ಅಪಾರವಾದ ಪ್ರತಿಭೆ ಇದ್ದರೂ, ದೇಶಕ್ಕಾಗಿ ಆಡುವ ಅವಕಾಶಕ್ಕಾಗಿ ಬಹಳ ವರ್ಷಗಳ ಕಾಲ ಕಾದ ನಂತರ ಸಿಕ್ಕ ಸಣ್ಣ ಅವಕಾಶವನ್ನೇ ಬಳಸಿಕೊಂಡು ತಕ್ಕ ಮಟ್ಟಿಗೆ ಪ್ರದರ್ಶನ ನೀಡಿದ್ದ  ಭಾರತ ಕ್ರಿಕೆಟ್ ತಂಡದ ಕನ್ನಡಕಧಾರಿ ಎಡಗೈ ಸ್ಪಿನ್ನರ್ ದಿಲೀಪ್ ದೋಷಿ  2025ರ ಜೂನ್ 23ರಂದು ತಮ್ಮ ಲಂಡನ್‌ನಲ್ಲಿ 77 ನೇ ವಯಸ್ಸಿನಲ್ಲಿ ನಿಧನರಾಗಿದ್ದು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಕ್ರಿಕೆಟ್ ಸಾಧನೆಗಳು ಇದೋ ನಿಮಗಾಗಿ

22 ಡಿಸೆಂಬರ್ 1947 ರಲ್ಲಿ ರಾಜ್‌ಕೋಟ್ ನಲ್ಲಿ ಜನಿಸಿದ ದಿಲೀಪ್ ರಸಿಕ್ಲಾಲ್ ದೋಷಿ ಚಿಕ್ಕವಯಸ್ಸಿನಿಂದಲೂ ಕ್ರಿಕೆಟ್ ಬಗ್ಗೆ ಹೆಚ್ಚಿನ ಅಸಕ್ತಿ  ಹೊಂದಿದ್ದು, ಎಡಗೈ ಸ್ಪಿನ್ನರ್ ಆಗಿ ರೂಪುಗೊಂಡು ಪ್ರಥಮ ದರ್ಜೆ ಕ್ರಿಕೆಟ್‌ಗೆ ಸೌರಾಷ್ಟ್ರದ ಪರವಾಗಿ ಪಾದಾರ್ಪಣೆ ಮಾಡಿದರೂ ನಂತರದ ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ವಲಸೆ ಹೋಗಿ ಆ ತಂಡದ ಪರವಾಗಿಯೇ ಹೆಚ್ಚಿನ ರಣಜಿ ಟ್ರೋಫಿ ಕ್ರಿಕೆಟ್  ಪಂದ್ಯಗಳನ್ನಾಡಿದರು. 1974 ರಲ್ಲಿ ಬಂಗಾಳ ಪರವಾಗಿ  ಅಸ್ಸಾಂ ವಿರುದ್ಧ 6 ​​ರನ್‌ಗಳಿಗೆ 6 ವಿಕೆಟ್‌ಗಳನ್ನು ಪಡೆಯುವ ಮೂಲಕ ಎಲ್ಲರ ಗಮನವನ್ನು ಸೆಳೆದ ದೋಷಿ ತಮ್ಮ ಸುದೀರ್ಘ ರಣಜಿ ಟ್ರೋಫಿ ವೃತ್ತಿ ಜೀವನವು 18.33 ರ ಪ್ರಭಾವಶಾಲಿ ಸರಾಸರಿಯಲ್ಲಿ 318 ವಿಕೆಟ್‌ಗಳನ್ನು  ಪಡೆದು ಭಾರತ ತಂಡದ ಪರವಾಗಿ ಆಡಲು ಕದ ತಟ್ಟ ತೊಡಗಿದರು.

ನಮಗೆಲ್ಲರಿಗೂ ತಿಳಿದಿರುವಂತೆ 1960 ಮತ್ತು 1970ರ ದಶಕದಲ್ಲಿ ಭಾರತದ ಪರ ಎರಪಳ್ಳಿ ಪ್ರಸನ್ನ ಮತ್ತು ಶ್ರೀನಿವಾಸ್ ವೆಂಕಟರಾಘವನ್ (ಇಬ್ಬರೂ ಆಫ್ ಸ್ಪಿನ್ನರ್‌ಗಳು ), ಭಗವತ್ ಚಂದ್ರಶೇಖರ್ ( ಲೆಗ್ ಸ್ಪಿನ್ನರ್ ), ಮತ್ತು ಬಿಷನ್ ಸಿಂಗ್ ಬೇಡಿ ( ಎಡಗೈ ಸ್ಪಿನ್ನರ್ ).  ಆವರುಗಳು ಭಾರತೀಯ ಸ್ಪಿನ್ ಕ್ವಾರ್ಟೆಟ್ ಎಂದೇ ಪ್ರಸಿದ್ದರಾಗಿದ್ದರು. ಈ ಭಾರತೀಯ ಸ್ಪಿನ್ ಬೌಲರ್‌ಗಳು ತಾವು ಆಡಿದ  231 ಟೆಸ್ಟ್ ಪಂದ್ಯಗಳಲ್ಲಿ  853 ವಿಕೆಟ್‌ಗಳನ್ನು ಕಬಳಿಸುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಮಾರಕ ಸ್ಪಿನ್ ಸಂಯೋಜನೆಗಳಲ್ಲಿ ಒಂದಾಗಿದ್ದಲ್ಲದೇ, ಅನೇಕ ವಿಶ್ವ ದರ್ಜೆಯ ದಾಂಡಿಗರಿಗೆ ಸಿಂಹಸ್ವಪ್ನವಾಗಿದ್ದರು.  ಇವರ ಮಧ್ಯೆ ಕರ್ಸನ್ ಘಾವ್ರಿ ಸಹಾ ಇದ್ದದ್ದು ಗಮನಾರ್ಹವಾಗಿತ್ತು.

ಇಂತಹ ಘಟಾನುಘಟಿಗಳಿರುವಾಗ ಸಹಜವಾಗಿಯೇ ದಿಲೀಪ್ ದೋಷಿಯವರಿಗೆ ಭಾರತದ ಪರ ಆಡಲು ಅವಕಾಶವೇ ಸಿಗದೇ ವಯಸ್ಸು  ಮೂವತ್ತು ದಾಟಿ, ಭಾರತದ ಪರ ಆಡುವುದು ಮರೀಚಿಕೆಯಾಗಿಯೇ ಉಳಿಯಬಹುದು ಎಂದು ಎಲ್ಲರೂ ಭಾವಿಸುತ್ತಿರುವಾಗಲೇ, ಚಂದ್ರಶೇಖರ್ ಅವರ ಬದಲಾಗಿ 1979 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಟೆಸ್ಟ್ ಪಂದ್ಯಕ್ಕೆ  ದೋಷಿ ಆಯ್ಕೆ ಆದಾಗ ದೋಷಿಯವರ ವಯಸ್ಸು 32 ಆಗಿತ್ತು.  ವಯಸ್ಸು  30+ ಆದ ನಂತರ  ಟೆಸ್ಟ್ ಕ್ರಿಕೆಟ್ಟಿಗೆ ಪಾದರ್ಪಣೆ ಮಾಡಿದ ವಿಶ್ವದ  ನಾಲ್ವರು ಟೆಸ್ಟ್ ಬೌಲರ್‌ಗಳಲ್ಲಿ ದೋಷಿಯವರು ಒಬ್ಬರಾಗಿದ್ದು ಉಳಿದ ಮೂವರು ಕ್ಲಾರಿ ಗ್ರಿಮೆಟ್ , ಸಯೀದ್ ಅಜ್ಮಲ್ ಮತ್ತು ರಯಾನ್ ಹ್ಯಾರಿಸ್  ಅಗಿದ್ದಾರೆ.

ಬಹಳಷ್ಟು ದಿನಗಳ ಕಾಲ ಭಾರತದ ತಂಡ ಪರ ಆಡಲು  ಕಾಯುತ್ತಿದ್ದ  ದೋಷಿ ತಮ್ಮ ಕೈಚಳಕವನ್ನು ತೋರಿಸಲು ಹೆಚ್ಚಿನ ಸಮಯ ವ್ಯರ್ಥ ಮಾಡದೇ, ತಮ್ಮ ಚೊಚ್ಚಲು ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ   6/103 ಮತ್ತು ಎರಡನೇ ಇನ್ನಿಂಗ್ಸಿನಲ್ಲಿ 2/64  ಹೀಗೆ ಒಟ್ಟು 8 ವಿಕೆಟ್ಟುಗಳನ್ನು ಪಡೆಯುವ ಮೂಲಕ ಆ ಪಂದ್ಯದಲ್ಲಿ ಭಾರತದ ಅತ್ಯುತ್ತಮ ಬೌಲರ್ ಆಗಿದ್ದಲ್ಲದೇ ತಮ್ಮ ಚೊಚ್ಚಲು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರೆಸಿದರು.  ಬಾಂಬೆಯಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ  ಅವರು 5/43 ಮತ್ತು 3/60  ಹೀಗೆ ಮತ್ತೆ8 ವಿಕೆಟ್ಟುಗಳನ್ನು ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 1979ರಲ್ಲಿ ಆಸ್ಟ್ರೇಲಿಯ ವಿರುದ್ಧ  ಕಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ 70,000 ತವರಿನ ಪ್ರೇಕ್ಷಕರ ಮುಂದೆ ಅಕ್ಟೋಬರ್ 26 ರಿಂದ 31ರ ಮಧ್ಯೆ ನಡೆದ 5ನೇ  ಟೆಸ್ಟ್ ಪಂದ್ಯದಲ್ಲಿ  4/92 & 50/2 ಒಟ್ಟು 6 ವಿಕೆಟ್ ಪಡೆದು ತಂಡದ ಗೆಲುವಿನ ಹತ್ತಿರಕ್ಕೆ ತಂದು  ಅಂತಿಮವಾಗಿ ಡ್ರಾ ದಲ್ಲಿ ಮುಕ್ತಾಯ ಮಾಡಿದ್ದು ಅವರ ಅತ್ಯಂತ ಸಂತೋಷಕರವಾದ ಕ್ಷಣವಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ