತ್ರರನ್ನು ಸಹ ಸಾಮೂಹಿಕ ಸೆಲೆಬ್ರೇಶನ್‌ಗೆ ಆಮಂತ್ರಿಸಬಹುದು.

ಡ್ಯಾನ್ಸ್ ಪಾರ್ಟಿ : ನಮಗೆಲ್ಲ ನೃತ್ಯ ಸಂಗೀತಗಳ ಬಗ್ಗೆ ಆಸಕ್ತಿ ಇದ್ದೇ ಇದೆ. ಹಾಗಿರುವಾಗ ಸಮಾರಂಭಕ್ಕೆ ಮತ್ತಷ್ಟು ಬೆಡಗು ತುಂಬಲು ಮ್ಯೂಸಿಕ್‌, ಡ್ಯಾನ್ಸ್ ಪಾರ್ಟಿಯನ್ನು ಏರ್ಪಡಿಸಬಹುದಲ್ಲವೇ? ಬಂಧುಗಳೊಂದಿಗೆ  ನೆರೆಹೊರೆಯವರನ್ನೂ  ಸೇರಿಸಿಕೊಂಡರೆ ಪಾರ್ಟಿಗೆ ಕಳೆಕಟ್ಟಿ, ಅದು ನೆನಪಿನಲ್ಲಿ ಉಳಿಯುವಂತಾಗುತ್ತದೆ. ಮಕ್ಕಳು, ಯುವಕರು ಮತ್ತು ಹಿರಿಯರ ಬೇರೆ ಬೇರೆ ಗುಂಪುಗಳನ್ನು ಮಾಡಿ. ಅವುಗಳಿಗೆ ತಕ್ಕಂತೆ ಸಂಗೀತದ ವ್ಯವಸ್ಥೆ ಮಾಡಬಹುದು. ಹಿರಿಯರಿಗೆ ಹಳೆಯ ಚಿತ್ರಗೀತೆಗಳು ಮತ್ತು ಯುವಜನರಿಗೆ ಲೌಡಾದ ಮತ್ತು ಉತ್ತೇಜಿತವಾದ ಆಧುನಿಕ ಸಿನಿಮಾ, ಡ್ಯಾನ್ಸ್ ನಂಬರ್ಸ್ ಸೂಕ್ತವಾಗಿರುತ್ತವೆ. ಅಂತ್ಯಾಕ್ಷರಿ ಮತ್ತು ಡ್ಯಾನ್ಸ್ ಕಾಂಪಿಟೇಶನ್‌ನ್ನು ಸಹ ಆಯೋಜಿಸಬಹುದು.

ಕಾಂಪಿಟೇಶನ್ಸ್ : ಸಮಾರಂಭವನ್ನು ಸೆಲೆಬ್ರೇಟ್‌ಮಾಡುವ ಮತ್ತೊಂದು ವಿಧಾನವೆಂದರೆ ಬಗೆ ಬಗೆಯ ಕಾಂಪಿಟೇಶನ್‌ಗಳನ್ನು  ಏರ್ಪಡಿಸುವುದು. ಉದಾಹರಣೆಗೆ ಸಿಹಿ ತಿನಿಸು ತಯಾರಿಕೆ ಸ್ಪರ್ಧೆ, ಈಟಿಂಗ್‌ ಕಾಂಪಿಟೇಶನ್‌, ರಂಗೋಲಿ ಸ್ಪರ್ಧೆ ಇತ್ಯಾದಿ.... ನಿಮಗೆ ಇಷ್ಟವಿದ್ದರೆ ಗೆದ್ದರಿಗೆ ಬಹುಮಾನದ ಜೊತೆ ಉಡುಗೊರೆಗಳನ್ನೂ ಕೊಡಬಹುದು.

ಒನ್‌ ಡೇ ಟ್ರಿಪ್‌: ನಿಮ್ಮ ಊರಿಗೆ ಹತ್ತಿರವಾಗಿರುವ ಒಂದು ಟೂರಿಸ್ಟ್ ಸ್ಪಾಟ್‌ನಲ್ಲಿ ಸಹ ಹಬ್ಬದ ಆನಂದವನ್ನು ಅನುಭವಿಸಬಹುದು. ಮೊದಲೇ ಬುಕ್‌ಮಾಡಲಾದ ಗೆಸ್ಟ್ ಹೌಸ್‌ ಅಥವಾ ರೆಸಾರ್ಟ್‌ನಲ್ಲಿ ನೀವೆಲ್ಲ ಬಂಧುಮಿತ್ರರು ಸೇರಿ ಸೆಲೆಬ್ರೇಟ್‌ ಮಾಡಬಹುದು. ಹಬ್ಬವನ್ನಾಚರಿಸುವ ಈ ವಿಧಾನ ಮಕ್ಕಳಿಗೆ ವಿಶೇಷವಾಗಿ ಮೆಚ್ಚುಗೆಯಾಗುವುದು.

ಒಂಟಿ ಜೀವಿಗಳ ಬಾಳಿಗೆ ಬೆಳಕು : ಹಬ್ಬದ ದಿನ ಸಾಯಂಕಾಲ ನೀವು ವೃದ್ಧಾಶ್ರಮ ಅಥವಾ ಅನಾಥಾಶ್ರಮಗಳಿಗೆ ಹೋಗಿ ಸ್ವಲ್ಪ ಕಾಲ ಕಳೆಯುವುದರ ಮೂಲಕ ಅಲ್ಲಿ ಒಂಟಿಯಾಗಿರುವ ವೃದ್ಧರು ಅಥವಾ ಅನಾಥ ಮಕ್ಕಳ ಬಾಳಿಗೆ ಬೆಳಕು ತರಬಲ್ಲರಿ. ಸಿಹಿ ತಿಂಡಿ, ಕ್ಯಾಂಡಲ್ಸ್, ಪಟಾಕಿಗಳೊಂದಿಗೆ ನೀವು ಅವರಲ್ಲಿಗೆ ಹೋದಾಗ ಅವರ ಉತ್ಸಾಹ ಕಂಡು ನಿಮಗೆಷ್ಟು ಸಂತೋಷವಾಗುವುದೆಂದು ಆಲೋಚಿಸಿ. ಮನುಷ್ಯ ಸಮಾಜ ಜೀವಿ. ಇತರರೊಡನೆ ಸುಖ ದುಃಖವನ್ನು ಹಂಚಿಕೊಂಡು ಅವನು ಸಂತೋಷ, ಸಮಾಧಾನ ಪಡೆಯಬಲ್ಲ. ದುಃಖಿತರು, ಒಂಟಿ ಜೀವಿಗಳಿಗೆ ನೀಡುವ ಸಂತೋಷದಿಂದ ಆತನ ಸಂತೋಷ ಇಮ್ಮಡಿಯಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ