ಕಲೆಯ ಮಹತ್ವ : ಅಮೆರಿಕಾದಲ್ಲಿ ಇದೀಗ, `ಮುಗಲ್ ಏ ಆಝಂ' ಮ್ಯೂಸಿಕ್ ಶೋ ಶಾಪುರ್ಜಿ ಪಾನ್ ಲಜೀ ಕಂಪನಿಯ ಸಹಯೋಗದಿಂದ ಅಲ್ಲಿನ 13 ಮಹಾನಗರಗಳಲ್ಲಿ ಪ್ರದರ್ಶನಗೊಳ್ಳಲಿದೆ! ಹೀಗಾಗಿ ಅಲ್ಲಿನ ಸ್ಥಳೀಯರು ಹಿಂದೂಸ್ಥಾನದರ ವೈಭವ ಗಮನಿಸಲು ದುಬಾರಿ ಟಿಕೆಟ್ ಕೊಳ್ಳಲು ಆಯಾ ಥಿಯೇಟರ್ ಗಳ ಮುಂದೆ ಸರತಿ ನಿಲ್ಲಬೇಕಾಗಿದೆ, ಆನ್ ಲೈನ್ ಬುಕಿಂಗ್ ಇದ್ದೇ ಇದೆ. ಭಾರತದಲ್ಲೂ ಈ ಶೋ ಬಹಳ ಜನಪ್ರಿಯ. 5000ಕ್ಕೂ ಹೆಚ್ಚು ಶೋಗಳು ನಡೆದಿದ್ದು, ಲಕ್ಷಾಂತರ ಟಿಕೆಟ್ ಕೋಟ್ಯಂತರ ರೂ.ಗಳಿಗೆ ಮಾರಾಟವಾಗಿತ್ತು.

ಸರಳ ಮಾತ್ರವಲ್ಲ ಸುಲಭವೂ ಸಹ : ಸ್ಮಾಲ್ ಬಿಸ್ ನೆಸ್ ಗಳಲ್ಲಿ ಗ್ರಾಸರಿ ಸ್ಟೋರ್ ನಿರ್ವಹಣೆ ಇದೀಗ ಎಷ್ಟು ಸುಲಭ ಆಗಿದೆ ಎಂದರೆ, ಮನೆಯ ಗಂಡಸರ ನೆರವಿಲ್ಲದೆ ಹೆಂಗಸರು ಈಝಿಯಾಗಿ ನಡೆಸಬಹುದು. ವುಮೆನ್ ಡಾಮಿನೇಟೆಡ್ ಫಿಲಿಪೀನ್ಸ್ ನಲ್ಲಿ ಲಕ್ಷಾಂತರ ಗ್ರಾಸರಿ ಸ್ಟೋರ್ ಗಳು ಈಗೆಲ್ಲ ಹೆಂಗಸರ ಆಡಳಿತದಲ್ಲೇ ನಡೆಯುತ್ತಿವೆ, ಅಲ್ಲಿನ ಜನತೆ ಇದಕ್ಕೆ ಬಹಳ ಸಪೋರ್ಟ್ ಮಾಡುತ್ತದೆ. ತನ್ನದೇ ಸ್ವಂತ ಸ್ಟೋರ್ ಆಯಾ ಒಡತಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬುತ್ತದೆ, ಅದು ಮನೆಯ ಹತ್ತಿರವಿದ್ದರೆ, ಮನೆಯ ನಿರ್ವಹಣೆ ಸಹ ಬಹಳ ಸಲೀಸು! ಇದನ್ನು ಈಗ ನಮ್ಮಲ್ಲೂ ಅಳವಡಿಸಿ ಕೊಳ್ಳಲಾಗುತ್ತಿದೆ. ಆದರೆ ಬೇಕಿರುವ ವೇಗದಲ್ಲಿ ಇದು ನಡೆಯುತ್ತಿಲ್ಲ. ಒಂದು ಸಲ ಸ್ಟೋರ್ ಒಡತಿ ಗ್ರಾಹಕರ ನಡುವೆ ಅದಮ್ಯ ಸ್ನೇಹ, ವಿಶ್ವಾಸ ಬೆಳೆದುಬಿಟ್ಟರೆ, ಆನ್ ಲೈನ್ ವ್ಯಾಮೋಹ ಬಿಟ್ಟು ಜನ ಇಲ್ಲಿಗೇ ದೌಡಾಯಿಸುವುದರಲ್ಲಿ ಸಂದೇಹವಿಲ್ಲ. ಆದರೆ ಶ್ರಮಪಟ್ಟು, ಶ್ರದ್ಧೆವಹಿಸಿ ಇದನ್ನು ನಡೆಸಬೇಕಷ್ಟೆ. ಸ್ಟಾಕ್ ಚೆಕ್, ಸಮರ್ಪಕ ಸಪ್ಲೈ ಚ್ಯಾನೆಲ್, ಸರಿಯಾದ ಪ್ರಚಾರ, ಎಲ್ಲಕ್ಕೂ ಮುಖ್ಯ... ಮುಖದಲ್ಲಿ ಸದಾ ಮುಗುಳ್ನಗು ಇರಲೇಬೇಕು!

ಕಸದಿಂದ ರಸ : ಫ್ರೀ ಕಂಟ್ರಿ ಮತ್ತು ರೀಸೈಕಲ್ಡ್ ಶಬ್ದ ಗಮನಿಸಿ, ಈ ಬ್ಯೂಟಿ ಫುಲ್ ಡ್ರೆಸ್, ಹಳೆಯ ಬಟ್ಟೆಗಳ ಮರುಬಳಕೆ ತಾನೇ ಎಂದು ಭಾವಿಸಬೇಡಿ, ಇದರ ಆಧಾರದಿಂದ ಕಂಪನಿ ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆ ಎಂದೇನಲ್ಲ. ಈ ಮಾಡೆಲ್ಸ್ ಧರಿಸಿರುವ ಡ್ರೆಸ್, ಕಾಣಿಸುವುದೂ ಕಷ್ಟ ಅಂತಿಟ್ಟುಕೊಳ್ಳಿ, ಹಳೆಯ ಬಿಸಾಡಿದ ಪ್ಲಾಸ್ಟಿಕ್ ಬಾಟಲ್ಸ್ ನಿಂದ ತಯಾರಾದಂತೆ. ಕಸದಿಂದ ರಸ ಅಂದ್ರೆ ಹೀಗಿರಬೇಕು! ಕಂಪನಿ ಇದರ ಗ್ಯಾರಂಟಿ ಕೊಡುತ್ತದೆ. ನ್ಯೂಯಾರ್ಕ್ ನ ಒಂದು ಪ್ರಖ್ಯಾತ ಕ್ಲೋದಿಂಗ್ ಕಂಪನಿ, ಇಂಥ ಒಂದು ಉತ್ತಮ ಬ್ರಾಂಡ್ ಲಾಂಚ್ ಮಾಡಿದೆ, ಹಾಳು ಪ್ಲಾಸ್ಟಿಕ್ ನ ಅತ್ಯುತ್ತಮ ಪುನರ್ಬಳಕೆಯಿಂದ ಪರಿಸರ ರಕ್ಷಿಸುತ್ತಿದೆ!

ಬಣ್ಣ ಅಲ್ಲ ಪ್ರತಿಭೆ ಮುಖ್ಯ : ಸಮರ್ಪಕ ಬಿಸ್ ನೆಸ್ ನಡೆಸಲು, ಇದೀಗ ಪರ್ಫೆಕ್ಟ್ ಮಾಹಿತಿ ಮತ್ತು ಕನೆಕ್ಷನ್ ಅತ್ಯಗತ್ಯ ಎಂದಾಗಿದೆ. ಹೀಗಾಗಿ ಅಮೆರಿಕಾದಲ್ಲಿ ಹೈ ಸೊಸೈಟಿ ಕಲ್ಚರ್ ಬಿಸ್ ನೆಸ್ ನ ಹೈಫೈ ವ್ಯವಹಾರಗಳೆಲ್ಲ ಇವೆಂಟ್ಸ್ ಮುಖಾಂತರವೇ ಸಕ್ಸೆಸ್ ಆಗುತ್ತೆ. ಇದರಲ್ಲಿ ಜನ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಇದರಲ್ಲಿ ಈಗ ಬಿಳಿಯ ಕರಿಯ ಹೆಂಗಸರಿಬ್ಬರೂ ಸಮಾನ ಸಂಖ್ಯೆಯಲ್ಲಿ ಶಾಮೀಲಾಗುತ್ತಿದ್ದಾರೆ. ಏಕೆಂದರೆ ಕರಿಯರ ಒಂದು ದೊಡ್ಡ ಬಣ ತಮ್ಮದೇ ಬಿಸ್ ನೆಸ್ ಸಂಭಾಳಿಸುತ್ತಿದೆ. ಇಲ್ಲಿ ಗಂಡಸರ ದಬ್ಬಾಳಿಕೆ ಇಲ್ಲ, ಬಿಳಿಯರ ಮೆರೆದಾಟವಿಲ್ಲ. ಈ ಕರಿಯರು ಇಲ್ಲಿ ಬಹಳ ಶ್ರಮವಹಿಸಿ ದುಡಿಯುತ್ತಾರೆ, ಹಾಗೆಯೇ ಚೆನ್ನಾಗಿ ಗಳಿಸುತ್ತಿದ್ದಾರೆ ಕೂಡ! ಈಗಲೂ ಇವರೊಂದಿಗೆ ಭೇದಭಾವ ನಡೆಯುತ್ತಿದೆ ಎಂಬುದು ನಿಜ, ಆದರೆ ಬರಾಕ್ ಒಬಾಮಾ ಪ್ರೆಸಿಡೆಂಟ್ ಆದ ಮೇಲೆ, ಈ ತಾರತಮ್ಯ ಎಷ್ಟೋ ತಗ್ಗಿದೆ. ಏಕೆಂದರೆ ಆತ ಇತರರಿಗಿಂತ ಎಷ್ಟೋ ಮೇಲು ಎಂಬುದನ್ನು ಕೆಲಸ ಮಾಡಿ ತೋರಿಸಿದ್ದಾನೆ.





