ಕಳೆದ ವರ್ಷದ ಫೆಬ್ರವರಿ ಮೊದಲ ವಾರದಂದು ಮಹಿಳಾ ಆಯೋಗದ ಕಛೇರಿಯಲ್ಲಿ ಸುಮನಾಳ ಕಥೆ ಕೇಳಿ ಆಯೋಗದ ಮುಖ್ಯಸ್ಥೆ ಲತಾ ದೇಶಪಾಂಡೆ ಅವರಷ್ಟೇ ಅಲ್ಲ, ಅಲ್ಲಿದ್ದ ಎಲ್ಲರೂ ಬಹುತೇಕ ದಂಗಾಗಿ ಹೋದರು.
ಸುಮನಾಳ ಮದುವೆ ರೇಲ್ವೇ ಕಾಲೋನಿಯ ಗೌತಮ್ ಜೊತೆ ಆಗಿತ್ತು. ಮದುವೆಯಾದಾಗ ಸುಮನಾ ಬಹಳ ಖುಷಿಗೊಂಡಿದ್ದಳು. ಏಕೆಂದರೆ ತನ್ನ ಪತಿ ಸಿನಿಮಾ ನಿರ್ಮಿಸುತ್ತಾನೆ. ಜೊತೆಗೆ ರೈಲ್ವೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ. ಗಂಡನ ಮನೆಯಲ್ಲಿ ತನಗೆ ಯಾವುದೇ ಕೊರತೆ ಆಗಲಾರದು ಎಂದು ಆಕೆಗೆ ನಂಬಿಕೆಯಿತ್ತು. ತನ್ನ ಬಗ್ಗೆ ಯಾವುದೇ ದೂರು ಬರಬಾರದೆಂದು ಆಕೆ ಎಚ್ಚರ ವಹಿಸುತ್ತಿದ್ದಳು. ಚಿಕ್ಕಪುಟ್ಟ ತೊಂದರೆ ಬಂದರೂ ಅದನ್ನು ಹೇಗೆ ಎದುರಿಸಬೇಕೆಂದು ಕೂಡ ಆಕೆಗೆ ಗೊತ್ತಿತ್ತು.
ಕೆಲವು ತಿಂಗಳುಗಳ ಬಳಿಕ ತನ್ನ ಗಂಡ ಸಿನಿಮಾ ನಿರ್ಮಾಪಕನೂ ಅಲ್ಲ, ರೈಲ್ವೆ ಉದ್ಯೋಗಿಯೂ ಅಲ್ಲ ಎಂಬ ಸಂಗತಿ ಅವಳಿಗೆ ಸಿಡಿಲೆರಗಿದಂತೆ ಬಂದು ಅಪ್ಪಳಿಸಿತು. ತನಗೆ ಸುಳ್ಳು ಹೇಳಿ ಅವನು ಮದುವೆ ಆಗಿದ್ದಾನೆಂದು ಅವಳಿಗೆ ಖಾತ್ರಿಯಾಯಿತು. ಈ ಸುಳ್ಳನ್ನು ನಿರ್ಲಕ್ಷಿಸುವುದೇ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಯೋಚಿಸುತ್ತ ಅವಳು ತನಗೆ ತಾನೇ ಸಮಾಧಾನ ಹೇಳಿಕೊಂಡಳು. ತಾನು ಕೂಗಾಡುವುದರಿಂದ ಏನೇನೂ ಲಾಭವಿಲ್ಲ. ಹೇಗಿದೆಯೋ ಹಾಗೆ ಜೀವನ ಸಾಗಿಸಬೇಕು ಎಂದು ಅವಳು ಅಂದುಕೊಂಡಳು.
ಮಾದಕ ವ್ಯಸನಿ ಪತಿ
ಇಲ್ಲಿಯವರೆಗೆ ಆಕೆ ಎಲ್ಲವನ್ನು ಸಹಿಸಿಕೊಂಡಿದ್ದಳು. ಆದರೆ ಶೀಘ್ರ ಪತಿಯ ಇನ್ನೊಂದು ರೂಪ ಆಕೆಯ ಗಮನಕ್ಕೆ ಬಂತು. ಅವನು ಹಲವು ಬಗೆಯ ವ್ಯಸನಗಳಿಗೆ ತುತ್ತಾಗಿದ್ದ. ಅಮಲಿನಲ್ಲಿ ಅವನು ಎಂತೆಂತಹ ಕುಚೇಷ್ಟೆ ಮಾಡುತ್ತಿದ್ದನೆಂದರೆ, ಅದರಿಂದ ಯಾವುದೇ ಪತ್ನಿಯ ಜೀವನ ನರಕವಾಗುತ್ತಿತ್ತು.
ಗಂಡ ಅಮಲಿನ ದಾಸ ಎಂದು ಅನೇಕ ಮಹಿಳೆಯರು ಹೇಳಿಕೊಂಡು ದೂರು ನೀಡಲು ಬರುತ್ತಿದ್ದರು. ಅದರಿಂದ ಮಹಿಳಾ ಆಯೋಗದ ಅಧ್ಯಕ್ಷರಿಗೆ ಆಶ್ಚರ್ಯ ಆಗುತ್ತಿರಲಿಲ್ಲ. ಆದರೆ ಸುಮನಾಳ ಬಾಯಿಯಿಂದ ತನ್ನ ಗಂಡ ರೂಮ್ ಫ್ರೆಶರ್ನರ್ ಮೂಸಿ ನೋಡಿ ನಶೆಗೆ ಒಳಗಾಗುತ್ತಿದ್ದ ಎಂಬುದನ್ನು ಕೇಳಿ ಅವಳು ಅದೆಷ್ಟು ಕಷ್ಟದಲ್ಲಿದ್ದಾಳೆ ಎಂಬುದು ಅರಿವಾಯಿತು.
ಅವಳು ತನ್ನ ಕಷ್ಟ ಹೇಳುತ್ತಾ ಹೋದಂತೆ ಆಯೋಗದ ಸದಸ್ಯರು ದಿಙ್ಮೂಢರಾಗುವಂತಹ ಸ್ಥಿತಿ ಉಂಟಾಯಿತು. ಗಂಡನ ಅಮಲಿನ ಲಾಭವನ್ನು ಆಕೆಯ ಮಾವ ತೆಗೆದುಕೊಳ್ಳಲು ಪ್ರಾರಂಭಿಸಿದ್ದ. ಶಾಯರಿ ಬರೆಯುತ್ತಿದ್ದ ಮಾವ ಆಕೆಯ ಕಣ್ಣು ಕೂದಲಿನ ಬಗ್ಗೆಯೂ ಸಾಕಷ್ಟು ವರ್ಣಿಸುತ್ತಿದ್ದನಂತೆ.
ಅಂದಹಾಗೆ ಆಕೆಯ ಪತಿ ಹಾಗೂ ಮಾವನನ್ನು ಕರೆಸಿ ಸ್ಪಷ್ಟೀಕರಣ ಕೇಳಿದಾಗ ಸುಮನಾ ಹೇಳಿದೆಲ್ಲ ಸುಳ್ಳು ಎಂದು ಅವರು ಹೇಳಿದರು. ಆದರೆ ಸುಮನಾಳ ಮಾತಿನಲ್ಲಿ ಸತ್ಯಾಂಶವಿರುವುದು ಆಯೋಗದ ಸದಸ್ಯರಿಗೆ ಮನವರಿಕೆಯಾಯಿತು. ಏಕೆಂದರೆ ಸಾಮಾನ್ಯವಾಗಿ ಹೆಂಡತಿಯರು ಹೇಳುವುದೇನೆಂದರೆ ಗಂಡ ತೊಂದರೆ ಕೊಡುವುದು, ವರದಕ್ಷಿಣೆಯ ಆರೋಪ ಮಾಡುತ್ತಿದ್ದರು. ಆದರೆ ಸುಮನಾ ಹೇಳಿದ್ದು ಗಂಡನ ಅಮಲಿನ ಬಗೆಗಷ್ಟೆ.
ಗಂಡ ನಶೆಗೆ ತುತ್ತಾದಾಗ ಹೆಂಡತಿ ಯಾವ ಯಾವ ತೊಂದರೆಗಳಿಗೆ ಸಿಲುಕುತ್ತಾಳೆ ಎನ್ನುವುದು ಸುಮನಾಳ ಸ್ಥಿತಿಯಿಂದ ಅರಿವಾಗುತ್ತದೆ. ಆ ಕಡೆಯೂ ಇಲ್ಲ, ಈ ಕಡೆಯೂ ಇಲ್ಲ ಎಂಬಂತಹ ಸ್ಥಿತಿ ಆಕೆಯದಾಗುತ್ತದೆ. ತವರಿನವರಿಗೆ ಈ ಬಗ್ಗೆ ಹೇಳಿದರೆ, ಈಚೆಗೆ ಎಲ್ಲರೂ ಕುಡಿಯುತ್ತಾರೆ ನೀನು ಹೊಂದಾಣಿಕೆ ಮಾಡಿಕೊಂಡು ಹೋಗುವುದನ್ನು ರೂಢಿಸಿಕೊ ಎಂದು ಅವಳಿಗೇ ಬುದ್ಧಿವಾದ ಹೇಳುತ್ತಾರೆ.