ಅತಿ ಶ್ರೇಷ್ಠ ಯೋಧರನ್ನು ಭಾರತೀಯ ಸೈನ್ಯಕ್ಕೆ ಕೊಡುಗೆ ನೀಡಿದ ಖ್ಯಾತಿ ಕೊಡಗಿಗೆ ಇದೆ. ಅವರಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್‌. ತಿಮ್ಮಯ್ಯ ಮುಂತಾದವರು ಪ್ರಮುಖ. ಇಂತಹ ಶೂರರ ನಾಡಿನಲ್ಲಿ ಇನ್ನಷ್ಟು ಅಪ್ರತಿಮ ಯೋಧರನ್ನು ಸೃಷ್ಟಿಸಲು ಮಿಲಿಟರಿ ಶಾಲೆಯೊಂದು ತಲೆಯೆತ್ತಿದೆ. ಸೋಮಾರಪೇಟೆ ತಾಲ್ಲೂಕಿನ ಕೂಡಿಗೆಯಲ್ಲಿ ಈ ಸೈನಿಕ ಶಾಲೆ ಸ್ಥಾಪನೆಗೊಂಡಿದೆ. ಸುಮಾರು 66 ಎಕರೆ ಪ್ರದೇಶದಲ್ಲಿ ಶಾಲೆಯ ಚಟುವಟಿಕೆಗಳು ನಡೆಯುತ್ತಿವೆ.

ಸೈನಿಕ ಶಾಲೆಗಳ ಹಿನ್ನೆಲೆ : ಭಾರತದಲ್ಲಿ ಸೈನಿಕ ಶಾಲೆಗಳ ಯೋಜನೆ ಆರಂಭವಾದದ್ದು ಜವಾಹರ್‌ಲಾಲ್ ‌ನೆಹರು ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಅಂದರೆ 1961ರಲ್ಲಿ. ಆಗ ಡಾ. ವಿ.ಕೆ. ಕೃಷ್ಣ ಮೆನನ್‌ ರಕ್ಷಣಾ ಸಚಿವರಾಗಿದ್ದರು. ಬೌದ್ಧಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಸಮರ್ಥರಾದ ತರಬೇತು ಪಡೆದ ಯುವಕರು ಭಾರತೀಯ ಸೈನ್ಯಕ್ಕೆ ಲಭಿಸಬೇಕೆನ್ನುವುದೇ ಇದರ ಹಿಂದಿನ ಮುಖ್ಯ ಉದ್ದೇಶವಾಗಿತ್ತು.

ಸ್ಥಾಪನೆ : ಕೊಡಗು ಸೈನಿಕ ಶಾಲೆ ಸ್ಥಾಪನೆಯಾದದ್ದು ಅಕ್ಟೊಬರ್‌ 18, 2007ರಲ್ಲಿ. ಮೊದಲ ಬ್ಯಾಚ್‌ನಲ್ಲಿದ್ದದ್ದು ಕೇವಲ 63 ವಿದ್ಯಾರ್ಥಿಗಳು. ಇದು ರಾಜ್ಯದ ಎರಡನೇ ಸೈನಿಕ ಶಾಲೆ (ಮೊದಲನೆಯದು ವಿಜಾಪುರ ಸೈನಿಕ ಶಾಲೆ) ಹಾಗೂ ದೇಶದ 22ನೇ ಸೈನಿಕ ಶಾಲೆ. ದೇಶದಲ್ಲಿ  ಪ್ರಸ್ತುತ 25 ಸೈನಿಕ ಶಾಲೆಗಳಿವೆ.

ಆಯ್ಕೆ ಪ್ರಕ್ರಿಯೆ : ಕೊಡಗು ಸೈನಿಕ ಶಾಲೆಗೆ 6ನೇ ತರಗತಿಯಿಂದ ಪ್ರವೇಶ ನೀಡಲಾಗುತ್ತದೆ. 9ನೇ ತರಗತಿಗೂ ಕೂಡ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತವೆ. ಪ್ರತಿವರ್ಷದ ಜನವರಿ ತಿಂಗಳಿನಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.

ಪರೀಕ್ಷೆಯ ವಿಷಯ : 6ನೇ ತರಗತಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಗಣಿತ ಜ್ಞಾನ, ಭಾಷಾ ಸಾಮರ್ಥ್ಯವನ್ನು ಪರೀಕ್ಷಿಸಲು ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ. ಅದೇ ರೀತಿ 9ನೇ ತರಗತಿಗೆ ಸೇರ ಬಯಸುವ ವಿದ್ಯಾರ್ಥಿಗಳ ಗಣಿತ, ವಿಜ್ಞಾನ, ಇಂಗ್ಲಿಷ್‌ಹಾಗೂ ಸಮಾಜ ವಿಜ್ಞಾನ ಈ ವಿಷಯಗಳ ಕುರಿತಂತೆ ಪರೀಕ್ಷೆ ನಡೆಸುತ್ತದೆ. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದರಷ್ಟೇ ಸಾಲದು, ವಿದ್ಯಾರ್ಥಿಗಳು ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲೂ ಫಿಟ್‌ ಆಗಿದ್ದರೆ ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲ್ಪಡುತ್ತಾರೆ.

ವಿದ್ಯಾರ್ಥಿ ವೇತನ : ವಿದ್ಯಾರ್ಥಿಯ ಪೋಷಕರ ವಾರ್ಷಿಕ ವರಮಾನವನ್ನು ಅವಲಂಬಿಸಿ ಕರ್ನಾಟಕ ಸರ್ಕಾರ ವಿದ್ಯಾರ್ಥಿ ವೇತನವನ್ನು ಕೂಡ ಮಂಜೂರು ಮಾಡುತ್ತದೆ.

ಪರೀಕ್ಷಾ ಕೇಂದ್ರಗಳು : ಬೆಂಗಳೂರು, ಹಾಸನ, ಮಂಗಳೂರು, ಶಿವಮೊಗ್ಗ ಹಾಗೂ ಸೈನಿಕ ಶಾಲೆ ಕೊಡಗು ಇಲ್ಲಿ ನಿಗದಿತ ದಿನದಂದು ಪ್ರವೇಶ ಪರೀಕ್ಷೆಗಳು ಏರ್ಪಾಟಾಗಿರುತ್ತವೆ.

ಲಭ್ಯವಾಗುವ ಸೀಟುಗಳು : 5ನೇ ತರಗತಿಗೆ 75 ರಿಂದ 80 ಸೀಟುಗಳು  ಹಾಗೂ 9ನೇ ತರಗತಿಗೆ 20-25 ಸೀಟುಗಳು ಲಭ್ಯ.

ಮೀಸಲಾತಿ : ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಶೇ.67 ರಷ್ಟು ಸೀಟುಗಳು ಮೀಸಲಾಗಿರುತ್ತವೆ. ಇನ್ನುಳಿದ ಶೇ.23 ರಷ್ಟು ಸೀಟುಗಳನ್ನು ದೇಶದ ಇತರೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಒಟ್ಟಾರೆ ಲಭ್ಯವಿರುವ ಸೀಟುಗಳಲ್ಲಿ ಶೇ.15ರಷ್ಟು ಸೀಟುಗಳು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಹಾಗೂ ಶೇ.25ರಷ್ಟು ಸೀಟುಗಳನ್ನು  ಸೈನಿಕರು ಅಥವಾ ನಿವೃತ್ತ ಸೈನಿಕರ ಮಕ್ಕಳಿಗೆ ಮೀಸಲಾಗಿಡುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ