ಮೈಸೂರಿನ ಚಾಮುಂಡಿಪುರಂನಲ್ಲಿ ಕಳೆದ 15 ವರ್ಷಗಳಿಂದ `ಸೌಮ್ಯ ನೃತ್ಯಶಾಲಾ' ಎಂಬ ನೃತ್ಯ ಶಾಲೆ ನಡೆಸುತ್ತಿರುವ ವಿದುಷಿ ಎಸ್‌. ಸೌಮ್ಯರಾಣಿ, ಒಬ್ಬ ಅಪ್ಪಟ ಪ್ರತಿಭಾವಂತ ಭರತನಾಟ್ಯ ಕಲಾವಿದೆ. ಕಳೆದ 22 ವರ್ಷಗಳಿಂದ ಆಕೆ ನೃತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿ.ಎ., ಡಿಪ್ಲೊಮಾ ಇನ್‌ ಬ್ಯಾಂಕಿಂಗ್‌ ಪದವೀಧರೆಯಾದ ಇವರು ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಹಾಡುಗಳು, ದೇವರನಾಮ, ಭಕ್ತಿಗೀತೆ ಹಾಡುವುದರಲ್ಲಿ ನಿಸ್ಸೀಮರು.1999 ವಿದ್ವತ್‌ ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ಇವರು ತಂಜವೂರು ಶೈಲಿಯಲ್ಲಿ ಭರತನಾಟ್ಯವನ್ನು ಅಭ್ಯಾಸ ಮಾಡಿದ್ದಾರೆ. ಇವರ ಗುರುಗಳು : ನಾಟ್ಯಾಚಾರ್ಯ, ಕರ್ನಾಟಕ ಕಲಾಶ್ರೀ ಟಿ.ಎನ್‌. ಸೋಮಶೇಖರ್‌ ಮತ್ತು ವಿದುಷಿ ಟಿ.ಎಸ್‌. ಲಕ್ಷ್ಮೀಕುಮಾರ್‌.ತರಬೇತಿ ಪಡೆದ ಕಾರ್ಯಾಗಾರ ಮೋಹಿನಿ ಆಟ್ಟಂನಲ್ಲಿ ಗುರು ಕಲಾಮಂಡಲಂ ರಾಧಿಕಾ, ಕಥಕ್‌ನಲ್ಲಿ ಗುರು ತೀರ್ಥರಾಮ್ ಆಜಾದ್‌ (ದೆಹಲಿ), ಗ್ರೂಪ್‌ ಕೋರಿಯೋ ಗ್ರಫಿಯಲ್ಲಿ ಗುರು ಭಾನುಮತಿ, ನವದೆಹಲಿಯ ರಬೀಂದ್ರ ನಾಟ್ಯಂ ರಿಸರ್ಚ್‌ ಸೆಂಟರ್‌, ದೆಹಲಿ ಬ್ಯಾನೆಟ್ ಗ್ರೂಪ್‌ನ ನಿರ್ದೇಶಕ ವಾಲ್ಮೀಕಿ ಬ್ಯಾನರ್ಜಿ ಅವರಿಂದ ರಬೀಂದ್ರ ನಾಟ್ಯ ಕಲಿತಿದ್ದಾರೆ.

ನೀಡಿದ ನೃತ್ಯ ಕಾರ್ಯಕ್ರಮಗಳು

DSC_8866

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧೆಡೆ ಎಂದರೆ ಮೈಸೂರು, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಹಾಸನ, ಉಡುಪಿ, ಮಡಿಕೇರಿ ಇನ್ನಿತರ ಭಾಗಗಳಲ್ಲಿ ನೀಡಿದ್ದಾರೆ. ಕರ್ನಾಟಕದಾದ್ಯಂತ ಖಾಸಗಿಯಾಗಿಯೂ ಕಾರ್ಯಕ್ರಮ ನೀಡಿದ್ದಾರೆ. ಕರ್ನಾಟಕವಲ್ಲದೆ ಚೆನ್ನೈ, ಹೈದರಾಬಾದ್‌ ಇತ್ಯಾದಿ ನಗರಗಳಲ್ಲೂ ನೃತ್ಯ ಕಾರ್ಯಕ್ರಮ ನೀಡಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ವಸುಂಧರಾ ಪರ್‌ ಫಾರ್ಮಿಂಗ್‌ ಆರ್ಟ್ಸ್, ಮೈಸೂರು ಇವರು ನಡೆಸುವ ರಾಷ್ಟ್ರೀಯ ಮಟ್ಟದ ನೃತ್ಯೋತ್ಸಾದ `ಪಲ್ಲವೋತ್ಸವ 2000'ದಲ್ಲಿ ಭಾಗಹಿಸಿದ್ದಾರೆ.

ತೀರ್ಪುಗಾರ್ತಿಯಾಗಿ ಮೈಸೂರು, ನಂಜನಗೂಡು ಮತ್ತು ಕರ್ನಾಟಕದ ಹಲವೆಡೆ ತೀರ್ಪುಗಾರ್ತಿಯಾಗಿ ತೀರ್ಪನ್ನು ಕೊಟ್ಟಿದ್ದಾರೆ. ಹೊರ ರಾಜ್ಯ ಕೇರಳದ ಮಾತೃಭೂಮಿ ಕಲೀವತ್ಸಂ ಇಲ್ಲಿಯೂ ತೀರ್ಪುಗಾರ್ತಿಯಾಗಿ ತೀರ್ಪನ್ನು ಕೊಟ್ಟಿದ್ದಾರೆ.

ಬಾಲ ಭವನದ ಬಾಲಶ್ರೀ ಮತ್ತು ಕಲಾಶ್ರೀ ಪ್ರಶಸ್ತಿಗಳಿಗೆ ಮಕ್ಕಳನ್ನು ಆಯ್ಕೆ ಮಾಡಿ ಮೈಸೂರು ಬಾಲಭವನದಿಂದ ಕಳಿಸಿರುತ್ತಾರೆ. ಮೈಸೂರಿನ ಬಾಲ ಭವನದಲ್ಲಿ ಸಂಪನ್ಮೂಲ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ನೃತ್ಯ ಪರೀಕ್ಷಕರಾಗಿ ಸೇಲೆ ಸಲ್ಲಿಸಿದ್ದಾರೆ.

ನೃತ್ಯ ಶಿಕ್ಷಕಿಯಾಗಿ ಮೈಸೂರಿನ ಕೇಂದ್ರೀಯ ವಿದ್ಯಾಲಯ, ಜೆ.ಎಸ್‌ಎಸ್‌. ಪಬ್ಲಿಕ್‌ ಶಾಲೆ, ಎಸ್‌.ಜೆ.ಸಿ.ಇ ಕ್ಯಾಂಪಸ್‌, ಜ್ಞಾನ ಸರೋವರ ಅಂತಾರಾಷ್ಟ್ರೀಯ ಶಾಲೆ... ಹೀಗೆ ಹಲವಾರು ಶಾಲೆಗಳಲ್ಲಿ ನೃತ್ಯ ಶಿಕ್ಷಕಿ ಮತ್ತು ನೃತ್ಯ ಸಂಯೋಜಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

DSC_8896

ನೃತ್ಯ ಸಂಯೋಜನೆ ಮೈಸೂರಿನ ಬಿ.ಜಿ.ಎಸ್‌ ಅಪೋಲೊ ಆಸ್ಪತ್ರೆ, ಆದಿಚುಂಚನಗಿರಿ ಪಬ್ಲಿಕ್‌ ಶಾಲೆ, ಸೇಂಟ್‌ ಮೇರಿಸ್‌ ಶಾಲೆ ಹಾಗೂ ಇನ್ನೂ ಹಲವಾರು ಶಾಲೆಗಳಲ್ಲಿ ನೃತ್ಯ ಸಂಯೋಜನೆ ಮಾಡಿಕೊಟ್ಟಿದ್ದಾರೆ. ಬೇರೆ ದೇಶದಿಂದ ಬರುವ ನೃತ್ಯಾಕಾಂಕ್ಷಿಗಳಿಗೂ ನೃತ್ಯ ತರಬೇತಿ ನೀಡಿದ್ದಾರೆ.

ನೃತ್ಯ ಶಾಲೆಯ ಕಾರ್ಯಕ್ರಮಗಳು

ಸ್ವೀಡನ್‌ ದೇಶದಿಂದ ಬಂದಿದ್ದ ಸ್ವೀಡನ್‌ ಪ್ರತಿನಿಧಿಗಳಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ನೃತ್ಯ ಕಾರ್ಯಕ್ರಮವನ್ನು ಸೌಮ್ಯರಾಣಿಯರು ತಮ್ಮ ಸೌಮ್ಯ ನೃತ್ಯ ಶಾಲೆಯಿಂದ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ದಸರಾ 2010 ಮತ್ತು 2011, ಮೈಸೂರು ದಸರಾ ಫಲಪುಷ್ಪ ಪ್ರದರ್ಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೈಸೂರಿನ ಕಲಾ ಮಂದಿರದಲ್ಲಿ 2012ರಲ್ಲಿ ನಡೆದ ಗಣರಾಜ್ಯೋತ್ಸವ ನೃತ್ಯ ಪ್ರದರ್ಶನ, ಕಂಪಾಪುರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ನೃತ್ಯ ಪ್ರದರ್ಶನ ಇವುಗಳಲ್ಲದೆ ತಿ. ನರಸೀಪುರದಲ್ಲಿ 2013ರಲ್ಲಿ ನಡೆದ ಕುಂಭಮೇಳದಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ಮೈಸೂರಿನ ಹಲವೆಡೆ ನಂಜನಗೂಡು, ಕೆ.ಆರ್‌.ನಗರ, ಬೆಂಗಳೂರು, ಉಡುಪಿ ಹೀಗೆ ಹಲವು ಕಡೆ ನೃತ್ಯ ಪ್ರದರ್ಶನ ನೀಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ