ಸೋಲ್ ಮೇಟ್‌ ಅಂದರೆ ಆತ್ಮಸಂಗಾತಿ. ಆತ ನಿಮಗೆ ಸ್ನೇಹಿತ, ಸಂಬಂಧಿಕ ಅಥವಾ ಟೀಚರ್‌ ಯಾರಾದರೂ ಆಗಬಹುದು. ಯಾರೊಂದಿಗೆ ನೀವು ಅತ್ಯಂತ ಗಾಢವಾಗಿ ನಿಕಟವಾಗಿದ್ದೀರಿ ಎಂದು ಅನಿಸುತ್ತದೋ, ಆತ ನಿಮಗೆ ಸವಾಲುಗಳನ್ನು ಒಡ್ಡುತ್ತಾನೆ, ಪ್ರೇರಣೆ ನೀಡುತ್ತಾನೆ, ಆಸರೆ ನೀಡುತ್ತಾನೆ ಹಾಗೂ ಸದಾಕಾಲ ನಿಮ್ಮ ನೆನಪಿನಲ್ಲಿರುತ್ತಾನೆ. ವಾಸ್ತವದಲ್ಲಿ ನಿಮಗೆ ಏನು ಬೇಕಾಗಿದೆ ಎಂಬುದರ ಅನುಭವವನ್ನು ಆತ ಮಾಡಿಕೊಡುತ್ತಿರುತ್ತಾನೆ. ನೀವು ಆತನೊಂದಿಗೆ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಜೋಡಿಸಲ್ಪಟ್ಟಿರುತ್ತೀರಿ.

ಗುರುತಿಸುವುದು ಹೇಗೆ?

ಮನಸ್ಸಿಗೆ ನೆಮ್ಮದಿ ಕೊಡುವವ : ಯಾರೊಂದಿಗೆ ಇದ್ದಾಗ ನೀವು ಸುರಕ್ಷಿತೆ ಎಂದು ಭಾವಿಸುತ್ತೀರೊ, ಆತನೊಂದಿಗೆ ಇದ್ದಾಗ ನಿಮಗೆ ನೆಮ್ಮದಿ, ನಿರಾಳತೆಯ ಭಾವನೆ ಬರುತ್ತದೆ. ಯಾವ ವ್ಯಕ್ತಿ ನಿಮ್ಮ ಮುಂದೆ ಬಂದು ನಿಂತಾಗ ನಿಮ್ಮ ಮನಸ್ಸಿನ ತಳಮಳ ಓಡಿಹೋಗುತ್ತದೋ, ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಬರುವಂತೆ ಮಾಡುತ್ತಾನೋ, ಅವನೇ ನಿಮ್ಮ ನಿಜವಾದ ಆತ್ಮಸಂಗಾತಿ.

ದೀರ್ಘಕಾಲದಿಂದ ಪರಸ್ಪರ ಪರಿಚಯ ಎಂಬಂತೆ ಭಾಸ : ಮೊದಲ ಬಾರಿ ನೀವು ಆತನನ್ನು ಭೇಟಿ ಆಗುತ್ತೀರಿ, ಆತ ನಿಮಗೆ ಅಪರಿಚಿತ ಎನಿಸುವುದಿಲ್ಲ. ಆತನೊಂದಿಗೆ ಮಾತನಾಡುವುದರಿಂದ ನಿಮಗೆ ಬೇಜಾರಾಗುವುದಿಲ್ಲ. ಆ ವ್ಯಕ್ತಿಯೊಂದಿಗೆ ಎಲ್ಲ ಬಗೆಯ ವಿಷಯ ಹಂಚಿಕೊಳ್ಳಬಹುದು. ಯಾವುದೇ ರಹಸ್ಯ ಕಾಪಾಡುವ ಅಗತ್ಯವಿಲ್ಲ ಎಂದೆನಿಸುತ್ತದೆ. ಆತನ ಬಗ್ಗೆ ಪರಿಪೂರ್ಣ ವಿಶ್ವಾಸ ಉಂಟಾಗುತ್ತದೆ. ಆಗ ನಿಮಗೆ ಆ ವ್ಯಕ್ತಿಯ ಜೊತೆ ಅದೆಷ್ಟೋ ವರ್ಷಗಳ ದೀರ್ಘ ಪರಿಚಯ ಇತ್ತು ಎನಿಸುತ್ತದೆ.

ಬಹಳ ದಿನಗಳ ನಿರೀಕ್ಷೆ : ನಿಮ್ಮ ವಯಸ್ಸು ಎಷ್ಟೇ ಇರಬಹುದು, ಎಷ್ಟೋ ಜನರ ಬಗ್ಗೆ ನಿಮಗೆ ಆಕರ್ಷಣೆ ಉಂಟಾಗಿರಬಹುದು. ನೀವು ವಿವಾಹಿತರೇ ಆಗಿರಬಹುದು, ನಿಮಗೆ ಜೀವನದಲ್ಲಿ ಎಂತಹ ಒಂದು ತಿರುವು ಬರುತ್ತದೆ ಎಂದರೆ, ಯಾರೋ ಒಬ್ಬರನ್ನು  ಭೇಟಿಯಾಗಿ ನಿಮಗೆ ನಾನು ಬಹಳ ವರ್ಷಗಳಿಂದ ಇಂತಹ ವ್ಯಕ್ತಿಯ ಶೋಧನೆಯಲ್ಲಿದ್ದೆ, ಈಗ ಆ ವ್ಯಕ್ತಿ ಸಿಕ್ಕಿಬಿಟ್ಟ ಎಂದೆನಿಸಬಹುದು. ಆ ವ್ಯಕ್ತಿಯ ಜೊತೆ ನಿಮಗೆ ಸ್ಥಿರತೆಯ ಭಾವನೆ ಬರುತ್ತದೆ.

ಎಂಥದೇ ಸವಾಲು ಎದುರಿಸುವ ಸಾಮರ್ಥ್ಯ : ಯಾವ ವ್ಯಕ್ತಿಯ ಜೊತೆ ಇರುವುದರಿಂದ ನಿಮ್ಮೊಳಗೆ ಒಂದು ರೀತಿಯ ಶಕ್ತಿ ಸಂಚಲನವಾಗುತ್ತಿದೆ ಎಂದು ನಿಮಗ ಅನಿಸುತ್ತದೋ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬಂದಿದೆಯೆಂದು ಅನಿಸುತ್ತದೋ, ಆ ವ್ಯಕ್ತಿಯೇ ನಿಮ್ಮ ನಿಜವಾದ ಆತ್ಮಸಂಗಾತಿ.

ಸುರಕ್ಷತೆಯ ಅನುಭವ : ಯಾವುದೋ ಚುಂಬಕ ಶಕ್ತಿ ನನ್ನನ್ನು ಆ ವ್ಯಕ್ತಿಯ ಕಡೆ ಎಳೆದೊಯ್ಯುತ್ತಿದೆ ಎಂದು ನಿಮಗನ್ನಿಸುತ್ತದೋ, ಆ ವ್ಯಕ್ತಿಯ ಜೊತೆ ಇದ್ದಾಗ ನಾನು ಸುರಕ್ಷಿತೆ ಎಂದು ನಿಮಗನ್ನಿಸಿದರೆ ಆ ವ್ಯಕ್ತಿಯೇ ನಿಮ್ಮ ಆತ್ಮಸಂಗಾತಿ.

ಸುಂದರವಾಗಿ ಇರಬೇಕೆಂದೇನಿಲ್ಲ : ನಿಜವಾದ ಪ್ರೀತಿಯ ಅರ್ಥ ಕೇವಲ ದೈಹಿಕ ಆಕರ್ಷಣೆಯೊಂದೇ ಅಲ್ಲ, ದೈಹಿಕ ಹಾಗೂ ಮಾನಸಿಕವಾಗಿಯೂ ಒಂದಾಗುವುದಾಗಿದೆ. ಆತನ ಕಣ್ಣಿನಲ್ಲಿ ನಿಮ್ಮನ್ನು ಹಾಗೂ ನಿಮ್ಮ ಕಣ್ಣಲ್ಲಿ ಆತನನ್ನು ಕಂಡುಕೊಳ್ಳುತ್ತೀರಿ ಎಂದರೆ ಆತನೇ ನಿಮ್ಮ ನಿಜವಾದ ಪ್ರೀತಿ. ಅವನೇ ನಿಮ್ಮ ನಿಜವಾದ ಆತ್ಮಸಂಗಾತಿ. ನೀವಿಬ್ಬರೂ ಬೇರೆ ಬೇರೆ ಅಲ್ಲ, ಇಬ್ಬರೂ ಒಂದೇ ಎಂದು ಭಾವಿಸುತ್ತೀರಿ. ಎಲ್ಲಿ `ನೀನು' ಮತ್ತು `ನಾನು' ಎಂಬ ಭಾವನೆ ಇದೆಯೋ, ಅಲ್ಲಿ ನಿಮ್ಮಿಬ್ಬರ ಒಡನಾಟವೇನೊ ಇರುತ್ತದೆ, ಆದರೆ ಅದರಲ್ಲಿ ಅಷ್ಟು ಗಾಢತೆ ಇರುವುದಿಲ್ಲ. ಆ ಸಂಬಂಧ ಬಹುಬೇಗ ತುಂಡರಿಸಬಹುದು. ಆದರೆ ನಿಜವಾದ ಆತ್ಮಸಂಗಾತಿಯ ಜೊತೆಗಿನ ಸಂಬಂಧ ಎಂದೂ ತುಂಡಾಗುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ