ತಾಕತ್ತಿದ್ರೆ ಬಂದು ಮುಟ್ಟಲಿ ಭಾರತೀಯ ಸೇನೆ…
ಅಷ್ಟೂ ಜನರನ್ನೂ ಸಾಲಾಗಿ ನನ್ನ ಮನೆಯ ಹಾಲಿನಲ್ಲಿ ಮುಜ್ರಾ ಡ್ಯಾನ್ಸ್ ಮಾಡಿಸ್ತೀನಿ ಅಂತ ಪಾಕಿಸ್ತಾನದಲ್ಲಿ ಕೂತು ಅವತ್ತು ಚಾಲೆಂಜ್ ಹಾಕಿದ್ದವನು ಈ ಮುಂಡುಜಿರಳೆ…
ಇವತ್ತು, ಆತನದ್ದೇ ಮನೆಯ ಹಾಲಿನೊಳಗೇ ನುಗ್ಗಿ ಛಿದ್ರ ಛಿದ್ರಗೊಳಿಸಿ ಜನ್ನತ್ತಿನ 72ಹೂರ್‌ಗಳೆದುರು ಮುಜ್ರಾ ಮಾಡೋತರ ಮಾಡಾಕಿದಾರೆ ಅಪರಿಚಿತ ಆಪತ್ಬಾಂಧವರು.
ಚಾಲೆಂಜ್ ಅಸೆಪ್ಟೆಡ್….ಗೇಮ್ ಓವರ್…..
ಸತ್ತವನು ಸಾಜದ್ ಅಹಮದ್…
ಹುಜ್ಬುಲ್ ಮುಜಾಹಿದೀನ್ ಉಗ್ರಸಂಘಟನೆಯ ಕಮಾಂಡರ್ ಇನ್ ಚೀಫ್. ಸತ್ತಿರೋದು ಪಾಕಿಸ್ತಾನದ ಇಸ್ಲಾಮಾಬಾದಲ್ಲಿರೋ ಆತನ ಮನೆಯಲ್ಲಿ.
ಆದರೆ ಈತ ಪಾಕಿಸ್ತಾನಿಯಲ್ಲ…
ಹುಟ್ಟಿದ್ದು ಬೆಳೆದಿದ್ದೆಲ್ಲಾ ನಮ್ಮ ಜಮ್ಮೂಕಾಶ್ಮೀರದ ಬಾರಾಮುಲ್ಲಾದಲ್ಲೇ.
ಹುಟ್ಟು ಜಿಹಾದಿ ಮನೋಸ್ಥಿತಿಯ ಈತ, ಕಾಶ್ಮೀರ ಕಣಿವೆಯಲ್ಲಿ ಇನ್ನಿಲ್ಲದಂತೆ ರಾಕ್ಷಸತ್ವ ಮೆರೆದು, ಕುತ್ತಿಗೆಗ್ ಬಂದಾಗ ಪಾಕಿಸ್ತಾನವೆಂಬ ಮೋರಿಯೊಳಗೆ ಓಡಿಹೋಗಿ ಅಡಗಿ ಕುಳಿತ ಮಾತಾಂಧ ಜಿರಳೆಯೀತ…
ಅದು ತೊಂಬತ್ತರ ದಶಕ…
ಕಣಿವೆ ರಾಜ್ಯದ ವಾಣಿಜ್ಯ ವ್ಯವಹಾರಗಳ ಕೇಂದ್ರಸ್ಥಾನ, ವಾರ್ಷಿಕ ಬರೋಬ್ಬರಿ ಒಂದೂವರೆ ಸಾವಿರ ಕೋಟಿಯಷ್ಟು ಸೇಬು ಬೆಳೆಯುತ್ತಿದ್ದ ಬಂಗಾರದಂತಾ ನಗರ ಬಾರಾಮುಲ್ಲಾ ಜಿಲ್ಲೆಗೆ ಜಿಲ್ಲೆಯನ್ನೇ ಅಕ್ಷರಶಃ ಸ್ಮಶಾನ ಮಾಡಿದವನು ಈ ಮತಾಂಧ ರಾಕ್ಷಸ ಸಾಜದ್ ಅಹಮದ್.
ಗುಬ್ಬಿಮರಿಗಳ ಹಿಂಡಿನಮೇಲೆ ಮುಗಿಬಿದ್ದ ರಣಹದ್ದುಗಳಂತೆ, ಇಡೀ ಜಿಲ್ಲೆಯಲ್ಲಿ ಒಬ್ಬನೇ ಒಬ್ಬನೂ ಉಳಿಯದಂತೆ, ಇಲ್ಲಿದ್ದ ಅಷ್ಟೂ ಕಾಶ್ಮೀರಿ ಪಂಡಿತರನ್ನೂ ಘನಘೋರವಾಗಿ ಬರ್ಬರ ಹತ್ಯೆ, ಹೆಣ್ಮಕ್ಕಳನ್ನೆಲ್ಲಾ ಅತೀ ದಾರುಣವಾಗಿ ಅತ್ಯಾ ಚಾರಗಳನ್ನು ಮಾಡಿಬಿಟ್ಟಿದ್ರು. ಇಲ್ಲಿದ್ದ 20k+ ಪಂಡಿತರಲ್ಲಿ ಹೇಗೋ ತಪ್ಪಿಸಿಕೊಂಡು ಬದುಕುಳಿಯಲು ಸಾಧ್ಯವಾಗಿದ್ದು ಕೇವಲ 400+ ಜನ ಪಂಡಿತರಿಗಷ್ಟೇ ಅಂದರೆ ಈ ಮತಾಂಧನ ಕ್ರೌರ್ಯ ಅದ್ಯಾವ ರೇಂಜಲ್ಲಿತ್ತೋ ಜಸ್ಟ್ ಇಮ್ಯಾಜಿನ್…
ನಂತರದಲ್ಲಿ ಇಲ್ಲಿಂದ ತಪ್ಪಿಸಿಕೊಂಡು…
ಪಾಕಿಸ್ತಾನದ ಅಂಡೊಳಗೆ ತೂರಿಕೊಂಡವನು, ಅಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ಕಮಾಂಡರ್ ಆಗಿ, ಅಲ್ಲಿಂದಲೇ ಕಾಶ್ಮೀರದ ಯುವಕರ ಬ್ರೈನ್ ವಾಶ್ ಮಾಡಿ ಭಯೋ ತ್ಪಾದಕರನ್ನಾಗಿಸಿ ಅವರಿಗೆ ಶಸ್ತ್ರ ಸ್ಪೋಟಕ ಟ್ರೈನಿಂಗ್ ಹಣಕಾಸು ಒದಗಿಸುತ್ತಾ ದಶಕಗಳ ಕಾಲ ಕಣಿವೆಯನ್ನು ಪ್ರಕ್ಷುಬ್ಧ ಕಾಶ್ಮೀರವಾಗಿಸಿದ್ದು ಇದೇ ಉಗ್ರ ಸಾಜದ್ ಅಹಮದ್. ಇಂದಿಗೂ ಬಾರಾಮುಲ್ಲಾ ಹೊತ್ತಿ ಉರೀತಿದೆ ಅಂದ್ರೆ ಅದಕ್ಕೆ ಕಾರಣವೇ ಈ ರಕ್ತಬೀಜಾಸುರ…
ಇಂತಾ ನರ ರಾಕ್ಷಸ, ಮತಾಂದ ಭಯೋತ್ಪಾದಕ…
ಎಲ್ಲಿ ಅಡಗಿ ಕುಳಿತು ಉಗ್ರವಾದ ಹರಡುತ್ತಿದ್ನೋ, ಯಾವ ಮನೆಯಲ್ಲಿ ಭಾರತೀಯ ಸೈನಿಕರನ್ನು ಮುಜ್ರಾ ಮಾಡಿಸ್ತೀನಿ ಅಂತಿದ್ನೋ, ಯಾವ ಮನೆಯೊಳಗೆ ಕುಳಿತು, ಕಾಶ್ಮೀರವನ್ನು ಪಾಕಿಸ್ತಾನವಾಗಿಸಿ ಇಲ್ಲಿಂದ ಇಡೀ ಭಾರತವನ್ನೇ ಘಜ್ವಾ ಎ ಹಿಂದ್ ಮಾಡ್ತೀನಿ ಅಂತ ಭಾಷಣ ಬಿಗೀತಿದ್ನೋ
ಅದೇ ಮನೆಯೊಳಗೇ ನುಗ್ಗಿ ಹೊಸಕಿ ಹಾಕಿದಾರೆ ಅಪರಿಚಿತ ಮುಸುಕುಧಾರಿ ಬಂಧೂಕುಧಾರಿಗಳೆಂಬ ಆಪದ್ಭಾಂಧವರು...
ನಮ್ಮ ಬದುಕಿನ ಕ್ಷಣಗಳನ್ನು…
ಸುಂದರವಾಗಿಸಲು, ಮನಸ್ಸು ತಂಪಾಗಿಸಿ ಆಹ್ಲಾದ ನೀಡಲು ಇದಕ್ಕಿಂತಾ ಇನ್ನೆಂತಾ ಸಿಹಿಸುದ್ದಿ ಬೇಕು. ಎಲ್ಲೋ ಕುಳಿತು ಭಾರತಾಂಬೆಯ ಋಣ ತೀರಿಸುತ್ತಿರೋ ಈ ಆಪತ್ಬಾಂಧವರ ಆಯಸ್ಸು ಅಕ್ಷಯವಾಗಲಿ, ಹನುಮ ಸದಾ ಬೆನ್ನಿಗಿದ್ದು ಕಾಪಾಡಲಿ…
ಘರ್ ಮೆ ಘುಸ್‌ಕೇ ಮಾರೇಂಗೇ..
ಅಂತ ಸುಮ್ನೆ ಮಾತಿಗ್ ಹೇಳಿದ್ದಲ್ಲ, ಹೇಳಿದ್ದನ್ನು ಮಾಡಿ ತೋರುಸ್ತಿದೆ ಭಾರತ.
ಅಪರಿಚಿತ ಆಪತ್ಬಾಂಧವರು.
ಬರಹ : ಸುಧೀರ್ ಸಾಗರ್.
ಅಪ್ಪಟ ದೇಶಪ್ರೇಮಿ, ಅಪರಿಚಿತ ಬಂದೂಕುಧಾರಿಗಳ ಡೈ ಹಾರ್ಡ್ ಅಭಿಮಾನಿ.





