ಉಡುಗೊರೆಗಳನ್ನು ಕೊಡುಕೊಳ್ಳುವಿಕೆ ದೀಪಾವಳಿಯ ಪರಂಪರೆಯ ಅವಿಚಿನ್ನ ಭಾಗವಾಗಿದೆ. ಅದರಿಂದ ಸಂಬಂಧಗಳಲ್ಲಿ ಆತ್ಮೀಯತೆಯ ಅನುಭವ ಉಂಟಾಗುತ್ತದೆ. ಹೀಗಿರುವಾಗ ನೀವು ನಿಮ್ಮ ವಿಶೇಷ ಸಂಬಂಧಿ ಅಂದರೆ ನಿಮ್ಮ ಪ್ರೀತಿಯ ಪತ್ನಿಯನ್ನು ಹೇಗೆ ಮರೆಯುತ್ತೀರಿ? ನೀವು ಅವರಿಗೆ ಅನೇಕ ಬಾರಿ ಉಡುಗೊರೆಗಳನ್ನು ಕೊಟ್ಟಿರಬಹುದು. ಆದರೆ ಈ ದೀಪಾವಳಿಯಲ್ಲಿ ನಿಮ್ಮ ಬೆಟರ್‌ ಹಾಫ್‌ಗೆ ಎಂತಹ ಉಡುಗೊರೆ ಕೊಡಬೇಕೆಂದರೆ ನಿಮ್ಮ ಸಂಬಂಧಗಳ ಅವಿಚಿನ್ನ ಬಂಧನದಿಂದ ನಿಮ್ಮ ದೀಪಾವಳಿ ಉಜ್ವಲವಾಗಿರುತ್ತದೆ.

ಆಭೂಷಣಗಳು ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಸಣ್ಣ ಪುಟ್ಟ ಸಂದರ್ಭಗಳಲ್ಲಿ ನೀವು ಪತ್ನಿಗೆ ಉಡುಗೊರೆಯಾಗಿ ಕೊಟ್ಟಿರಬಹುದು. ಈ ಬಾರಿ ವೈಟ್‌ ಗೋಲ್ಡ್, ಪ್ಲಾಟಿನಂ, ಡೈಮಂಡ್‌ ಅಥವಾ ಪರ್ಲ್ ಸೆಟ್‌ ಉಡುಗೊರೆಯಾಗಿ ಕೊಡಿ. ಅದರಿಂದ ಅವರ ಜ್ಯೂವೆಲರಿ ಕಲೆಕ್ಷನ್‌ನಲ್ಲಿ ಹೊಸ ರೀತಿಯ ಸ್ಟೈಲಿಶ್‌ ಮತ್ತು ಟ್ರೆಂಡಿ ಜ್ಯೂವೆಲರಿ ಹೆಚ್ಚಾಗಿ ನಿಮ್ಮ ಲೈಫ್‌ ಪಾರ್ಟ್‌ನರ್‌ಮುಖದಲ್ಲಿ ಮುಗುಳ್ನಗೆ ಅರಳುತ್ತದೆ. ಆಭೂಷಣಗಳಂತೂ ಮಹಿಳೆಯರ ಮೊದಲ ಆದ್ಯತೆಯಾಗಿವೆ.

trademill-1

ಟ್ರೆಡ್ಮಿಲ್

ಒಂದು ವೇಳೆ ನಿಮ್ಮ ಲೈಫ್‌ ಪಾರ್ಟ್‌ನರ್‌ಗೆ ಫಿಟ್ನೆಸ್‌ ಮತ್ತು ಹೆಲ್ತ್ ನ ಉಡುಗೊರೆ ಕೊಡಲು ಬಯಸಿದರೆ ಇದೊಂದು ಉತ್ತಮ ಆಯ್ಕೆಯಾಗಿದೆ. ಟ್ರೆಡ್‌ ಮಿಲ್‌ನಲ್ಲಿ ವರ್ಕ್‌ ಔಟ್‌ ಮಾಡುವುದರಿಂದ ಅನೇಕ ಲಾಭಗಳಿವೆ. ಅದರಿಂದ ಸ್ಟ್ರೆಸ್‌ನಿಂದ ಮುಕ್ತಿ ಸಿಗುತ್ತದೆ. ಆಕ್ಸಿಜನ್‌ನ ಪ್ರಮಾಣ ಹೆಚ್ಚುತ್ತದೆ. ಟ್ರೆಡ್‌ ಮಿಲ್‌‌ನಲ್ಲಿ ಓಡುವುದರಿಂದ ಅವರ ಹೃದಯ ಆರೋಗ್ಯವಾಗಿರುತ್ತದೆ. ಅದರಲ್ಲಿ ವರ್ಕ್‌ಔಟ್‌ ಮಾಡುವುದರಿಂದ ಬೆವರು ಬರುತ್ತದೆ. ಅದರಿಂದ ತ್ವಚೆಯ ಪೋರ್ಸ್‌ ತೆರೆದು ತ್ವಚೆಯ ಟಾಕ್ಸಿನ್‌ಗಳು ಹೊರಹೋಗಿ ತ್ವಚೆ ಹೊಳೆಯುತ್ತದೆ. ದೇಹದ ಹೆಚ್ಚುವರಿ ಕೊಬ್ಬನ್ನು ಬರ್ನ್‌ ಮಾಡಲೂ ಸಹ 10-15 ನಿಮಿಷಗಳ ಟ್ರೆಡ್‌ ಮಿಲ್ ವರ್ಕ್‌ ಔಟ್‌ ಸಾಕು. ಅದರಿಂದ ದೇಹದ ಮೆಟಬಾಲಿಸಂ ಹೆಚ್ಚುತ್ತದೆ ಹಾಗೂ ನಿಮ್ಮ ಪತ್ನಿ ಯಾವಾಗಲೂ ಎನರ್ಜೆಟಿಕ್‌ ಆಗಿರುತ್ತಾರೆ.

weight-machine-2

ವೆಯಿಂಗ್ಮೆಶಿನ್

ನಿಮ್ಮ ಪತ್ನಿ ಸ್ಲಿಮ್, ಟ್ರಿಮ್ ಆಗಿ ಮಾಡೆಲ್‌ಗಳಂತೆ ಕಾಣಬೇಕೆಂದಿದ್ದರೆ ಈ ದೀಪಾವಳಿಯಲ್ಲಿ ಅವರಿಗೆ ವೆಯಿಂಗ್‌ ಮೆಶಿನ್‌ ಗಿಫ್ಟ್ಸ್ ಕೊಡಿ. ಅದನ್ನು ಉಪಯೋಗಿಸಿ ಅವರು ಹೆಚ್ಚುತ್ತಿರುವ ಅಥವಾ ಕಡಿಮೆಯಾಗುತ್ತಿರುವ ತೂಕದ ಬಗ್ಗೆ ಗಮನಕೊಟ್ಟು ಸ್ಲಿಮ್ ಟ್ರಿಮ್ ಆಗಬಹುದು. ಮಾರುಕಟ್ಟೆಯಲ್ಲಿ ಆಟೋ ಆನ್‌ ಅಂಡ್‌ ಆಫ್‌ ಫೆಸಿಲಿಟಿ ಇರುವ ಪ್ಲ್ಯಾಸ್ಟಿಕ್‌ ಮತ್ತು ಗ್ಲಾಸ್‌ ಪ್ಲ್ಯಾಟ್‌ ಫಾರಂನ ಅನೇಕ ವೆಯಿಂಗ್‌ ಮೆಶಿನ್‌ಗಳು ಲಭ್ಯವಿವೆ. ಅವುಗಳಲ್ಲಿ ಎಲ್ಇಡಿ ಇಂಡಿಕೇಟರ್‌ ಲೈಟ್‌, ಮ್ಯಾಕ್ಸಿಮವ್‌ ವೇಟ್‌ ಕೆಪಾಸಿಟಿ, ಡಿಜಿಟಲ್ ಡಿಸ್‌ಪ್ಲೇ ಗಳಂತಹ ಅನುಕೂಲವಿದೆ. ಇವುಗಳಿಂದ ತೂಕವನ್ನು ನಿಯಂತ್ರಿಸಬಹುದು. ಜೊತೆಗೆ ಬಿಎಂಐನ್ನು ನಿರ್ಧರಿಸಿ ಡಯೆಟ್‌ ಪ್ಲ್ಯಾನ್ ಮಾಡಿಕೊಳ್ಳಬಹುದು. ಈ ಉಡುಗೊರೆಯನ್ನು ಉಪಯೋಗಿಸಿ ನಿಮ್ಮ ಪತ್ನಿ ಸದಾ ಹೆಲ್ದಿ ಅಂಡ್‌ ಫಿಟ್‌ ಆಗಿ ಕಾಣುತ್ತಾರೆ.

ಸ್ಕೂಟಿ ಈ ದೀಪಾವಳಿಯಲ್ಲಿ ನಿಮ್ಮ ಪತ್ನಿಗೆ ಸ್ಕೂಟಿಯನ್ನು ಅನುಪಮ ಗಿಫ್ಟ್ ಆಗಿ ಕೊಡಬಹುದು. ಸ್ಕೂಟಿಯಿಂದ ಅವರ ಆತ್ಮವಿಶ್ವಾಸ ಹೆಚ್ಚಾಗುತ್ತದೆಯಲ್ಲದೇ ಅವರು ಸ್ವಾವಲಂಬಿಯಾಗಿರುತ್ತಾರೆ. ಮಕ್ಕಳನ್ನು ಶಾಲೆಗೆ ಬಿಡುವುದು, ಸಂಜೆ ಮನೆಗೆ ಕರೆತರುವುದು, ಬ್ಯೂಟಿ ಪಾರ್ಲರ್‌ಗೆ ಹೋಗಲು ಅಥವಾ ಇನ್ಯಾವುದಾದರೂ ಕೆಲಸವಿದ್ದರೆ ನಿಮ್ಮ ಈ ಯೂನಿಕ್‌ ಗಿಫ್ಟ್ ಅವರಿಗೆ ಸಹಾಯವಾಗುತ್ತದೆ. ಅವರು ಸ್ಕೂಟಿ ಉಪಯೋಗಿಸುವಾಗೆಲ್ಲ ನಿಮಗೆ ಮನದಲ್ಲೇ ಧನ್ಯವಾದ ಅರ್ಪಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ