ಪಂಜಾಬ್​ನ ಮೊಹಾಲಿಯ ಖಾಸಗಿ ಕಂಪನಿಯ ಕಚೇರಿಯಲ್ಲಿ ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಚಾಕುವಿನಿಂದ 32 ಬಾರಿ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.

ಡಿಂಪಲ್​ (29) ಅವರನ್ನು ಹರ್ಜಿಂದರ್​ ಮಾನ್​ (34) ಚಾಕುವಿನಿಂದ 32 ಬಾರಿ ಇರಿದು ಕೊಲೆ ಮಾಡಿದ್ದು, ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಚೇರಿಯಲ್ಲಿ ಇತರ ಸಹೋದ್ಯೋಗಿಗಳ ಎದುರೇ ಈ ಭೀಕರ ದಾಳಿ ನಡೆದಿದ್ದು, ಕೆಲವರು ಆರೋಪಿಯನ್ನು ತಡೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಸಂಜೆ ಈ ಕೃತ್ಯ ನಡೆದಿದ್ದು, ಆರೋಪಿ ಹರ್ಜಿಂದರ್​ ಮಾನ್​, ತನ್ನ ಮಹಿಳಾ ಸಹೋದ್ಯೋಗಿ ಡಿಂಪಲ್​ಗೆ ಚಾಕುವಿನಿಂದ ಇರಿದು, ನಂತರ ತಾನೂ ಅದೇ ಚಾಕುವಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಡಿಂಪಲ್​ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಹರ್ಜಿಂದರ್ ಮಾನ್​ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಹರ್ಜಿಂದರ್ ಮಾನ್​ ಹಾಗೂ ಡಿಂಪಲ್​ ಪಟಿಯಾಲ ನಿವಾಸಿಗಳಾಗಿದ್ದು, ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಚಂಡೀಗಢದ ಹೊರ ವಲಯದ ಮೊಹಾಲಿಯಲ್ಲಿ ಪ್ರತ್ಯೇಕ ಪಿಜಿಗಳಲ್ಲಿ ನೆಲೆಸಿದ್ದರು. ಸುಮಾರು ಮೂರು ವರ್ಷಗಳಿಂದ ಇವರಿಬ್ಬರೂ ಖಾಸಗಿ ಕಂಪನಿಯಲ್ಲಿ ಒಟ್ಟಿಗೇ ಕೆಲಸ ಮಾಡುತ್ತಿದ್ದರು. ಆಗ ಇಬ್ಬರ ನಡುವೆ ಪ್ರೀತಿ ಮೂಡಿದ್ದು, ಇತ್ತೀಚೆಗಷ್ಟೇ ದೂರವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ