ಮಾತನಾಡುವ ಚಿತ್ರಕಲೆ : ಪೇಂಟಿಂಗ್‌ನ ಮಾಧ್ಯಮದಿಂದ ಮಾನವ ಸಂವೇದನೆಗಳನ್ನು ಬೆಳಕಿಗೆ ತರುವುದು ಕಲಾವಿದರ ಜನಪ್ರಿಯ ಕೆಲಸ. ಹೀಗಾಗಿ ಬಹಳ ನೋವು ತುಂಬಿದ ಭಾವವನ್ನು ಕಂಗಳಲ್ಲೇ ತೋರ್ಪಡಿಸುವಂತೆ ಇಲ್ಲಿ ಚೀನಾದ ಪೇಂಟರ್‌ ಒಬ್ಬ ಕಟ್ಟಿಗೆ ಮೇಲೆ ಪೇಂಟಿಂಗ್‌ ಬಿಡಿಸಿದ್ದಾನೆ. ಈ ಕಲಾಕೃತಿ ಸಿಂಗಾಪುರ್‌ನ ಆರ್ಟ್‌ಫೇರ್‌ನಲ್ಲಿ ಅಪಾರ ಮನ್ನಣೆ ಗಳಿಸಿತು.

ಆಟೋಟಗಳಲ್ಲಿ ಮಸ್ತಿ : ಈ ಬಾರಿ ಜನವರಿಯಲ್ಲಿ ಯೂರೋಪ್‌ ಪೂರ್ತಿ ಬಹಳ ಶೀತ ಆವರಿಸಿ ಎಲ್ಲೆಲ್ಲೂ ಮಂಜಿನ ಮಳೆ ಸುರಿದಿತ್ತು. ಹೀಗಾದರೂ ಜನ ತಣ್ಣೀರಿನಲ್ಲಿ ಈಜಾಟ ಬಿಡಲಿಲ್ಲ. ಅಮೆರಿಕಾದ ಬ್ರೂಕ್ಲೀನ್‌ನ ಕೋನೀ ಐಲೆಂಡ್‌ನಲ್ಲಿ ಪ್ರತಿ ವರ್ಷ ಇದಕ್ಕೆಂದೇ ಮಂಜು ಸುರಿಯುವ ದಿನಗಳಲ್ಲಿ ವಿಶೇಷ ಸ್ಪರ್ಧೆ ಏರ್ಪಡಿಸುತ್ತಾರೆ. ಕೊರೆಯುವ ಚಳಿಗೆ ಒಂದಿಷ್ಟೂ ಅಂಜದೆ ಜನ ಮೋಜು ಮಸ್ತಿ ಮಾಡುತ್ತಿರುವುದನ್ನು ನೋಡಿ.

ಕಲೆಯನ್ನು ಗಮನಿಸಿ ಉಳಿದದ್ದನ್ನಲ್ಲ : ಹೋಟೆಲ್‌ನ ಟ್ರಾಲಿಯಲ್ಲಿ ಸುಂದರಿಯೊಬ್ಬಳು ತನ್ನ ಡ್ಯಾನ್ಸ್ ಪ್ರದರ್ಶಿಸಿದರೆ ಅದಕ್ಕಿಂತ ರೋಚಕ ಮಜಾ ಇನ್ನೇನಿದ್ದೀತು? ರಷ್ಯಾದ ಸರ್ಕಸ್‌ ಕಲಾವಿದರು ಹೀಗೆ ಆಸ್ಟ್ರೇಲಿಯಾದಲ್ಲಿ ತಮ್ಮ ಕಲೆ ಪ್ರದರ್ಶಿಸಿದರು, ಇದರಲ್ಲಿ ಹಗ್ಗಕ್ಕೆ ಕಟ್ಟಿದ ಟ್ರಾಲಿಯಲ್ಲಿ ಈ ಕಲೆ ಪ್ರದರ್ಶನಗೊಂಡಿತು.

ಮನಮೋಹಕ ಮುಗುಳ್ನಗು : ಇಂಡೋನೇಷ್ಯಾದಲ್ಲಿ ಪ್ರವಾಸಿಗರ ಸ್ವರ್ಗ ಎನಿಸಿರುವ ಬಾಲಿಯಲ್ಲಿ ಸುಂದರ ಸಮುದ್ರ ತೀರಗಳ ಸೊಬಗು ಬಿಟ್ಟರೆ ಬೇರೇನು ಪ್ರಸಿದ್ಧಿ ಎಂದರೆ, ಅಲ್ಲಿನ ನರ್ತಕಿಯರು ತಮ್ಮ ಮುದ್ರೆಗಳು ಹಾಗೂ ಭಾವಭಂಗಿಗಳಿಂದ ಪ್ರವಾಸಿಗರ ಮನಗೆಲ್ಲುತ್ತಾರೆ. ಆದರೆ ಇವರ ಮೋಹಕ ಮುಗುಳ್ನಗುವನ್ನು ಸ್ವೀಕೃತಿ ಎಂದುಕೊಂಡು ಪ್ರವಾಸಿಗರು ಬೇರೆ ವಿಧದಲ್ಲಿ ಯೋಚಿಸಿದರೆ ತೊಂದರೆ ತಪ್ಪಿದ್ದಲ್ಲ, ಏಕೆಂದರೆ ಇವರುಗಳು `ಟಚ್‌ ಮಿ ನಾಟ್‌’ ಟೈಪಿನವರು.

ಜನತೆಯ ಭರವಸೆ : ಸಾಯಿ ಇಂಗ್ವೇನ್‌ ಮತ್ತೊಬ್ಬ ಮಹಿಳಾ ರಾಷ್ಟ್ರಾಧ್ಯಕ್ಷೆ ಎನಿಸಿದ್ದಾರೆ. ತೈವಾನ್‌ನ ಹೊಸ ಚುನಾವಣೆಯಲ್ಲಿ ಆಕೆ ಗೆದ್ದು ಬಂದರು ಹಾಗೂ ಚೀನೀ ಆಡಳಿತಗಾರರ ನಿದ್ದೆಗೆಡಿಸಿದರು. ಚೀನಾ ತೈವಾನ್‌ನ್ನು ತನ್ನ ದೇಶದ ಭಾಗವೆಂದೇ ನಂಬಿದೆ, ಆದರೆ 1945 ರಿಂದ ತೈವಾನ್‌ ಬೇರೆ ದೇಶವಾಗಿ ಪ್ರಗತಿ ಸಾಧಿಸುತ್ತಿದೆ.

ಎಲ್ಲರಿಗಿಂತ ವಿಭಿನ್ನ : ಇವರು ಲಂಡನ್ನಿನ ಮೇಯರ್‌ ಸಾಹೇಬರು, ಬೆಲೂನ್‌ ಆಕಾರದಲ್ಲಿ! ಒಂದು ಪೆರೇಡ್‌ನಲ್ಲಿ ಲಂಡನ್ನಿನ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿದ್ದಾರೆ. ನಮ್ಮ ದೇಶದ ಪ್ರತಿ ರಾಜ್ಯದಲ್ಲೂ ಮೇಯರ್‌ಗಳ ಇಂಥ ಮೆರವಣಿಗೆ ಆಗಬೇಕು, ಆದರೆ ಬೆಲೂನ್‌ ಬದಲು ಕಸದ ರಾಶಿಯಲ್ಲಿ….. ಬೆಂಗಳೂರಿನಿಂದ ದೆಹಲಿವರೆಗೂ ಎಲ್ಲಾ ಮಹಾನಗರಗಳೂ ಕಸದ  ಸಾಮ್ರಾಜ್ಯವಾಗಿದೆ.

ಬೀದಿ ಕುಣಿತದ ಮಜವೇ ಬೇರೆ : ದಕ್ಷಿಣ ಅಮೆರಿಕಾದ ಕೊಲಂಬಿಯಾದ ಕಾಲೀ ನಗರದಲ್ಲಿ ಇತ್ತೀಚೆಗೆ ಇಂಥ ಸಾಲ್ಸಾ ಕುಣಿತದ ಸ್ಪರ್ಧೆ ನಡೆದಾಗ, 1 ಮೈಲಿಯವರೆಗೂ ಜನ ತಂಡೋಪತಂಡವಾಗಿ ಕುಣಿದದ್ದೇ ಕುಣಿದದ್ದು!

ಧರ್ಮದ ಹೆಸರಿನಲ್ಲಿ : ಜಪಾನಿನಲ್ಲಿ ಇಂದಿಗೂ ಎಷ್ಟೇ ಆಧುನಿಕ ಯಂತ್ರಗಳಿದ್ದರೂ, ಹೊಸ ವರ್ಷಾಚರಣೆಗಾಗಿ ಅಲ್ಲಿ ಅಕ್ಕಿಯನ್ನು ನೆನೆಹಾಕಿ ಹೀಗೆ ಬಲು ಹಳೆಯ ಶೈಲಿಯಲ್ಲಿ ಅದನ್ನು ಕುಟ್ಟಿ, ಹಿಟ್ಟು ಜರಡಿ ಹಿಡಿದು ಮೋಮೋಸ್‌ (ಹಬೆಯ ಮೋದಕ) ಮಾಡಿ ಮಂದಿರಗಳಲ್ಲಿ ಹಂಚಲಾಗುತ್ತದೆ. ಇಲ್ಲಿ ರುಚಿಗಿಂತಲೂ ಹಠ ಧರ್ಮಕ್ಕೆ ಹೆಚ್ಚಿನ ಪ್ರಾಧಾನ್ಯತೆ, ಎಲ್ಲ ಧರ್ಮಗಳಲ್ಲೂ ಇರುವಂತೆ!

Tags:
COMMENT