ಪ್ರಸಿದ್ಧ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ತಮ್ಮ 8ನೇ ವಯಸ್ಸಿನಲ್ಲೇ ಗಾಯನ ಕ್ಷೇತ್ರಕ್ಕೆ ಕಾಲಿಟ್ವವರು. ಸುಮಾರು 80 ವರ್ಷಗಳ ಕಾಲ ಹಾಡಿ, ಸಂಗೀತ ಪ್ರೇಮಿಗಳ ಮನತಣಿಸಿದವರು. ಅವರ ಮರಣದ ನಂತರ, ಅವರ ಅನೇಕ ನೆನಪುಗಳು ಬೆಳಕಿಗೆ ಬರುತ್ತಿವೆ.

ಹಾಡುವುದೇ ನನ್ನುಸಿರು ಎನ್ನುತ್ತಿದ್ದ ಆಶಾ ಭೋಸ್ಲೆ,  ಸಂದರ್ಶನವೊಂದರಲ್ಲಿ ತಮ್ಮ ಕೊನೆಯ ಆಸೆಯನ್ನು ವ್ಯಕ್ತಪಡಿಸಿದ್ದರು. ಅವರು ಆಸೆ ಅವರ ಅಭಿಮಾನಿಗಳ ಪಾಲಿಗೆ ಕಣ್ಣಲ್ಲಿ ನೀರು ತರಿಸಿತ್ತು.

ಮರಾಠಿ ನಟಿ ಅಮೃತಾ ರಾವ್, ಆರ್‌ಜೆ ಅನ್ಮೋಲ್ ಅವರೊಂದಿಗಿನ ಸಂದರ್ಶನದಲ್ಲಿ, ಆಶಾ ಭೋಸ್ಲೆ ತಮ್ಮ ಜೀವನ ಮತ್ತು ಸಂಗೀತದೊಂದಿಗಿನ ಸಂಬಂಧದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದರು.ನಾನು ಹಾಡುತ್ತಲೇ ಸಾಯಬೇಕೆಂಬುದು ನನ್ನ ಆಸೆ. ಈಗ ನನಗೆ ಏನನ್ನೂ ಕಲಿಯಲು ಇಷ್ಟವಿಲ್ಲ. ಹಾಡುವುದೇ ನನ್ನ ಜೀವನ. ನಾನು ಬಾಲ್ಯದಿಂದಲೂ ಹಾಡುತ್ತಿದ್ದೇನೆ. ನಾನು 3 ವರ್ಷದವಳಿದ್ದಾಗ ನನ್ನ ತಂದೆಯಿಂದ ಶಾಸ್ತ್ರೀಯ ಗಾಯನ ಕಲಿಯಲು ಪ್ರಾರಂಭಿಸಿದೆ. ಹಾಗಾಗಿ ನನ್ನ ಇಡೀ ಜೀವನ ಅದರಲ್ಲಿಯೇ ಕಳೆದಿದೆ ಎಂದು ಹೇಳಿದ್ದರು.

ಎಲ್ಲಾ ಪ್ರಕಾರದ ಹಾಡುಗಳನ್ನೂ ಹಾಡಿದ್ದೇನೆ. ಜೀವನದ ಸಂಧ್ಯಾಕಾಲದಲ್ಲಿ ನನ್ನ ಏಕೈಕ ಆಸೆ ಎಂದರೆ ಹಾಡುತ್ತಾ ಸಾಯುವುದು. ನಾನು ಹಾಡುತ್ತಾ ಸತ್ತರೆ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದು ಆಶಾ ಭೋಸ್ಲೆ ಸಂದರ್ಶನದಲ್ಲಿ ಹೇಳಿದ್ದರು.

ಆಶಾ ಭೋಸ್ಲೆ ಅವರ ಈ ಮಾತುಗಳು ಸಂಗೀತದ ಮೇಲಿನ ಅವರ ಅಪಾರ ಪ್ರೀತಿ ಮತ್ತು ಸಮರ್ಪಣಾ ಭಾವವನ್ನು ಎತ್ತಿತೋರಿಸುತ್ತದೆ.

ಮರಾಠಿ, ಹಿಂದಿ, ಕನ್ನಡ, ತಮಿಳು, ತೆಲುಗು, ಒಡಿಯಾ, ಬಂಗಾಳಿ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಆಶಾ ಭೋಸ್ಲೆ, ರೋಮ್ಯಾಂಟಿಕೆ, ಗಜಲ್, ಕ್ಯಾಬರೆ, ಪಾಪ್, ಶಾಸ್ತ್ರೀಯ ಮುಂತಾದ ವಿವಿಧ ಪ್ರಕಾರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.

ಒ.ಪಿ. ನಯ್ಯರ್, ಆರ್.ಡಿ. ಬರ್ಮನ್, ಸುಧೀರ್ ಫಡ್ಕೆ ಅವರಿಂದ ಹಿಡಿದು ಎ.ಆರ್. ರೆಹಮಾನ್, ಅಜಯ್-ಅತುಲ್ ವರೆಗೆ ಅನೇಕ ಹಿರಿಯ, ಕಿರಿಯ, ಖ್ಯಾತನಾಮ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಲೈವ್ ಮ್ಯೂಸಿಕ್ ರೆಕಾರ್ಡಿಂಗ್‌ನಿಂದ ಇಂದಿನ ಎಐ ಯುಗದವರೆಗೆ ಬದಲಾಗುತ್ತಿರುವ ಸಂಗೀತದ ಯುಗವನ್ನು ಅವರು ಕಂಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ