ಹೊಸದಾಗಿ ಮದುವೆಯಾದಾಗ ಕೆಲವೊಮ್ಮೆ ಗಂಡ ಹೆಂಡತಿ ಇಬ್ಬರೂ ಹಠಮಾರಿ  ಸ್ವಭಾವದವರಾಗಿದ್ದಾರೆ ಎಂಬುದು ತಿಳಿಯುತ್ತದೆ. ದಾಂಪತ್ಯದ ಗಟ್ಟಿ ಅಡಿಪಾಯಕ್ಕೆ ಇದು ಅಪಾಯಕಾರಿ ಸ್ಥಿತಿ. ಹಠಮಾರಿತನದ ಮನೋವೈಜ್ಞಾನಿಕ ಕಾರಣಗಳು ಹಾಗೂ ಮನೋವೈಜ್ಞಾನಿಕ ಸಲಹೆಗಳ ಮೇಲೊಮ್ಮೆ ಕಣ್ಣು ಹರಿಸಿ :

ಹಠಮಾರಿತನದ ಪರಿಚಯ

ಹಠಮಾರಿತನ ನಮ್ಮ ವ್ಯಕ್ತಿತ್ವದ ಎಂತಹ ಒಂದು ಸಂಗತಿಯೆಂದರೆ,  ವ್ಯಕ್ತಿಯೊಬ್ಬ ಯಾವುದೇ ಸ್ಥಿತಿಯಲ್ಲೂ, ತನ್ನ ಮೂಲ ದೃಷ್ಟಿಕೋನವನ್ನು ಬದಲಿಸಿಕೊಳ್ಳಲು ಸಿದ್ಧನಿರುವುದಿಲ್ಲ. ತನ್ನ ಯೋಚನೆಯನ್ನೇ ಅಂತಿಮ ಸತ್ಯ ಎಂದು ಭಾವಿಸಿ ಮುಂದೆ ಸಾಗುತ್ತಿರುತ್ತಾನೆ. ಅಂದರೆ ಹಠಮಾರಿತನ ಎನ್ನುವುದು ತನ್ನನ್ನು ತಾನು ಸುರಕ್ಷಿತವಾಗಿಟ್ಟುಕೊಳ್ಳುವ ಒಂದು ವಿಧಾನ. ಇನ್ನೊಬ್ಬರ ಅಧೀನದಲ್ಲಿ ತಾನಿರಲಾಗದು ಎಂಬುದು ಆ ವ್ಯಕ್ತಿಯ ಧೋರಣೆಯಾಗಿರುತ್ತದೆ. ಹಠಮಾರಿ ವ್ಯಕ್ತಿ ತನ್ನ ವಿಶ್ವಾಸ, ಅಭಿಪ್ರಾಯ, ಇಚ್ಛೆ ಮುಂತಾದವುಗಳ ಬಗ್ಗೆ ಕಲ್ಲಿನ ಮೂರ್ತಿಯ ಹಾಗಿರುತ್ತಾನೆ. ನಿಮ್ಮ ಸಂಗಾತಿ ಹಠಮಾರಿ ಎನ್ನುವುದನ್ನು ಹೇಗೆ ಗುರುತಿಸುವುದು?

ನಿಮ್ಮ ಸಂಗಾತಿ ನಿಮ್ಮ ಯಾವುದೇ ಹೊಸ ವಿಚಾರ, ಯೋಜನೆಯನ್ನು ಕೇಳುತ್ತಿದ್ದಂತೆಯೇ ಒಮ್ಮೆಲೇ ಇಲ್ಲ ಎಂದು ಹೇಳಬಾರದು. ಮೊದಲು ಕೇಳಿಸಿಕೊಳ್ಳಿ. ಆಮೇಲೆ ಹೇಳಿ ಎಂದು ನಿಮಗೆ ಮೇಲಿಂದ ಮೇಲೆ ಹೇಳಬೇಕಾಗಿ  ಬರಬಹುದು.

ಯಾವುದೇ ವಿಷಯದ ಬಗ್ಗೆ ಪ್ರಸ್ತಾಪಿಸಿದರೂ ಆತ ತದ್ವಿರುದ್ಧ ಪ್ರತಿಕ್ರಿಯೆ ನೀಡಬಹುದು. ಒಂದು ವಿಷಯದ ಬಗ್ಗೆ ಒಮ್ಮತ ಹೊಂದುವುದು ಕಷ್ಟವಾಗುತ್ತದೆ.

ಸಾಮಾನ್ಯವಾಗಿ ನೀವು ಹೇಳಿದ ಯಾವುದೇ ವಿಷಯವನ್ನು ಕಿವಿಗೆ ಹಾಕಿಕೊಳ್ಳದಿರುವುದು, ಅಲಕ್ಷಿಸುವುದು ಆತನ ಧೋರಣೆ. ಯಾವುದೇ ವಿಷಯದ ಬಗ್ಗೆ ಚರ್ಚೆ ಮಾಡದೆಯೇ ಸಂಗಾತಿ ತಾನೇ ಒಂದು ನಿರ್ಧಾರಕ್ಕೆ ಬರಬಹುದು.

ದಂಪತಿಗಳು ಹಠವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಲು ಮನೋತಜ್ಞರ ಸಲಹೆ :

ಯುವ ದಂಪತಿಗಳು ಸ್ವತಂತ್ರ ಜೀವನ ನಡೆಸಲು ಯೋಚಿಸುತ್ತಿದ್ದರೆ, ಇಬ್ಬರೂ ಬೇರೆ ಬೇರೆ ಸಮಯದಲ್ಲಿ ಕೆಲವು ತಿಂಗಳ ಮಟ್ಟಿಗೆ ಪೋಷಕರನ್ನು ಕರೆತಂದು ಅವರ ಎದುರು ಸಂಯಮ ಕಾಯ್ದುಕೊಳ್ಳಿ.

ನಿಮ್ಮಿಬ್ಬರ ನಡುವಿನ ಮನಸ್ತಾಪದಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ಬೇಡ.

ಪರಸ್ಪರರ ಮೊಬೈಲ್ ‌ನ್ನು ಚೆಕ್‌ ಮಾಡುವುದು, ಸಂದೇಹಪಡುವುದು ಹಠದ ಬೆಂಕಿಗೆ ತುಪ್ಪ ಸುರಿದಂತೆ. ಹೀಗಾಗಿ ಸಹಜವಾಗಿರಿ.

ಹೊಸದಾಗಿ ಮದುವೆಯಾಗಿದ್ದರೆ ನೈಸರ್ಗಿಕ ಸ್ಥಳವೊಂದಕ್ಕೆ ಸುತ್ತಾಡಲು ಹೋಗಿ.

ಇಬ್ಬರಲ್ಲಿ ಒಬ್ಬರು ಹೆಜ್ಜೆ ಹಾಕಲೇಬೇಕು. ತನ್ನ ಹಠಮಾರಿತನದಿಂದಾಗಿ ತನ್ನಲ್ಲಿ ಸಿಟ್ಟು ಅಸೂಯೆ ಹೆಚ್ಚುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.

ಸಂಗಾತಿಯ ಜೊತೆ ಮಾತನಾಡುವಾಗ ನಿಮ್ಮ ಅಭಿಪ್ರಾಯವನ್ನಷ್ಟೇ ಒತ್ತಿ ಹೇರಬೇಡಿ. ಅವನ ಪ್ರತಿಕ್ರಿಯೆ ಏನು ಎಂದು ತಿಳಿದುಕೊಳ್ಳುವ ಉತ್ಸಾಹ ಕೂಡ ತೋರಿಸಬೇಕು. ನಿಮ್ಮಿಬ್ಬರ ನಡುವೆ ಒಮ್ಮತ ಇರಲಿ.

ಅಂದಹಾಗೆ ಇಬ್ಬರು ಹಠಮಾರಿಗಳ ವಿವಾಹ ದೀರ್ಘಾವಧಿ ಸಂಬಂಧಕ್ಕೆ ಅಪಾಯದ ಸಂಕೇತವಾಗಿದೆ. ಹೀಗಾಗಿ ಇಂತಹ ಜೋಡಿ ಸ್ಥಿರತೆ ಹಾಗೂ ಜೀವನದ ಖುಷಿಗಾಗಿ ಕೆಳಕಂಡ ಸಂಗತಿಗಳ ಬಗ್ಗೆ ಗಮನಹರಿಸಿ.

ಪರಸ್ಪರ ಹೊಂದಾಣಿಕೆ : ನಿಮ್ಮದೇ ಆದ ಹಠವನ್ನು ಮುಂದುವರಿಸುವ ಬದಲು ಈ 3 ಸಂಗತಿಗಳನ್ನು ಕಲಿತುಕೊಳ್ಳಲು ಪ್ರಯತ್ನಿಸಿ. ಅವೆಂದರೆ ಹೊಂದಾಣಿಕೆ, ಸಹಕಾರ ಮತ್ತು ಸಹಭಾಗಿತ್ವ. ಇದರಿಂದ ನಿಮ್ಮ ಮನಸ್ಸಿನ ಇಚ್ಛೆ ಇನ್ನಷ್ಟು ಉತ್ತಮ ರೀತಿಯಲ್ಲಿ ಈಡೇರುವುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ