ಫ್ಲಾಪ್‌ ಅಂದ್ರೆ ಭಯ

`ಜುಮ್ಮಂದಿ ನಾದಂ` ತೆಲುಗು ಚಿತ್ರದಿಂದ ಕೆರಿಯರ್‌ ಆರಂಭಿಸಿದ ತಾಪಸಿ ಪನ್ನು, ತಮಿಳಿನ `ಆಡುಕಾಲಂ' ಚಿತ್ರದಿಂದ ಸ್ಟಾರ್‌ ಎನಿಸಿದಳು. `ಚಶ್ಮೆ ಬಹದ್ದೂರ್‌'ನಿಂದ ಬಾಲಿವುಡ್‌ನಲ್ಲಿ ಎಂಟ್ರಿ ಪಡೆದ ಈ ಬೆಡಗಿ ಪಿಂಕ್‌, ಬೇಬಿ ಚಿತ್ರಗಳಲ್ಲಿ ಮಿಂಚಿ ಈಕೆ ಇದೀಗ `ನಾವ್‌ ಶಬಾನಾ'ದ ಸ್ಟಂಟ್‌ಗಳ ಮೂಲಕ ಬಹು ಚರ್ಚೆಯಲ್ಲಿದ್ದಾಳೆ. ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸುವ ತಾಪಸಿಗೆ ಫ್ಲಾಪ್‌ ಎಂದರೆ ಭಯವಂತೆ, ``ನನ್ನ ಪ್ರತಿ ಚಿತ್ರ ರಿಲೀಸ್‌ ಆಗುವಾಗಲೂ ಪರೀಕ್ಷೆಯ ಫಲಿತಾಂಶ ಎದುರಿಸುವ ವಿದ್ಯಾರ್ಥಿಯಂತೆ ಚಡಪಡಿಸುತ್ತೇನೆ. ಬಾಕ್ಸ್ ಆಫೀಸ್‌ ವರದಿ ನೆಗೆಟಿವ್‌ ಆದೀತೆಂಬ ಭಯದಿಂದ ನಾನು ಊಟ ಸಹ ಮಾಡಲ್ಲ ಗೊತ್ತಾ...?'' ಎನ್ನುತ್ತಾಳೆ.

ಶ್ರದ್ಧಾಳ ಕಿತಾಪತಿ

ಫರ್‌ಹಾನ್‌ ಮನೆ ಹೊಕ್ಕಿದ್ದ ಶ್ರದ್ಧಾಳನ್ನು ಬಲವಂತಾಗಿ ವಾಪಸ್ಸು ಮನೆಗೆ ಕರೆಸಿದ ಸುದ್ದಿ, ನಂತರ ಎಕ್ಸ್ ಮತ್ತು ಪ್ರೆಸೆಂಟ್‌ ಬಾಯ್‌ಫ್ರೆಂಡ್‌ಗಳ ನಡುವೆ ಮಾರಾಮಾರಿ.... ಈ ಸುದ್ದಿಗಳಿಂದ ಶ್ರದ್ಧಾಳಿಗಾಗಿ ಇಂದಿನ ಯುವಕರು ಎಷ್ಟು ಶ್ರದ್ಧೆಯಿಂದಿದ್ದಾರೆ ತಿಳಿಯುತ್ತದೆ. `ಆಶಿಕಿ-2' ಚಿತ್ರದ ಆದಿತ್ಯ-ಶ್ರದ್ಧಾರ ಜೋಡಿ ಆ ಕಾಲಕ್ಕೆ ಹಿಟ್‌ ಎನಿಸಿತ್ತು. ನಂತರ `ರಾಕ್‌ಆನ್‌-2' ಚಿತ್ರದ ನಂತರ ಫರ್‌ಹಾನ್‌-ಶ್ರದ್ಧಾರ ಲಿಪ್‌ಲಾಕ್‌ ಭಾರಿ ಸುದ್ದಿ ಆಯ್ತು. ಆತ ಪತ್ನಿಯನ್ನು ಬಿಟ್ಟಿದ್ದೇ ಈಕೆಯಿಂದ ಎಂದಾಗಿತ್ತು. ಇದೀಗ ಹೊಸ ಚಿತ್ರದ ನಂತರ ಮತ್ತೆ ಆದಿ ಜೊತೆ ಇವಳ ಸುತ್ತಾಟ ತಾರಕಕ್ಕೇರಿದೆ. ಆದಿತ್ಯನಿಗಿಂತ ಸೀನಿಯರ್‌ ಆದ ಫರ್‌ಹಾನ್‌ಗೆ ಉರಿಉರಿ ಆಗದಿದ್ದೀತೇ? ಇತ್ತೀಚೆಗೆ ಆಕೆ ಆದಿ ಜೊತೆ ಮಹೇಶ್‌ ಭಟ್‌ರ ಪಾರ್ಟಿಯಲ್ಲಿ ಕೈಕೈ ಬೆಸೆದು ಕಾಣಿಸಿದಾಗ, ಫರ್‌ಹಾನ್‌ ಆದಿ ಜೊತೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ. ಅವರನ್ನು ಹೊಡೆದಾಡಲು  ಬಿಟ್ಟು ಈಕೆ ಅಲ್ಲಿಂದ ಪರಾರಿ ಆಗುವುದೇ....?

ಇರ್ಫಾನ್‌-ಸಬಾರಿಗಾಗಿ ಹಾಡುವ ಗುರು

ಇಂದಿನ ಪಡ್ಡೆಗಳ ಹಾರ್ಟ್‌ ಥ್ರೋಬ್‌ ಪಾಪ್‌ ಸಿಂಗರ್‌ ಎನಿಸಿರುವ ಗುರು ರಂಧಾವಾ ಬಾಲಿವುಡ್‌ನಲ್ಲಿ ಎಂಟ್ರಿ ಪಡೆದದ್ದೇ ದೊಡ್ಡ ಸುದ್ದಿ! ಇರ್ಫಾನ್‌-ಸಬಾ ಕರೀಂ ನಟಿಸಿರುವ `ಹಿಂದಿ ಮೀಡಿಯಂ' ಚಿತ್ರದಲ್ಲಿ ಆತನದೇ ಹಾಡುಗಾರಿಕೆ. ಹಳೆ ಹಾಡು ಇಲ್ಲಿ ರಿಪೀಟ್‌ ಆಗುತ್ತಿರುವ ಬಗ್ಗೆ ಗುರು, ``ಈ ಹಾಡು ನನಗೇನೋ ಬಹಳ ಇಷ್ಟ. ಹಿಂದೆ ಕೆಲವರನ್ನು ಮಾತ್ರ ತಲುಪಿದ್ದ ಈ ಹಾಡು ಈಗ ಅಂತಾರಾಷ್ಟ್ರೀಯ  ಮಟ್ಟ ತಲುಪಲಿದೆ. `ಹಿಂದಿ ಮೀಡಿಯಂ' ಚಿತ್ರ ಖಂಡಿತಾ ಆ ಎತ್ತರಕ್ಕೇರಲಿದೆ,'' ಎನ್ನುತ್ತಾನೆ.

ಸನೀ ಕಲಿಯುತ್ತಿದ್ದಾಳೆ ಹೊಸ ಕೋರ್ಸ್

ತನ್ನ ಹಾಟ್‌ನೆಸ್‌ ಎಲ್ಲಾ ಕಾಲಕ್ಕೂ ಎತ್ತಿ ಹಿಡಿಯಲಾರದು ಎಂಬುದನ್ನು ಮನಗಂಡಿರುವ ಸನೀ ಲಿಯೋನ್‌, ಬಾಲಿವುಡ್‌ನಲ್ಲಿ ಒಂದು ಸ್ಥಾನ ಗಳಿಸಬೇಕೆಂದರೆ, ನಟನೆ ಅನಿವಾರ್ಯ ಎಂಬುದನ್ನು ಮನಗಂಡಿದ್ದಾಳೆ. ಇದನ್ನು ಸೀರಿಯಸ್‌ ಆಗಿ ಭಾವಿಸಿದ ಈಕೆ, ಲಾಸ್‌ ಏಂಜಲೀಸ್‌ಗೆ ಹೋಗಿ ಸ್ಕ್ರಿಪ್ಟ್ ರೈಟಿಂಗ್‌, ಎಡಿಟಿಂಗ್‌ ಕೋರ್ಸ್‌ ಕಲಿಯುತ್ತಿದ್ದಾಳಂತೆ. ಈಕೆ ಶಾರೂಖ್‌ ಜೊತೆ `ರಯೀಸ್‌' ಚಿತ್ರದ `ಲೈಲಾ ಓ ಲೈಲಾ....' ಐಟಂ ನಂತರ ಮತ್ತೆಲ್ಲೂ ನಟಿಸಲಿಲ್ಲ. ನಂಬಲರ್ಹ ಮೂಲಗಳ ಪ್ರಕಾರ, ಸನೀ ಲಾಸ್‌ ಏಂಜಲೀಸ್‌ನಲ್ಲಿ ಸೀರಿಯಸ್‌ ಆಗಿ ಕಲಿಯುತ್ತಿರುವುದು ನಿಜವಂತೆ. ಅದೇನೂ ಮಾಡದಿದ್ದರೆ ತಾನು ಇಲ್ಲಿ ನೆಲೆ ನಿಲ್ಲಲು ಸಾಧ್ಯವಿಲ್ಲ ಎಂದು ಅರಿತಿದ್ದಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ