ಸಪ್ತ ಋಷಿಗಳಲ್ಲಿ ವಸಿಷ್ಠ ಮಹರ್ಷಿಗಳು ಒಬ್ಬರು. ಶಾಂತಿ- ತಾಳ್ಮೆ -ಕ್ಷಮೆ ಇವು
ವಸಿಷ್ಠ ಮಹರ್ಷಿಗಳ ಉಸಿರು ಮತ್ತು ತಪಸ್ಸು. ಇಕ್ವಾಕು ವಂಶದವರಿಗೆ ಯುಗ ಗಳಿಂದಲೂ ಇವರೇ ಕುಲಗುರುಗಳಾಗಿ ಮುನ್ನಡೆಸುತ್ತಾ ಬಂದವರು, ವಸಿಷ್ಠರ ಹಿರಿಯ ಮಗ 'ಶಕ್ತಿ' ಇವರ ಮಗ ಪರಾಶರ, ಪರಾಶರರ ಮಗ ವೇದವ್ಯಾಸ ರು ದ್ವಾಪರಯುಗದಲ್ಲಿ ಕೌರವ -;ಪಾಂಡವರಿಗೆ ಸಲಹೆ ಸೂಚನೆ ಕೊಟ್ಟು ಮುನ್ನಡೆಸಿದರು. ಹೀಗೆ ವಸಿಷ್ಠರ ವಂಶದವರು ಋಗ್ವೇದಕಾಲ ದಿಂದಲೂ ಇದ್ದರು. ವೇದಕಾಲದ ಪ್ರಧಾನ ದೇವತೆಗಳು ಮಿತ್ರ ಮತ್ತು ವರುಣ. ಮಿತ್ರ ಎಂದರೆ ಸೂರ್ಯ, ವರುಣ ಎಂದರೆ ಮಳೆ. ಮಿತ್ರ- ವರುಣರು ಅಪ್ಸರೆ ಊರ್ವಶಿಯಲ್ಲಿ ಮೋಹಿತರಾದರು. ಆನಂತರ ರೇತಸ್ಸ ನ್ನು ಕುಂಭದಲ್ಲಿಟ್ಟು 'ಕುಂಭದಿಂದ' ಹುಟ್ಟಿದವರೇ ವಸಿಷ್ಠ ಮತ್ತು ಅಗಸ್ತ್ಯರು. ಇವರಿಬ್ಬರು ಅವಳಿ ಮಕ್ಕಳು. ವಸಿಷ್ಠರು ಜ್ಯೋತಿರ್ವಿಜ್ಞಾನ ಸೇರಿದಂತೆ ಹಲವು ಸಾಧನೆಗಳನ್ನು ಮಾಡಿ ಮಹರ್ಷಿಗಳಾದರು.
ಅರುಂಧತಿ:- ಪಂಚಮಹಾ ಪತಿವ್ರತೆಯರಲ್ಲಿ ಅರುಂದತಿಯು ಒಬ್ಬಳು.ಒಮ್ಮೆ ಬ್ರಹ್ಮ ದೇವನು ಜಗತ್ತಿನ ಎಲ್ಲಾ ಸೌಂದರ್ಯವನ್ನು ಸೇರಿಸಿ ಸಂಧ್ಯಾ ಮತ್ತು ಮನ್ಮಥರನ್ವು ಸೃಷ್ಟಿಮಾಡಿದನು. ನಂತರ ಐದು ಪುಷ್ಪ ಬಾಣ ಮೋಹಾಸ್ತ್ರ ಗಳನ್ನು ಬ್ರಹ್ಮನು ಮನ್ಮಥನಿಗೆ ಕೊಟ್ಟು ಜಗತ್ತಿನ ಸೃಷ್ಟಿಗಾಗಿ ಯುವಕ ಯುವತಿ ಯರ ಮೇಲೆ ಮೋಹಾಸ್ತ್ರಗಳನ್ನು ಪ್ರಯೋಗಿಸು ಇದರಿಂದ ಸೃಷ್ಟಿ ಕಾರ್ಯ
ವಾಗುತ್ತದೆ ಎಂದರು. ಪ್ರಯೋಗ ಮಾಡುವುದಾಗಿ ಮೊದಲ ಬಾಣವನ್ನು ಬ್ರಹ್ಮ ಲೋಕದಲ್ಲಿ ಪ್ರಯೋಗಿಸಿ ಇದರ ಪರಿಣಾಮ ಬ್ರಹ್ಮನು ಸೇರಿದಂತೆ ಅಲ್ಲಿದ್ದವ ರೆಲ್ಲರ ಧೃಷ್ಟಿ ,ಮನಸ್ಸು ರೂಪವತಿಯಾದ ಸಂಧ್ಯಾಳ ಮೇಲೆ ಹೋಗಿ ಮೋಹ ಪರವಶರಾದರು. ಇದರಿಂದ ಭಯಭೀತಳಾದ ಸಂಧ್ಯಾ ಪರಮೇಶ್ವರನನ್ನು ಪ್ರಾರ್ಥಿಸಿದಳು. ಪರಮೇಶ್ವರನು ಬ್ರಹ್ಮಲೋಕಕ್ಕೆ ಕಾಲಿಡುತ್ತಿದ್ದಂತೆ ಬ್ರಹ್ಮ ಹಾಗೂ ಉಳಿದ ಎಲ್ಲರ ಮೋಹ ಪಾಷ ಹರಿಯಿತು.
ಮನ್ಮಥನು ತನ್ನ ಬಾಣವನ್ನು ಗೊತ್ತುಗುರಿ ಇಲ್ಲದೆ ಬ್ರಹ್ಮ ಲೋಕದಲ್ಲಿ ಪ್ರಯೋಗ ಮಾಡಿದ್ದರ ಪರಿಣಾಮ ಮನ್ಮಥನಿಗೆ ನೀನು ಮುಂದೆ ಶಿವನ ಸಿಟ್ಟಿಗೆ ಕಾರಣನಾಗಿ ಅವನ ಮೂರನೇ ಕಣ್ಣಿನ ಜ್ವಾಲೆಯಿಂದ ಸುಟ್ಟು ಬೂದಿಯಾಗುವೆ ಎಂದು ಬ್ರಹ್ಮನು ಶಾಪ ಕೊಟ್ಟನು. ಎಲ್ಲಾ ನೋಡುತ್ತಿದ್ದ ಸಂಧ್ಯಾಳಿಗೆ, ಈ ಎಲ್ಲಾ ಕಾರಣಗಳಿಗೆ ತನ್ನ ಸೌಂದರ್ಯವೇ ಕಾರಣವಾಗಿದೆ ಎಂದು ಬೇಸರವಾಗಿ ಕಠೋರ ತಪಸ್ಸು ಮಾಡಿ ತನ್ನ ದೇಹ ತ್ಯಾಗ ಮಾಡಲು ಹೊರಟಿದ್ದಳು. ಬ್ರಹ್ಮದೇವನು ಅವಳಿಗೆ ಶಿವನ ಮಂತ್ರ ಉಪದೇಶಿಸಲು
ವಸಿಷ್ಠರನ್ನು ಕರೆಸಿದನು. ವಸಿಷ್ಟರು ಅವಳಿಗೆ ಶಿವನ ಮಂತ್ರವನ್ನು ಉಪದೇಶಿಸಿದರು. ನಂತರ ಸಂಧ್ಯಾ ಕಠೋರ ತಪಸ್ಸು ಮಾಡಿ, ಶಿವನನ್ನು ಒಲಿಸಿಕೊಂಡಳು. ಶಿವನು ಮೂರು ವರ ಕೇಳುವಂತೆ ಹೇಳಿದನು, ಸಂಧ್ಯಾ ಮೊದಲನೇ ವರದಲ್ಲಿ, ಯಾವುದೇ ಜೀವಿಗಾದರೂ ಯೌವ್ವನ ಬಂದ ನಂತರವೇ, ಕಾಮದ ಭಾವ ಬರಲಿ,( ಸಂಧ್ಯಾಳನ್ನು) -ಎರಡನೆಯ ವರ
ನನ್ನ ಗಂಡ ಮಾತ್ರ ನನ್ನನ್ನು ಕಾಮ ದೃಷ್ಟಿಯಿಂದ ನೋಡಲಿ ಬೇರೆ ಯಾರೇ ನೋಡಿದರೂ ಅವರು ನಪುಂಸಕರಾಗಲಿ,- ಮೂರನೆ ವರ ಇಷ್ಟೊಂದು ಜನರಿಂದ ಮೋಹಕ್ಕಳಗಾದ ಈ ನನ್ನ ಶರೀರ ಸುಟ್ಟು ಬೂದಿಯಾಗಲಿ ಎಂದು ಕೇಳಿದಳು. ಪರಮೇಶ್ವರನು ಅವಳಿಗೆ ಎಲ್ಲಾ ವರಗಳನ್ನು ಅನುಗ್ರಹಿಸಿ, ನೀನು 'ಮೇಧಾತೀತಿ' ಎಂಬ ಮಹರ್ಷಿ ಅನೇಕ ಕಾಲದಿಂದ ಯಾಗ ಮಾಡುತ್ತಿದ್ದಾನೆ. ಅಲ್ಲಿ ಹೋಗಿ ಯಜ್ಞ ಕುಂಡದಲ್ಲಿ ಆಹುತಿಯಾಗು. ಆಹುತಿಯಾಗುವ ಮೊದಲು ನೀನು ಮನದಲ್ಲಿ ಯಾರನ್ನು ನೆನೆಸಿಕೊಳ್ಳುತ್ತಿಯೋ ಆ ವ್ಯಕ್ತಿಯೇ ಮುಂದೆ ನಿನಗೆ ಪತಿಯಾಗುತ್ತಾನೆ. ನಿನ್ನ ಶರೀರ ದಹನವಾಗಿ ಮತ್ತೆ ಅದೇ ಯಜ್ಞ ಕುಂಡದಲ್ಲಿ ಹುಟ್ಟಿಬರುವೆ. ಎಂದು ಹೇಳಿ ಕೈಲಾಸಕ್ಕೆ ಹೋದನು.





