ಇಂದಿನ ಮಹಿಳೆ ದೌರ್ಜನ್ಯ ಅಂದರೆ, ಇನ್ನೊಬ್ಬರ ಕಿರಿಕಿರಿಯನ್ನು ಸಹಿಸಿ ಕೊಳ್ಳಬಲ್ಲಳೆ? ಈಗ ಅವಳು ತೆರೆಯ ಹಿಂದೆಯೂ ಇಲ್ಲ, ನಾಲ್ಕು ಗೋಡೆಯ ಮಧ್ಯೆ ಬಂಧಿಯಾಗಿಯೂ ಇಲ್ಲ. ಅವಳೀಗ ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾಳೆ. ಆದಾಗ್ಯೂ ಅವಳು ಪುರುಷ ವರ್ಗದ ಮುಂದೆ ಏಕೆ ಕೈಯೊಡ್ಡಿ ಕೇಳಬೇಕಾದ ಪರಿಸ್ಥಿತಿ ಬರುತ್ತದೆ? ಒಮ್ಮೆ ಮೀಸಲಾತಿ, ಇನ್ನೊಮ್ಮೆ ಪ್ರತ್ಯೇಕ ಕಾನೂನು ಬೇಕೆನ್ನುತ್ತಾಳೆ. 1983ರಲ್ಲಿ ಸರ್ಕಾರ ಕೌಟುಂಬಿಕ ದೌರ್ಜನ್ಯವನ್ನು ಭಾರತೀಯ ದಂಡ ಸಂಹಿತೆಯನ್ವಯ ಪ್ರಸ್ತುತಪಡಿಸಿತು ಹಾಗೂ ಹಲವು ವರ್ಷಗಳ ಬಳಿಕ ಭಾರತೀಯ ದಂಡ ಸಂಹಿತೆಯ 498ಎ ರೂಪುಗೊಂಡು ಜಾರಿಗೆ ಬಂತು.

ಸರ್ಕಾರ ಮಹಿಳಾ ಸುರಕ್ಷತೆ ಮಸೂದೆಯನ್ನು ಅಂಗೀಕರಿಸುವುದರ ಅರ್ಥ ಮಹಿಳೆ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ ಎಂಬುದಾಗಿದೆ. ಬಡ ಕುಟುಂಬಗಳಲ್ಲಷ್ಟೇ ಅಲ್ಲ, ಮಧ್ಯಮ ವರ್ಗಗಳು ಮತ್ತು ಶ್ರೀಮಂತ ಕುಟುಂಬಗಳಲ್ಲೂ ಮಹಿಳೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಒಂದು ಸಮೀಕ್ಷೆಯಿಂದ ಖಚಿತಗೊಳ್ಳುವ ಸಂಗತಿಯೇನೆಂದರೆ, ಶೇ.50ರಷ್ಟು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಕೇವಲ ಗಂಡನಿಂದಷ್ಟೇ ಅಲ್ಲ, ಅವನ ಕುಟುಂಬದವರಿಂದಲೂ ಆಕೆ ತುಳಿತಕ್ಕೊಳಗಾಗುತ್ತಾಳೆ. ಎಷ್ಟೋ ಸಲ ಆಕೆ ತವರಿನವರ ಜೊತೆ ದೂರವಾಣಿಯಲ್ಲಿ ಮಾತನಾಡಲು, ಖುದ್ದಾಗಿ ಭೇಟಿಯಾಗಲು ಕೂಡ ಅವಕಾಶ ಸಿಗುವುದಿಲ್ಲ.

ಕೈ ಮಾಡುವುದು ಅಪರಾಧ

ಗಂಡನಿಂದ ಹೆಂಡತಿಯ ಮೇಲೆ ದೌರ್ಜನ್ಯ ನಡೆಸುವ ನೂರಾರು ಪ್ರಕರಣಗಳು ದಿನ ದಾಖಲಾಗುತ್ತವೆ. ಕೆಲವು ಪ್ರಕರಣಗಳು ಹೇಗಿರುತ್ತವೆ ಎಂದರೆ, ಅವರು ನಿಜವಾಗಿಯೂ ಗಂಡ ಹೆಂಡತಿ ಯಾ ಅಂತ ಸಂದೇಹ ಬರಲು ಶುರುವಾಗುತ್ತದೆ. ಈವರೆಗೆ ಹೆಂಡತಿಯ ಮೇಲೆ ಕೈ ಮಾಡುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಅದನ್ನು ಗಂಡಹೆಂಡತಿಯರ ವೈಯಕ್ತಿಕ ವಿಷಯ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಹೊಸ ಕಾನೂನು ರೂಪುಗೊಳ್ಳುತ್ತಿದ್ದಂತೆ ಅದು ಕೂಡ ಒಂದು ಅಪರಾಧವಾಗಿ ಪರಿಗಣಿಸಲ್ಪಟ್ಟಿದೆ. ಅದರಿಂದ ಗಂಡನಿಗೆ 14 ವರ್ಷಗಳ ಕಾಲ ಜೈಲು ಶಿಕ್ಷೆ ಕೂಡ ಆಗಬಹುದು.

ಅಂದಹಾಗೆ ಅದರ ಅನುಷ್ಠಾನ ಕಠಿಣ. ಆದರೆ ಹೊಸ ಕಾನೂನು ಬಹಳ ಸರಳವಾಗಿದೆ. ಹೊಸ ಕಾನೂನಿನ ಪ್ರಕಾರ, ಪೊಲೀಸರು ಮೊದಲು ಕಂಡುಬರುತ್ತಾರೆ. ಆಗ ಸಂತ್ರಸ್ತೆ ಎನ್‌ಜಿಓ ಮುಂದೆ ಹೋಗಬೇಕಾಗುತ್ತದೆ. ಭಾರತದಲ್ಲಿ ಪೊಲೀಸರ ಪಾತ್ರ ಏನು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಪ್ರಕರಣ ಮತ್ತಷ್ಟು ಕ್ಲಿಷ್ಟಕರವಾಗುತ್ತ ಹೋಗುತ್ತದೆ.

ಈ ವಿಧೇಯಕ ಮಹಿಳೆಯರಿಗೆ ಗಂಡನ ದೌರ್ಜನ್ಯಕ್ಕೆ ಪ್ರತಿಯಾಗಿ ಮೊಕದ್ದಮೆ ನಡೆಸಲು ಅವಕಾಶ ಕಲ್ಪಿಸಿಕೊಡುತ್ತದೆ. ಈ ಮಸೂದೆ ಮಹಿಳೆಗೆ ಎಫ್‌ಐಆರ್‌ ದಾಖಲಿಸಿ ತನ್ನ ದೂರು ಸಲ್ಲಿಸಲು ಅವಕಾಶ ಕೊಡುತ್ತದೆ.

ಹೆಂಡತಿಯ ಕೆಲಸಕ್ಕೆ ಮಹತ್ವವಿಲ್ಲ

ಹೆಂಡತಿ ಮನೆಯಲ್ಲಿ ಎಷ್ಟು ಕೆಲಸ ಮಾಡುತ್ತಾಳೆ ಎನ್ನುವುದು ಗಂಡನಿಗೆ ಮಹತ್ವವೇ ಅಲ್ಲ. ಅವನು ಅವಳನ್ನು ಅಲಂಕಾರಿಕ ವಸ್ತು ಎಂದು ಭಾವಿಸುತ್ತಾನೆ. ಕೆಲಸದವರು ಇರಲಿ ಬಿಡಲಿ, ಅವನು ಮಾತ್ರ ಅವಳಿಗೆ ಮನೆಯಲ್ಲಿ ಏನೂ ಕೆಲಸ ಇಲ್ಲ ಎಂದೇ ಭಾವಿಸುತ್ತಾನೆ. ಅಡುಗೆ ಮಾಡುವುದೇನೂ ದೊಡ್ಡ ಕೆಲಸವಲ್ಲ ಎಂದವನು ತಿಳಿದಿರುತ್ತಾನೆ. ಕೆಳವರ್ಗದಲ್ಲಿ ಹೆಂಡತಿಯ ಮೇಲಿನ ಹಲ್ಲೆಗೆ ಮುಖ್ಯ ಕಾರಣ ಮದ್ಯ ವ್ಯಸನ. ಮುಂಜಾನೆಯಿಂದ ರಾತ್ರಿವರೆಗೆ ಕೆಲವರ ಗಮನ ಮದ್ಯಕ್ಕಾಗಿ ಹಣ ಕಸಿದುಕೊಳ್ಳುವುದೇ ಆಗಿರುತ್ತದೆ. ಇದರಲ್ಲಿ ಅಪ್ಪ ಮಗ ಯಾರೂ ಕೂಡ ಆಗಿರಬಹುದು. ಮದ್ಯಕ್ಕಾಗಿ ಅಪ್ಪ ಮಗಳ ಮೇಲೂ ಹಲ್ಲೇ ನಡೆಸುತ್ತಾನೆ. ಮಧ್ಯಮ ವರ್ಗದಲ್ಲಿ ಅಹಂಕಾರ ಎಲ್ಲಕ್ಕೂ ಮುಂಚೂಣಿಯಲ್ಲಿರುತ್ತದೆ. ಅಂತಹ ಕುಟುಂಬದಲ್ಲಿ ಮಹಿಳೆ ಎಷ್ಟೇ ಗಳಿಕೆ ಮಾಡಿದರೂ ನಿಂದೆಯ ಮಾತುಗಳನ್ನು ಕೇಳಿಸಿ ಕೊಳ್ಳಬೇಕಾಗುತ್ತದೆ. ಏನೂ ಗಳಿಸದಿದ್ದರೆ ಆಕೆ ಸೋಮಾರಿ ಎಂಬ ಮಾತು ಕೇಳಿಸಿಕೊಳ್ಳಬೇಕಾಗುತ್ತದೆ. ಮಹಿಳೆಯರ ಕೆಲಸಕ್ಕೆ ಎಲ್ಲೂ ಪ್ರಶಂಸೆಯ ಮಾತುಗಳು ಕೇಳಿಬರುವುದಿಲ್ಲ. ಮಗನೇನಾದರೂ ಆಫೀಸ್‌ ನಿಂದ ಮರಳಿದಾಗ ತುಂಬಾ ದಣಿದು ಬಂದಿರುತ್ತಾನೆ ಎಂದು ಹೇಳುತ್ತಾರೆ. ಅದೇ ಮಗಳು ಅಥವಾ ತಾಯಿ ಕೆಲಸ ಮುಗಿಸಿ ಮನೆಗೆ ಬಂದರೆ ಅಂತಹ ಮಾತುಗಳು ಕೇಳಿ ಬರುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ