ಎದೆಗುಂದಬೇಡಿ : ಕೆನಡಾ ದೇಶದ ಟೊರಾಂಟೊ ನಗರದ ಒಂದು ಗ್ರೂಪ್ ಗರ್ಲ್ಸ್ ಪವರ್. ಈ ತಂಡ ಮಾನಸಿಕ ಅಸ್ವಸ್ಥ ಮಕ್ಕಳಿಗೆಂದೇ ಹಿಂದಿನಿಂದಲೂ ಡ್ಯಾನ್ಸ್ ಪ್ರದರ್ಶನ ನೀಡಿ ಹಣ ಸಂಗ್ರಹಿಸುತ್ತಿದೆ. ಆದರೆ ಕೊರೋನಾದಿಂದ ಜನರೇ ಸೇರದ ಕಾರಣ ಇವರಿಗೆ ಹಣ ಕೂಡಬೇಕು ಹೇಗೆ? ಕೋವಿಡ್-19ಗೆ ಹೆದರಿ ಹೆಣ್ಣುಮಕ್ಕಳು ಹಿಮ್ಮೆಟ್ಟಬಾರದು, ಕೈಕಟ್ಟಿ ಮನೆಯಲ್ಲೇ ಕೂರಬಾರದು. ತಂತಮ್ಮ ಕರ್ತವ್ಯ ಎಂದಿನಂತೆ ನಿವರ್ಹಿಸುತ್ತಾ ಎಚ್ಚರಿಕೆಯಿಂದ ಮುಂದುವರಿಯಬೇಕು.
ಕಂದಾಚಾರಕ್ಕೆ ಗುಡ್‌ಬೈ : ಸೌತ್ ಸೂಡಾನ್‌ನಲ್ಲಿ ಈಗೊಂದು ಹೊಸ ಕ್ರಾಂತಿಕಹಳೆ ಮೊಳಗುತ್ತಿದೆ. ಅನಾದಿ ಕಾಲದಿಂದಲೂ ಮುಸ್ಲಿಮರು ಪಾಲಿಸಿಕೊಂಡು ಬರುತ್ತಿರುವ `ಖತ್ನಾ' ಪದ್ಧತಿಯಿಂದ ಪುಟ್ಟ ಹೆಣ್ಣುಮಕ್ಕಳ ಗುಪ್ತಾಂಗದ ಭಾಗ ತರಿದು ದೊಡ್ಡದಾಗಿ ಸಮಾರಂಭ ಆಚರಿಸುತ್ತಾರೆ. ನೋವು, ಉರಿ, ಗಾಯದ ಕಾರಣ ಸೋಂಕಾಗಿ ಆ ಮಕ್ಕಳು ಗೋಳಾಡುತ್ತವೆ. ಅಲ್ಲೀಗ ಈ ಕ್ರಮವನ್ನು ಅಪರಾಧ ಎಂದು ಘೋಷಿಸಿ ನಿಷೇಧಿಸಲಾಗಿದೆ. ಕಡು ಬಡವರು ಮಾತ್ರಲ್ಲದೆ, ಕಂದಾಚಾರಿಗಳಾದ ಅತಿ ಶ್ರೀಮಂತರೂ ಈ ಕ್ರಮ ಬಿಡುವುದಿಲ್ಲ. ಇಲ್ಲಿ ಕೇವಲ ಮೊದಲ ಮುಡಿ ಕೊಡಲಾಗುತ್ತದೆ ಎಂಬಂತೆ. ಇದನ್ನು ವಿರೋಧಿಸಲು ಅನೇಕ ಸಮಾಜ ಸುಧಾರಕರು ಮುಂದೆ ಬಂದಿದ್ದಾರೆ.
ಕಾಲದ ಡಿಮ್ಯಾಂಡ್ : ಈ ಲಾಕ್‌ಡೌನ್ ಮಧ್ಯೆ ಹೈಸ್ಕೂಲ್ ಪೇಜೆಂಟ್ ನಡೆಸಿ ಅದನ್ನು ಜನ ದೂರದಿಂದ ಕೇವಲ ತಮ್ಮ ಮೊಬೈಲ್, ಲ್ಯಾಪ್‌ಟಾಪ್‌ನಿಂದ ನೋಡುತ್ತಿದ್ದರೆ ಅದರಲ್ಲಿ ಮಜವೇನಿದೆ? ಹಾಳು ಕೊರೋನಾದಿಂದ ಜನರನ್ನು ಒಂದೆಡೆ ಸೇರಿಸುವಂತಿಲ್ಲ. ಈಗ ಯಾರೂ ಜನರಿಲ್ಲದೆ ಖಾಲಿ ಸ್ಟುಡಿಯೋಗಳಲ್ಲಿ ಇವೆಲ್ಲ ನಡೆಯಲಿದೆ. ಇಲ್ಲಿನ ಎಲ್ಲಾ ಸ್ಪರ್ಧಿಗಳಿಗೂ ಮಿಸ್ ಮಾಸ್ಕ್ ಪಟ್ಟ ಗ್ಯಾರಂಟಿ, ಏಕೆಂದರೆ ನೋಡಲಿಕ್ಕಂತೂ ಎಲ್ಲರೂ ಒಂದೇ ತರಹ ಕಾಣಿಸುತ್ತಾರೆ.
ಹೆಂಗಸರ ಮೇಲೇಕೆ ಮಾತ್ರ ಆಕ್ರೋಶ? : ಸಿರಿಯಾದಲ್ಲಿ ರೆಫ್ಯೂಜಿ ಸಮಸ್ಯೆಯ ಕರಿನೆರಳು ಹೆಂಗಸರ ಮೇಲೆ ಮಾತ್ರ ಕಂಡುಬರುತ್ತಿದೆ. ಧರ್ಮ, ಅಧಿಕಾರ, ಯುದ್ಧದ ವಿಷಯವಾಗಿ ನಷ್ಟವನ್ನು ಅನುಭವಿಸುತ್ತಿರುವವರು ಮಾತ್ರ ತಾಯಂದಿರು. ಇವರ ಮಕ್ಕಳು ಹಸಿವೆ, ರೋಗ, ಶೀತ, ಅತ್ಯಾಚಾರಗಳಿಗೆ ಈಡಾಗುತ್ತಿದ್ದಾರೆ. ರಾಷ್ಟ್ರಪತಿ ಆಡಳಿತವಿರಲಿ, ಇಸ್ರೇಲ್, ಇರಾಕ್‌ನ ಎಎಸ್‌ಐಎಸ್ ಅಥವಾ ರಷ್ಯಾ ಅಮೇರಿಕಾ, ಹೆಂಗಸರು ಜೀವ ಅಂಗೈಲಿ ಹಿಡಿದೇ ಬದುಕಬೇಕಿದೆ!
ಗುಟ್ಟುರಟ್ಟು : ಅಮೆರಿಕಾದಲ್ಲಿ ಜಾರ್ಜ್ ಫ್ಲೈಡ್ ಎಂಬ ಕರಿಯನನ್ನು ಅಲ್ಲಿನ ಒಬ್ಬ ಬಿಳಿಯ ಪೊಲೀಸ್ ನಿರ್ದಯವಾಗಿ ಶೂಟ್ ಮಾಡಿದಾಗ, ಅಲ್ಲಿನ ಗಲ್ಲಿಗಲ್ಲಿಗಳಲ್ಲೂ ಪೊಲೀಸರ ದಬ್ಬಾಳಿಕೆಯನ್ನು ಖಂಡತುಂಡಾಗಿ ವಿರೋಧಿಸಲಾಗುತ್ತಿದೆ. ಈಗ ಎಲ್ಲರೂ ಸರ್ಕಾರವನ್ನು ಹಿಡಿದು ಅಲುಗಿಸುತ್ತಾ ಕೇಳುತ್ತಿರುವ ಒಂದೇ ಪ್ರಶ್ನೆ ಎಂದರೆ, ಶಿಕ್ಷಣದ ಸಂಸ್ಥೆಗಳಲ್ಲಿ ಎಷ್ಟು ಪೊಲೀಸರು ಈ ವರ್ಣಭೇದವನ್ನು ವಿದ್ಯಾರ್ಥಿಗಳ ಮೇಲೆ ಹೇರಿದ್ದಾರೆ? ಅಂತ. ಜಾರ್ಜ್ ಜೀವ ಹೋಯ್ತು, ಆ ಮೂಲಕ ಇಡೀ ಅಮೆರಿಕಾ ಮಾತ್ರಲ್ಲದೆ, ವಿಶ್ವದೆಲ್ಲೆಡೆ ಕರಿಯರ ಮೇಲೆ ಬಿಳಿಯರ ಶೋಷಣೆ ಖುಲ್ಲಂಖುಲ್ಲ ಹೊರಬರುತ್ತಿದೆ. ನಮ್ಮಲ್ಲಿಯೂ ಇಂಥದೇ ಜಾತಿಭೇದವನ್ನು ಈಗ ರಸ್ತೆಗಿಳಿದು ಖಂಡಿಸಲಾಗುತ್ತಿದೆ.
ಮಾನವೀಯತೆಗೆ ಸಮನುಂಟೇ? : ಅಮೆರಿಕಾದ ನ್ಯೂಯಾರ್ಕ್ ರಾಜ್ಯದ ಸಣ್ಣ ನಗರ ಬಟಾವಿಯನ್‌ನಲ್ಲಿ ಅಲ್ಲಿನ ಕೆಲವು ಉತ್ಸಾಹಿ ಯುವಜನತೆ ತಮ್ಮದೇ ತಂಡ ಕಟ್ಟಿಕೊಂಡು, ಕೊರೋನಾ ಕಾಟದಿಂದ ನರಳುತ್ತಿರುವ ರೋಗಿಗಳಿಗೆಂದೇ ಫ್ರೆಶ್ ಹಾಟ್‌ಡಾಗ್ಸ್ (ಉದ್ದನೇ ವೆಜ್/ನಾನ್ ಸ್ಟಫ್ಡ್ ಬನ್) ಹಂಚಿದರು. ಅಸಹಾಯಕರು ಮನೆಯಲ್ಲೇ ಉಳಿದಾಗ, ಈ ಉತ್ಸಾಹಿ ತಂಡ ಉಚಿತವಾಗಿ ಅವರೆಲ್ಲರಿಗೆ ಇದನ್ನು ಹಂಚಿತು. ಪಥ್ಯಕ್ಕೆ ಕಟ್ಟುಬಿದ್ದು, ಮಾಡಿಕೊಳ್ಳಲಾಗದೆ ಅಸಹಾಯಕರಾದವರಿಗೆ ಈ ಸ್ವಾದಿಷ್ಟ ಹಾಟ್‌ಡಾಗ್ಸ್ ಪರಮಾನ್ನವಾಯ್ತು. ಮಾನವೀಯತೆಗಿಂತ ಮಿಗಿಲುಂಟೆ?