ಅಪ್ರಾಮಾಣಿಕರೇ.... ನಿಮಗೆ ಸ್ವಾಗತ!

ಅಪ್ರಾಮಾಣಿಕತೆಯೂ ಸಕ್ಷಮ ಎಂದಾದರೆ ಅದಕ್ಕೆ ಸಮಾಜ ಏನೂ ಮಾಡಲಾಗದು. ಪ್ರಸ್ತುತ ನಮ್ಮ ದೇಶದಲ್ಲಿ ಜೈಲುಗಳು ತುಂಬಿ ತುಳುಕುತ್ತಿವೆ ಎಂದರೆ ರಾಮ ರಾಜ್ಯದ ಕಾನೂನು ಬಂದುಬಿಟ್ಟಿದೆ ಎಂದು ಸಂಭ್ರಮಿಸದಿರಿ. ಅದೇಕೆಂದರೆ, ಈ ಅಪರಾಧಿಗಳು ತಮ್ಮ ಸುರಕ್ಷತೆ ಮಾಡಿಕೊಳ್ಳಲಾಗದೆ ಸಿಕ್ಕಿಬಿದ್ದರಷ್ಟೆ.

ಇತ್ತೀಚೆಗಂತೂ ಎಷ್ಟೋ ಅಪ್ರಾಮಾಣಿಕರು ಬಲು ಗೌರವವಾಗಿ ಜೈಲುಗಳಿಂದ ಹೊರಬರುತ್ತಿದ್ದಾರೆ ಅಥವಾ ಅಪ್ರಾಮಾಣಿಕತೆಯ ಪದವಿ ಪಡೆದರೂ ಬಲು ಗೌರವಸ್ಥರಂತೆ ಮೆರೆಯುತ್ತಿದ್ದಾರೆ. ಲಾಲೂ ಯಾದವ್ ಹೊರಗಿದ್ದಾರೆ. ಸಜಾಯಾಫ್ತಾ ಕೈದಿ ಆದಕಾರಣ ಚುನಾವಣೆಗೆ ಸ್ಪರ್ಧಿಸಲಾಗದಿದ್ದರೂ, ತಮ್ಮ ಪಕ್ಷಕ್ಕಾಗಿ ಜಬರ್ದಸ್ತಾಗಿ ಪ್ರಚಾರ ಮಾಡುತ್ತಿದ್ದಾರೆ. ಸುಬ್ರತೋ ರಾಯ್‌ ಮೇಲೆ ಸುಪ್ರೀಂ ಕೋರ್ಟಿಗೆ ಕೆಂಡಾಮಂಡಲ ಸಿಟ್ಟಿದೆ, ಆದರೆ 10 ಸಾವಿರ ಕೋಟಿ ಹಣ ಕಟ್ಟಿರುವುದರಿಂದ ಅದು ಸಹಿಸಬೇಕಿದೆ. 2 ಜಿ ಹಗರಣದ ಎ. ರಾಜಾ ದಿಲ್ ದಾರಾಗಿ ಚುನಾವಣಾ ಅಭ್ಯರ್ಥಿಯಾಗಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭಾಜಪ ರೆಡ್‌ ಕಾರ್ಪೆಟ್‌ ಹಾಕಿ ಕರೆಸಿತು, ಆದರೆ ಅವರ ಹಗರಣಗಳ ಪಟ್ಟಿ ದೊಡ್ಡದಿದೆ. ನರೇಂದ್ರ ಮೋದಿಯವರ ಮೇಲೆ 2 ಸಾವಿರ ಹತ್ಯೆಗಳ ಆರೋಪವಿದೆ ಹಾಗೂ ಅವರ ಏಕಮಾತ್ರ ವಿಶ್ವಾಸಾರ್ಹರಾದ ಅಮಿತ್‌ ಶಾಹ್‌ರ ಮೇಲೆ ಹತ್ಯೆ ಮಾಡಿಸಲು ಅದೇಶ ನೀಡಿದರೆಂಬ ನೇರ ಆರೋಪವಿದೆ. ಆದರೆ ಇಬ್ಬರೂ ದೇಶದ ಆಡಳಿತದ ಚುಕ್ಕಾಣಿ ಹಿಡಿದೇ ತೀರುತ್ತೇವೆ ಎಂದು ಹಠ ಹೂಡಿದ್ದಾರೆ. ಕಾಂಗ್ರೆಸ್‌ ಅಶೋಕ್‌ ಚವ್ಹಾಣ್‌ರನ್ನು ಮೊದಲು ಮಹಾರಾಷ್ಟ್ರದ ಮುಖ್ಯಮಂತ್ರಿ ಪಟ್ಟದಿಂದ ತೆಗೆಯುವ ನಾಟಕವಾಡಿ ನಂತರ ಲೋಕಸಭೆಯ ಟಿಕೆಟ್‌ ನೀಡುತ್ತದೆ.

ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ತುತ್ತಾದ ಲಲಿತ್‌ ಮೋದಿ, ರಾಜಾಸ್ಥಾನಕ್ಕೆ ಬರದೆಯೇ ರಾಜಾಸ್ಥಾನದ ಕ್ರಿಕೆಟ್‌ ಬೋರ್ಡ್‌ಅಧ್ಯಕ್ಷ ಪಟ್ಟ ಗಿಟ್ಟಿಸುತ್ತಾರೆ. ಎನ್‌. ಶ್ರೀನಿವಾಸನ್‌ ತಮ್ಮ ಅಳಿಯನೊಡಗೂಡಿ ಐಪಿಎಲ್ ನ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಆರೋಪಿ ಎನಿಸಿದ್ದರೂ, ಮತ್ತೆ ಮತ್ತೆ ಸುನಾಯಾಸವಾಗಿ ಅಧಿಕಾರಕ್ಕೆ ಬರುತ್ತಾರೆ. ಸುಪ್ರೀಂಕೋರ್ಟ್‌ ಅಸಹಾಯಕತೆಯಿಂದ ಕೈ ಕೈ ಹಿಸುಕಿಕೊಳ್ಳುತ್ತದಷ್ಟೆ.

ಈ ಮಹನೀಯರಾರೂ ಜೈಲಿನಲ್ಲಿಲ್ಲ, ಆದರೆ ಜೈಲು ಮಾತ್ರ ತುಂಬಿದೆ. 2,000 ಕೈದಿಗಳಿರಬೇಕಾದ ಕಡೆ 10,000 ಕೈದಿಗಳಿದ್ದಾರೆ. ಈ ಕೈದಿಗಳಾರು? ಇವರು ಸಮಾಜಘಾತುಕರೇ? ಯಾರೋ 100 ರೂ.ಗಾಗಿ ಪಿಕ್‌ ಪಾಕೆಟ್‌ ಮಾಡಿರಬಹುದು, 1,000 ರೂ.ಗಾಗಿ ಯಾರೋ ಲಂಚ ಪಡೆದಿರಬಹುದು, ಇನ್ನಾರೋ ದ್ವೇಷಕ್ಕಾಗಿ ಜಗಳ ಆಡಿರಬಹುದು. ಕೇವಲ ಕೆಲವರು ಮಾತ್ರ ಕೊಲೆ ಮಾಡಿರಬಹುದು. ಹೆಚ್ಚು ಅತ್ತೆಯರು ಸೊಸೆಯಂದಿರನ್ನು ಪೀಡಿಸಿದರೆಂದು ಕೈದಿಗಳಾಗಿದ್ದಾರೆ. ಇವರುಗಳಿಂದ ಮಾತ್ರ ಸಮಾಜಕ್ಕೆ ಅಪಾಯವೇ? ಇವರು ನಮ್ಮ ಕಾನೂನು ಹಾಗೂ ಕೋರ್ಟಿನ ದೃಷ್ಟಿಯಲ್ಲಿ ಘಾತುಕರು. ಆದರೆ.... ಯಾರು ಸಕ್ಷಮರಾಗಿ ಉಳಿದರೋ, ಯಾರೂ ಜನತೆಯ ಕೋಟ್ಯಂತರ ಆಸ್ತಿ ಗುಳುಂ ಮಾಡಿದರೋ, ಅವರು ಸಜ್ಜನರು, ಸರ್ವಗುಣ ಸಂಪನ್ನರು!

ಜೈಲು ತುಂಬಿರುವ ಕೈದಿಗಳಿಂದಾದ ಕೊಲೆಗಳಿಗಿಂತ ಹೆಚ್ಚಾಗಿ, ಸೇತುವೆ ಅಥವಾ ಕಟ್ಟಡಗಳ ಕುಸಿತದಿಂದ ಆಗಿರಬಹುದಾದ ದಾರುಣ ಹತ್ಯೆಗಳು, ಅಗ್ಗದ ರಸ್ತೆಗಳನ್ನು ನಿರ್ಮಿಸಿ ಅದರಲ್ಲಿ ಹಳ್ಳಗಳಾಗಿ ಬರ್ಬರ ಅಪಘಾತಗಳಿಗೆ ಕಾರಣಕರ್ತರಾಗುವವರು ಸಮಾಜಘಾತುಕರಲ್ಲವೇ? ತಪ್ಪು ವಿಧಾನದಲ್ಲಿ ತಯಾರಾದ ಅಥವಾ ಅನಗತ್ಯ ಔಷಧಿಗಳನ್ನು ಸೇವಿಸಿ ಸತ್ತವರು ಕಡಿಮೆಯೇ? ಸಾವಿರಾರು ಜನ ಹೆಂಡ ಸಾರಾಯಿ, ಬೀಡಿ ಸಿಗರೇಟ್‌, ಪಾನ್‌ ಮಸಾಲಾಗಳಿಂದ ಸಾಯುತ್ತಿದ್ದಾರೆ, ಇವುಗಳ ತಯಾರಿಕೆಗೆ ಅನುಮತಿ ಕೊಟ್ಟವರಾರು? ಇವುಗಳ ತಯಾರಕರು ಅಸಲಿ ದುಶ್ಮನ್‌ಗಳಲ್ಲವೇ? ಪ್ರತಿದಿನ ಯಾವುದೋ ಕಾರಣಕ್ಕಾಗಿ ಇಂಥ ಮಹನೀಯರು ಕೋರ್ಟಿನ ಕಟಕಟೆ ಹತ್ತಿದರೂ ರಾಜಾರೋಷವಾಗಿ ಜಾಮೀನು ಪಡೆದು ಮೆರೆಯುತ್ತಾರೆ. ಈ ಅಪ್ರಾಮಾಣಿಕರ ಅನ್ಯಾಯಗಳಿಗೆ ದೇಶ ಬೆಲೆ ತೆರುತ್ತಿದೆ. ನಮ್ಮ ರಾಷ್ಟ್ರದ ಬಡತನದ ಹಿಂದೆ ನಮ್ಮಲ್ಲಿನ ಕಣಕಣದ ಅಪ್ರಾಮಾಣಿಕತೆ ಹಾಗೂ ಅಂಥವರನ್ನು ಪೂಜಿಸುವ ಅಸಹಾಯಕರ ದೈನೇಸಿತನವಿದೆ. ನಮ್ಮ ಪುರಾಣದಲ್ಲಿನ ದೇವದೇವತೆಗಳು ಅಪ್ರಾಮಾಣಿಕರು (ಪುರಾಣಗಳನ್ನು ವಿವರವಾಗಿ ಪರಾಮರ್ಶಿಸಿ), ಮುಖಂಡರಂತೂ ಮಹಾ ಅಪ್ರಾಮಾಣಿಕರು (ಎಲ್ಲರೂ ಆರೋಪಿಗಳೇ!) ಅಧಿಕಾರಿಗಳೆಲ್ಲರೂ ಅಪ್ರಾಮಾಣಿಕತೆಯ ಆರಾಧಕರು (ಮರಣ ಪ್ರಮಾಣಪತ್ರ ಲಂಚವಿಲ್ಲದೆ ಸಿಗಲಾರದು), ಆದರೆ ಎಲ್ಲರೂ ಸಕ್ಷಮರೇ, ಹೀಗಾಗಿ ಹಾಯಾಗಿದ್ದಾರೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ