ವಿದೇಶೀ ನೆಲದಲ್ಲಿ ದೇಶೀ ರಂಗು : ಒಂದು ದೇಶದ ಜನ ಬೇರೊಂದು ದೇಶಕ್ಕೆ ಹೋದಾಗ, ಅಲ್ಲಿಗೆ ತಮ್ಮ ಸಂಸ್ಕೃತಿಯನ್ನೂ ಕೊಂಡೊಯ್ಯುತ್ತಾರೆ. ಚೀನೀಯರು ಅಮೆರಿಕಾದಲ್ಲಿ 200ಕ್ಕೂ ಹೆಚ್ಚು ವರ್ಷಗಳಿಂದ ನೆಲೆಸಿದ್ದಾರೆ. ಅಷ್ಟು ವರ್ಷಗಳಾದರೂ, ತಮ್ಮ ಹಬ್ಬ ಬಂದಾಗ, ತಮ್ಮದೇ ರೀತಿಯ ಪೋಷಾಕು, ಆಚರಣೆ, ನೃತ್ಯ, ಆಹಾರಗಳಿಂದ ಅಮೆರಿಕಾದ ಗಲ್ಲಿಗಲ್ಲಿಗಳನ್ನೂ ಚೀನೀಮಯಗೊಳಿಸುತ್ತಾರೆ.

ಮಜಾ ಬೇಕೆಂದರೆ ಇಲ್ಲಿಗೆ ಬನ್ನಿ :  ಅಯ್ಯ ಸೂರ್ಯಪ್ಪ… ನಮ್ಮ ತಲೆ ಮೇಲೆ ಉರಿಗಣ್ಣು ಬೀರಿ ನೀನೇನೋ ಮಜಾ ಪಡೆಯುವೆ… ನಮ್ಮ ಗತಿ? ಸೈನಿಕ ಬೊಂಬೆ ಸೂರ್ಯ ಬೊಂಬೆಗೆ ಹೇಳುತ್ತಿರುವಂಥ ಈ ಬೃಹತ್‌ ಬೆಲೂನುಗಳು, ಸ್ವಿಸ್‌ ಪರ್ವತಗಳ ಮೇಲೆ, ಸ್ಕೀಯಿಂಗ್‌ ಮಾಡುವಂಥ ಕ್ರೀಡಾಪಟುಗಳಿಗೆ ಸುಖಾನುಭವ ನೀಡುತ್ತಿವೆ.

ಫ್ಯಾಷನ್ನಿನ ಹೊಸ ಪರಿ : ಇದೇನು ಫ್ಯಾಷನ್ನೋ ಅಥವಾ ವಸ್ತ್ರ ಪಂಜರವೋ….? ಅದರೊಳಗಿನ ಮೈನಾ ಅಂತೂ ಬೊಂಬಾಟ್‌! ಇತ್ತೀಚೆಗೆ ಸ್ಪೇನ್‌ನಲ್ಲಿ ನಡೆದ ಒಂದು ಅಂತಾರಾಷ್ಟ್ರೀಯ ಫ್ಯಾಷನ್‌ ಶೋನ ನೋಟವಿದು.

ಎಂದು ಮುಗಿಯಲಿದೆ ಈ ಭೇದಭಾವ? : ಯೂರೋಪ್‌ನಲ್ಲಿ ಆಫ್ರಿಕಾ ಮತ್ತು ಏಷ್ಯಾದಿಂದ ಬಂದ ಜನರತ್ತ ದಿನೇದಿನೇ ಸಿಟ್ಟು ಹೆಚ್ಚಾಗಿ ಸಹನೆ ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ವಿದೇಶೀಯರು! ಅವರಿಗೆ ಸಿಗುತ್ತಿರುವ ಕಡಿಮೆ ವೇತನದಿಂದ ತಾವು ನಿತ್ಯ ನಿರುದ್ಯೋಗಿಗಳು… ಪ್ಯಾರಿಸ್‌ನಲ್ಲಿ ಇತ್ತೀಚೆಗೆ ಒಬ್ಬ ಕಪ್ಪು ಯುವತಿ ಜೊತೆ ಹೊಡೆದಾಟ ಮತ್ತು ಅತ್ಯಾಚಾರದ ಘಟನೆ ನಡೆದಾಗ, ದಂಗೆಗಳಾದವು. ಆಗ ಬಿಳಿ ಪೊಲೀಸರೂ ಮನ ಬಂದಂತೆ ವರ್ತಿಸಿದರು. ಇದರಿಂದ ಅಲ್ಲಿನ ಇಡೀ ವಾತಾರಣ ಹೊತ್ತಿಕೊಂಡು ಉರಿದು ಹೋಯಿತು. `ಎಲ್ಲರೂ ಒಂದೇ!’ ಎಂಬುದು ಮಾತಿಗಷ್ಟೇ ಎಂದಾಗುತ್ತಿದೆ. ಅಲ್ಲವೇ…..

ಈಕೆ ಸಿರಿಯಾದ ಬಾಂಬ್‌ ದಾಳಿಗೆ ಸಿಲುಕಿದವಳಲ್ಲ! : ಈಕೆ ಯಾವ ಬಾಂಬ್‌ ದಾಳಿಗೂ ಒಳಗಾದವಳಲ್ಲ, ಒಂದು ಓಟದ ಸ್ಪರ್ಧಾಳು ಅಷ್ಟೆ. ಅದರಲ್ಲಿ ತನ್ನ ವೈಯಕ್ತಿಕ ಶಕ್ತಿ ಸಾಮರ್ಥ್ಯ ನಿರೂಪಿಸಲು 200 ವಿಧದ ಹಿಂಸೆಗಳನ್ನು ಎದುರಿಸಬೇಕಾಗಿದೆ. ನೀರು, ಕೆಸರು, ಕಲ್ಲುಮುಳ್ಳು, ಬೆಂಕಿ, ಸುರಂಗಗಳನ್ನು ಹಾದು ಜಯಿಸಬೇಕಾಗುತ್ತದೆ. ಈ ಸ್ಪರ್ಧೆ ಇಂಗ್ಲೆಂಡ್‌ನ ಟಫ್‌ ಘೈನಲ್ಲಿ ಎಲ್ಲರ ಆಕರ್ಷಣೆಯಾಗಿದೆ. ನಮ್ಮಲ್ಲಿನ ಭಕ್ತರು ಮೂಢನಂಬಿಕೆಗಳಿಗೆ ಬಲಿಯಾಗಿ ಉರುಳುಸೇವೆ ಮಾಡಿ ಕೊನೆಗೆ ಹೀಗೇ ಕಾಣುವುದುಂಟು.

ಮನಮೋಹಕ ನೃತ್ಯ : ಏವಾನ್‌ ಲೇಖ್‌ ಒಪೇರಾಗಳ ಕಥೆ ಅತಿ ಹಳೆಯದು. ಇವು ಎಷ್ಟೇ ಪ್ರಾಚೀನ ಜಾನಪದ ಕಥೆಗಳೆನಿಸಿದರೂ, ಇವುಗಳ ನೃತ್ಯರೂಪಕಗಳು ಮಾತ್ರ ಇಂದಿಗೂ ಅಷ್ಟೇ ರೋಮಾಂಚಕ! ಏಕೆಂದರೆ ಈ ನರ್ತಕಿಯರು ಇದಕ್ಕಾಗಿ ಮಾಡುವ ಕಠಿಣ ಅಭ್ಯಾಸ ವರ್ಣನಾತೀತ, ಅನುಪಮವಾದುದು. ಪ್ಯಾರಿಸ್‌ನ ಒಪೇರಾ ಹೌಸ್‌ ಈ ಕಾರಣದಿಂದಲೇ ವಿಶ್ವಪ್ರಸಿದ್ಧ. ಅಲ್ಲಿಗೆ ಪ್ರವಾಸಕ್ಕೆ ಹೊರಟಾಗ ಮರೆಯದೆ ಈ ನೃತ್ಯರೂಪಕಗಳನ್ನು ವೀಕ್ಷಿಸಿ

TAGS : ವಿದೇಶಿ ನೆಲ, ದೇಶೀ ರಂಗು, ಸ್ವಿಸ್ ಪರ್ವತ, ಸ್ಕೀಯಿಂಗ್, ಅಂತಾರಾಷ್ಟ್ರೀಯ ಫ್ಯಾಷನ್, ಭೇದಭಾವ, ಅತ್ಯಾಚಾರದ ಘಟನೆ, ಸಿರಿಯಾದ ಬಾಂಬ್ ದಾಳಿ, ಮನಮೋಹಕ ನೃತ್ಯ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ