ಸಾಮಾಜಿಕ ಜಾಲತಾಣಗಳಲ್ಲಿ ಹಾನಿಕಾರಕ ವಿಡಿಯೋ, ಸಂದೇಶಗಳನ್ನು ಕಳುಹಿಸುವುದೆಂದರೆ ಕೆಲವರಿಗೆ ಸುಳ್ಳು ಮತ್ತು ಹರಟೆ ಹೊಡೆಯುವುದನ್ನು ಬಿಟ್ಟರೆ ಬೇರೇನೂ ಸೂಚನೆ ಬರುವುದೇ ಇಲ್ಲ ಎಂದೆನಿಸುತ್ತದೆ. ಫೋಟೋ ಶಾಪ್ ಬಳಸಿ, ಕೆಲವರು ಮನೆಗಳಲ್ಲಷ್ಟೇ ಅಲ್ಲ, ದೇಶದ ವಿದೇಶಾಂಗ ನೀತಿಯನ್ನೂ ಹಾದಿ ತಪ್ಪಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋವನ್ನು ಬದಲಿಸಿ, ಮೋದಿಯವರ ಲೇಹ್ ಪ್ರವಾಸದ ಸಂದರ್ಭದಲ್ಲಿ 3 ನಾಯಿಗಳ ಜೊತೆ ತೋರಿಸಲಾಯಿತು. ಅದರಲ್ಲಿ ಒಂದು ಮುಖ ಪಾಕಿಸ್ತಾನದ್ದು, ಇನ್ನೊಂದು ಚೀನಾ ರಾಷ್ಟ್ರಾಧ್ಯಕ್ಷರದು, ಮೂರನೆಯದು ನೇಪಾಳ ಪ್ರಧಾನಿಯರದ್ದಾಗಿತ್ತು. ನಿಜಕ್ಕೂ ಇದು ಆಕ್ಷೇಪಾರ್ಹ ಸಂಗತಿ.
ನೇಪಾಳದ ಜೊತೆಗೆ ಭಾರತದ ಸಂಬಂಧ ಬಿಗಡಾಯಿಸಿದೆ. ಆದರೆ ಪಾಕಿಸ್ತಾನದ ಹಾಗೆ ವೈರಿ ದೇಶದ ಸ್ಥಾನದಲ್ಲಿಡುವಷ್ಟು ನೇಪಾಳದ ಜೊತೆಗಿನ ಸಂಬಂಧ ಕೆಟ್ಟಿಲ್ಲ. ನೇಪಾಳಕ್ಕೆ ಹೋಗಲು ಭಾರತೀಯರಿಗೆ ಈಗಲೂ ವೀಸಾ ಬೇಕಿಲ್ಲ. ಈಗಲೂ ಅಲ್ಲಿ ಭಾರತದ ರೂಪಾಯಿ ಚಲಾವಣೆಯಲ್ಲಿದೆ. ಲಕ್ಷಾಂತರ ನೇಪಾಳಿಗಳು ಭಾರತದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ಜನ ಭಾರತೀಯರು ನೇಪಾಳದಲ್ಲಿದ್ದರು. ನೇಪಾಳದ ತರಾಯಿ ಪ್ರಾಂತ್ಯದ ಮಘೇಶಿ ಜನರು ತಮ್ಮನ್ನು ತಾವು ಭಾರತಕ್ಕೂ ಅತ್ಯಂತ ನಿಕಟ ಎಂದು ಭಾವಿಸುತ್ತಾರೆ. ಪರ್ವತ ಪ್ರದೇಶಗಳಲ್ಲಿ ವಾಸಿಸುವ ಗೂರ್ಖಾಗಳು ನೇಪಾಳಿ ಭಾಷೆಯ ಬದಲು ಹಿಂದಿ ಹಾಗೂ ಬಿಹಾರದ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಾರೆ. ಅಂದಹಾಗೆ ಭಾರತೀಯರ ವ್ಯಾಪಾರ ನೇಪಾಳದೊಂದಿಗೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಹಾಕಲ್ಪಡುವ ಇಂತಹ ಕೆಟ್ಟ ಪೋಸ್ಟ ಗಳಿಂದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.
ಅದೇ ರೀತಿ ಉತ್ತರ ಪ್ರದೇಶದ ವಿಕಾಸ್ ದುಬೆ ಪ್ರಕರಣದಲ್ಲೂ ಬ್ರಾಹ್ಮಣ ಹ್ಯಾಂಡ್‌ನಿಂದ ಅವನನ್ನು ಮುಲ್ಲಾ ಎಂದು ಬದಲಿಸಿ ಅವರ ಅಜ್ಜ ಮುತ್ತಜ್ಜ ಮುಸ್ಲಿಮರು ಎಂದು ಬಿಂಬಿಸಲಾಯಿತು. ಏಕೆಂದರೆ ಬ್ರಾಹ್ಮಣರ ಶ್ರೇಷ್ಠತ್ವಕ್ಕೆ ಯಾವುದೇ ಧಕ್ಕೆ ಬರದಿರಲಿ ಎಂಬುದೇ ಅದರ ಹಿಂದಿನ ಉದ್ದೇಶವಾಗಿತ್ತು.
ಈ ದ್ವೇಷದ ಪಾಠವನ್ನು ನಮಗೆ ಬಾಲ್ಯದಿಂದಲೇ ಕಲಿಸುತ್ತಾ ಬರಲಾಗುತ್ತಿದೆ. ಹೇಳಿಕೊಳ್ಳಲು ನಾವು ಜಗದ್ಗುರುಗಳು. ಪೂಜೆ ಅರ್ಚನೆಗಳಿಂದ ಜನರು ದಿನ ಆರಂಭಿಸುತ್ತಾರೆ ಹಾಗೂ ಅಂತ್ಯಗೊಳಿಸುತ್ತಾರೆ. ಕೆಟ್ಟ ಕರ್ಮ, ಕೆಟ್ಟ ಫಲ ಎಂದು ದಿನಕ್ಕೆ 4 ಸಲವಾದರೂ ಹೇಳುತ್ತಾರೆ. ಪ್ರವಚನಗಳು, ಗೀತ ರಾಮಾಯಣ ಕೀರ್ತನೆ, ಆರತಿ ಮುಂತಾದವುಗಳಿಂದ ತಮ್ಮ ಚಾರಿತ್ರ್ಯ ಸುಧಾರಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಒಂದಿಷ್ಟು ಸುಧಾರಣೆಯಾಗುವ ಮುನ್ನ ಅಸೂಯೆ, ದ್ವೇಷದ ಭಾವನೆ ಬೆಳೆಸಿಕೊಳ್ಳುತ್ತಾರೆ.
ಯಾವ ರೀತಿ ಇವರು ಪಾಕಿಸ್ತಾನದವರನ್ನು ಮುಸ್ಲಿಮರನ್ನು, ದಲಿತರನ್ನು ಹೀಯಾಳಿಸುತ್ತಾರೋ ಅದೇ ರೀತಿ ತಮ್ಮ ಮನೆಗಳಲ್ಲೂ ಅಣ್ಣತಮ್ಮ, ಅಕ್ಕತಂಗಿ, ಅಜ್ಜಿತಾತಾ, ಚಿಕ್ಕಪ್ಪರನ್ನೂ ಹೀಯಾಳಿಸಿ ಮಾತನಾಡುತ್ತಾರೆ.
ಬೈಗುಳ, ಅಪಶಬ್ದಗಳು ಅವರ ನಾಲಿಗೆಯ ಒಂದು ಭಾಗವೇ ಆಗಿಬಿಟ್ಟಿವೆ. ಅವರ ಈ ತೆರನಾದ ಭಾಷೆಗೆ ಧರ್ಮದ ಸಂಪೂರ್ಣ ಸಮರ್ಥನೆ ಕೂಡ ಇದೆ. ಅದನ್ನು ತಮ್ಮವರಿಗಲ್ಲದಿದ್ದರೂ ಬೇರೆಯವರಿಗಾದರೂ ಬೈಯುವುದಕ್ಕೆ ಮಾನ್ಯ ಎಂದು ಬಳಸುತ್ತಾರೆ.
ತಿಲಕ ಹಚ್ಚಿಕೊಳ್ಳುವುದು, ಜನಿವಾರ ಧರಿಸುವುದು, ಕೈಗೆ ಪಟ್ಟಿ ಕಟ್ಟಿಕೊಳ್ಳುವುದು ಇವೆಲ್ಲದರ ನಡುವೆ ಅವರವರ ಬಾಯಿಂದ ಬರುವ ಬೈಗುಳಗಳು ಬೇರೆ ಯಾರಿಗೂ ಕಡಿಮೆ ಎನಿಸುವುದಿಲ್ಲ. ಅದೇ ಯೋಚನೆ ಅವರಿಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಬರ್ಖಾ ದತ್ತ ವಿರುದ್ಧ ಸಿಡಿದೇಳಲು ಟ್ರೇನಿಂಗ್ ಕೊಡುತ್ತವೆ. ಈಗ ಅದೇ ದ್ವೇಷ, ಅಸೂಯೆ ನೇಪಾಳವನ್ನು ವೈರಿ ದೇಶವನ್ನಾಗಿ ಮಾಡಲಾಗುತ್ತಿದೆ.