ದುಂದುವೆಚ್ಚ ಮಾಡಬೇಡಿ
ಅಮ್ಮನನ್ನು ಭೇಟಿಯಾಗಲು ವಿಮಾನದಲ್ಲಿ ಹೋಗುವುದು ಕಡಿಮೆಯಾಗುತ್ತಿದೆ. ಈಗ ಏರ್ ಪೋರ್ಟ್ ಗಳಲ್ಲಿ ಮಕ್ಕಳು, ವಯಸ್ಸಾದ ಹೆಂಗಸರು ಮತ್ತು ಕೈಗಳಲ್ಲಿ ಒಳ್ಳೆಯ ಸಿಹಿತಿಂಡಿಗಳ ಡಬ್ಬಿಗಳನ್ನು ಹಿಡಿದು ಹೊರಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. 5 ವರ್ಷಗಳ ಹಿಂದೆ ವಿಮಾನಯಾನದ ದರಗಳು ಕಡಿಮೆಯಾಗಿದ್ದರಿಂದ ಏರ್ ಪೋರ್ಟ್ ಗಳಲ್ಲಿ ಅಲ್ಪಸ್ವಲ್ಪ ಹಣವಿದ್ದರೂ ತುಂಬಿರುತ್ತಿದ್ದರು. ಅದು ನಿಧಾನವಾಗಿ ಕಡಿಮೆಯಾಗತೊಡಗಿತು. ದೆಹಲಿ ಮುಂಬೈ ಪ್ರವಾಸಕ್ಕೆ ಹಿಂದೆ 2,500 ರೂ. ಇದ್ದದ್ದು, ಈಗ 7,000 ರೂ.ಗಳಿಂದ 9,000 ರೂ.ಗಳವರೆಗೆ ಆಗಿದ್ದು, ಹಲವು ಬಾರಿ ಇದಕ್ಕೂ ದುಬಾರಿ ಆಗಿತ್ತು.
ಇಡೀ ವಿಶ್ವದಲ್ಲೇ ಮುಗ್ಗರಿಸುತ್ತಿರುವ ಆರ್ಥಿಕ ವ್ಯವಸ್ಥೆ ನಮ್ಮ ದೇಶದ ಆರ್ಥಿಕ ಸ್ಥಿತಿಗೆ ವಿಘ್ನ ತಂದೊಡ್ಡಿ ಸಂಪೂರ್ಣವಾಗಿ ಫ್ರೀಜ್ ಮಾಡಿದೆ. ಪಾಪ, ಮನಮೋಹನ್ ಸಿಂಗ್ ಮತ್ತು ಪಿ. ಚಿದಂಬರಮ್ ಬೆಲೆ ಏರದಿರಲು ಹಾಗೂ ರೂಪಾಯಿ ಬೆಲೆ ಇಳಿಯದಿರಲು ಏನು ಮಾಡಬೇಕೆಂದು ತಿಳಿಯದೆ ತಬ್ಬಿಬ್ಬಾಗಿದ್ದಾರೆ.
ಈ ದೇಶದಲ್ಲಿ ಪ್ರತಿ ಗೃಹಿಣಿಯೂ ಮಾಡುತ್ತಿರುವಂತೆಯೇ ನಮ್ಮ ದೇಶ ಮಾಡುತ್ತಿದೆ. ಮೊದಲ ಬಾರಿ ಹೆಚ್ಚು ಹಣ ಕಂಡ ಮನೆಯವರು ವೈಭವದ ಬದುಕನ್ನು ಸಾಗಿಸುವ ಹೆಸರಿನಲ್ಲಿ ಹೆಚ್ಚು ಹೆಚ್ಚು ಖರ್ಚು ಮಾಡುವ ಯೋಜನೆಗಳನ್ನು ತಯಾರಿಸಿದರು. 5 ಬೆಡ್ ರೂಮ್ ಗಳುಳ್ಳ ಒಳ್ಳೆಯ ಫ್ಲಾಟ್, ಹೊಳೆಯುವ ಒಂದು ವಾಹನ, ದೊಡ್ಡದಾದ ಟಿ.ವಿ., ಧಾರ್ಮಿಕ ಪ್ರವಾಸ ಅಥವಾ ಮೋಜಿಗಾಗಿ ಪ್ರತಿ ವರ್ಷ 15 ದಿನಗಳ ಟೂರ್, ದುಬಾರಿ ಶಾಲೆಗಳಲ್ಲಿ ಮಕ್ಕಳ ಅಡ್ಮಿಶನ್, ಪ್ರತಿ ಕೋಣೆಯಲ್ಲೂ ಏರ್ ಕಂಡೀಶನರ್ ಮತ್ತು ವಾರಕ್ಕೆರಡು ಬಾರಿ ಹೊರಗೆ ಊಟ ಮಾಡುವುದು ಫ್ಯಾಷನ್ ಆಗಿಹೋಯಿತು.
ಕೈಗೆ ಬಂದ ಹಣವನ್ನು ಉಳಿಸಬೇಕಾದ ಜನ ಅದನ್ನು ಖರ್ಚು ಮಾಡುವುದರಲ್ಲಿ ತೊಡಗಿದ್ದಾರೆ. ಈ ದೇಶ ಅಮೆರಿಕಾ ಆಗಿಬಿಟ್ಟಿದೆ ಎಂದುಕೊಂಡಿದ್ದಾರೆ. ಎಷ್ಟು ವೇಗವಾಗಿ ಮಾಲ್ ಗಳು ಆರಂಭಗೊಂಡಿವೆಯೋ ಅಷ್ಟು ವೇಗವಾಗಿ ನಮ್ಮ ದೇಶದ ಜನಸಂಖ್ಯೆಯೂ ಹೆಚ್ಚಾಗುತ್ತಿರಲಿಲ್ಲ. ಮಹಿಳೆಯರು ತಮ್ಮ ತಾಯಿ ಉಳಿತಾಯ ಮಾಡುತ್ತಿದ್ದುದನ್ನು ನೋಡಿದ್ದರು. ಆದರೆ ಅವರು ಅದನ್ನು ಮರೆತುಬಿಟ್ಟರು. ಅವರು ಮನೆ, ಸಂಸಾರ ಸಂಭಾಳಿಸುವುದನ್ನು ಬಿಟ್ಟು ಬ್ಯೂಟಿ ಪಾರ್ಲರ್ ಗಳಲ್ಲಿ ಮತ್ತು ಬಟ್ಟೆ ಅಂಗಡಿಗಳಲ್ಲಿ ಹೆಚ್ಚು ಸುತ್ತಾಡತೊಡಗಿದರು.
ಅದರ ಪರಿಣಾಮ ಕಣ್ಮುಂದೆಯೇ ಇದೆ. ಮನೆಗಳ ಪರಿಸ್ಥಿತಿ ಹಾಳಾಗುತ್ತಿದೆ ಮತ್ತು ದೇಶದ ಪರಿಸ್ಥಿತಿಯೂ ಹಾಳಾಗುತ್ತಿದೆ. ಸರ್ಕಾರ ಸಾಲದಲ್ಲಿ ಮುಳುಗುತ್ತಿದೆ. ಬೆಲೆಯೇರಿಕೆಯಿಂದಾಗಿ ರೂಪಾಯಿಯ ಅಪಮೌಲ್ಯ ಹೆಚ್ಚಾಗುತ್ತಿದೆ.
ಇಂತಹ ಸಮಯದಲ್ಲಿ ಉಪದೇಶಗಳನ್ನು ಕೊಡುವಂತಿಲ್ಲ. ಜನ ತಮ್ಮ ತಪ್ಪಿನಿಂದ ಪಾಠ ಕಲಿಯಬೇಕಿದೆ. ಉಳಿತಾಯ ಎಂದಿಗೂ ತಪ್ಪಲ್ಲ. ವಸ್ತುಗಳನ್ನು ಖರೀದಿಸಿ, ಮನೆ ಕಟ್ಟಿಸಿ, ಪ್ರವಾಸಗಳಿಗೆ ಹೋಗಿ ಆದರೆ ಉತ್ತರಕಾಶಿಯಂತಹ ಸಣ್ಣ ಪ್ರದೇಶದಲ್ಲಿ 1 ಲಕ್ಷ ಯಾತ್ರಿಗಳು ಪುಣ್ಯ ಸಂಪಾದಿಸುವ ಹೆಸರಿನಲ್ಲಿ ಹೋದಂತೆ ಮಾಡಬೇಡಿ.
ಸಂಪಾದಿಸುವುದು ಮತ್ತು ಖರ್ಚು ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಆದರೆ ಸರಿಯಾದ ರೀತಿಯಲ್ಲಿ ಸಂಪಾದಿಸಬೇಕು ಮತ್ತು ಸರಿಯಾದ ರೀತಿಯಲ್ಲಿಯೇ ಖರ್ಚು ಮಾಡಬೇಕಾಗಿದೆ. ಈ ದೇಶದಲ್ಲಂತೂ ಮಾಲೀಕರು ಮತ್ತು ನೌಕರರು ಎಲ್ಲರೂ ಹೋಳಿ, ದೀಪಾವಳಿ ಆಚರಿಸುತ್ತಾರೆ, ಪಟಾಕಿ ಮತ್ತು ರಾಕೆಟ್ ಗಳನ್ನು ಸಿಡಿಸುತ್ತಿರುತ್ತಾರೆ. ಇನ್ನು ಈ ಪರಿಸ್ಥಿತಿ ಬರಲೇಬೇಕಿತ್ತು.