90ರ ದಶಕದ ಕರ್ನಾಟಕದ ಕ್ರಿಕೆಟ್ ಪಾಲಿಗೆ ಅತ್ಯಂತ ಸುವರ್ಣಯುಗ ಎಂದರೂ ತಪ್ಪಾಗದು. ಭಾರತ ತಂಡದಲ್ಲಿ ಸುಮಾರು 5-6 ಆಟಗಾರರು ಕನ್ನಡಿಗರೇ ಇದ್ದಂತಹ ಕಾಲ. ಹೀಗೆ ಕುಂಬ್ಲೆ, ಶ್ರೀನಾಥ್, ವೆಂಕಿ, ದ್ರಾವಿಡ್, ಜೋಷಿ ಮುಂತಾದವರು ದೇಶದ ಪರವಾಗಿ ಭಾರತ ಕ್ರಿಕೆಟ್ ಭಾಗವಾಗಿದ್ದಾಗ, ಕರ್ನಾಟಕದ ತಂಡದ ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ಹಿಡಿದ ಕೆಲವು ಅಗ್ರಗಣ್ಯರಲ್ಲಿ ಇಂದಿನ ನಮ್ಮ ಕಥಾ ನಾಯಕ ವಿಜಯ್ ಭಾರದ್ವಾಜ್ ಸಹಾ ಒಬ್ಬರಾಗಿದ್ದು, ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ

vb7

ಬೆಂಗಳೂರಿನ ಸಂಸ್ಕಾರವಂತ ಸಂಪ್ರದಾಯಸ್ಥರ ಕುಟುಂಬದಲ್ಲಿ 15 ಆಗಸ್ಟ್ 1975ರಂದು ಜನಿಸಿದ ಮಗುವಿಗೆ, ಸ್ವಾತ್ರಂತ್ಯ ದಿನಾಚರಣೆಯ ವಿಜಯೋತ್ಸವದ ದಿನದಂದು ಹುಟ್ಟಿದ ಎನ್ನುವ ಕಾರಣದಿಂದಲೋ ಏನೋ ಅವರ ತಂದೆಯವರಾದ ಶ್ರೀ ರಾಘವೇಂದ್ರರಾವ್ ಅವರು ತಮ್ಮ ಮಗನಿಗೆ ವಿಜಯ್ ಎಂದು ನಾಮಕರಣ ಮಾಡಿರಬಹುದು. ಎನ್. ಆರ್. ಕಾಲೋನಿ ಬಳಿಯ ಸಾಧಾರಣ ವಠಾರದ ಮನೆಯಲ್ಲಿ ವಾಸವಾಗಿದ್ದಂತಹ ಮಧ್ಯಮ ವರ್ಗದ ಕುಟುಂಬ, ದುಡಿಯುವ ಕೈಗಳು ಒಂದಾದರೆ ತಿನ್ನುವ ಕೈಗಳು ಹತ್ತಾರು ಎನ್ನುವಂತಹ ಕುಟುಂಬದಲ್ಲಿ ವಿಜಯ್ ಆವರ ಹಿರಿಯ ಸಹೋದರ ಮತ್ತು ಸಹೋದರಿಯರು ಓದಿನಲ್ಲಿ ಅತ್ಯಂತ ಚುರುಕಾಗಿದ್ದು ತರಗತಿಯಲ್ಲಿ ಮೊದಲ ಸ್ಥಾನ ಕಟ್ಟಿಟ್ಟ ಬುತ್ತಿಯಾದರೆ, ಹುಡುಗು ಬುದ್ದಿಯ ವಿಜಯ್ ಕೇವಲ ಓದಿನಲ್ಲಷ್ಟೇ ಚುರುಕಾಗಿರದೇ, ಆಟ ಪಾಠಗಳಲ್ಲಿಯೂ ಅತ್ಯಂತ ಚುರುಕಾಗಿದ್ದರು. ಅಜ್ಜಿಯ ಮನೆ ಗಾಂಧಿ ಬಜಾರ್ ನಲ್ಲೇ ಇದ್ದ ಇದ್ದ ಕಾರಣ, ಅನೇಕ ಕ್ರಿಕಟಿಗರ ತವರು ಮನೆ ಎನ್ನಬಹುದಾದ National College play groundನಲ್ಲಿ ಬೆಳಗಿನಿಂದ ಸಂಜೆವರೆಗೂ ದಣಿವಿಲ್ಲದೇ ಕ್ರಿಕೆಟ್ ಆಡುವುದು ವಿಜಯ್ ಅವರಿಗೆ ರೂಢಿಯಾಗಿತ್ತು. ಅದೇ ಸಮಯದಲ್ಲಿ ಅವರ ಚಡ್ಡಿ ದೋಸ್ತ್, ಶ್ರೀನಿವಾಸ ಮೂರ್ತಿ ( ಮತ್ತೊಬ್ಬ ರಣಜಿ ಆಟಗಾರ) ಎಲ್ಲರ ಪ್ರೀತಿಯ ಜಾನಿ ಅವರೊಂದಿಗೆ ಟೆನಿಸ್ ಬಾಲ್ ನಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಾ ಬೆಳೆದರು.

WhatsApp Image 2024-11-20 at 23.28.51

ಕನ್ನಡಕಧಾರಿಯಾದರೂ ಇಡೀ ದಿನ ಪೂರ್ತಿ ಗಟ್ಟಿಯಾಗಿ ನಿಂತು ಬ್ಯಾಟಿಂಗ್ ಮಾಡಬಲ್ಲಂತಹ ಕ್ಷಮತೆಯನ್ನು ಬಾಲ್ಯದಿಂದಲೇ ರೂಢಿ ಮಾಡಿಕೊಂಡಿದ್ದ ವಿಜಯ್ ಅವರನ್ನು ಔಟ್ ಮಾಡಲು ಆಗದೇ ಶಪಿಸಿಕೊಂಡ ಬೌಲರ್ ಗಳ ಸಂಖ್ಯೆಗೇನೂ ಕಡಿಮೆ ಇರಲಿಲ್ಲ. ನೋಡಲು ಸಣಕಲು ಶರೀರದ ಪೀಚು ಹುಡುಗನಾಗಿದ್ದರೂ, ಕೇವಲ ರಕ್ಷಣಾತ್ಮಕ ಆಟವಲ್ಲದೇ, ಆಕ್ರಮಣಕಾರಿಯಾಗಿ ಮುನ್ನುಗ್ಗಿ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುವ ಛಾತಿಯನ್ನು ಹೊಂದಿದ್ದಲ್ಲದೇ, ತಂಡಕ್ಕೆ ಅವಶ್ಯಕತೆ ಇದ್ದಾಗ, ಬಲಗೈ ಆಫ್ ಬ್ರೇಕ್ ಬೌಲಿಂಗ್ ಕೂಡಾ ಮಾಡಬಲ್ಲಂತಹ ಆಟಗಾರನಾಗಿದ್ದರಿಂದ ಬಸವನಗುಡಿ, ಎನ್. ಆರ್. ಕಾಲೋನಿ, ಶ್ರೀನಿವಾಸನಗರ ಸುತ್ತಮುತ್ತಲಿನ ಬಹುತೇಕ ತಂಡಗಳ ಪರವಾಗಿ ಟೆನಿಸ್ ಬಾಲ್ ಟೂರ್ನಮೆಂಟ್ಗಳಲ್ಲಿ ಆಡುತ್ತಿದ್ದಲ್ಲದೇ, ವಾರಾಂತ್ಯದಲ್ಲಿ ರಾಜ್ಯಾದ್ಯಂತ ನಡೆಯುತ್ತಿದ್ದ ವಿವಿಧ ಟಿನಿಸ್ ಬಾಲ್ ಟೂರ್ನಿಗಳಲ್ಲಿ ಆಡುವ ಮೂಲಕ ಪ್ರಸಿದ್ಧಿಯನ್ನು ಪಡೆಯುತ್ತಿದ್ದಂತೆಯೇ, ನಿಧಾನವಾಗಿ ಟೆನಿಸ್ ಬಾಲ್ ನಿಂದ ಲೆದರ್ ಬಾಲ್ ಕ್ರಿಕೆಟ್ಟಿಗೆ ಭಡ್ತಿ ಪಡೆದು ಅಲ್ಲಿಯೂ ಸಹಾ ಉತ್ತಮವಾಗಿ ಅಡ ತೊಡಗಿದರು. ಅವರ ಆದೃಷ್ಟವೆಂದರೆ ಅವರು ಅಭ್ಯಾಸ ಮಾಡುತ್ತಿದ್ದ ನ್ಯಾಷಿನಲ್ ಕಾಲೇಜ್ ಮೈದಾನದಲ್ಲೇ ಕರ್ನಾಟಕ ಕಂಡ ಶ್ರೇಷ್ಠ ಆಲೌಂಡರ್ ಆಗಿದ್ದಂತಹ ವಿಜಯ ಕೃಷ್ಣ ಅವರೂ ಸಹಾ ಆಡುತ್ತಿದ್ದು ಅವರನ್ನು ನೋಡುತ್ತಲೇ ವಿಜಯ್ ಸಹಾ ಅವರಂತೆಯೇ ಪ್ರಬುದ್ಧ ಆಲೌಂಡರ್ ಆಟಗಾರರಾಗಿ ರೂಪುಗೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ