ಮಾಡೆಲ್ ಆಕರ್ಷಕವೋ ಅವಳುಡುಗೆಯ ಡಿಸೈನೋ? : ಬಿಚ್ಚಮ್ಮಂದಿರಿಗಾಗಿಯೇ ವಿನ್ಯಾಸಗೊಳಿಸಲಾದ ಈ ಗ್ಲಾಮರಸ್ ಡ್ರೆಸ್‌ನ್ನು ಕಳೆದ ತಿಂಗಳು ಮುಂಬೈನಲ್ಲಿ ನಡೆದ ಒಂದು ಫ್ಯಾಷನ್ ಶೋನಲ್ಲಿ ಪ್ರದರ್ಶಿಸಲಾಯಿತು. ಇದರ ಡಿಸೈನರ್ ಮಾಲಿನಿ ರಮಾನಿ ಇರಬಹುದು, ಆದರೆ ಅದನ್ನು ಧರಿಸಿದ್ದರಿಂದ ಮತ್ತಷ್ಟು ಆಕರ್ಷಕವಾಗಿ ಕಾಣಿಸುತ್ತಿರುವ ಮಾಡೆಲ್ ಗಳಿಂದ ಪ್ರೇಕ್ಷಕರು ಕಣ್ಣು ಕೀಳದಾದರು.
ಹುಚ್ಚಿನ ಬೇಟೆಗೆ ಬಲಿಯಾಗುತ್ತಿರುವ ನಿರ್ದೋಷಿಗಳು : ಅಮೆರಿಕಾದಲ್ಲಿ ನಿರಾಯುಧ, ನಿರ್ದೋಷಿ ಪ್ರಜೆಗಳನ್ನು ನಿರ್ದಯವಾಗಿ ಹುಚ್ಚರಿಂದ ಕೊಲ್ಲಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ 250ಕ್ಕೂ ಹೆಚ್ಚು ಮಂದಿ ಮುಗ್ಧ ಸಾರ್ವಜನಿಕರನ್ನು ಹುಚ್ಚರು ವಿನಾಕಾರಣ ಕೊಂದು ಹಾಕಿದ್ದಾರೆ. ಡಿಸೆಂಬರ್ 13ರಂದು ಕೊಲೆರೆಡೊ ರಾಜ್ಯದಲ್ಲಿ ಗುಂಡುಹಾರಿಸಿದ್ದರಿಂದ ಇಬ್ಪರು ಮೂವರು ಪ್ರಾಣಾಂತಿಕ ಪೆಟ್ಟು ತಿಂದರೆ, ಗುಂಡು ಹಾರಿಸಿದ ತಾನೂ ಸತ್ತ. ಯಾಕೋ ಅಮೆರಿಕಾ ತನ್ನ ಪ್ರಜೆಗಳಿಗೆ ಶಾಂತಿಮಂತ್ರ ಬೋಧಿಸುವಲ್ಲಿ ವಿಫಲವಾಗುತ್ತಿದೆ.
ಕದನವಲ್ಲ.... ಕೇವಲ ನೋಡಲಿಕ್ಕಾಗಿ : ಓ.... ನೀವು ತಪ್ಪು ತಿಳಿದಿರಿ, ಇದು ಗೂಳಿ ಕಾಳಗದ ದೃಶ್ಯವಲ್ಲ. ಇದು ಕೇವಲ `ಟೆಕ್ಸಾಸ್ ಲಾಂಗ್ ಹಾರ್ನ್ಸ್' ಎಂಬ ಕ್ರೀಡಾ ಬಳಗದ ಲಾಂಛನವಷ್ಟೆ. ಬೇಸ್ ಬಾಲ್ ಮ್ಯಾಚ್‌ನ ಕಾರಣ ಇದನ್ನು ಕೇವಲ ತಂಡದ ಮನೋಬಲ ಹೆಚ್ಚಿಸಲಷ್ಟೇ ಮೈದಾನದಲ್ಲಿ ಇಳಿಸಲಾಗಿದೆ.
ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಿ : ಅಮೆರಿಕಾ ಅತ್ಯುನ್ನತ, ಸುಶಿಕ್ಷಿತ, ಸುಭಿಕ್ಷ ರಾಷ್ಟ್ರ..... ಇತ್ಯಾದಿಗಳೇನೇ ಇರಲಿ, ಅಲ್ಲಿಯೂ ಅಪರಾಧಗಳ ಸರಮಾಲೆ ಕಡಿಮೆ ಏನಿಲ್ಲ. ಇಲ್ಲಿಯವರೆಗೂ ನ್ಯೂಯಾರ್ಕ್ ಮಾತ್ರವೇ ಈ ಕೆಟ್ಟ ಅಪವಾದ ಹೊಂದಿತ್ತು. ಅಲ್ಲಿ ಅದು ತುಸು ಕಡಿಮೆ ಆಗುತ್ತಿದ್ದಂತೆ ಇತ್ತ ಅಕ್ಕಪಕ್ಕದ ನ್ಯೂಜೆರ್ಸಿ, ನ್ಯೂಯಾರ್ಕ್‌ಗಳಲ್ಲಿ ಅದು ಹೆಚ್ಚತೊಡಗಿತು. ಅದು ಎಷ್ಟು ಹೆಚ್ಚಾಯಿತೆಂದರೆ, ಸಾರ್ವಜನಿಕರು ರಸ್ತೆಗಿಳಿಯಲು ಪೊಲೀಸರಿಂದ ಸುರಕ್ಷೆ ಕೇಳುವಂತಾಯಿತು. ಓ.... ಇದು ನಮ್ಮ ಪೊಲೀಸಪ್ಪಂದಿರಿಗೆ ಸಲೀಸಾಗಿ ನಿದ್ರಿಸಲು ಸುಲಭ ಮಾರ್ಗವಾಯ್ತು ಅಂತೀರಾ? ಅವರು ನಮ್ಮ ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿಗಳನ್ನು ಅಮೆರಿಕಾ ಆಗದಿರಲು ಯಾಕೆ ತಡೆದಾರು?
ಖ್ಯಾತಿ ಗಳಿಸುತ್ತಿರುವ ನೃತ್ಯ : ಟರ್ಕಿಯ ಮೂಲ ನಿವಾಸಿಗಳ ನೃತ್ಯ ಈಗ ವಿಶ್ವದೆಲ್ಲೆಡೆ ಜನಪ್ರಿಯಗೊಳ್ಳುತ್ತಿದೆ. ಇದು ಇತ್ತೀಚೆಗೆ ಇಸ್ತಾಂಬುಲ್ ನಲ್ಲಿ ನಡೆದ ನೃತ್ಯೋತ್ಸದ ದೃಶ್ಯ. ಈಗಂತೂ ತುಸು ಶ್ರಮ ವಹಿಸಿದರೆ ದೆಹಲಿ, ಮುಂಬೈ, ಬೆಂಗಳೂರಿನಲ್ಲೂ ಇಂಥವರನ್ನು ಕರೆಸಿ ಬೆಲ್ಲಿ ಡ್ಯಾನ್ಸ್ ಗೆ ಪೈಪೋಟಿ ನೀಡಬಹುದು. ನಿಮ್ಮ ಪಾರ್ಟಿ ಹೆಚ್ಚು ಗ್ಲಾಮರಸ್ ಆಗಿರಬೇಕೆಂದರೆ ಇಂಥದೆಲ್ಲ ಅನಿವಾರ್ಯ.
ಇವಳು ದೇವಕನ್ಯೆಯೋ ಗಂಧರ್ವ ಕನ್ಯೆಯೋ? : ಇವಳು ನಿಜಕ್ಕೂ ಧರೆಗಿಳಿದ ದೇವಕನ್ಯೆಯೇ ಸರಿ. ಗಾಳಿ ತೇಲಿ ಬಂದಂತೆ ಈಕೆ ಹಾಯಾಗಿ ಹಾರಲಿದ್ದಾಳೆ. ಇಷ್ಟೊಂದು ಬಗೆಯ ನವರತ್ನ ಹುದುಗಿಸಿದ ರೆಕ್ಕೆಗಳು, ಅತ್ಯಾಕರ್ಷಕ ಮಂದಹಾಸದ ಮುಖಾರವಿಂದ, ಆಹಾ.... ಈ ಕಿನ್ನರಿ ಇಂಡೋನೇಷ್ಯಾದ ಡ್ಯಾನ್ಸ್ ಫೆಸ್ಟಿವಲ್ ಬಿಟ್ಟು ಭಾರತದ ಬಾಲಿವುಡ್‌ಗೆ ಬರಬಾರದೇ?
ವಾವ್.... ಬಂಗಾರದ ಟೀ ಸೆಟ್! : ಆಹಾ, ಬಂಗಾರದ ಈ ಟೀ ಸೆಟ್ ವರದಕ್ಷಿಣೆಯಾಗಿ ಯಾರಿಗೆ ದಕ್ಕಲಿದೆಯೋ ಏನೋ? ಹಾಗೇನಿಲ್ಲ.... ಇದು ಜಪಾನಿನ ಒಂದು ಸೂಪರ್ ಮಾರ್ಕೆಟ್‌ನಲ್ಲಿ ಒಂದು ಸೇಲ್ ಗೋಸ್ಕರ ಜನರನ್ನು ಆಕರ್ಷಿಸಲು ಇರಿಸಲಾಗಿತ್ತಷ್ಟೆ. ಇದರ ಬೆಲೆ 10 ಲಕ್ಷ ರೂ.... ಅಲ್ಲ ಅಲ್ಲ... ಡಾಲರ್... ಅಂದ್ರೆ.... ಕೇವಲ 63 ಕೋಟಿ ರೂ.!!!