ಕಿತ್ತೂರು ಹೆಸರು ಹೇಳಿದಾಕ್ಷಣ ಎಂಥವರ ಮೈಮನಸ್ಸಿನಲ್ಲೂ ರೋಮಾಂಚನವಾಗುತ್ತದೆ. ಅದಕ್ಕೆ ಮುಖ್ಯ ಕಾರಣ ವೀರರಾಣಿ ಚೆನ್ನಮ್ಮಳ ಸಾಹಸ. ಇಂತಹ ವೀರರಾಣಿಯ ನಾಡಿನಲ್ಲಿ ಮಹಿಳೆಯರ ಶಿಕ್ಷಣಕ್ಕೆ ಅದರಲ್ಲೂ ಸಾಹಸ ಶಿಕ್ಷಣಕ್ಕೆ ಒತ್ತು ಕೊಟ್ಟು ಸ್ಥಾಪನೆಯಾದದ್ದು ಕಿತ್ತೂರು ಸೈನಿಕ್‌ ಶಾಲೆ. ಇದರ ಸ್ಥಾಪನೆಗೆ ಕಾರಣಕರ್ತರಾದವರು 60ರ ದಶಕದಲ್ಲಿ ಎಸ್‌. ನಿಜಲಿಂಗಪ್ಪ ಅವರ ಮಂತ್ರಿ ಮಂಡಲದಲ್ಲಿ ಶಿಕ್ಷಣ ಸಚಿವರಾಗಿದ್ದ ಎಸ್‌.ಆರ್‌. ಕಂಠಿ. ಬಳಿಕ ಇವರು 96 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳು ಕೂಡ ಆಗಿದ್ದರು.

ಸ್ಥಾಪನೆ

ಕಿತ್ತೂರು ಸೈನಿಕ್‌ ಶಾಲೆಗೆ 1967ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ಶಿಲಾನ್ಯಾಸ ಮಾಡಲ್ಪಟ್ಟಿತು. 1969ರಲ್ಲಿ ಕೇಂದ್ರ ಶಿಕ್ಷಣ ಸಚಿವ ವಿಕೆಆರ್‌ವಿ ರಾವ್ ‌ಅವರಿಂದ ಶಾಲೆಯನ್ನು ಉದ್ಘಾಟಿಸಲಾಯಿತು. ಈ ಶಾಲೆಗೆ ಸುಮಾರು 25 ವರ್ಷಗಳಿಗೂ ಹೆಚ್ಚು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು ಭಾರತದ ಉಪರಾಷ್ಟ್ರಪತಿಯಾಗಿದ್ದ ಬಿ.ಡಿ. ಜತ್ತಿ. ಘಟಾನುಘಟಿಗಳ ಮೇಲ್ವಿಚಾರಣೆಯಲ್ಲಿ ಈ ಶಾಲೆ ನಾಡಿನಾದ್ಯಂತ ಪ್ರಸಿದ್ಧಿ ಪಡೆಯಿತು.

ಪ್ರವೇಶ ಪ್ರಕ್ರಿಯೆ : ಈ ಶಾಲೆಗೆ 6ನೇ ತರಗತಿಯಿಂದ ಪ್ರವೇಶ ನೀಡಲಾಗುತ್ತದೆ. ಆಯಾ ವರ್ಷದ ಜೂನ್‌ 1 ಕ್ಕೆ 10 ವರ್ಷ ಪೂರ್ಣಗೊಂಡ 12 ವರ್ಷ ಮೀರದ ಹೆಣ್ಣುಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಶಿಕ್ಷಣ ಮಾಧ್ಯಮ : ಇಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರಿಗೆ ಬೋಧನಾ ಮಾಧ್ಯಮ ಇಂಗ್ಲಿಷ್‌ ಅಥವಾ ಕನ್ನಡ ಆಗಿರುತ್ತದೆ.

ಪ್ರವೇಶ ಪರೀಕ್ಷೆ : ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಪ್ರವೇಶ ಪರೀಕ್ಷೆಗಳು ನಡೆಯುತ್ತವೆ. 200 ಅಂಕಗಳಿಗೆ ಈ ಪರೀಕ್ಷೆ ಇದ್ದು, ಆಂಗ್ಲ ಭಾಷಾ ಪರೀಕ್ಷೆ 25, ಕನ್ನಡ ಅಥವಾ ಹಿಂದಿ 25 ಅಂಕ, ಸಾಮಾನ್ಯ ಗಣಿತ (ಇಂಗ್ಲಿಷ್‌/ಕನ್ನಡ) 75 ಅಂಕ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಳ್ಳಲು ಆಂಗ್ಲ ಭಾಷೆ ಉತ್ತೀರ್ಣರಾಗುವುದು ಕಡ್ಡಾಯ.

ಎತ್ತರ ತೂಕ : ಆಯ್ಕೆ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಎತ್ತರ ಮತ್ತು ತೂಕ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. 10 ರಿಂದ 11 ವರ್ಷದೊಳಗಿನ ವಿದ್ಯಾರ್ಥಿನಿಯರು 128 ಸೆಂ.ಮೀ. ಎತ್ತರ ಹಾಗೂ  25 ಕಿಲೋ ತೂಕ ಹೊಂದಿರಬೇಕು. 11 ರಿಂದ 12 ವಯೋಮಿತಿಯ ವಿದ್ಯಾರ್ಥಿನಿಯರು 130 ಸೆಂ.ಮೀ. ಹಾಗೂ 28 ಕಿಲೋ ತೂಕ ಹೊಂದಿರಬೇಕಾಗುತ್ತದೆ.

ಪರೀಕ್ಷಾ ಕೇಂದ್ರಗಳು : ಕಿತ್ತೂರು, ಬೆಂಗಳೂರು, ವಿಜಯಪುರ, ಕಲಬುರಗಿ, ದಾವಣಗೆರೆ ಮತ್ತು ಶಿವಮೊಗ್ಗ ಈ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯುತ್ತವೆ. ದೈಹಿಕ ಪರೀಕ್ಷೆ, ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ ಹೀಗೆ ಎಲ್ಲ ನಿಟ್ಟಿನಲ್ಲೂ ಉತ್ತೀರ್ಣರಾದವರು ಮಾತ್ರ ಪ್ರವೇಶಕ್ಕೆ ಅರ್ಹತೆ ಪಡೆದುಕೊಳ್ಳುತ್ತಾರೆ.

ಕಾಲೇಜು ಶಿಕ್ಷಣ : ಇಲ್ಲಿ ಮೆಟ್ರಿಕ್‌ ನಂತರ 2 ವರ್ಷ ವಿಜ್ಞಾನ ವಿಷಯಗಳಲ್ಲಿ (ಸಿಬಿಎಸ್‌ಇ ಪಠ್ಯಕ್ರಮದ ಪ್ರಕಾರ) ಪ್ರವೇಶ ನೀಡಲಾಗುತ್ತದೆ.

ವಿದ್ಯಾರ್ಥಿ ವೇತನ : ಕರ್ನಾಟಕದ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನವನ್ನು ಕೂಡ ನೀಡುತ್ತದೆ.

ಮೀಸಲಾತಿ : ರಾಜ್ಯ ಸರ್ಕಾರದ ನಿಯಮಾಳಿ ಪ್ರಕಾರ, ಕಿತ್ತೂರು ಹೋಬಳಿಯ ಇಬ್ಬರು ಹುಡುಗಿಯರಿಗೆ ಮತ್ತು ಸೈನ್ಯದಲ್ಲಿ ಸೇವೆ ಸಲ್ಲಿಸಿದವರ ಹೆಣ್ಣುಮಕ್ಕಳಿಗೆ 2 ಸೀಟುಗಳನ್ನು ಮೀಸಲಾಗಿಡಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ