ನಿರ್ಮಲಾ ಮತ್ತು ರಮೇಶ್‌ ತಮ್ಮ 15 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದರು. ಆ ಸಮಯದಲ್ಲಿ ನಿರ್ಮಲಾಳಿಗೆ ತನಗೆ ಯಾವ ಯಾವ ವಸ್ತುಗಳ ಮೇಲೆ ಹಕ್ಕಿದೆ, ಯಾವುದರ ಮೇಲಿಲ್ಲ ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆಯಿರಲಿಲ್ಲ. ಹೀಗಾಗಿ ಅವಳು ಮನೆಯ ಆಸ್ತಿಯಲ್ಲಿ ತನಗೆ ಬರಬೇಕಾದ ಪಾಲಿನ ಬಗ್ಗೆ ಕೇಳಲಿಲ್ಲ. ರಮೇಶ್‌ ಮಗುವನ್ನು ತನ್ನ ಬಳಿಯೇ ಇರಲು ಅವಕಾಶ ಕೊಟ್ಟ. ಹಾಗಾಗಿ ಅವಳಿಗೆ ಮನೆಯ ಆಸ್ತಿಯ ಬಗ್ಗೆ ಗಮನವೇ ಹೋಗಲಿಲ್ಲ. ಅವಳು ಉದ್ಯೋಗಸ್ಥೆ. ಅವರು ಈವರೆಗೆ ಯಾವ ಮನೆಯಲ್ಲಿ ವಾಸಿಸುತ್ತಿದ್ದರೊ ಅದನ್ನು ಇಬ್ಬರೂ ಗಳಿಸಿದ ಹಣದಿಂದ ಖರೀದಿಸಲ್ಪಟ್ಟಿತ್ತು.

ಅಂದಹಾಗೆ ವಿಚ್ಛೇದನದ ಬಳಿಕ ಅವಳ ಮನಸ್ಸು ಅದೆಷ್ಟು ಚೂರು ಚೂರಾಗಿ ಹೋಗಿತ್ತೆಂದರೆ, ಭವಿಷ್ಯದ ಬಗ್ಗೆ ಯಾವುದಾದರೂ ಯೋಚನೆ ಅಥವಾ ಮುಂಬರುವ ತೊಂದರೆ, ತಾಪತ್ರಯಗಳ ಬಗ್ಗೆ ಅವಳಿಗೆ ಗಮನವೇ ಹೋಗಿರಲಿಲ್ಲ. ವಾಸ್ತವದಲ್ಲಿ ವಿಚ್ಛೇದನ ಮಾನಸಿಕವಾಗಿ ಘಾಸಿಗೊಳಿಸುತ್ತದೆ. ಆದರೆ ಅದರ ಆರ್ಥಿಕ ಪರಿಣಾಮಗಳು ಮತ್ತಷ್ಟು ಘೋರವಾಗಿರುತ್ತವೆ.

ವಿಚ್ಛೇದನದ ಕೆಲವು ತಿಂಗಳುಗಳ ಬಳಿಕ ನಿರ್ಮಾಲಳಿಗೆ ತಾನು ದೊಡ್ಡ ತಪ್ಪು ಮಾಡಿದೆ ಎಂದು ಅನಿಸತೊಡಗಿತು. ಏಕಾಂಗಿಯಾಗಿ ಜೀವನ ಸಾಗಿಸುವ ಕಹಿ ಅನುಭವಗಳಿಂದ ರೋಸಿಹೋದ ಆಕೆ ಆಸ್ತಿಯನ್ನೆಲ್ಲ ರಮೇಶ್‌ಗೆ ಬಿಟ್ಟುಕೊಟ್ಟು ತನ್ನ ಕಾಲ ಮೇಲೆ ತಾನು ದೊಡ್ಡ ಚಪ್ಪಡಿ ಎಳೆದುಕೊಂಡೆ ಎಂದು ಭಾಸವಾಯಿತು. ಆಗ ಅವಳು ರಮೇಶ್‌ನನ್ನು ಸಂಪರ್ಕಿಸಿ ತನ್ನ ಪಾಲನ್ನು ಕೇಳಿದಳು. ಮನೆಯನ್ನು ಇಬ್ಬರೂ ಸೇರಿಯೇ ಕೊಂಡುಕೊಂಡಿದ್ದೆವು ಎಂಬುದನ್ನು ಅವನಿಗೆ ನೆನಪಿಸಿದಳು.

ಆಸ್ತಿಯ ಮೇಲೆ ಕಾನೂನು ರೀತ್ಯಾ ಹಕ್ಕು

ಕಾನೂನು ರೀತ್ಯಾ, ವೈವಾಹಿಕ ಜೀವನದ ಸಂದರ್ಭದಲ್ಲಿ ಖರೀದಿಸಿದ ಯಾವುದೇ ವಸ್ತು ಗಂಡಹೆಂಡತಿ ಇಬ್ಬರದೂ ಆಗಿರುತ್ತದೆ. ಯಾವುದೇ ವಸ್ತು ಖರೀದಿಸಿದ ಸಂದರ್ಭದಲ್ಲಿ ಹೆಂಡತಿಯ ಉಪಸ್ಥಿತಿ ಇರದೇ ಇದ್ದರೂ ಈ ನಿಯಮ ಅನ್ವಯವಾಗುತ್ತದೆ. ಅಂದಹಾಗೆ, ಪಿತ್ರಾರ್ಜಿತವಾಗಿ ಬಂದ ಯಾವುದೇ ಆಸ್ತಿ ಈ ಕಾನೂನಿನ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಯಾವ ವಸ್ತುಗಳ ಮೇಲೆ ಹೆಂಡತಿಯ ಹಕ್ಕು ಇರುತ್ತದೆ, ಅದರ ಯಾವುದೇ ಪುರಾವೆ ಇರದೇ ಇದ್ದರೂ ಕೂಡ ಆಕೆಗೆ ಅದರ ಹಕ್ಕು ಇದ್ದೇ ಇರುತ್ತದೆ.

ನಿರ್ಮಲಾಳ ಪ್ರಕರಣದಲ್ಲಿ ಆಸ್ತಿ ಅಂದರೆ ಮನೆ ರಮೇಶನ ಹೆಸರಿನಲ್ಲಿತ್ತು. ಆದರೆ ಅದಕ್ಕೆ ಮಾಡಿದ ಸಾಲದ ದಾಖಲೆಗಳಲ್ಲಿ ಅವಳ ಹೆಸರು ಕೂಡ ಇತ್ತು. ಜೊತೆಗೆ ಅವಳು ತನ್ನ ಖಾತೆಯಿಂದ ಹಲವು ಇಎಂಐಗಳನ್ನು ಕೂಡ ಪಾತಿಸಿದ್ದಳು. ವಿಚ್ಛೇದನದ ಬಳಿಕ ಅವಳು ಹೋಮ್ ಲೋ‌ನ್‌ ಇಎಂಐನ ಇಸಿಎಸ್‌ ಮ್ಯಾಂಡೇಜ್‌ನ್ನು ಕೂಡ ಅಂತಿಮಗೊಳಿಸಿರಲಿಲ್ಲ. ಇದೇ ಕಾರಣದಿಂದ ಗಂಡನಿಂದ ಬೇರ್ಪಟ್ಟ ಬಳಿಕ 2 ತಿಂಗಳ ಹೋಮ್ ಲೋನ್‌ನ ಇಎಂಐ ಅವಳ ಖಾತೆಯಿಂದ ವರ್ಗಾವಣೆಗೊಂಡಿತ್ತು. ಅದನ್ನು ಗಮನಿಸಿ ನಿರ್ಮಾಲ ತನ್ನ ಬ್ಯಾಂಕ್‌ಗೆ ಮುಂದಿನ ಇಎಂಐಗಳನ್ನು ತಡೆಹಿಡಿಯಲು ಸೂಚನೆ ಕೊಟ್ಟಳು. ಅದಕ್ಕೆ ಬ್ಯಾಂಕ್‌ನವರು ಬಹುದೀರ್ಘ ಪ್ರಕ್ರಿಯೆಯ ಬಗ್ಗೆ ಹೇಳಿದರು. ಅದನ್ನು ಪೂರ್ತಿಗೊಳಿಸದ ಹೊರತು ತಡೆಹಿಡಿಯುವುದು ಅಸಾಧ್ಯ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ