ಮಗಳ ಮದುವೆಯನ್ನು ತಂದೆತಾಯಿಯರ ಒಬ್ಬನೇ ಮಗನೊಂದಿಗೆ ನಿಶ್ಚಯಿಸಿದಾಗ ಅವಳಿಗೆ ಸುಖ ಸಮೃದ್ಧಿ ಗ್ಯಾರಂಟಿ ಎಂದು ತಿಳಿಯಾಗುತ್ತದೆ. ಒಬ್ಬ ದಂಪತಿ ತಮ್ಮ ಮಗಳ ಮದುವೆಯ ಇನ್ವಿಟೇಶನ್ ಹಂಚುವಾಗ ಎಲ್ಲರೊಂದಿಗೆ ತಮ್ಮ ಮಗಳು ಅತ್ತೆ ಮಾವನ ಒಬ್ಬನೇ ಮಗನನ್ನು ಮದುವೆಯಾಗುತ್ತಿರುವುದಾಗಿ ಹೇಳಿಕೊಂಡರು. ಆಗ ಒಬ್ಬ ನೆಂಟರು ಹಾಗಾದರೆ ಅವರ ಮನೆಯಲ್ಲಿ ನಮ್ಮ ಮನೆಯಲ್ಲಿರುವಂತೆ ಕಾಂತಿ ಇರುವುದಿಲ್ಲ. ನಮ್ಮ ಮನೆಯಲ್ಲಂತೂ ಮಾಮೂಲಿ ದಿನಗಳಲ್ಲಿಯೂ ಬಹಳಷ್ಟು ಜನ ಸೇರಿರುತ್ತಾರೆ. ಮನೆಯಲ್ಲಿ ಹಬ್ಬದ ವಾತಾವರಣವಿರುತ್ತದೆ ಎಂದರು. ಆಗಲೂ ಅವರು ಒಬ್ಬನೇ ಮಗನ ಗುಣಗಳನ್ನು ಹೊಗಳತೊಡಗಿದಾಗ ಆ ನೆಂಟರು ಆಕ್ರೋಶದಿಂದ ನಿಮಗೆ ಒಂಟಿ ಮಗನ ಬಗ್ಗೆ ಅಷ್ಟೊಂದು ಕ್ರೇಝ್ ಇದ್ದರೆ ನೀವು ಮಗನನ್ನು ಮಾತ್ರ ಹೆರಬೇಕಿತ್ತು. ಆಗ ಅವನ ಹೆಂಡತಿಯ ಕಡೆಯವರಿಗೂ ಇದೇ ರೀತಿಯ ಸುಖ ಸಿಗುತ್ತಿತ್ತು ಎಂದರು.
ಎಲ್ಲ ಅವನದೇ ಮದುವೆ ಮಾತುಕಥೆ ನಡೆಸುವಾಗ ಹುಡುಗಿ ಮನೆಯವರು ಇದೇ ವಿಷಯಕ್ಕೆ ಮಹತ್ವ ಕೊಡುತ್ತಾರೆ. ಹುಡುಗನ ಮನೆಯವರೂ ಸಹ ಒಪ್ಪಿಗೆ ಹೇಳುವಾಗ ಇದನ್ನೇ ಹೇಳುತ್ತಾರೆ. ಇದು ನಿಜವಾಗಿದ್ದರೂ ಈ ರೀತಿಯ ಅಪೇಕ್ಷೆಗಳನ್ನು ಇಟ್ಟುಕೊಳ್ಳುವುದು ತಪ್ಪು.
ರಘು ಹಾಗೂ ಸೀಮಾ ದಂಪತಿಗಳು ಒಂದು ಟ್ರಸ್ಟ್ ಆರಂಭಿಸಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಆದರೆ ಅವರು ಮಗನನ್ನು ಟ್ರಸ್ಟಿ ಮಾಡದಿದ್ದಾಗ ಅವನು ತನ್ನ ಸಂಬಂಧಿಕರಿಗೆ ತನ್ನ ಅಪ್ಪ, ಅಮ್ಮನಿಗೆ ತಿಳಿಹೇಳಲು ಒತ್ತಡ ಹಾಕುತ್ತಾನೆ. ಆಗ ಅವನಿಗೆ ಅಪ್ಪ ಅಮ್ಮನ ಮಾತುಗಳಿಂದ ಸ್ಪಷ್ಟವಾಗುವುದೇನೆಂದರೆ ತಮ್ಮದೆಲ್ಲ ಮಗ ಸೊಸೆಯದು ಎಂದು. ಅವರ ಸಂಪಾದನೆ ಬಹಳಷ್ಟಿದೆ. ಆದರೂ ಅವರು ತಾವು ಕಾಯಿಲೆ ಬಿದ್ದಾಗಲೂ ಯಾರನ್ನೂ ಕೇಳುವುದಿಲ್ಲ. ನಮ್ಮ ಪಾಲನೆ, ಪೋಷಣೆಯಲ್ಲೇನಾದರೂ ಕೊರತೆ ಅನುಭವವಾಯಿತೇ? ನಮ್ಮ ಸಂಪೂರ್ಣ ಹಣವನ್ನು ಬಡವರ ಶಿಕ್ಷಣ ಮತ್ತು ಸಂಸ್ಕಾರಕ್ಕಾಗಿ ಖರ್ಚು ಮಾಡುತ್ತೇವೆ ಎಂದರು. ಸ್ವಲ್ಪ ದಿನಗಳಲ್ಲಿ ಮಗ ಸೊಸೆ ಸುಧಾರಿಸಿದರು. ಆಗ ತಾಯಿ ತಂದೆ ವಿಲ್‌ನ್ನು ಕೊಂಚ ಬದಲಿಸಿದರು. ತಮ್ಮ ಮಗ ಸೊಸೆಗೆ ಕೊಂಚ ಲಾಭ ಕೊಟ್ಟರು. ಆದರೆ ಟ್ರಸ್ಚ್ ವಿಷಯ ಬದಲಿಸಲಿಲ್ಲ.
ಎಲ್ಲವನ್ನೂ ತಮ್ಮದೆಂದುಕೊಳ್ಳುವ ಮಾನಸಿಕತೆ ಕರ್ತವ್ಯ ನಿಭಾಯಿಸುವಲ್ಲಿ ಭಾಧಕವಾಗಿರುತ್ತದೆ. ಕುಮಾರ್ ಚೆನ್ನಾಗಿ ಸಂಪಾದಿಸುತ್ತಿದ್ದರೂ, ಆಗಾಗ್ಗೆ ಅಪ್ಪ ಅಮ್ಮನಿಂದ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿರುತ್ತಾನೆ. ಅದರ ಬಗ್ಗೆ ಕೇಳಿದಾಗ ಈಗ ತಗೊಂಡ್ರೆ ಏನು, ಆಮೇಲೆ ತಗೊಂಡ್ರೆ ಏನು? ಅದರಲ್ಲಿ ವ್ಯತ್ಯಾಸ ಏನಿದೆ? ಎಲ್ಲ ನಂದೇ ತಾನೇ ಎಂದು ವಾದಿಸುತ್ತಾನೆ. ಅಪ್ಪ ಅಮ್ಮನಿಗೆ ಅದು ಇಷ್ಟವಿಲ್ಲ. ಈಗ ಅವರು ಬೇರೊಂದು ರೀತಿಯಲ್ಲಿ ಯೋಚಿಸತೊಡಗಿದ್ದಾರೆ.
ಹುಡುಗಿ ಕಡೆಯವರು ಚುರುಕು
ಹೆಚ್ಚಿನ ಕಡೆ ಹುಡುಗನ ಕುಟುಂಬ ಚಿಕ್ಕದಾದ್ದರಿಂದ ಹುಡುಗಿಯ ತವರುಮನೆಯವರು ಚುರುಕಾಗುತ್ತಾರೆ. ಅವರಿಗೆ ಇನ್ಯಾರು ನಾವೇ ತಾನೇ ಎಂದು ಯೋಚಿಸುತ್ತಾರೆ. ಅಂತಹ ಸ್ಥಿತಿಯಿಂದ ಹುಡುಗಿಯ ಅತ್ತೆಮನೆಯಲ್ಲಿ ಉತ್ಸಾಹಭಂಗವಾಗುತ್ತದೆ.
ಶೃತಿಗೆ ಆಗಾಗ್ಗೆ ಕೇಳಿಬರುವುದೇನೆಂದರೆ ನಮ್ಮ ಮನೆಯಲ್ಲಿ ಬರೀ ನಿಮ್ಮ ಮನೆಯವರೇ ತುಂಬಿಕೊಂಡಿದ್ದಾರೆ. ಏನಾದರೂ ಸಂದರ್ಭ ಸಿಕ್ಕರಾಯಿತು ಇಡೀ ಸೈನ್ಯ ಹಾಜರಾಗಿರುತ್ತದೆ ಎಂದು. ಶೃತಿ ತನ್ನ ತವರುಮನೆಯವರಿಗೆ, ಕರೆದರೆ ಇಷ್ಟು ಜನ ಬಂದ್ಬಿಡೋದೇ, ಇಲ್ಲೇ ಅಡ್ಡಾ ಮಾಡಿಕೊಂಡುಬಿಡೋದೇ ಎನ್ನುತ್ತಿದ್ದಳು. ಆಗೆಲ್ಲಾ ಮಾತಿಗೆ ಮಾತು ಬೆಳೆಯುತ್ತಿತ್ತು.