ಶಾಲೆ ಎನ್ನುವುದು ಕಲಿಕೆಯ ದೇಗುಲ! ಮಕ್ಕಳು ಸಂಪೂರ್ಣ ಜ್ಞಾನಾರ್ಜನೆಯಿಂದ ಬೆಳವಣಿಗೆ ಹೊಂದಿ ದೇಶದ ಅತ್ಯುನ್ನತ ನಾಗರಿಕರನ್ನಾಗಿ ರೂಪಿಸುವುದೇ ಈ ದೇಗುಲದ ಪವಿತ್ರ ಕರ್ತವ್ಯ. ವಿದ್ಯಾರ್ಥಿಗಳಿಗೆ ಕೇವಲ ಜ್ಞಾನವನ್ನಷ್ಟೇ ಧಾರೆಯೆರೆಯದೆ ಅದರೊಂದಿಗೆ ಸಂಪನ್ಮೂಲಭರಿತ ಉತ್ತಮ ಮೌಲ್ಯಗಳು, ಧೈರ್ಯ, ಕುತೂಹಲ, ನೈತಿಕ ಸ್ವಾತಂತ್ರ್ಯ, ದೃಢ ನಿರ್ಧಾರ ಹಾಗೂ ಸಾಮರ್ಥ್ಯವನ್ನು ಬಾಲ್ಯದಿಂದಲೇ ಅವರಲ್ಲಿ ತುಂಬಿಸುವುದು ಸಂಸ್ಥೆಯ ಮೊದಲ ಆದ್ಯತೆಯಾಗಿ ಇರುತ್ತದೆ. ಈ ನಿಟ್ಟಿನಲ್ಲಿ `ಕಲಿಕೆಯಿಂದಲೇ ಭವಿಷ್ಯ' ಎನ್ನುವ ಮಾತಿನಲ್ಲಿ ಬಲವಾದ ನಂಬಿಕೆ ಇಟ್ಟಿರುವ ಹಾಗೂ ಉತ್ಕೃಷ್ಟ ಗುಣಮಟ್ಟ, ಮೌಲ್ಯಾಧಾರಿತ ಕಲಿಕೆಗೆ ಸ್ವತಂತ್ರ ಯೋಜನೆಯಿಂದ ಕೂಡಿದ ಮುಕ್ತ ವಾತಾವರಣವನ್ನು ಕಲ್ಪಿಸುವುದರಿಂದಲೇ ಉತ್ತಮ ಪ್ರಜೆಗಳ ನಿರ್ಮಾಣ ಸಾಧ್ಯ ಎನ್ನುವುದನ್ನು ಸಾಬೀತುಪಡಿಸಿರುವ ಬೆಂಗಳೂರಿನ ಟಾಪ್‌-5 ವಸತಿ ಶಾಲೆಗಳಲ್ಲಿ ಮೊದಲ ಪಂಕ್ತಿಯಲ್ಲಿರುವ ನ್ಯೂ ಬಾಲ್ಡ್ ವಿನ್‌ ಇಂಟರ್‌ ನ್ಯಾಷನಲ್ ವಸತಿ ಶಾಲೆ ನಂಬಿಕೆಯ ಪ್ರತೀಕ.

ಕೆ.ಆರ್‌. ಪುರಂನ ಬೂದಿಗೆರೆ ಮುಖ್ಯ ರಸ್ತೆಯಿಂದ ಕೇವಲ 3 ಕಿ.ಮೀ. ಅಂತರದಲ್ಲಿ ಸುಮಾರು 18 ಎಕರೆ ವಿಸ್ತೀರ್ಣದ ಜಾಗದಲ್ಲಿ ಹರಡಿಕೊಂಡಿರುವ ವೈಭವಯುತ ಕ್ಯಾಂಪಸ್‌ ವಿದ್ಯಾರ್ಥಿಗಳ ಪಾಲಿಗೆ ಎರಡನೇ ಮನೆ ಎನಿಸಿಕೊಂಡಿದೆ. ಸುತ್ತಲೂ ಹಸಿರು ರಾಶಿಯ ಮಧ್ಯೆ ಅದ್ಭುತವಾಗಿ ಕಂಗೊಳಿಸುವ ಈ ವಿದ್ಯಾದೇಗುಲ ವಿದ್ಯಾರ್ಥಿಗಳಿಗೆ ಹೊಸ ಹುರುಪನ್ನು ನೀಡುವಲ್ಲಿ ಸಹಕಾರಿಯಾಗಿದೆ. ಸ್ವಚ್ಛ ಗಾಳಿ, ಮಾಲಿನ್ಯ ರಹಿತ ವಾತಾವರಣ, ಅರ್ಥಗರ್ಭಿತ ಮೌನ, ಅತ್ಯುತ್ತಮ ಸಂವಹನ, ಉತ್ಕೃಷ್ಟ ಪಾಠಪ್ರವಚನ, ಮನರಂಜನೆ... ಹೀಗೆ ಹತ್ತು ಹಲವಾರು ಸೌಲಭ್ಯಗಳನ್ನು ಒಂದೆಡೆ ಕಲ್ಪಿಸಿರುವುದು ನ್ಯೂ ಬಾಲ್ಡ್ ವಿನ್‌ ಶಾಲೆಯ ಹೆಗ್ಗಳಿಕೆ.

ಸತ್ಯಸಂಧತೆ, ಉತ್ತಮ ನಡವಳಿಕೆ, ಶಾಂತಿ, ಸೌಹಾರ್ದತೆ ಹಾಗೂ ತುಂಬು ಹೃದಯದ ಪ್ರೀತಿ ಇವುಗಳು ಈ ವಿದ್ಯಾದೇಗುಲದ ಜೀವರಸಗಳಾಗಿವೆ. 1990ರಲ್ಲಿ ಶ್ರೀ ಸತ್ಯನಾರಾಯಣ್‌ ಎಜುಕೇಶನ್‌ ಟ್ರಸ್ಟ್ ವತಿಯಿಂದ ಸ್ಥಾಪನೆಗೊಂಡ ನ್ಯೂ ಬಾಲ್ಡ್ ವಿನ್ ಅಂತಾರಾಷ್ಟ್ರೀಯ ವಸತಿ ಶಾಲೆ, ಪ್ರೀನರ್ಸರಿಯಿಂದ ಪದವಿಯವರೆಗೂ ಶಿಕ್ಷಣವನ್ನು ನೀಡುತ್ತದೆ. ಅಂತಾರಾಷ್ಟ್ರೀಯ ಮಾನ್ಯತೆಯ ಕೇಂಬ್ರಿಡ್ಜ್ ನಿಂದ ಬಸ್‌ ಹೊಂದಿರುವ ಈ ಶಾಲೆ ಸಹಶಿಕ್ಷಣದ ವ್ಯವಸ್ಥೆಯೊಂದಿಗೆ ಅತ್ಯಾಧುನಿಕ ಮಾದರಿಯಲ್ಲಿ ಬೋಧನೆ ನೀಡುವುದರೊಂದಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈಯಲು ಅನುವಾಗುವಂತೆ ತಮ್ಮ ವಿದ್ಯಾರ್ಥಿಗಳನ್ನು ಪ್ರಾಥಮಿಕ ಮಟ್ಟದಿಂದಲೇ ತರಬೇತುಗೊಳಿಸಿ, ಕಡ್ಡಾಯವಾಗಿ ಆಂಗ್ಲ ಭಾಷೆಯನ್ನು ಆಡುಭಾಷೆಯಾಗಿ ರೂಪಿಸಿದೆ.

`ವಿಶ್ವ ಚತುರ ಪ್ರಜೆ' ನಿರ್ಮಾಣದ ಗುರಿ ಹೊಂದಿರುವ ಬಾಲ್ಡ್ ವಿನ್‌ ವಸತಿ ಶಾಲೆ ಮಾದರಿ ಶಾಲೆ ಎನಿಸಿಕೊಂಡಿದೆ. ಅನುಭವಿ, ನುರಿತ ಹಾಗೂ ಉನ್ನತ ವ್ಯಾಸಂಗ ಹೊಂದಿದ, ನಿಶ್ಕಲ್ಮಷ ಪ್ರೀತಿ ವಾತ್ಸಲ್ಯದೊಂದಿಗೆ ಬೋಧಿಸುವ ಅಧ್ಯಾಪಕ ವೃಂದ, ವಿಶೇಷ ತಾಂತ್ರಿಕ ಕೌಶಲ್ಯವುಳ್ಳ ಬೋಧಕೇತರ ಸಿಬ್ಬಂದಿಗಳ ನಿಸ್ವಾರ್ಥ ಸೇವೆಯನ್ನು ಹೊಂದಿರುವ ಈ ವಸತಿ ಶಾಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದೆ.

ಸುಸಜ್ಜಿತ ಪ್ರಯೋಗಾಲಯ, ಹುಡುಗ-ಹುಡುಗಿಯರಿಗೆ ಪ್ರತ್ಯೇಕ ಸೌಲಭ್ಯವಿದೆ. ಟೀಚರ್‌ ಪೇರೆಂಟ್‌ ಇಂಟರ್ಯಾಕ್ಷನ್‌ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ಅಭಿವೃದ್ಧಿಯ ಕುರಿತು ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ಪರೀಕ್ಷೆಯನ್ನು ಕಲ್ಪಿಸಲಾಗಿದೆ. ಕೇವಲ ಪಾಠಪ್ರವಚನಗಳಿಗೆ ಮಾತ್ರ ಮಹತ್ವ ನೀಡದೆ, ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಿದೆ. ಯೋಗ, ಕರಾಟೆ, ನೃತ್ಯ, ಸಂಗೀತ, ಮಾರ್ಷಲ್ ಆರ್ಟ್ಸ್, ಕ್ರೀಡೆ ಹಾಗೂ ಕುದುರೆ ಸವಾರಿ ಇವುಗಳಲ್ಲಿ ಪ್ರತ್ಯೇಕ ಅಕಾಡೆಮಿಯನ್ನು ಹೊಂದಿರುವುದು ಈ ಶಾಲೆಯ ಹೆಗ್ಗಳಿಕೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ