ಪ್ರಯಾಣಕ್ಕೆ ಹೋಗುವುದು ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಅಲ್ಲವೇ? ಇನ್ನು ದೂರದೂರುಗಳಿಗೆ ಪ್ರಯಾಣಕ್ಕೆ ಹೊರಟರೆ ಹೋಟೆಲ್‌ಗಳಲ್ಲಿ ತಂಗುವುದು ಅನಿವಾರ್ಯವಾಗಿರುತ್ತದೆ. ಆದರೆ ಹೋಟೆಲ್‌ಗಳಲ್ಲಿ ತಂಗುವುದಕ್ಕಾಗಿಯೇ ಹೋಗಬೇಕೆನ್ನಿಸುವಂತಹ ವಿಶಿಷ್ಟ, ವಿಚಿತ್ರ ತಂಗುದಾಣಗಳ ಪರಿಚಯ ಇಲ್ಲಿದೆ ನೋಡಿ……!

ಪೆಂಬಾ ಐಲ್ಯಾಂಡ್‌ ಮ್ಯಾನ್ಟಾ ರೆಸಾರ್ಟ್‌

ಟ್ಯಾನ್ಝೇನಿಯಾದಲ್ಲಿರುವ ಪೆಂಬಾ ಐಲ್ಯಾಂಡ್‌ ನೀವು ಎಂದಾದರೂ ನೀರಿನೊಳಗೆ ಜೀವಿಸಿದರೆ ಹೇಗಿರುತ್ತದೆ ಎಂಬ ಕಲ್ಪನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೀರ? ಹಾಗಿದ್ದರೆ ಇಲ್ಲಿದೆ ನೋಡಿ, ಪೆಂಬಾ ಐಲ್ಯಾಂಡ್‌! ಟ್ಯಾನ್ಝೇನಿಯಾದಲ್ಲಿರುವ ಮ್ಯಾನ್ಟಾ ರೆಸಾರ್ಟ್‌ ನೀರಿನ ಕೆಳಗೆ ಕೊಠಡಿಗಳನ್ನು ನಿರ್ಮಿಸಿದೆ, ತೇಲುವಂತಹ ರಚನೆಯುಳ್ಳ ಈ ಕೊಠಡಿಗಳು ಮೂರು ಹಂತಗಳನ್ನು ಹೊಂದಿದೆ, ಮೊದಲನೇ ಹಂತದ ಮೇಲ್ಛಾವಣಿಯ ಒಳಾಂಗಣ ಸೂರ್ಯನ ಬಿಸಿಲನ್ನು ಆನಂದಿಸುವುದಕ್ಕೆ ಸೂಕ್ತವಾದ ಜಾಗವಾಗಿದೆ. ಎರಡನೇ ಹಂತದಲ್ಲಿ ಸಣ್ಣದಾದ ಹಜಾರ ಮತ್ತು ಸ್ನಾನದ ಕೊಠಡಿ ಹಾಗೂ ಕೆಳಗಿನ ಅಂತಸ್ತಿನಲ್ಲಿರುವ ಮಲಗುವ ಕೋಣೆಯ ಕಿಟಕಿಗಳ ಮೂಲಕ ಸಮುದ್ರ ಜಲಚರಗಳ ಸುಂದರ ನೋಟವನ್ನು ಆನಂದಿಸಬಹುದು.

Chitra-1_Pemba-Island-Manta-Resort-Tanzania

ಎಟ್ಟ್ರಾಪ್‌ ರೀಯೂಸ್, ಫ್ರಾನ್ಸ್

ಫ್ರಾನ್ಸ್ ನಲ್ಲಿರುವ ಎಟ್ಟ್ರಾಪ್‌ ರೀಯೂಸ್ ಎಂಬ ರೆಸಾರ್ಟ್‌, ಮರುಬಳಕೆ (ರೀಸೈಕ್ಲೆಬಲ್) ಮಾಡಬಹುದಾದಂತಹ ವಸ್ತುಗಳಿಂದ ಪ್ಲಾಸ್ಟಿಕ್‌ನ ನೀರ್ಗುಳ್ಳೆಗಳಂತೆ ಗೋಚರಿಸುವ, ವಾಸಕ್ಕೆ ಯೋಗ್ಯವಾದ ಗುಮ್ಮಟಗಳಂತೆ ಕಾಣುವ ಕೊಠಡಿಗಳನ್ನು ಪ್ರಕೃತಿಯ ಮಧ್ಯೆ ನಿರ್ಮಿಸಿದೆ. ಹೋಟೆಲಿನ ಮುಖ್ಯ ಕಟ್ಟಡದಿಂದ ಸ್ವಲ್ಪ ದೂರದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಈ ಕೊಠಡಿಯೊಳಗೆ ಗಾಳಿಯು ನಿರಂತರವಾಗಿ ಬೀಸುತ್ತಿರಲು ಒಂದು ನಿಶ್ಶಬ್ದವಾಗಿರುವ ಯಂತ್ರವನ್ನು ಅಳವಡಿಸಲಾಗಿದೆ. ಇದರಿಂದ ಪ್ಲಾಸ್ಟಿಕ್‌ನ ನೀರ್ಗುಳ್ಳೆಗಳಂತೆ ಕಾಣುವ ಆ ಕೊಠಡಿಗಳು ಉಬ್ಬಿಕೊಂಡಂತೆ ಇರುತ್ತವೆ ಮತ್ತು ಅದರೊಳಗಿನ ಗಾಳಿಯೂ ನಿರಂತರವಾಗಿ ಶುದ್ಧೀಕರಣ ಆಗುತ್ತಿರುತ್ತದೆ. ಹೀಗೆ ಪ್ರಕೃತಿಯ ಮಧ್ಯೆ ವಿರಮಿಸಿ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದಾಗಿದೆ.

ಧಸ್ ಪಾರ್ಕ್‌ ಹೋಟೆಲ್, ಆಸ್ಟ್ರಿಯಾ

ಕಾಂಕ್ರೀಟ್‌ ಕೊಳಗಳಲ್ಲಿ ಮಲಗಿದರೆ ಹೇಗಿರುತ್ತದೆ ಎಂದು ಎಂದಾದರೂ ಊಹಿಸಿಕೊಳ್ಳುವ ಪ್ರಯತ್ನ ಮಾಡಿದ್ದೀರಾ? ಅಂತಹುದೇ ಒಂದು ಮಾದರಿ ಇಲ್ಲಿದೆ ನೋಡಿ! ಆಸ್ಟ್ರಿಯಾದಲ್ಲಿರುವ ಧಸ್‌ (ಜರ್ಮನಿಯಲ್ಲಿ ಧಸ್‌ ಎಂದರೆ ಇಂಗ್ಲಿಷ್‌ನಲ್ಲಿ `ದಿ' ಎಂದರ್ಥ) ಪಾರ್ಕ್‌ ಹೋಟೆಲ್‌ನವರು ನದಿಯ ದಂಡೆಯ ಮೇಲಿರುವ ಈ ಕ್ರಾಂಕೀಟ್‌ ಕೊಳಗಳನ್ನು ಕೊಠಡಿಗಳಾಗಿ ರೂಪಾಂತರಿಸಿ, ಮಲಗಲು ಅನುಕೂಲವಾಗುವಂತೆ ಮಾಡಿದ್ದಾರೆ.

Chitra-2

ಸ್ಕೈ ಲಾಡ್ಜ್ ಅಡ್ವೆಂಚರಸ್‌ ಸೂಟ್ಸ್, ಸೇಕ್ರೆಡ್‌ ವ್ಯಾಲಿ, ಪೆರು

ಸ್ಕೈ ಲಾಡ್ಜ್ ಅಡ್ವೆಂಚರಸ್‌ ಸೂಟ್ಸ್, ಸೇಕ್ರೆಡ್‌ ವ್ಯಾಲಿ, ಪೆರು ಹೆಸರಿಗೆ ತಕ್ಕಂತೆ ಸಾಹಸಮಯ ಪ್ರವೃತ್ತಿ ಇರುವವರು ಇಷ್ಟಪಡುವಂತಹ ಸ್ಥಳವಿದು. ಪರ್ವತದ ತುದಿಯಲ್ಲಿ ಕೊಠಡಿಗಳನ್ನು ಸುಮಾರು 1200 ಅಡಿ ಎತ್ತರವಿರುವ ಪರ್ವತದ ಮೇಲ್ಭಾಗದಿಂದ ತೂಗುಹಾಕಲಾಗಿದೆ. ಈ ಪಾರದರ್ಶಕ ಕೊಠಡಿಗಳ ಮೂಲಕ ಕಣಿವೆಗಳ ಅದ್ಭುತ ವಿಹಂಗಮ ನೋಟವನ್ನು ಸವಿಯಬಹುದಾಗಿದೆ. ಕ್ಯಾಪ್ಸೂಲ್‌ನಂತಿರುವ ಈ ಕೊಠಡಿಗಳು ಸುಮಾರು 24 ಅಡಿಗಳಷ್ಟು ಉದ್ದ ಮತ್ತು 8 ಅಡಿಗಳಷ್ಟು ಎತ್ತರ, ಅಗಲವಿದೆ. ಅಗತ್ಯ ಗಾಳಿ ಬೆಳಕಿಗಾಗಿ ಕಿಟಕಿಗಳು, ವೆಂಟಿಲೇಶನ್‌ ಹಾಗೂ ಸುರಕ್ಷತೆಗಾಗಿ ತುರ್ತು ನಿರ್ಗಮನ ಬಾಗಿಲು ಇದೆಯಂತೆ.

ಕಾಕ್‌ಸ್ಲೌಟ್‌ನೆನ್‌ ಆರ್ಕ್‌ಟೆಕ್‌ ರೆಸಾರ್ಟ್‌, ಫಿನ್ ಲ್ಯಾಂಡ್‌

ಕಾಕ್‌ಸ್ಲೌಟ್‌ನೆನ್‌ ಆರ್ಕ್‌ಟೆಕ್‌ ರೆಸಾರ್ಟ್‌, ಫಿನ್‌ ಲ್ಯಾಂಡ್‌ನಲ್ಲಿರುವ ಈ ರೆಸಾರ್ಟ್‌ನ ವಿಶೇಷತೆ ಏನೆಂದರೆ ಇಲ್ಲಿರುವ ಅತಿಥಿ ಕೊಠಡಿಗಳು ಇಗ್ಲೂ (ಎಸ್ಕಿಮೋಗಳ ಮನೆ)ಗಳಂತಿವೆ. ಆದರೆ ಇವು ಗ್ಲಾಸ್‌ ಇಗ್ಲೂಗಳು, ಗುಮ್ಮಟಗಳಂತೆ ಕಾಣುವ ಈ ಗ್ಲಾಸ್‌ ಇಗ್ಲೂಗಳ ಒಳಾಂಗಣ ಸಾಮಾನ್ಯ ಹೋಟೆಲ್‌‌ಗಳ ಕೊಠಡಿಗಳಷ್ಟೇ ವಿಶಾಲವಾಗಿದೆ. ಈ ಗ್ಲಾಸ್‌ ಇಗ್ಲೂಗಳನ್ನು ಥರ್ಮಲ್ ಗ್ಲಾಸಿನಿಂದ ಮಾಡಲಾಗಿದೆ. (ಒಳಗಿನ ಉಷ್ಣತೆಯನ್ನು ಕಾಪಾಡಲು). ಉತ್ತರ ಭಾಗದ ಬೆಳಕು ಕಾಣುವ ಸಮಯದಲ್ಲಿ ಈ ರೆಸಾರ್ಟ್‌ಗಳನ್ನು ತೆರೆಯಲಾಗುತ್ತದೆ. ಆಗಸ್ಟ್ ಮಧ್ಯದಿಂದ ಏಪ್ರಿಲ್ ತಿಂಗಳ ಕೊನೆಯ ತನಕ. ಉತ್ತರ ಭಾಗದ ಬೆಳಕನ್ನು ಪೋಲಾರ್‌ ಲೈಟ್ಸ್ ಅಥವಾ ಅರೋರಾ ಬೋರಿಯಾಲಿಸ್‌ ಎನ್ನುತ್ತಾರೆ. ನೈಸರ್ಗಿಕವಾಗಿ ಆಕಾಶದಲ್ಲಿ ಮೂಡುವ ಈ ಬೆಳಕನ್ನು ಮುಖ್ಯವಾಗಿ ಅತೀ ಹೆಚ್ಚಿನ ಅಕ್ಷಾಂಶವಿರುವ ಆರ್ಕ್ಟಿಕ್ ಅಥವಾ ಅಂಟಾರ್ಟಿಕ್‌ ಪ್ರದೇಶಗಳಲ್ಲಿ ಕಾಣಬಹುದು. ಈ ಗ್ಲಾಸ್‌ ಇಗ್ಲೂಗಳ ಮೂಲಕ ಬಣ್ಣ ಬಣ್ಣದ ಈ ಪೋಲಾರ್‌ ಬೆಳಕಿನ ವಿಹಂಗಮ ನೋಟವನ್ನು ಸವಿಯಬಹುದಾಗಿದೆ. ಹಾಗಾಗಿಯೇ ಈ ರೆಸಾರ್ಟ್‌ಗಳನ್ನು ಉತ್ತರ ಭಾಗದ ಬೆಳಕು ಮೂಡುವ ಸಮಯದಲ್ಲಿ ತೆರೆಯಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ