ಕೂರೋನಾ ಮಹಾಮಾರಿಯಿಂದಾಗಿ ಇಡೀ ವಿಶ್ವವೇ ಲಾಕ್ ಡೌನ್ ಆಗಿರುವ ಪರಿಣಾಮ ವಿಶ್ವಾದ್ಯಂತ ಅನೇಕರು ಕೆಲಸ ಕಳೆದುಕೊಂಡಿದ್ದಾರೆ ಮತ್ತು ಎಲ್ಲಾ . ದೇಶಗಳ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ಇಂತಹ ಸಂದರ್ಭದಲ್ಲಿ ಕೆಂದ್ರ ಮತ್ತು ರಾಜ್ಯ ಸರ್ಕಾರ ನಾನಾ ರೀತಿಯ ಆರ್ಥಿಕ ಪರಿಹಾರಗಳನ್ನು ಕೊಡುತ್ತಿರುವಾಗ , ಅದನ್ನು ಜಾತಿಗಳಿಗೆ ಸಮೀಕರಿಸಿ, ನಮ್ಮ ಜಾತಿಗೆ ಸಿಕ್ಕಿಲ್ಲ. ನಮ್ಮ ಪಂಗಡಗಳಿಗೆ ಸಿಕ್ಕಿಲ್ಲ ಎಂದು ಹಾದಿ ಬೀದಿಯಲ್ಲಿ, ಮಾಧ್ಯಮಗಳ ಮುಖಾಂತರ, ಸಾಮಾಜಿಕ ಜಾಲತಾಣಗಳಲ್ಲಿ ಆಯಾಯಾ ಪಂಗಡಗಳ ನಾಯಕರುಗಳು ವಿರೋಧ ಪಕ್ಷದ ರಾಜಕೀಯ ಧುರೀಣರು, ಬಾಯಿ ಬಡಿದುಕೊಳ್ಳುತ್ತಿರುವ ಸಂದರ್ಭದಲ್ಲಿ
ಅಕ್ಕಿ, ಬೇಳೆ, ತರಕಾರಿಗಳು ಎಲ್ಲದರ ಬೆಲೆಯೂ ಗಗನಕ್ಕೇರಿದ್ದರೂ ಕೊಯಮತ್ತೂರಿನ ವಡಿವೇಲಂಪಾಳ್ಯನಲ್ಲಿ ವಾಸಿಸುತ್ತಿರು
ಈ ಉಪಾಹಾರ ಗೃಹ ನೋಡಲು ಅಷ್ಟೇನೂ ಆಕರ್ಷಣೀಯವಾಗಿರದೇ, ಸಾಧಾರಣ ಹಳ್ಳಿಗಳಲ್ಲಿರುವ ಹಳೆಯ ಉಪಾಹಾರ ಗೃಹದಂತಿದ್ದರೂ, ಅಜ್ಜಿಯ ಇಡ್ಲೀ, ಸಾಂಬರ್ ಮತ್ತು ಚೆಟ್ನಿಯ ರುಚಿಯನ್ನು ಸವಿಯಲು ನೂರಾರು ಕಿಮೀ ದೂರಗಳಿಂದಲೂ ಜನರು ಹುಡುಕಿಕೊಂಡು ಬೆಳ್ಳಂಬೆಳಗ್ಗೆ ಉಪಹಾರ ಗೃಹದ ಮುಂದೆ ಸಾಲು ಗಟ್ಟಿ ನಿಲ್ಲುವುದನ್ನು ನೋಡುವುದಕ್ಕೇ ಆನಂದವಾಗುತ್ತದೆ.

ಕಮಲಥಾಲ್ ಅಜ್ಜಿಯ ದೈನಂದಿನ ಚಟುವಟಿಕೆ ಬೆಳಿಗ್ಗೆ 5 ಗಂಟೆಗೆ ಆರಂಭವಾಗುತ್ತದೆ, ಇಂದಿಗೂ ಸಾಂಪ್ರದಾಯಿಕ ರೀತಿಯಲ್ಲಿಯೇ ರುಬ್ಬುವ ಕಲ್ಲು ಬಳಸಿ ಸುಮಾರು ಎಂಟು ಕೆಜಿ ಅಕ್ಕಿಯನ್ನು ಬಳಸಿ ಇಡ್ಲಿ ಹಿಟ್ಟನ್ನು ತಯಾರಿಸಿ ಅಂದಾಜಿನ ಪ್ರಕಾರ ಪ್ರತೀ ದಿನ ಸುಮಾರು 1000-1200 ಬಿಸಿ ಬಿಸಿಯಾದ ಇಡ್ಲಿಗಳನ್ನು ತಯಾರು ಮಾಡಲಾಗುತ್ತದೆ. ಪ್ರತೀ ದಿನ ಬೆಳಿಗ್ಗೆ 6 ಗಂಟೆಗೆ ಗ್ರಾಹಕರಿಗೆ ಆರಂಭವಾಗುವ ಈ ಉಪಾಹಾರ ಗೃಹ ಸಾಧಾರಣವಾಗಿ ಮಧ್ಯಾಹ್ನದ ವರೆಗೂ ತೆರೆದಿರುತ್ತದೆ. ವಾರಾಂತ್ಯಗಳಲ್ಲಿ ಮತ್ತು ಹಲವಾರು ದಿನಗಳಲ್ಲಿ ಅತೀ ಶೀಘ್ರದಲ್ಲಿಯೇ ಇಡ್ಲಿ ಹಿಟ್ಟು ಖಾಲಿಯಾದ ಪರಿಣಾಮ ಉಪಹಾರಗೃಹವನ್ನು ಬೇಗನೆ ಸಹಾ ಮುಚ್ಚ ಬೇಕಾದ ಸಂದರ್ಭಗಳು ಇದೆಯಾದರೂ, ಅಜ್ಜಿಯು ತಮ್ಮ ಉಪಹಾರಗೃಹಕ್ಕೆ ಬರುವ ಗ್ರಾಹಕರಿಗೆ ಎಂದೂ ಖಾಲಿ ಹೊಟ್ಟೆಯಲ್ಲಿ ನಿರಾಸೆಯಾಗಿ ಕಳುಹಿಸಿದ ಉದಾಹರಣೆ ಇಲ್ಲವೇ ಇಲ್ಲ ಎನ್ನುವುದು ಗಮನಾರ್ಹ ಅಂಶವಾಗಿದೆ.

85 ವರ್ಷದ ಇಳೀ ವಯಸ್ಸಿನ ಶ್ರಿಮತಿ ಕಮಲಥಾಲ್ ಅಜ್ಜಿ, ವಯೋ ಸಹಜವಾಗಿ ಸುಕ್ಕುಗಟ್ಟಿದ, ಮುಖ, ಮೂಳೆಗಳಿಗೆ ಅಂಟಿಕೊಂಡ ಚರ್ಮ ಮತ್ತು ಬೆನ್ನು ಸ್ವಲ್ಪ ಬಾಗಿದೆ, ಕಣ್ಣುಗಳೂ ಸಹಾ ಮಂಜಾಗಿದೆಯಾದರೂ , ಯಾವುದೇ ಮಧ್ಯವಯಸ್ಕ ಮಹಿಳಿಗಿಂತಲೂ ಅತ್ಯಂತ ಚುರುಕಾಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಇಡೀ ಉಪಾಹಾರ ಗೃಹದ ವ್ಯವಹಾರಗಳನ್ನು ಸ್ವತಃ ತಾವೇ ನೋಡಿಕೊಳ್ಳುತ್ತಾರೆ. ಅವರ ಮೊಮ್ಮಗನ ಪತ್ನಿ ಪಿ. ಆರತಿ ಸಹಾ ಇವರ ಜೊತೆ ಸಹಾಯಕ್ಕಾಗಿ ಇರುತ್ತಾರೆ ಮತ್ತು ಆಕೆಯೂ ಅಜ್ಜಿಯ ಈ ಮಾಹಾನ್ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವ ಇಚ್ಚೆಯನ್ನು ವ್ಯಕ್ತಪಡಿಸಿರುವುದು ಮೆಚ್ಚಬೇಕಾದ ಅಂಶವಾಗಿದೆ.




