``ನೀನು ಸದಾ ಟೆನ್ಶನ್‌ನಲ್ಲಿ ಏಕಿರ್ತಿಯಾ? ಯಾವುದೇ ಸಂಗತಿಯನ್ನು ಬಹಳ ಸೀರಿಯಸ್ಸಾಗಿ ತಗೊಳ್ಳೋಕೆ ಹೋಗಬೇಡ. ಪ್ರತಿಯೊಂದು ವಿಷಯಕ್ಕೂ ಪರಿಹಾರ ಅನ್ನೋದು ಇದ್ದೇ ಇರುತ್ತೆ. ಅದು ಹೇಗೆ ಅಂತ ಯೋಚಿಸಬೇಕು ಅಷ್ಟೆ,'' ಗಂಡ ಹೀಗೆ ಹೇಳಿದಾಗ ಸುನೀತಾ ಮುಖ ಗಂಟು ಹಾಕಿಕೊಂಡಳು.

``ಯಾವಾಗ ನೋಡಿದ್ರೂ ನೀವು ನನಗೆ ಬುದ್ಧಿ ಇಲ್ಲದವಳು ಎಂಬಂತೆ ಸಲಹೆ ಕೊಡೋಕೆ ಬರ್ತಿರಾ? ನಾನು ಎಲ್ಲರ ಬಗ್ಗೆ ಯೋಚಿಸ್ತೀನಿ. ಹೀಗಾಗಿ ಟೆನ್ಶನ್‌ ಆಗುತ್ತೆ. ನನ್ನ ಬಗ್ಗೆ ಅಷ್ಟೇ ಯೋಚಿಸು ಅಂತಾ ನೀವು ಹೇಳ್ತಿರಲ್ಲ, ಹಾಗೇ ಆಗಲಿ. ಇವತ್ತಿನಿಂದ ನೀವಾಯ್ತು ಮಕ್ಕಳಾಯ್ತು, ಏನು ಮಾಡ್ತಿರೊ ಮಾಡಿಕೊಳ್ಳಿ, ನಾನು ಕೇಳೋಕೆ ಹೋಗೊಲ್ಲ,'' ಎಂದು ಹೇಳುತ್ತಾ ಸುನೀತಾ ಕೋಣೆಗೆ ಹೋದಳು.

``ನೋಡು, ನೀನು ಸುಮ್ಮನೇ ಕೋಪಿಸಿಕೊಳ್ತಿದೀಯ. ನಾನು ನಿನಗೆ ಹೇಳುವುದರ ಅರ್ಥ ಇಷ್ಟೇ, ನಿನಗೆ ಯಾವುದೇ ವಿಷಯದ ಬಗ್ಗೆ ಸರಿಯಾದ ಕಲ್ಪನೆ ಇದ್ದರೆ, ನೀನು ಬೇರೆಯವರ ದೃಷ್ಟಿಯಲ್ಲಿ ಆ ಸಮಸ್ಯೆಗಳನ್ನು ಅರಿತರೆ ಟೆನ್ಶನ್‌ ಆಗುವುದಿಲ್ಲ, ಬೇರೆಯವರು ನಿನ್ನ ಮಾತುಗಳ ಬಗ್ಗೆ ಅವಹೇಳನವನ್ನೂ ಮಾಡುವುದಿಲ್ಲ,'' ಗಂಡ ರಾಜೇಶ್‌ ಆಕೆಗೆ ತಿಳಿವಳಿಕೆ ಹೇಳಲು ಪ್ರಯತ್ನಿಸಿದ. ಆದರೆ ಗಂಡ ಕೂಡ ತನ್ನ ಮಾತುಗಳನ್ನು ಆಲಿಸುವುದಿಲ್ಲ ಇನ್ನು ಮಕ್ಕಳು ಹೇಗೆ ಎಂದು ಯೋಚಿಸಿಯೇ ಅವಳಿಗೆ ಒತ್ತಡ ಉಂಟಾಗಿತ್ತು.

``ಇದು ನೀವು ನೀಡಿದ ಸ್ವಾತಂತ್ರ್ಯದ ಪರಿಣಾಮವೇ ಆಗಿದೆ. ಮಾನಸಾ ನಾನು ಹೇಳಿದಂತೆ ಕೇಳುವುದೇ ಇಲ್ಲ. ಕಾಲೇಜಿಗೆ ಶಾರ್ಟ್ಸ್ ಧರಿಸಿ ಹೋಗುತ್ತಾಳೆ. ಅಷ್ಟೊಂದು ಶಾರ್ಟ್ಸ್ ಬಟ್ಟೆ ಧರಿಸುವ ಅಗತ್ಯ ಇದೆಯೇ?''

``ನೀನು ಅವಳ ದೃಷ್ಟಿಕೋನದಲ್ಲಿ ಅದನ್ನು ಅರ್ಥ ಮಾಡಿಕೊಂಡರೆ, ಅವಳು ಧರಿಸುವ ಶಾರ್ಟ್ಸ್ ಬಗ್ಗೆ ಕೆಡುಕೆನಿಸುವುದಿಲ್ಲ,'' ಎಂದು ಹೇಳಿ ರಾಜೇಶ್‌ ಆಫೀಸಿಗೆ ಹೊರಟುಹೋದ. ಆದರೆ ಸುನೀತಾ ಮಾತ್ರ ಇಡೀ ದಿನ ಟೆನ್ಶನ್‌ನಲ್ಲಿಯೇ ಇದ್ದಳು. ಆಕೆಗೆ ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ, ರಾಜೇಶ್‌ಗೆ ಏಕೆ ಸ್ವಲ್ಪವೂ ಟೆನ್ಶನ್‌ ಆಗುವುದಿಲ್ಲ ಎಂಬುದಾಗಿತ್ತು.

ಮಾಹಿತಿ ಕೊರತೆ

ಇದು ಕೇವಲ ಸುನೀತಾಳೊಬ್ಬಳದೇ ವಿಷಯವಲ್ಲ, ಇಂತಹ ಅನೇಕ ಮಹಿಳೆಯರು ಯಾವುದಾದರೊಂದು ಸಂಗತಿಗೆ ಸಂಬಂಧಪಟ್ಟಂತೆ ಒತ್ತಡಕ್ಕೊಳಗಾಗುತ್ತಾರೆ. ತಮ್ಮದೇ ಜೀವನದಲ್ಲಿ ಇಷ್ಟೆಲ್ಲ ತೊಂದರೆ ತಾಪತ್ರಯಗಳಿವೆ ಎಂದು ಅವರಿಗೆ ಅನಿಸತೊಡಗುತ್ತದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಪುರುಷರು ಒತ್ತಡವನ್ನು ತಮ್ಮ ಮೈಮೇಲೆ ಎಳೆದುಕೊಳ್ಳುವ ಶೇಕಡಾವಾರು ಪ್ರಮಾಣ ಬಹಳ ಕಡಿಮೆಯಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಅವರು ಸಾಕಷ್ಟು ವಿಷಯಗಳ ಬಗ್ಗೆ ತಿಳಿದುಕೊಂಡಿರುವುದಾಗಿದೆ. ರಾಜೇಶ್‌ ಸುನೀತಾಗೆ, ``ನೀನು ಮಾನಸಾಳ ದೃಷ್ಟಿಕೋನದಿಂದ ನೋಡಿದರೆ ಅದು ಸರಿಯಾಗೇ ಕಾಣುತ್ತೆ,'' ಎಂದು ಸರಿಯಾಗೇ ಹೇಳಿದ್ದ. ಇದು ಇತ್ತೀಚಿಗಿನ ಟ್ರೆಂಡ್‌, ನನಗೆ ಇದರಲ್ಲಿ ಕಂಫರ್ಟ್‌ ಎನಿಸುತ್ತೆ ಎಂದು ಮಾನಸಾ ಹೇಳಿದ್ದಳು. ಆಕೆ ಯಾವಾಗಲೂ ಹೇಳುತ್ತಿದ್ದ ಮತ್ತೊಂದು ಮಾತೆಂದರೆ, ``ಅಮ್ಮಾ, ನೀನು ಹೊರಗೆ ಬಂದು ಸ್ವಲ್ಪ ನೋಡು, ನಿನಗೆ ಆಗಲೇ ಗೊತ್ತಾಗುತ್ತೆ. ನನಗೆ ನನ್ನ ಇತಿಮಿತಿ ಗೊತ್ತು. ಹೀಗಾಗಿ ನೀನು ಹೆದರುವ ಅಗತ್ಯವಿಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ