ಗಂಡ ಹೆಂಡತಿಯ ಸಂಬಂಧ ಅತ್ಯಂತ ಸಂವೇದನಾಶೀಲ ಹಾಗೂ ಭಾವನಾತ್ಮಕವಾಗಿರುತ್ತದೆ. ಮೊದಲು ಅವಿಭಕ್ತ ಕುಟುಂಬಗಳ ಕಾಲದಲ್ಲಿ ಸಂಬಂಧದಲ್ಲಿ ಅಷ್ಟಿಷ್ಟು ಏರಿಳಿತ ಆಗುತ್ತಿತ್ತು. ಆದರೆ ಈಗ ಒಟ್ಟು ಕುಟುಂಬಗಳ ಕಾಲ ಹೊರಟುಹೋಗಿ ಪುಟ್ಟ ವಿಭಕ್ತ ಕುಟುಂಬಗಳ ಯುಗ ಶುರುವಾಗಿದೆ. ಅದಕ್ಕೆ ಹೆಗಲು ಕೊಡುವ ಕೆಲಸ ಗಂಡ ಹೆಂಡತಿ ಇಬ್ಬರ ಮೇಲೂ ಬಿದ್ದಿದೆ. ಇಂತಹ ಸ್ಥಿತಿಯಲ್ಲಿ ಹೆಂಡತಿ ಅಡುಗೆಮನೆಗೆ ಅಂಟಿಕೊಂಡು ಕುಳಿತಿರುವುದು ಕುಟುಂಬಕ್ಕೆ ಹಿತಕರವಲ್ಲ. ಇಂದಿನ ಕಾಲದಲ್ಲಿ ಹೆಂಡತಿಯ ಜವಾಬ್ದಾರಿಗಳು ಗಂಡನಿಗಿಂತ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿವೆ.

ಗಂಡ ಕೆಲಸ ಮಾಡಿ ಹಣವನ್ನು ತರುತ್ತಾನೆ. ಅದೇ ಹಣವನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿ ಮನೆ, ಸಂಬಂಧಿಕರು, ಅಕ್ಕಪಕ್ಕದವರು ಹೀಗೆ ಎಲ್ಲರ ಜೊತೆ ನಿಕಟ ಸಂಬಂಧ ಕಾಯ್ದುಕೊಳ್ಳುವುದು ಅವಳ ಕೆಲಸವಾಗಿದೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಗಳಿಸಿದ ಹಣದಲ್ಲಿ ಒಂದಿಷ್ಟು ಮೊತ್ತವನ್ನು ಉಳಿಸುವುದು ಕೂಡ ಅವಳ ಕರ್ತವ್ಯದ ಪಟ್ಟಿಯಲ್ಲಿ ಸೇರಿಕೊಂಡಿದೆ. ಇಂದಿನ ಸ್ಮಾರ್ಟ್‌ ವೈಫ್‌ ಕೇವಲ ಹೌಸ್‌ ವೈಫ್‌ ಆಗಿರುವಲ್ಲಿ ಸಂತೋಷಪಡುವುದಿಲ್ಲ. ಅವಳು ಒಬ್ಬ ಒಳ್ಳೆಯ ಹೌಸ್‌ ಮ್ಯಾನೇಜರ್‌ ಕೂಡ ಆಗಿದ್ದಾಳೆ.

ಕುಟುಂಬದ ಯಶಸ್ವಿ ಚುಕ್ಕಾಣಿ

ಭಾವನಾ ಮತ್ತು ಗಿರೀಶ್‌ ಮದುವೆಯ ಬಳಿಕ ಮಳವಳ್ಳಿಯಿಂದ ಬೆಂಗಳೂರಿಗೆ ಬಂದರು. ಗಿರೀಶ್‌ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ. 25,000 ರೂ. ಸಂಬಳ ಬರುತ್ತಿತ್ತು. 6,000 ರೂ.ಗಳಲ್ಲಿ ಒಂದು ಪುಟ್ಟ ಮನೆ ಬಾಡಿಗೆ ಹಿಡಿದು ತಮ್ಮ ಸಂಸಾರಚಕ್ರ ಆರಂಭಿಸಿದರು. ಇಷ್ಟೊಂದು ದೊಡ್ಡ ಮೊತ್ತ ಬಾಡಿಗೆಗೆ ಹೋಗುತ್ತಿರುವುದು ಭಾವನಾಗೆ ಏಕೋ ಸರಿ ಬರಲಿಲ್ಲ. ಅವಳು ಸರ್ಕಾರಿ ಯೋಜನೆಯಲ್ಲಿ ದೊರಕುವ ಮನೆಗಳ ಬಗ್ಗೆ ಗಮನಹರಿಸಿದಳು. ಅಕ್ಕಪಕ್ಕದವರಿಗೂ ಸಹ ಆಕೆ ಆ ಬಗ್ಗೆ ಮಾಹಿತಿ ಕೊಡಲು ಕೋರಿದಳು.

1 ತಿಂಗಳ ಬಳಿಕ ಭಾವನಾಗೆ ತಿಳಿದು ಬಂದ ವಿಚಾರವೆಂದರೆ ಸರ್ಕಾರಿ ಗೃಹ ಯೋಜನೆಯಲ್ಲಿ ಕೆಲವರು ಮನೆಯನ್ನು ಬುಕ್ ಮಾಡಿದ್ದರು. ಆದರೆ ಅಲನ್ನು ಖರೀದಿಸಿರಲಿಲ್ಲ. ಸರ್ಕಾರ ಅಂತಹ ಮನೆಗಳನ್ನು ಪುನಃ ಮಾರಾಟ ಮಾಡಲು ಯೋಜಿಸಿದೆ ಎಂದು ತಿಳಿಯಿತು. ಮನೆಯ ಒಟ್ಟು ಮೊತ್ತದಲ್ಲಿ ಶೇ.25 ರಷ್ಟನ್ನು ಮೊದಲೇ ಕೊಡುವುದು ಉಳಿದ ಮೊತ್ತವನ್ನು ಕಂತಿನಲ್ಲಿ ಕೊಡುವುದೆಂದು ತಿಳಿಸಲಾಗಿತ್ತು. ಆರಂಭಿಕ ಮೊತ್ತ 1,50,000 ರೂ. ಕೊಡಬೇಕಿತ್ತು. ತಿಂಗಳ ಕಂತು 4,000 ರೂ. ಕೊಡಬೇಕಿತ್ತು. ಅಷ್ಟೊಂದು ಮೊತ್ತವನ್ನು ಈಗ ಎಲ್ಲಿಂದ ತರುವುದೆಂದು ಗಿರೀಶ್‌ ಪತ್ನಿಗೆ ಕೇಳಿದ, ``ಈಗ ನಾವು ಹೇಗೂ 6,000 ರೂ. ಬಾಡಿಗೆ ಕೊಡುತ್ತಿದ್ದೇವೆ. ಆ ಮೊತ್ತವಂತೂ ಉಳಿಯುತ್ತದೆ. ನಾನು 1 ಲಕ್ಷ ರೂ.ತನಕ ವ್ಯವಸ್ಥೆ ಮಾಡ್ತೀನಿ, ನೀವು 50,000 ರೂ. ವ್ಯವಸ್ಥೆ ಮಾಡಿ,'' ಎಂದು ಹೇಳಿದಳು.

ಕೆಲವೇ ತಿಂಗಳಲ್ಲಿ ಹಣ ಪಾವತಿ ಮುಗಿಸಿದ ಅವರು ತಮ್ಮದೇ ಆದ ಮನೆಯನ್ನು ಹೊಂದಿದರು.

ಅದೊಂದು ದಿನ ಗಿರೀಶ್‌ ಭಾವನಾಳನ್ನು ಒಂದು ಮದುವೆ ಪಾರ್ಟಿಗೆ ಕರೆದುಕೊಂಡು ಹೋಗಲು ಬಂದ. ಅವಳು ಸಿದ್ಧಳಾಗಿ ಬಂದಾಗ ಅವಳಲ್ಲಿ ಏನೋ ವ್ಯತ್ಯಾಸ ಕಂಡುಬಂತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ