ಪ್ರತಿ ತಿಂಗಳು ಮುಟ್ಟಿನ ಆ 5-6 ದಿನಗಳು ಮಹಿಳೆಯರಿಗೆ ಬಹಳ ಘೋರ ಎಂಬಂತೆ ಭಾಸವಾಗುತ್ತವೆ. ಈ ದಿನಗಳಲ್ಲಿ ಅವರಿಗೆ ಸ್ನಾನ ಮಾಡಲು ಕೊಡದೇ ಇರುವುದು, ಮಸಾಲೆಯುಕ್ತ ಪದಾರ್ಥ ಸೇವಿಸಲು ಕೊಡದಿರುವುದು, ಉಪ್ಪಿನಕಾಯಿ ಡಬ್ಬ ಮುಟ್ಟಲು ಕೊಡದಿರುವಂತಹ ಹಲವು ರೀತಿ ರಿವಾಜುಗಳಿವೆ. ಮುಟ್ಟಿನ ದಿನಗಳಲ್ಲಿ ಮಹಿಳೆಯರು ಬಾಹ್ಯ ಜಗತ್ತಿನಿಂದ ದೂರ ಇರಬೇಕೆಂದು ಸಮಾಜ ಹಾಗೂ ಧರ್ಮ ಅಪೇಕ್ಷಿಸುತ್ತದೆ.

ಸ್ತ್ರೀರೋಗ ತಜ್ಞರು ಈ ಕುರಿತಂತೆ ಹೇಳುವುದೇನೆಂದರೆ, ಈ ಅವಧಿಯಲ್ಲಿ ಮಹಿಳೆಯರು ತಮ್ಮ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡುವುದರ ಮೂಲಕ ಅವರು ಪ್ರತಿಯೊಂದು ಬಗೆಯ ಕೆಲಸ ಕಾರ್ಯಗಳಲ್ಲಿ ತೊಡಗಬಹುದು. ಇತ್ತೀಚಿನ ಮಕ್ಕಳಲ್ಲಿ ಮುಟ್ಟನ್ನು ಸಮರ್ಥವಾಗಿ ನಿರ್ವಹಿಸಲು ಒಳ್ಳೆಯ ಗುಣಮಟ್ಟದ ಸ್ಯಾನಿಟರಿ ಪ್ಯಾಡ್‌ಗಳು ಬಂದಿವೆ. ಅವುಗಳಿಂದಾಗಿ ಮಹಿಳೆಯರು ಧರಿಸಿದ ಬಟ್ಟೆಗಳಿಗೆ ಯಾವುದೇ ಬಗೆಯ ಕಲೆಗಳು ಉಂಟಾಗುವುದಿಲ್ಲ. ಹಿಂದಿನ ದಿನಗಳಲ್ಲಿ ಮುಟ್ಟನ್ನು ತಡೆಯಲು ಮಹಿಳೆಯರು ಸಾಮಾನ್ಯ ಬಟ್ಟೆಯಯನ್ನೇ ಧರಿಸುತ್ತಿದ್ದರು. ಅದರಿಂದಾಗಿ ಅವರ ಬಟ್ಟೆಗಳಿಗೆ ಕಲೆಗಳು ಉಂಟಾಗುತ್ತಿದ್ದವು. ಅಂತಹ ಬಟ್ಟೆಗಳನ್ನು ಧರಿಸಿ ಅವರಿಗೆ ಮುಜುಗರ ಉಂಟಾಗುತ್ತಿತ್ತು.

ಮುಟ್ಟಿನ ಕುರಿತಾದ ಜಾಗೃತಿ

ಮುಟ್ಟು ಎಂತಹ ಒಂದು ವಿಷಯವೆಂದರೆ, ಅದು ಕೇವಲ ಮಹಿಳೆಗಷ್ಟೇ ವಿಶೇಷವಲ್ಲ, ದೇಶ ಹಾಗೂ ಸಮಾಜಕ್ಕೂ ಅದು ಗಂಭೀರ ವಿಷಯವಾಗಿದೆ. ಮುಟ್ಟಿನಿಂದಾಗಿ ಮಹಿಳೆಯೊಬ್ಬಳು ತಾಯಿಯಾಗಲು ಸಾಧ್ಯವಾಗುತ್ತದೆ. ಅದರಿಂದ ಸಮಾಜ ಮುಂದೆ ಸಾಗುತ್ತದೆ ಹಾಗೂ ದೇಶ ಪ್ರಗತಿ ಕಾಣುತ್ತದೆ. ಧರ್ಮದ ಗುತ್ತಿಗೆದಾರರು ಹಾಗೂ ಸಂಪ್ರದಾಯವಾದಿಗಳು ಮುಟ್ಟಿನ ನಿರ್ಲಕ್ಷ್ಯ ಮಾಡಿದರು. ಅದರ ಬಗ್ಗೆ ಮಾತನಾಡುವುದನ್ನು ಅವರು ಸರಿ ಎಂದು ಭಾವಿಸುವುದಿಲ್ಲ.

ಮುಟ್ಟಿನ ದಿನಗಳಲ್ಲಿ ಮಹಿಳೆಯರನ್ನು ಅಸ್ಪೃಶ್ಯರಂತೆ ಮನೆಯ ಒಂದು ಮೂಲೆಯಲ್ಲಿರುವಂತೆ ಮಾಡುತ್ತಾರೆ. ಈಗಲೂ ದೇಶದ ಶೇ.70ರಷ್ಟು ಮಹಿಳೆಯರು ಮುಟ್ಟಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಉಪಯೋಗಿಸುವುದಿಲ್ಲ. ಇದರಿಂದಾಗಿ ಅವರು ಹಲವು ರೋಗಗಳಿಗೆ ತುತ್ತಾಗುತ್ತಾರೆ. ಬಂಜೆತನದ ಸಮಸ್ಯೆ ಕೂಡ ಎದುರಿಸಬೇಕಾಗಿ ಬರಬಹುದು.

ಪ್ರತಿ ವರ್ಷ ಮೇ 26ರಂದು ವಿಶ್ವ ಮುಟ್ಟಿನ ಸುರಕ್ಷತಾ ದಿನವನ್ನಾಗಿ ಆಚರಿಸಲಾಗುತ್ತದೆ. ಮುಟ್ಟು ಜೀವನದ ಸುರಕ್ಷಾ ಚಕ್ರವಾಗಿದೆ. ಇದು ದೇಹದ ಸ್ಥಿತಿಗತಿಯನ್ನು ಬಿಂಬಿಸುತ್ತದೆ. ಅದರ ಬಗ್ಗೆ ನಿಮಗೆ ಅರಿವಿರಬೇಕು. ಏನಾದರೂ ಸಂದೇಹಗಳಿದ್ದರೆ ಸ್ತ್ರೀರೋಗ ತಜ್ಞರ ಸಲಹೆ ಪಡೆಯಿರಿ. ಮುಟ್ಟಿನ ದಿನಗಳಲ್ಲಿ ಮಹಿಳೆಯರನ್ನು ಅಸ್ಪೃಶ್ಯರಂತೆ ದೂರ ಇರಿಸಬೇಡಿ. ಮುಟ್ಟಿನ ಬಗ್ಗೆ ಇವರು ಕಂದಾಚಾರಗಳನ್ನು ಬದಿಗಿಡಿ. ಮುಟ್ಟು ಯಾವುದೇ ರೋಗವಲ್ಲ. ಅದು ಮಹಿಳೆಯೊಬ್ಬಳ ಜೀವನಕ್ಕೆ ಅತ್ಯವಶ್ಯ.

ಮುಟ್ಟಿನ ಈ ದಿನಗಳು ಮಹಿಳೆಗೆ ಪ್ರತಿಯೊಂದು ರೀತಿಯಲ್ಲಿ ಕಷ್ಟಕರ ಆಗಿರುತ್ತವೆ. ಈ ದಿನಗಳಲ್ಲಿ ಅವರ ದೇಹದಲ್ಲಿ ಹಾರ್ಮೋನುಗಳ ಏರುಪೇರು ಉಂಟಾಗುತ್ತದೆ. ಆ ಕಾರಣದಿಂದ ಅವರಲ್ಲಿ ಸಿಡಿಮಿಡಿತನ ಹೆಚ್ಚುತ್ತದೆ. ಮುಟ್ಟಿನ ದಿನಗಳಲ್ಲಿ ಹೊಟ್ಟೆನೋವು ಕೂಡ ಅವರಿಗೆ ಸತಾಯಿಸುತ್ತದೆ. ಮುಟ್ಟಿನ ದಿನಗಳಲ್ಲಿ ಎಲ್ಲಕ್ಕೂ ತೊಂದರೆದಾಯಕ ಸಂಗತಿಯೆಂದರೆ, ಸ್ವಚ್ಛತೆ ಮತ್ತು ಸುರಕ್ಷತೆಯದ್ದಾಗಿರುತ್ತದೆ. ಗರ್ಭಕೋಶದಿಂದ ಸ್ರಾವವಾಗುವುದನ್ನು ತಡೆಯುವ ಹಾಗೂ ಜನರ ದೃಷ್ಟಿಯಿಂದ ಬಚ್ಚಿಡುವ ಎಂತೆಂಥಹ ಪ್ರಯೋಗಗಳು ನಡೆಯುತ್ತವೆ ಎಂದರೆ, ಅದರಿಂದಾಗಿ ಮಹಿಳೆ ಅನಾರೋಗ್ಯಕ್ಕೆ ತುತ್ತಾಗುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ