ಬುದ್ಧಿಯನ್ನು ಕುಂಠಿತಗೊಳಿಸುವ ಹುನ್ನಾರ

ಒಂದು ಆಂಗ್ಲ ನಾಣ್ಣುಡಿ ಪ್ರಕಾರ, `ಕ್ಯಾಚ್‌ ದೆಮ್ ಯಂಗ್‌' ಅಂತಿದೆ. ಅಂದ್ರೆ, ಮಕ್ಕಳು ಚಿಕ್ಕವರಿರುವಾಗಲೇ ಅವರನ್ನು ವಶಕ್ಕೆ ತೆಗೆದುಕೊಳ್ಳಿ ಅಂತ. ಬೇಸಿಕ್‌ ಲೆವೆಲ್‌ನಲ್ಲಿ ಎಲ್ಲ ಧರ್ಮಗಳೂ ಇದನ್ನೇ ಮಾಡುವುದು. ಹೀಗಾಗಿ ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಅವನ್ನು ಧರ್ಮದ ಅನುಯಾಯಿಗಳು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಆ ಮಕ್ಕಳ ತಾಯಿ ತಂದೆಯರೂ ಅದೇ ನಿಟ್ಟಿನಲ್ಲಿ ಸಾಗಿ ಬಂದಿರುವುದರಿಂದ, ಅವರಿಗೆ ಇದು ಆಪತ್ತಿನ ವಿಷಯ ಎನಿಸದು. ಹೀಗಾಗಿ ಅವರು ಸಂತೋಷದಿಂದಲೇ ತಮ್ಮ ಸಣ್ಣ ಮಕ್ಕಳ ಎಲ್ಲಾ ಸ್ವಾತಂತ್ರ್ಯವನ್ನೂ ಆ ಧರ್ಮಕ್ಕೆ ದಾನ ಮಾಡಿಬಿಡುತ್ತಾರೆ.

ಶಿಕ್ಷಣದ ವಿಷಯದಲ್ಲೂ ಹೀಗೆ ಮಾಡಲಾಗುತ್ತದೆ. ಮಗು ದೊಡ್ಡದಾಗತೊಡಗಿದಂತೆ, ಅದಕ್ಕೆ ವಿವೇಕ ಜಾಗೃತಗೊಳ್ಳುತ್ತದೆ. ತನ್ನದೇ ಸ್ವತಂತ್ರ ನಿರ್ಣಯ ತೆಗೆದುಕೊಳ್ಳಬೇಕೆಂಬ ಆಸೆಯಾಗುತ್ತದೆ. ಸತ್ಯ ಸುಳ್ಳು ಯಾವುದು ಎಂಬುದರ ವ್ಯತ್ಯಾಸ ತಿಳಿಯುತ್ತದೆ. ಆಗ ಧರ್ಮ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ತತ್ತರಿಸುತ್ತದೆ. ಆ ಮಗುವಿಗೆ ಹಲವಾರು ಲಾಲಸೆಗಳನ್ನು ಒಡ್ಡಲಾಗುತ್ತದೆ, ಆ ಬೆಳೆಯುತ್ತಿರುವ ವ್ಯಕ್ತಿಯನ್ನು ನಿಯಂತ್ರಿಸಲಾಗುತ್ತದೆ. ವಿಶ್ವದ 95% ಜನತೆ ಈ ಜಾಲದಲ್ಲಿ ಸಿಲುಕುತ್ತದೆ.

ಡಿಕ್ಟೇಟರ್ಸ್‌ ಸಹ ಇದನ್ನೇ ಬಳಸುತ್ತಾರೆ, ಅವರ ವಿರುದ್ಧ ಯಾರೂ ಸೊಲ್ಲೆತ್ತದಂತೆ ಶಿಕ್ಷಣ ಒದಗಿಸಲಾಗುತ್ತದೆ. ಹಿಂದೆಲ್ಲ ಎಷ್ಟೋ ವರ್ಷಗಳವರೆಗೆ ಕಲಿಯಲಿಕ್ಕೆ ಏನೂ ಇರುತ್ತಿರಲಿಲ್ಲ, ಕೇವಲ ಕೇಳಿಸಿಕೊಂಡದ್ದನ್ನು ಉರುಹೊಡೆದು ಹೇಳುವುದಷ್ಟೇ ಆಗಿತ್ತು. ಆದರೆ ಕಳೆದ 500 ವರ್ಷಗಳಲ್ಲಿ ಮುದ್ರಣ ಮಾಧ್ಯಮ ಬಂದ ಮೇಲೆ, ಯೋಚನಾಧಾಟಿಯಲ್ಲಿ ದೊಡ್ಡ ಕ್ರಾಂತಿ ಉಂಟಾಯಿತು. ಏಕೆಂದರೆ ಧರ್ಮ, ಹಿಟ್ಲರ್‌ ಗಿರಿಯೊಂದೇ ಕೊನೆಯ ಸತ್ಯವಾಗಿರಲಿಲ್ಲ. ಈ ರೀತಿ ವಿವೇಚಿಸುವ ವಿಚಾರಧಾರೆ ಕಾಗದದ ಮೇಲೆ ಸಾಕಾರಗೊಂಡು ಎಲ್ಲೆಡೆ ಮಾನ್ಯತೆ ಪಡೆಯಿತು. ಯಾರು ಇದನ್ನು ಓದಿಕೊಂಡರೋ ಅವರು ತಮ್ಮ ವಿಚಾರಗಳನ್ನು ಹೊಸ ವಿಧಾನದಲ್ಲಿ ಉಣ ಬಡಿಸತೊಡಗಿದರು. ಕಳೆದ 500 ವರ್ಷಗಳಲ್ಲಿ ವಿಶ್ವ ಕಂಡ ಪ್ರಗತಿ, ಅದು ಈ ಕಾಗದದ ಕುದುರೆಗಳಿಂದಾಗಿ ಎಂದರೆ ಅತಿಶಯೋಕ್ತಿಯಲ್ಲ. ಅದು ಈ ಧರ್ಮದ ಅಧಿಕಾರವನ್ನು ಅಲುಗಾಡಿಸಿತು, ಹಿಟ್ಲರ್‌ ಗಿರಿಗೆ ಕೊನೆ ಹಾಡಿತು. ಇದರಿಂದ ಪ್ರಜಾಪ್ರಭುತ್ವವೇನೋ ಸಾಕಾರಗೊಂಡಿತು, ಜೊತೆಯಲ್ಲಿ ಅಧುನಿಕ ವಿಜ್ಞಾನ, ತಂತ್ರಜ್ಞಾನ, ಸತ್ಯ ಸಾಕ್ಷಾತ್ಕಾರಗಳು ಹೊಸ ಸ್ವಾತಂತ್ರ್ಯಕ್ಕೆ ಹುಟ್ಟುಹಾಕಿದವು. ಇದು ಧರ್ಮವನ್ನು ಬೆಚ್ಚಿ ಬೀಳಿಸಿದೆ, ಬಹಳಷ್ಟು....! ಆದರೆ ಧರ್ಮದ ಅಧಿಕಾರ ಬಲು ಸಮರ್ಥವಾದುದು. ಹೀಗಾಗಿ ಅದು ಮತ್ತೆ ಕಾಗದದ ಮೇಲಿನ ಮುದ್ರಣಕ್ಕೆ ಫಿಲ್ಟರ್‌ ಹಾಕತೊಡಗಿತು. ಅದನ್ನೇ ಪ್ರಚಾರಕರ ಕೈಗಳಿಗೆ ವರ್ಗಾಯಿಸಿತು. ಈ ಪ್ರಚಾರಕರೇ ಧರ್ಮದ ಪ್ರಮುಖ ಸೈನಿಕರು, ಹೀಗಾಗಿ ಇವರು ಬಾಚಿಕೊಂಡ ಲೂಟಿಯಲ್ಲಿ ಪಾಲು ಹಂಚುತ್ತಾರೆ.

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಶಿಕ್ಷಣ ನೀತಿ 2020 ಇದೇ ಪ್ರಯಾಸದ ಒಂದು ಹೊಸ ಹೆಜ್ಜೆ. ಇದರ ಉದ್ದೇಶ ತರ್ಕ, ಪರೀಕ್ಷೆಗಳನ್ನು ರದ್ದುಗೊಳಿಸಿ ಮಕ್ಕಳನ್ನು ಮೊದಲನೇ ತರಗತಿಯಿಂದಲೇ ಸಂಸ್ಕೃತಿ, ಸಂಸ್ಕಾರಗಳ ಹೆಸರಿನಲ್ಲಿ ನಮ್ಮ ಈಗಿನ ಸಮಾಜವನ್ನು 2000 ವರ್ಷಗಳ ಹಿಂದಕ್ಕೆ ಎಳೆದೊಯ್ಯುವ ಹುನ್ನಾರವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ