ಇತರರೊಡನೆ ಸಂವಹನ ನಡೆಸಲು ಪ್ರತಿಯೊಬ್ಬರಿಗೂ ಭಾಷೆಯ ಅಗತ್ಯವಿರುತ್ತದೆ. ಜಗತ್ತಿನಲ್ಲಿ ಸಾವಿರ ಸಂಖ್ಯೆಯಲ್ಲಿ ಭಾಷೆಗಳಿದ್ದು ನೂರಾರು ರೀತಿಯಲ್ಲಿ ಸಂವಹನ ನಡೆಯುತ್ತದೆ, ಆದರೆ ಕೆಲವೊಮ್ಮೆ ಕೆಲವರಿಗೆ ಈ ಸಂಹನವೇ ಸವಾಲಾಗುತ್ತದೆ. ಶಬ್ದಗಳೆಂದರೇನು? ಭಾಷೆ ಎಂದರೇನು? ಮಾತು ಎಂದರೇನೆಂದೇ ಅರಿಯದ ಹಲವಾರು ಜನರು ನಮ್ಮ ನಡುವೆ ಇದ್ದಾರೆ. ಕಿವಿ ಕೇಳಿಸದ, ಮಾತನಾಡಲೂ ಬಾರದ ಇಂತಹ ಜನರು ಇತರರೊಡನೆ ಬೆರೆತು ಬಾಳುವುದು ಬಲು ಕಷ್ಟಕರ.

ಇಂತಹ ಸಂಪರ್ಕ ನ್ಯೂನತೆಯುಳ್ಳವರನ್ನು ಸಲಹುತ್ತಾ, ಅವರನ್ನೂ ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವುದಕ್ಕೆ ಶ್ರಮಿಸುತ್ತಿರುವ ಸಂಸ್ಥೆಯೊಂದು ಬೆಂಗಳೂರಿನಲ್ಲಿದೆ. ಅದುವೇ `ಎಸ್‌.ಜಿ.ಎಸ್‌. ವಾಗ್ದೇವಿ ಸಂಪರ್ಕ ನ್ಯೂನತೆಯುಳ್ಳವರ ಪುನಶ್ಚೇತನ ಕೇಂದ್ರ.'

ಇದರ ಸಾರಥ್ಯ ವಹಿಸಿದವರು ಅತ್ಯುತ್ತಮ ಶಿಕ್ಷಕಿ ರಾಜ್ಯ ಪ್ರಶಸ್ತಿ ವಿಜೇತೆ ಡಾ. ಶಾಂತಾ ರಾಧಾಕೃಷ್ಣ. ಮೂಲತಃ ಮೈಸೂರಿನವರಾದ ಶಾಂತಾ ರಾಧಾಕೃಷ್ಣ ಮೈಸೂರಿನ ಅಖಿಲ ಭಾರತ ವಾಕ್‌ ಶ್ರವಣ ವಿಶ್ವ ವಿದ್ಯಾನಿಲಯದಲ್ಲಿ  ವಾಕ್‌ ಶ್ರವಣ ವಿಷಯದಲ್ಲಿ ಎಂ.ಎಸ್ಸಿ. ಪದವಿ ಪಡೆದುಕೊಂಡರು. ಕೊಯಂಬತ್ತೂರಿನಲ್ಲಿ ಸ್ಪೀಚ್‌ ಥೆರಪಿಸ್ಟ್ ಆಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಇವರು, 1973 ರಿಂದಲೂ ವಾಕ್‌ ಶ್ರವಣ ಪೀಡಿತ ಮಕ್ಕಳ ಪುನಶ್ಚೇತನಕ್ಕಾಗಿ ಶಾಂತಾ ತಮ್ಮ ಜೀವನ ಮುಡಿಪಾಗಿಟ್ಟರು. 1985-86ರಲ್ಲಿ ಅಮೆರಿಕಾದ ಓಕ್ಲಹಾಮಾ ವಿಶ್ವವಿದ್ಯಾನಿಲಯದಲ್ಲಿ ಸ್ಪೀಚ್‌ ಲ್ಯಾಂಗ್ವೇಜ್‌ನಲ್ಲಿ ಎಂ.ಎಸ್ಸಿ. ತರಬೇತಿಯನ್ನು ಮುಗಿಸಿದರು. ಅಮೆರಿಕನ್‌ ಸ್ಪೀಚ್‌ ಲ್ಯಾಂಗ್ವೇಜ್‌ ಅಸೋಸಿಯೇಶನ್‌ನಿಂದ ಕ್ಲಿನಿಕ್‌ ಕಾಂಪಿಟೆನ್ಸ್ ಸರ್ಟಿಫಿಕೇಟ್ ಪಡೆದಿರುವ ಇವರು 2010ರಲ್ಲಿ ಎಸ್‌. ್ಯಾಸಾದಿಂದ ಪಿ.ಎಚ್‌.ಡಿ. ಪದವಿ ಗಳಿಸಿದ್ದಾರೆ.

ಅಮೆರಿಕಾಗೆ ತೆರಳುವ ಮೊದಲು ಶಾಂತಾ ದೆಹಲಿಯ ಬಲವಂತ ರಾಯ್‌ ವಿದ್ಯಾ ಭವನದಲ್ಲಿ ಸಂಶೋಧನಾ ತರಬೇತುದಾರರಾಗಿ ಕೆಲವು ಕಾಲ ಸೇವೆ ಸಲ್ಲಿಸಿದ್ದರು. ಇದಲ್ಲದೆ 1983ರಲ್ಲಿ ಬೆಂಗಳೂರಿನಲ್ಲಿ ವಾಕ್‌ ಶ್ರವಣ ದೋಷವುಳ್ಳ ಮಕ್ಕಳಿಗಾಗಿ ಸಂಯುಕ್ತ ಸಂಸ್ಥೆಯೊಂದನ್ನು ಸ್ಥಾಪನೆ ಮಾಡಿದ್ದರು. ಹೀಗೆ ಸಂಸ್ಥೆಯೊಂದನ್ನು ಸ್ಥಾಪಿಸಿದ ತರುವಾಯ ಇಂತಹ ಮಕ್ಕಳ ತರಬೇತಿಗೆ ಅಗತ್ಯವಾದ ಪರಿಕರಗಳ ಕೊರತೆ ಇವರನ್ನು ಕಾಡಿತ್ತು. ಆಗ ತಾವೇ ಖುದ್ದಾಗಿ ಮಕ್ಕಳಿಗೆ ಓದಲೂ, ಹೇಳಿಕೊಡಲೂ ಅನುಕೂಲಕರಾದ ಪಠ್ಯ ಕ್ರಮವನ್ನು ಅವರೇ ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ತಯಾರಿಸಿದರು.

``ಸಂವಹನ ತೊಂದರೆಯುಳ್ಳರನ್ನು ಗುರುತಿಸಿ ಅವರಿಗೆ ಅಗತ್ಯ ತರಬೇತಿಗಳನ್ನು ನೀಡಬೇಕಾಗಿದೆ. ಉಳಿದ ಸಾಮಾನ್ಯ ಮಕ್ಕಳಂತೆಯೇ ಇವರಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಅವರು ಸ್ವತಂತ್ರವಾಗಿ ಬದುಕುವಂತೆ ಮಾಡುವುದೇ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ,'' ಎನ್ನುವ ಶಾಂತಾ, ``ಮಕ್ಕಳಲ್ಲಿನ ಕಿವುಡುತನವನ್ನು ಆದಷ್ಟು ಬೇಗನೆ ಗುರುತಿಸಿದ್ದರೆ ಒಳ್ಳೆಯದು. ಮಕ್ಕಳು ಮಾತು ಕಲಿಯುವ ಅವಧಿ ಎಂದರೆ ಮೂರು ತಿಂಗಳಿನಿಂದ ಎರಡು ವರ್ಷಗಳ ನಡುವೆ ಅವರಿಗೆ ಸರಿಯಾದ ಶ್ರವಣೋಪಕರಣ ತೊಡಿಸಿ ಮಾತನಾಡಲು, ಕೇಳಲು ಸೂಕ್ತವಾದ ತರಬೇತಿಯನ್ನು ಕೊಡಬೇಕಾಗುತ್ತದೆ,'' ಎನ್ನುತ್ತಾರೆ.

ಈ ಸಂಸ್ಥೆಯಲ್ಲಿ ಮಕ್ಕಳಿಗಷ್ಟೇ ಅಲ್ಲದೆ, ಇಂತಹ ಮಕ್ಕಳ ತಾಯಂದಿರಿಗೂ ತರಬೇತಿಯನ್ನು ನೀಡಲಾಗುತ್ತದೆ. ಎರಡು ವರ್ಷಗಳ ಒಳಗಿನ ಮಗುವನ್ನು ತಾಯಿ ಹೇಗೆಲ್ಲಾ ಮಾತನಾಡಿಸಬೇಕು? ಮಗುವಿನೊಡನೆ ಹೇಗೆ ವರ್ತಿಸಬೇಕು ಎನ್ನುವುದನ್ನು ಹೇಳಿಕೊಡಲಾಗುತ್ತದೆ. ಈ ತರಬೇತಿಗಾಗಿ ರಾಜ್ಯ, ಹೊರ ರಾಜ್ಯಗಳಿಂದ ತಾಯಂದಿರು ಇಲ್ಲಿಗೆ ಬರುತ್ತಾರೆ. ಶಾಂತಾ ಹೇಳುವಂತೆ, ``ತಾಯಿಯೇ ಮೊದಲ ಗುರುವಾಗಿರುವುದರಿಂದ ಇಂತಹ ನ್ಯೂನತೆಯುಳ್ಳ ಮಕ್ಕಳನ್ನು ತಾಯಿ ಸರಿಯಾದ ಬಗೆಯಲ್ಲಿ ತರಬೇತುಗೊಳಿಸಿದ್ದಾದರೆ ಮಕ್ಕಳು ಉತ್ತಮ ಬೆಳವಣಿಗೆ ಹೊಂದುತ್ತಾರೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ