ಸೀರೆಯಲ್ಲ…. ಅಂಥದೇ ಡ್ರೆಸ್‌ ! : ಅಮೆರಿಕಾದ ನಟಿ ಶ್ಯೀಾನ್‌ಡ್ಲಿ ಸೀರೆ ಉಟ್ಟಿದ್ದಾಳೆ ಎಂದು ಭ್ರಮಿಸದಿರಿ, ಅಂಥದೇ ಡ್ರೆಸ್‌ಧರಿಸಿದ್ದಾಳಷ್ಟೆ. ಇತ್ತೀಚೆಗೆ ಭಾರತದ ಮಹಾನಗರಗಳಿಗೂ ಈ ಪರಿಯ ಡ್ರೆಸ್‌ ಲಗ್ಗೆ ಇಡುತ್ತಿವೆ, ಅದೆಂದಾದರೂ ನಮ್ಮ ಚೆಲುವಾದ ಸೀರೆಗೆ ಸಾಟಿಯಾದೀತೇ?

ಎತ್ತರೆತ್ತರದ ಕನಸುಗಳು : ಚೀನಾ ಸರ್ಕಸ್‌ನ ಈ ಆ್ಯಕ್ರೋಬ್ಯಾಟ್‌ ಕಲಾವಿದರು, ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಬಹಳ ಕಾಲ, ಹೆಸರು ಗಳಿಸಿದ್ದ ಎಂಪೈರ್‌ ಎಸ್ಟೇಟ್‌ ಬಿಲ್ಡಿಂಗ್‌ ಮೇಲೆ ಮಜಾ ಪಡೆಯುತ್ತಿದ್ದಾರೆ. 1,250 ಅಡಿ ಎತ್ತರದ ಈ ಕಟ್ಟಡದ ತರಹವೇ ಚೀನೀಯರ ಆತ್ಮವಿಶ್ವಾಸ ದಿನೇದಿನೇ ಆಕಾಶದೆತ್ತರಕ್ಕೆ ಏರುತ್ತಿದೆ ಹಾಗೂ ಅಮೆರಿಕಾಗೆ ಸರಿಯಾಗಿ ಡಿಚ್ಚಿ ಕೊಡುತ್ತಿದೆ. ಈ ಕಲಾವಿದರು ನ್ಯೂಯಾರ್ಕ್‌, ಅಮೆರಿಕಾಗಳಲ್ಲೂ ತಮ್ಮ ಕೈಚಳಕ ತೋರಿಸಿ, ಚೀನಾ ಅಂದರೆ ಬಡ ಕೂಲಿಗಳ ದೇಶವಲ್ಲ ಸೌಂದರ್ಯ, ಶ್ರೀಮಂತಿಕೆ, ಪ್ರತಿಭಾವಂತರ ನಾಡೆಂದು ಸಾಬೀತುಪಡಿಸಿದ್ದಾರೆ.

samachar-darshan-2

ಗ್ಲಾಮರಸ್ಕಾರ್ನಿವಾಲ್ ‌: ಬ್ರೆಝಿಲ್‌ನ ಕಾರ್ನಿವಾಲ್ ‌ಜಾತ್ರೆಯ ರಂಗು ಇಡೀ ದೇಶದ ಪೂರ್ತಿ ಹರಡಿದೆ. ಸ್ಪ್ಯಾನಿಶ್‌ ಕ್ಯಾನರಿ ದ್ವೀಪ ಸಮೂಹದಲ್ಲಿ ಈ ಮಂದಿ ರಂಗು ತುಂಬಿದರು. ಇದೇ ತರಹ ನಮ್ಮ ಗೋವಾದಲ್ಲೂ ನಡೆಯುತ್ತದೆ, ಆದರ ಅಲ್ಲಿ ಗ್ಲಾಮರ್‌ನ ಗುಂಗು ಈ ಮಟ್ಟಕ್ಕಿರುವುದಿಲ್ಲ. ಏನೇ ಗೋವಾ ವಾತಾವರಣವಿದ್ದರೂ ನಮ್ಮ ದೇಶದ ಮಡಿವಂತಿಕೆಯನ್ನು ಅದು ಮೀರಲಾದೀತೇ?

ಇದೆಂಥ ವಿಚಿತ್ರಾಸನ? : ಇರಾನಿ ಹೆಂಗಸರನ್ನು ಸದಾ ಪರದೆಯಿಂದ ಮುಚ್ಚಿರಿಸುವ ಹುನ್ನಾರ ನಡೆಯುತ್ತಿರುತ್ತದೆ. ಆದರೂ ಆ ಹೆಂಗಸರು ಹೇಗೋ ಅವಕಾಶ ನೋಡಿಕೊಂಡು ಅಲ್ಲಿನ ಕಂದಾಚಾರಿಗಳಿಗೆ ಚಳ್ಳೆಹಣ್ಣು ತಿನ್ನಿಸದಿರುವುದಿಲ್ಲ. ಈಗ ಅಲ್ಲಿ ಆ್ಯಕ್ರೋಬ್ಯಾಟಿಕ್ಸ್ ಮತ್ತು ಜಿಮ್ನಾಸ್ಟಿಕ್ಸ್ ನ ಸಂಗಮವಾದ `ಪವರ್‌ ಕಾರ್‌’ ಎಂಬ ಆಟ ದಿನೇದಿನೇ ಜನಪ್ರಿಯಗೊಳ್ಳುತ್ತಿದೆ. ಇದು ಅಲ್ಲಿನ ಹೆಂಗಸರಿಗೆ ವರದಾನವಾದರೆ, ಇವರನ್ನು ಕಂಟ್ರೋಲ್ ‌ಮಾಡಬಯಸುವ ಕಂದಾಚಾರಿಗಳಿಗೆ ಕಂಟಕವಾಗಿದೆ.

ಆಹಾ…. ದೈತ್ಯಾಕಾರದ ಮಾವು! : ವಾವ್‌, ಎಂಥ ಅದ್ಭುತ ಮಾವು! ಆದರೆ ಇದು ತಿನ್ನಲಾಗದ ಕೃತಕ ಹಣ್ಣು. ಇಂದಿನ ವಿಜ್ಞಾನಿಗಳು ಕಸಿ ಮಾಡಿದರೂ ಇಂಥ ದೈತ್ಯಾಕಾರದ ಮಾವು ಸಿಗಲು ಸಾಧ್ಯವೇ ಇಲ್ಲ. ಇದು ಅಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಗರದ ಮ್ಯಾಂಗೋ ಮಾನ್ಯುಿುಂಟ್‌. ವಿಡಂಬನೆ ಎಂದರೆ ಇದನ್ನು ಕದಿಯಲೆಂದೇ ಖದೀಮರು ಬೃಹತ್‌ ಕ್ರೇನ್‌ನೊಂದಿಗೆ ಬಂದಿದ್ದರಂತೆ!

ಹೊಳೆಯುವ ಕೊಂಬಿನ ಮಾಯಾಮೃಗ : `ಮಾಯಾಮೃಗ’ ಧಾರಾವಾಹಿಯ ಶೀರ್ಷಿಕೆ ಗೀತೆಯಂತೆ ಇದನ್ನು ಅರಸುತ್ತಾ ಹೊರಟರೆ, ಕೊನೆಗೆ ನೀವು ಉತ್ತರ ಫಿನ್‌ ಲ್ಯಾಂಡ್‌ತಲುಪಬೇಕಾದೀತು. ವಿಪರ್ಯಾಸವೆಂದರೆ ಅಲ್ಲಿನ ಹೊಳೆಹೊಳೆಯುವ ಕೊಂಬುಗಳ್ಳುಳ್ಳ ಈ ಜಿಂಕೆಗಳ ಕಾರಣ ರಸ್ತೆ ಅಪಘಾತಗಳು ಹೆಚ್ಚುತ್ತಿವೆಯಂತೆ. ಅದೇ ತರಹ ಹೆಂಗಸರು ತಮ್ಮ ಕೂದಲಿಗೆ ಕೆಮಿಕಲ್ಸ್ ಹಚ್ಚಿಕೊಂಡರೆ ಇಂಥ ಹೊಳಪು ಬರಬಹುದೇನೋ….

ಹೆಬ್ಬಾವಿನ ಅದ್ಭುತ ನೃತ್ಯ : ಲಡಖ್‌ನ ಜಾನಪದ ನೃತ್ಯಗಳಲ್ಲಿ ಒಂದು ಪ್ರಕಾರವಾದ ಹೆಬ್ಬಾವಿನ ನೃತ್ಯ ಬಲು ರೋಚಕ. ಇದರಲ್ಲಿ ಕಪೋಲಕಲ್ಪಿತ ಹೆಬ್ಬಾವುಗಳ ಚಿತ್ರವಿಚಿತ್ರ ವೇಷ ಧರಿಸಿದ ಸ್ಥಳೀಯರು ಬೀದಿ ತುಂಬಾ ಮೆರವಣಿಗೆ ನಡೆಸುತ್ತಾರೆ. ಬೌದ್ಧ ಮಹಿಳೆಯರಲ್ಲೂ ಜನಪ್ರಿಯಗೊಳ್ಳುತ್ತಿರುವ ಈ ನೃತ್ಯ ಚೀನೀಯರಿಗೆ ಬಲು ಅಚ್ಚುಮೆಚ್ಚು.

ಹೀಗೂ ಒಂದು ಸ್ಪರ್ಧೆ : ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಪ್ರತಿ ವರ್ಷ ಒಂದು ವಿಚಿತ್ರ ಬಗೆಯ ಈಜು ಸ್ಪರ್ಧೆ ನಡೆಯುತ್ತದೆ. ವಿಚಿತ್ರ ಯಾಕೆ ಅಂತೀರಾ? ಇಲ್ಲಿ ಜನ ಬರಿಮೈನಲ್ಲಿ ಬಂದು ಈಜಬೇಕಾಗುತ್ತದೆ. ವೀಕ್ಷಕರು ಮಜಾ ಪಡೆಯಲು ಸೇರಬಹುದು, ಎಲ್ಲರ ಬಳಿಯೂ ಇರುವುದನ್ನು ಪ್ರದರ್ಶಿಸುವುದರಲ್ಲಿ ಅಡ್ಡಿಯೇನು? ಇತ್ತೀಚೆಗೆ ನಡೆದ ಈ ಸ್ಪರ್ಧೆಯಲ್ಲಿ 700 ಜನ ಸ್ಪರ್ಧಿಗಳಿದ್ದರೆ, 70 ಸಾವಿರ ಮಂದಿ ವೀಕ್ಷಕರಿದ್ದರಂತೆ! 7 ಕೋಟಿ ಮಂದಿ ಟಿ.ವಿ.ಯಲ್ಲಿ ವೀಕ್ಷಿಸಿ ಧನ್ಯರಾದರು,  ಇದಲ್ಲವೇ ಸ್ಪರ್ಧೆ?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ