ಇಲ್ಲಿ ಕೊಟ್ಟಿರುವ ಕೆಲವು ಘಟನೆಗಳನ್ನು ಗಮನಿಸಿ. ಏಪ್ರಿಲ್ 24, 2018ರಂದು ವಿನೋದ್‌ ಎಂಬಾತ ತನ್ನ ಮಗುವಿನ ಸಮ್ಮುಖದಲ್ಲೇ ಹೆಂಡತಿ ಸವಿತಾಳನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ.

ಇಬ್ಬರ ಮದುವೆಯಾಗಿ 18 ವರ್ಷ ಆಗಿತ್ತು. ಇಬ್ಬರ ನಡುವೆ ಮೇಲಿಂದ ಮೇಲೆ ಜಗಳ ಆಗುತ್ತಿತ್ತು. ಈ ಕಾರಣದಿಂದ ಇಬ್ಬರೂ ಬೇರೆ ಬೇರೆ ಮಹಡಿಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಮಗ ಇದ್ದರು.

ದೆಹಲಿಯಲ್ಲಿ ಏಪ್ರಿಲ್ ‌, 2018ರಂದು ನಡೆದ ಘಟನೆ. ಗಂಡ 50,000 ರೂ. ಕೊಡಲಿಲ್ಲವೆಂದು ಹೇಳಿ ಹೆಂಡತಿ ಅವನನ್ನು ಗಾಯಗೊಳ್ಳುವಂತೆ ಹೊಡೆದಳು. ಅವರ ಮದುವೆಯಾಗಿ 27 ವರ್ಷಗಳಾಗಿತ್ತು. ಹೆಂಡತಿಯ ಕೆಲವು ರಹಸ್ಯ ವಿಷಯಗಳು ಗಂಡನಿಗೆ ಗೊತ್ತಾಗಿ ಸಾಕಷ್ಟು ಜಗಳ ಆಗಿತ್ತು. ಬಳಿಕ ಇಬ್ಬರೂ ಬೇರೆ ಬೇರೆ ವಾಸವಾಗಿದ್ದರು.

ಮತ್ತೊಂದು ಘಟನೆಯಲ್ಲಿ ಗಂಡ ಹೆಂಡತಿಯ ಬಗ್ಗೆ ಅದೆಷ್ಟು ಕ್ರೂರವಾಗಿ ನಡೆದುಕೊಂಡನೆಂದರೆ, ಹೆಂಡತಿಯನ್ನು ಕೋಣೆಯಲ್ಲಿ ಕೂಡಿ ಹಾಕಿ ಅವಳಿಗೆ ಜೋರಾಗಿ ಒದ್ದ. ಇದರ ಪರಿಸ್ಥಿತಿ ಏನಾಯ್ತೆಂದರೆ, ಅವಳು ಬಳಿಕ ಹೊಟ್ಟೆಯ ಆಪರೇಶನ್ ಮಾಡಿಸಿಕೊಳ್ಳಬೇಕಾಯಿತು.

ಹರಿಯಾಣದ ಗುರುಗ್ರಾಮದಲ್ಲಿ ಗಂಡನೊಬ್ಬ 32 ವರ್ಷದ ಹೆಂಡತಿಯನ್ನು ಕೊಲೆಗೈದ ಆರೋಪದ ಮೇಲೆ ಬಂಧಿಸಲ್ಪಟ್ಟ. ಅವವನ್ನು ವಿಚಾರಣೆಗೊಳಪಡಿಸಿದಾಗ ಅವನು ಅಚ್ಚರಿದಾಯಕ ಹೇಳಿಕೆಯೊಂದನ್ನು ನೀಡಿದ. ಹೆಂಡತಿ ಫೇಸ್‌ಬುಕ್‌ ಹಾಗೂ ವಾಟ್ಸ್ಆ್ಯಪ್‌ನಲ್ಲಿ ಅದೆಷ್ಟು ಮಗ್ನಳಾಗಿರುತ್ತಿದ್ದಳೆಂದರೆ, ಅವಳು ಮನೆಯ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ಊಟ ಕೊಡದೇ ಇರುವುದು ಹಾಗೂ ಗಂಡನ ಬಗ್ಗೆ ಎಳ್ಳಷ್ಟೂ ಗಮನ ಕೊಡದಿರುವುದು ಅವಳನ್ನು ಕೊಲೆ ಮಾಡಲು ಕಾರಣವಾಯಿತು ಎಂದು ಅವನು ಹೇಳಿದ.

ಮನೋತಜ್ಞೆ ಡಾ. ದೀಪಾ ಹೀಗೆ ಹೇಳುತ್ತಾರೆ, ``ಮದುವೆಯ ಸಮಯದಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರೂ ಖುಷಿಭರಿತ ಜೀವನವನ್ನು ಬಯಸುತ್ತಾರೆ. ಆದರೆ ದೈನಂದಿನ ಜೀವನದಲ್ಲಿ ಯಾವಾಗ ಇಬ್ಬರೂ ಪರಸ್ಪರರ ಬಗೆಗೆ ದೂರುಗಳನ್ನು ಹೇಳಲು ಶುರು ಮಾಡುತ್ತಾರೊ, ಆಗ ಇಬ್ಬರಲ್ಲಿ ಮನಸ್ತಾಪ ಶುರುವಾಗುತ್ತದೆ. ಪರಸ್ಪರರ ವಿಚಾರಗಳಲ್ಲಿ ಹೊಂದಾಣಿಕೆ ಇಲ್ಲದೇ ಇರುವುದು, ಪರಸ್ಪರರಿಗೆ ಸಮಯ ಕೊಡದೇ ಇರುವುದು, ಪರಸ್ಪರರ ಇಚ್ಛೆಗಳ ಬಗ್ಗೆ ಗಮನಿಸದೇ ಇರುವುದು ಇವೆಲ್ಲ ಕಾರಣಗಳಿಂದ ಅವರು ತಮ್ಮನ್ನು ತಾವು ಏಕಾಂಗಿ ಎಂದು ಭಾವಿಸತೊಡಗುತ್ತಾರೆ.

ಸಮೀಕ್ಷೆಗಳ ಪ್ರಕಾರ, 10ರಲ್ಲಿ 4 ವಿವಾಹಿತರು ತಮ್ಮ ಮದುವೆಯನ್ನು ಉಳಿಸಿಕೊಳ್ಳಲು ವಿಶೇಷಜ್ಞರ ನೆರವು ಪಡೆದುಕೊಳ್ಳುತ್ತಾರೆ. ದೆಹಲಿಯಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಅಲ್ಲಿ ಪ್ರತಿವರ್ಷ 1.3 ಲಕ್ಷ ಮದುವೆಗಳು ರಿಜಿಸ್ಟರ್‌ ಆಗುತ್ತವೆ. ಅವುಗಳಲ್ಲಿ 10,000 ಜೋಡಿ ಮದುವೆಯ ಬಗ್ಗೆ ಖುಷಿಯಿಂದಿರುವುದಿಲ್ಲ. ಒತ್ತಡದ ಕಾರಣಗಳಿಂದಾಗಿ ಪರಸ್ಪರರಿಂದ ದೂರಾಗುವ ವಿಚ್ಛೇದನದ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಾ ಹೊರಟಿದೆ. ಸಂಬಂಧಗಳಲ್ಲಿ ಕಹಿಯ ಕಾರಣದಿಂದಾಗಿ `ಮೆರೈಟ್‌ ಡಿಸ್‌ಪ್ಯೂಟ್‌ರಿಸಾಲ್ವಿಂಗ್‌ ಏಜೆನ್ಸಿ' ನಡೆಸಿದ ಸಮೀಕ್ಷೆಯಲ್ಲಿ ವೈವಾಹಿಕ ಸಂಬಂಧದಿಂದ ಉಂಟಾದ ಒತ್ತಡದ ಕಾರಣಗಳನ್ನು ತಿಳಿದುಕೊಳ್ಳಲು 243 ಜೋಡಿಗಳನ್ನು ಪ್ರಶ್ನಿಸಲಾಯಿತು.

ಈ ಸಮೀಕ್ಷೆಯ ಕಾರಣಗಳನ್ನು ಬಹಿರಂಗಪಡಿಸಿದಾಗ 24% ವೈಯಕ್ತಿಕ ಸಮಸ್ಯೆಗಳು ಅಥವಾ ರೋಗ, ಶೇ.21ರಷ್ಟು ಪ್ರಕರಣಗಳಲ್ಲಿ ಪರಸ್ಪರ ಹೊಂದಾಣಿಕೆ ಇರದಿರುವ ಕಾರಣಗಳು ಪತ್ತೆಯಾದವು. ಇದರ ಹೊರತಾಗಿ ಕ್ರೌರ್ಯ, ಮೋಸ, ಗಂಡ ಅಪೇಕ್ಷಿಸಿದಂತೆ ನಡೆದುಕೊಳ್ಳದಿರುವುದು, ಸಂಪನ್ಮೂಲಗಳ ಕೊರತೆ ಮುಂತಾದ ಕಾರಣಗಳು ಕೂಡ ಪತ್ತೆಯಾದವು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ