ವಸತಿ ಶಾಲೆ ಎಂದಾಕ್ಷಣ ನಮ್ಮ ಕಣ್ಣು ಮುಂದೆ ಬರುವುದು ಸಿಟಿಯಿಂದ ದೂರವಾದ ಹಳ್ಳಿಯ ನಿಶ್ಶಬ್ದ ವಾತಾವರಣ, ಹಸಿರಿನ ಮಧ್ಯದಲ್ಲಿ ನೆಲೆ ನಿಂತಿರುವ ವಿಶಾಲ ಕ್ಯಾಂಪಸ್‌, ಶಿಸ್ತಿನ ಸಿಪಾಯಿಗಳಂತೆ ಕಾಣುವ ವಿದ್ಯಾರ್ಥಿಗಳ ಸಮೂಹ, ಪರಿಣಾಮಕಾರಿ ಅನುಭವಿ ಶಿಕ್ಷಕರ ನಿಶ್ಕಲ್ಮಷ ಸೇವೆ. ಈ ನಿಟ್ಟಿನಲ್ಲಿ ಕರ್ನಾಟಕದ ಟಾಪ್‌ನಲ್ಲಿರುವ 5 ವಸತಿ ಶಾಲೆಗಳಲ್ಲಿ ಒಂದೆನಿಸಿರುವ `ನ್ಯೂ ಇಂಡಸ್‌ ವ್ಯಾಲಿ ರೆಸಿಡೆನ್ಶಿಯಲ್ ಸ್ಕೂಲ್‌’ ತನ್ನದೇ ಆದ ಬೋಧನಾ ಶೈಲಿಯಿಂದಾಗಿ ಹೆಸರುವಾಸಿಯಾಗಿದೆ. ಸಹಶಿಕ್ಷಣದ ವ್ಯವಸ್ಥೆಯೊಂದಿಗೆ ಯೋಗಿ ನಾರಾಯಣ ಸೊಸೈಟಿಯಿಂದ ಸ್ಥಾಪಿತಗೊಂಡಿರುವ ಈ ವಸತಿ ಶಾಲೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಕಾಳಜಿಯುಳ್ಳ ಸಶಕ್ತ ಶಿಕ್ಷಣ ಸಂಸ್ಥೆ ಎನಿಸಿಕೊಂಡಿದೆ. ಹೊಸತನವನ್ನು ಶೋಧಿಸುವ ಗುರುತಿಸುವ ಬೌದ್ಧಿಕತೆ, ಅಲ್ಲದೆ, ಕ್ಲಿಷ್ಟಕರವಾದ ಸಮಸ್ಯೆಗಳನ್ನು ಸಮಯೋಚಿತವಾಗಿ ಕ್ಲುಪ್ತ ಸಮಯದಲ್ಲಿ ನಿವಾರಿಸುವ ಜಾಣ್ಮೆ ಚತುರತೆ ಹಾಗೂ ಜಾತಿ, ಧರ್ಮ, ಬಣ್ಣ, ಭಾಷೆಗಳ ಪರಿಭೇದವಿಲ್ಲದೆ, ಎಲ್ಲಾ ವಿದ್ಯಾರ್ಥಿಗಳನ್ನೂ ಸಮಾನತೆಯಿಂದ ಕಾಣುವ ಸೌಹಾರ್ದಯುತ ಸಂಸ್ಥೆಯಾಗಿ ವಿದ್ಯಾರ್ಥಿಗಳ ಪಾಲಿಗೆ ಇದು `ಎರಡನೇ ಮನೆ’ ಎನಿಸಿಕೊಂಡಿದೆ.

ಉನ್ನತ, ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಸ್ಟೇಟ್‌ ಹಾಗೂ ಸಿಬಿಎಸ್ಸಿ ಸಿಲೆಬಸ್‌ನ್ನು ಅಳವಡಿಸಿಕೊಂಡು ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಗಳ ಮೂಲಕ ಪ್ರಸ್ತುತಪಡಿಸಿ ವಿದ್ಯಾರ್ಥಿಗಳ ಭಾಷಾ ಜ್ಞಾನವನ್ನು ಬಾಲ್ಯದಿಂದಲೇ ಅಭಿವೃದ್ಧಿಪಡಿಸಿ, ವಿದ್ಯಾರ್ಥಿಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸಲು ಇದರಿಂದ ಸಾಧ್ಯವಾಗುತ್ತಿದೆ.

ಮೌಲ್ಯಾಧಾರಿತ ಶಿಕ್ಷಣ ಪದ್ಧತಿ : ಈ ವಸತಿ ಶಾಲೆ ಆರಂಭದಿಂದಲೂ ತನ್ನದೇ ಆದ ಅತ್ಯುನ್ನತ ಧ್ಯೇಯಗಳನ್ನು ಅಳವಡಿಸಿಕೊಂಡು, ವಿಶ್ವ ಯೋಚನಾ ಲಹರಿಯನ್ನು ಬದಲಾಯಿಸುವಂಥ ಸಕಾರಾತ್ಮಕ ಚಿಂತನೆ ಹಾಗೂ ಶಕ್ತಿಶಾಲಿಯಾದ ಉತ್ಸಾಹವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದರ ಮೂಲಕ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿದೆ. ಪ್ರೀನರ್ಸರಿಯಂತಹ ಎಳೆ ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ವಿಶೇಷ ಗಮನವಹಿಸುತ್ತಿರುವ ಈ ಶಾಲೆ ಆರಂಭದಿಂದಲೇ ವೇಗದ ಬೆಳವಣಿಗೆಗೆ,  ಕ್ರೀಯಾಶೀಲತೆಗೆ ಹಾಗೂ ಇನೋವೇಟೀವ್ ‌ಕಾರ್ಯಕ್ಷಮತೆಗಾಗಿ ವಿಶೇಷ ಪ್ರಾಜೆಕ್ಟ್ ನ್ನು ಕೈಗೊಂಡಿದೆ. ಇಲ್ಲಿ ತಾಂತ್ರಿಕ ಕೌಶಲ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು ಇವರ ಮೊದಲ ಆದ್ಯತೆಯಾಗಿದೆ.

ತಿಳಿವಳಿಕೆಯ ಮಟ್ಟವನ್ನು ವೇಗವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸುಸಜ್ಜಿತ ಹಾಗೂ ವಿಶಾಲವಾದ ಲ್ಯಾಬೊರೇಟರಿಯನ್ನು ಹೊಂದಿದ್ದು, ಎಲ್ಲಾ ಹಂತದಲ್ಲೂ ಅತ್ಯಾಧುನಿಕ ತಂತ್ರಜ್ಞಾನದ ಶೀಘ್ರ ಲಭ್ಯತೆಗಾಗಿ ಕಂಪ್ಯೂಟರ್‌ ಲ್ಯಾಬ್‌ ಸೌಲಭ್ಯ ಕಲ್ಪಿಸಿಕೊಟ್ಟಿದೆ.

ಅತ್ಯುತ್ತಮ ಮಾರ್ಗದರ್ಶಕರ ಪಡೆ : ಅನುಭವಿ, ನುರಿತ, ಹೃದಯವಂತ ಶಿಕ್ಷಕರ ಪಡೆಯೇ ಈ ಸಂಸ್ಥೆಯ ನಿಜವಾದ ಆಸ್ತಿ. `ಗುರು ದೇವೋ ನಮಃ’ ಎನ್ನುವ ಪದಕ್ಕೆ ಅನ್ವರ್ಥವಾಗಿ ಕಾರ್ಯ ನಿರ್ವಹಿಸಿ, ಶಾಲೆಗೆ ಶೇ.100ರಷ್ಟು ಫಲಿತಾಂಶ ಬರಲು ಇವರ ಈ ನಿಶ್ಕಲ್ಮಷ ಸೇವೆಯೇ  ಕಾರಣ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ತಪ್ಪಾದಾಗ ಪ್ರೀತಿಯಿಂದ ತಿಳಿಹೇಳಿ ಅವರಲ್ಲಿ ಆದರ್ಶ, ಮಾನವೀಯತೆ ಹಾಗೂ ಹೃದಯದ ತುಂಬಾ ಸಹಿಷ್ಣುತೆಯನ್ನು ತುಂಬಿಸಿ ಭಾರತದ ಹೆಮ್ಮೆಯ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಇವರ ಗುರುತರ ಜವಾಬ್ದಾರಿ ನಿಜಕ್ಕೂ ಆದರಣೀಯ. ಎಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮವನ್ನು ನಿಯೋಜಿಸಿ ಎಲ್ಲಾ ಆಗುಹೋಗುಗಳನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಆದರ್ಶ ಅನುಕರಣೀಯ ಶಿಕ್ಷಕರೆನಿಸಿಕೊಂಡಿದ್ದಾರೆ.

ಕ್ರೀಡೆ ಹಾಗೂ ಪ್ರತಿಭಾನ್ವೇಷಣೆ : ಕೇವಲ ಪಾಠ ಪ್ರವಚನಗಳಿಗಷ್ಟೇ ಪ್ರಾಧಾನ್ಯತೆ ನೀಡದೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಿ ಅಮಿತ ಪ್ರತಿಭಾವಂತರನ್ನು ಹುಡುಕಿ ಪ್ರೋತ್ಸಾಹಿಸುವಲ್ಲಿ ಕೂಡ ಈ ಶಾಲೆ ಮುಂದಿದೆ. ಕ್ರೀಡೆಗೆ ತನ್ನದೇ ಆದ ವಿಶೇಷ ಕೊಡುಗೆ ನೀಡಿರುವ ಈ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗಾಗಿ ವಿಶಾಲವಾದ ಕ್ರೀಡಾಂಗಣವನ್ನು ನಿರ್ಮಿಸಿದೆ. ಕ್ರೀಡೆಯಲ್ಲಿ ಭಾಗಹಿಸುವುದು ಎಲ್ಲಾ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿದೆ.

ಪ್ರಾರ್ಥನೆ, ಧ್ಯಾನ, ಯೋಗ ಹಾಗೂ ಆರೋಗ್ಯ ಕಾಳಜಿ : ಮಕ್ಕಳಲ್ಲಿ ಏಕಾಗ್ರತೆ ಹಾಗೂ ಮನೋಚಂಚಲತೆ ದೂರಗೊಳಿಸಲು ಪ್ರಾರ್ಥನೆ, ಧ್ಯಾನ ಅಲ್ಲದೆ ಸಕಾರಾತ್ಮಕ ಚಿಂತನೆಗಾಗಿ ಯೋಗ ಕಾರ್ಯಕ್ರಮವನ್ನು ಕಡ್ಡಾಯವಾಗಿ ನಿಯೋಜಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆಂತರಿಕ ಧೈರ್ಯ, ಮನಸ್ಸಿನ ನಿರಾಳತೆ, ಒತ್ತಡಮುಕ್ತ ಪರಿಸರ, ಜೊತೆಗೆ ವಿದ್ಯಾರ್ಥಿಗಳ ದೇಹದಲ್ಲಿ `ಸಕಾರಾತ್ಮಕ ಶಕ್ತಿ’ಯನ್ನು ವೃದ್ಧಿಗೊಳಿಸಲೆಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಟ್ಟುನಿಟ್ಟಿನ ಅಭ್ಯಾಸಗಳು ಹಾಗೂ ಶಿಸ್ತುಪಾಲನೆಯನ್ನು ರಜೆ ಕಳೆಯಲು ಮನೆಗೆ ಹೋದಾಗಲೂ ಮುಂದುವರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯಿಂದ ನೋಡಿಕೊಳ್ಳಲು 24 ಗಂಟೆಗಳ ವೈದ್ಯಕೀಯ ಸೇವೆ, ಆ್ಯಂಬುಲೆನ್ಸ್ ಹಾಗೂ ವೈದ್ಯರ ಲಭ್ಯವಿರುವುದು ಈ ಶಾಲೆಯ ವಿಶೇಷ.

ಕೇವಲ ಪಾಠಪ್ರವಚನಗಳಲ್ಲೇ ಮುಳುಗಿ ಹೋಗಬಾರದು ಎನ್ನುವ ದೃಷ್ಟಿಯಿಂದ ಮಾನಸಿಕವಾಗಿ ಸದಾ `ರಿಲ್ಯಾಕ್ಸ್’ ಆಗಲು ಆಗಾಗ್ಗೆ ಮಿನಿ ಪ್ರವಾಸ ಕೈಗೊಳ್ಳಲಾಗುತ್ತದೆ. ಶುಚಿ ರುಚಿ ಅಚ್ಚುಕಟ್ಟಾದ ಊಟೋಪಚಾರ, ಆರಾಮವಾಗಿರುವ ವಸತಿ ಸೌಲಭ್ಯ, ಜ್ಞಾನಾರ್ಜನೆಗೆ ಅಗತ್ಯದ ಲೈಬ್ರೆರಿ…. ಎಲ್ಲದರಲ್ಲೂ ತನ್ನದೇ ಆದ ವಿಶಿಷ್ಟ ಗುಣಮಟ್ಟವನ್ನು ಕಾಯ್ದುಕೊಂಡು, ಶೈಕ್ಷಣಿಕವಾಗಿ ವೈಯಕ್ತಿಕ ಬೆಳವಣಿಗೆಯ ಪ್ರತಿ ಹಂತದಲ್ಲೂ ನಿಷ್ಕಪಟ ಕಾಳಜಿ ಮೆರೆಯುವ `ನ್ಯೂ ಇಂಡಸ್‌ ವ್ಯಾಲಿ’ ವಸತಿ ಶಾಲೆಯ ಚೇರ್ಮನ್‌ ಕೆ.ಎನ್‌. ನಾರಾಯಣಮೂರ್ತಿ ಹಾಗೂ ಎನ್‌. ಅನಸೂಯಾ ನಾರಾಯಣ್‌ಮೂರ್ತಿಯವರ ಕಾಣಿಕೆ ಅನನ್ಯ ಹಾಗೂ ಸುತ್ತಾರ್ಹ.

ನ್ಯೂ ಇಂಡಸ್‌ ವ್ಯಾಲಿ ರೆಸಿಡೆನ್ಶಿಯಲ್ ಸ್ಕೂಲ್, ಕೆ.ಆರ್‌. ಪುರಂ, ಬೆಂಗಳೂರು-560 049.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ