ಆಟೋಗ್ರಾಫ್‌ ಅಲ್ಲ ಇದೀಗ ಸೆಲ್ಛಿಯ ಝಮಾನಾ :  ಅತ್ಯುತ್ತಮ ಸಿನಿ ಸ್ಟಾರ್‌ಗಳೂ ಸಹ ಸೆಲ್ಛಿಯ ಮೋಹ ಬಿಟ್ಟವರಲ್ಲ. ಈಗ ಯಾವುದೇ ಪ್ರಶಂಸಕರು ಸೆಲೆಬ್ರಿಟಿಗಳ ಬಳಿ ಹೋದರೆ ಆಟೋಗ್ರಾಫ್‌ ಕೇಳುವುದಿಲ್ಲ, ಬದಲಿಗೆ ಮೊಬೈಲ್ ತೆಗೆದುಕೊಂಡು ಸೆಲ್ಛಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಖ್ಯಾತ ನಟಿ ಕರ್ಸ್ಟನ್‌ ಡನ್ ಸ್ಟನ್ ಳನ್ನು ಹೀಗೆ ಅಭಿಮಾನಿಯೊಬ್ಬ ಮುತ್ತಿದಾಗ ಆಕೆ ಪೋಸ್‌ ಕೊಟ್ಟ ಪರಿಯಿದು.

ರೋಮಾಂಚನದೊಂದಿಗೆ ಇತಿಹಾಸ ನೋಡಿ :  ಹಾಟ್‌ ಏರ್‌ ಬೆಲೂನ್‌ನ ಸವಾರಿ ಎಂಥ ರೋಮಾಂಚಕಾರಿ ಎಂಬುದನ್ನು ಎಲ್ಲರೂ ಬಲ್ಲರು. ಆದರೆ ಭಾರತೀಯ ಉಷ್ಣ ವಾತಾವರಣದಲ್ಲಿ  ಇದು ಸುಲಭ ಸಾಧ್ಯವಲ್ಲ. ಚಳಿಗಾಲದಲ್ಲಿ ಉ.ಭಾರತ ವಿಷಮಯ ಫಾಗ್‌ನಿಂದ ತುಂಬಿದ್ದರೆ, ಅದರಲ್ಲಿ ಕೆಳಭಾಗದಲ್ಲೇನಿದೆ ಎಂದು ಗೊತ್ತಾಗುವುದೇ ಇಲ್ಲ. ದೆಹಲಿಯ ಬೆಲೂನ್‌ ಅಂಕಲ್ ಎಂದೇ ಖ್ಯಾತಿವೆತ್ತ ವಿಶ್ವಬಂಧು ಗುಪ್ತಾಜಿಯವರನ್ನು ಮರೆತು ಜನ ಟರ್ಕಿ ಕಡೆ ಹೊರಟಾಗ, ಅಲ್ಲಿನ ಐತಿಹಾಸಿಕ ಸ್ಥಳಗಳನ್ನು ಹೀಗೆ ರೋಮಾಂಚಕವಾಗಿ ನೋಡಬಹುದು.

ಯಾವುದು ಕಾಣಿಸುತ್ತದೋ ಅದೇ ಮಾರಾಟಾಗುತ್ತದೆ : ಸಿನಿಮಾ ನಟಿ ತನ್ನ ಬಳಕುವ ಬಳ್ಳಿಯಂಥ ದೇಹ ಹಾಗೂ ನೀಳ ಗ್ಲಾಮರಸ್‌ ಕಾಲುಗಳನ್ನು ಪ್ರದರ್ಶಿಸದಿದ್ದರೆ ಅದೆಂಥ ಸಿನಿಮಾ ಆದೀತು? ಇತ್ತೀಚೆಗೆ ಫ್ರಾನ್ಸ್ ದೇಶದಲ್ಲಿ ವೆನಿಸ್‌ ಫಿಲ್ಮ್ ಫೆಸ್ಟಿವಲ್ ನಡೆದಾಗ ರೆಡ್‌ ಕಾರ್ಪೆಟ್‌ ಮೇಲೆ ಒಬ್ಬರಾದ ಮೇಲೊಬ್ಬರಂತೆ ಸುಂದರಿಯರು ಫೋಟೋಗ್ರಾಫರ್‌ಗಳ ಕ್ಯಾಮೆರಾ ಫ್ಲಾಶ್‌ಗೆ ತಮ್ಮನ್ನು ಒಡ್ಡಿಕೊಂಡದ್ದು ಹೀಗೆ.

ಮರಳಿ  ಬಂದ ಬದುಕು : ಎಷ್ಟೋ ವರ್ಷಗಳ ಗೋಲೀಬಾರ್‌ಗಳ ನಂತರ ಕಾಬುಲ್ ಇದೀಗ ನಿಧಾನವಾಗಿ ಸರಿಹೋಗುತ್ತಿದೆ. ಜನರು ತುಸು ನಿರಾಳವಾಗಲೆಂದು ಕೆಲವು ಮೋಜುಮಸ್ತಿಯ ತಾಣಗಳಲ್ಲಿ ವ್ಯಾಪಾರಿಗಳು ಒಂದಿಷ್ಟು ಹಣ ಮಾಡಿಕೊಳ್ಳುತ್ತಿದ್ದಾರೆ. ಈ ಅಮ್ಯೂಸ್‌ಮೆಂಟ್‌ ಪಾರ್ಕಿನಲ್ಲಿ ಒಂದು ಹಳೆಯ ವಿಮಾನವನ್ನೇ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ. ಇದರಲ್ಲಿ ಕುಳಿತು ಹಾರಲಾಗದಿದ್ದರೆ ಏನಂತೆ? ಆರಾಮಾಗಿ ಚಹಾ ಸವಿಯಲೇನೂ ಅಡ್ಡಿ  ಇಲ್ಲ.

ಇನ್ನೂ ಉಳಿದುಕೊಂಡಿರುವ ಪರಂಪರೆ :  ಅಮೆರಿಕಾದ ಮೂಲನಿವಾಸಿಗಳನ್ನು ಯೂರೋಪಿಯನ್ನರು ಬಹುತೇಕ ಬದಲಾಯಿಸಿದರು ಎನ್ನುವ ದಿನಗಳು ಹೋದವು. ಆದರೂ ಅಲ್ಲಿನ ಕೆಲ ಮಂದಿ ಕೆಲ ಸಂದರ್ಭಗಳಲ್ಲಿ ತಮ್ಮ ಪುರಾತನ ರೀತಿ ರಿವಾಜುಗಳು ಹಾಗೂ ಪೋಷಾಕುಗಳನ್ನು ಹಳೆಯ ಪೆಟ್ಟಿಗೆಗಳಿಂದ ಹೊರತೆಗೆದು ಧರಿಸಿ ಮೆರವಣಿಗೆ ಹೊರಡುತ್ತಾರೆ. ಇದರಿಂದ ಅಮೆರಿಕನ್ನರ 300 ವರ್ಷಗಳ ಪ್ರಾಚೀನ ಇತಿಹಾಸ ತಿಳಿದುಕೊಳ್ಳಬಹುದು. ನ್ಯೂಯಾರ್ಕ್‌ನ ಕೆರೇಬಿಯನ್‌ ಕಾರ್ನಿವಾಲ್ ನಲ್ಲಿ ಹೀಗೆ ಪ್ರಾಚೀನ ಪರಂಪರೆ ಇಣುಕಿದಾಗ, ನೋಡುಗರಿಗೆ ಮಜಾ ಎನಿಸಿತು.

 

ವಿಶ್ವ ಪರ್ಯಟನೆಗೆ ಹೊರಡಿ : ಈಗ ಏಷ್ಯಾದ ಟೂರಿಸ್ಟ್ 5 ಡಾಲರ್‌ ಎ ಡೇ ತರಹ ಪ್ರವಾಸ ಹೋಗೋಲ್ಲ. ಈಗ ಅವರು ಹೆಮ್ಮೆಯಿಂದ ಎದೆ ಸೆಟೆಸಿ ಯೂರೋಪ್‌, ಅಮೆರಿಕಾದ ರಸ್ತೆಗಳಲ್ಲಿ ನಡೆಯುತ್ತಾರೆ. ಏಕೆಂದರೆ ಭಾರತ ಅಲ್ಲದಿದ್ದರೇನು... ಚೀನಾ, ಜಪಾನ್‌, ಕೊರಿಯಾ, ಸಿಂಗಪೂರ್‌ ಮುಂತಾದವಂತೂ ಶ್ರೀಮಂತ ದೇಶಗಳಾಗಿವೆ. ಪ್ಯಾರಿಸ್‌ನ ಒಪೇರಾ ಗಾರ್ನಿಯರ್‌ನ ಅತ್ಯಾಕರ್ಷಕ ಭವನದ ಎದುರು ಪೋಸ್‌ ನೀಡುತ್ತಾ ನಿಂತ ಪ್ರವಾಸಿಗರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ