ಚಿತ್ರದಲ್ಲಿರುವ ಮಹಿಳೆಯು ಫೋಟೋವನ್ನು ನೀವು ಜೂಮ್ ಮಾಡಿದ್ರೆ,ಅವರ ಕುತ್ತಿಗೆಯಲ್ಲಿ ಧರಿಸಿರುವ ಬೃಹತ್ ವಜ್ರವನ್ನು ನೋಡ್ಬಹುದು. ಇದು 245.35 ಕ್ಯಾರಟ್ ಜುಬಿಲಿ ಡೈಮಂಡ್.ಇದು ಗಾತ್ರದಲ್ಲಿ ವಿಶ್ವವಿಖ್ಯಾತ "ಕೊಹ್-ಇ-ನೂರ್" ವಜ್ರದ ತೂಕದ 2 ಪಟ್ಟು ಇದೆ.
ಈ ಮಹಿಳೆಯು ಜೆಮಶೇಟ್ಜಿ ಟಾಟಾ ಅವರ ಸೊಸೆ ಅಂದ್ರೆ ಅವರ ಹಿರಿಯ ಮಗ ಸರ್ ದೊರಾಬ್ಜಿ ಟಾಟಾ ಅವರ ಧರ್ಮಪತ್ನಿ ಮೆಹರ್ಬಾಯಿ ಟಾಟಾ.
1924 ರಲ್ಲಿ ಮೊದಲ ಮಹಾಯುದ್ಧದಿಂದ ಆರ್ಥಿಕ ಹಿಂಜರಿತದ ವಾತಾವರಣ ಉಂಟಾದ ಕಾರಣ ಉದ್ಯೋಗಿಗಳಿಗೆ ಸಂಬಳ ನೀಡಲು ಟಾಟಾ ಕಂಪನಿಯ ಬಳಿ ಹಣವಿರ್ಲಿಲ್ಲ.ಆಗ ಇದೇ ವಜ್ರವನ್ನು 1 ಕೋಟಿ ರೂಪಾಯಿಗೆ ಇಂಪೀರಿಯಲ್ ಬ್ಯಾಂಕ್ ನಲ್ಲಿ ಟಾಟಾ ಅವರು ಗಿರವಿ ಇಟ್ಟಿದ್ರು.ಇದರಿಂದ ಉದ್ಯೋಗಿಗಳಿಗೆ ಸಂಬಳ ಸಿಕ್ಕಿತ್ತು ಹಾಗೂ ಕಂಪನಿಯು ಮುಂದುವರ್ದಿತ್ತು.
ರಕ್ತದ ಕ್ಯಾನ್ಸರ್‌ನಿಂದ ಸೊಸೆಯ ಅಕಾಲಿಕ ಮರಣದ ನಂತರ "ಸರ್ ದೊರಾಬ್ಜಿ ಟಾಟಾ ಅವರು ಭಾರತದ ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸೆಗಾಗಿ ಈ ವಜ್ರವನ್ನು ಮಾರಾಟ ಮಾಡುವ ಮೂಲಕ ಟಾಟಾ ಮೆಮೋರಿಯಲ್ ಕ್ಯಾನ್ಸರ್ ರಿಸರ್ಚ್ ಫೌಂಡೇಶನ್" ಅನ್ನು ಸ್ಥಾಪಿಸಿದರು.
ಇದು ನಿಜವಾಗಿಯೂ ವಾತ್ಸಲ್ಯದಿಂದ ಕಟ್ಟಿದ ಈ ಸ್ಮಾರಕ ನಿಜವಾದ ಮಾನವೀಯತೆಯ ಸ್ಮಾರಕ. ಆದ್ರೆ ವಿಪರ್ಯಾಸ ನೋಡಿ, ತಾಜ್ ಮಹಲ್ ಅನ್ನು ಪ್ರೇಮದ ಸ್ಮಾರಕ ಎಂಬ ಸುಳ್ಳನ್ನು ವೈಭವೀಕರಿಸುತ್ತಲೇ ಇರ್ತೀವಿ.
ಯಾಕೆಂದ್ರೆ ಎಷ್ಟೋ ಜನರಿಗೆ ಜೀವ ಕೊಟ್ಟವರ ಇಂತಹವರ ಲೆಕ್ಕವಿಲ್ಲದಷ್ಟು ಇತಿಹಾಸಗಳ ಬಗ್ಗೆಯೇ ಗೊತ್ತೇ ಇಲ್ಲ ನಮಗೆ.ಆದ್ದರಿಂದ ಮತ್ತೊಮ್ಮೆ ನಮ್ಮ ಇತಿಹಾಸದ ಸರಿಯಾದ ಮೌಲ್ಯಮಾಪನ ಮಾಡ್ಲೇಬೇಕು..
(ಸಂಗ್ರಹ)





