ತಮ್ಮದೇ ಉದ್ದಿಮೆ ಆರಂಭಿಸಲು ಆಸಕ್ತಿಯುಳ್ಳ ಮಹಿಳೆಯರಿಗಾಗಿ ಗೃಹಶೋಭಾ ಹಾಗೂ ಕರ್ನಾಟಕ  ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಪ್ತ ನಿಗಮ ನಿಯಮಿತ (KAPPEC) ಸಹಯೋಗದಲ್ಲಿ `ಗೃಹಶೋಭಾ ಎಂಪವರ್‌ ಹರ್‌' ಇವೆಂಟ್‌ ನಲ್ಲಿ ಉದ್ದಿಮೆದಾರರ ಸಲುವಾಗಿ, `ಮಹಿಳಾ ಆಹಾರ ಉದ್ದಿಮೆದಾರರಿಗೆ ಸಹಾಯಕ ಉಪಕ್ರಮ' ಕಾರ್ಯಕ್ರಮವನ್ನು, ಬೆಂಗಳೂರು ನಗರದ ಕೇಂದ್ರ ಭಾಗವಾದ ಟೌನ್‌ ಹಾಲ್ ‌ನಲ್ಲಿ ಏರ್ಪಡಿಸಲಾಗಿತ್ತು. ಇದರ ಪ್ರಮುಖ ಪ್ರಾಯೋಜಕರು ಎಂದರೆ ಜ್ಯೂವೆಲರಿ ಪಾರ್ಟ್‌ ನರ್‌ ಕಿಸ್ನಾ ಡೈಮಂಡ್‌ ಗೋಲ್ಡ್ ಜ್ಯೂವೆಲರಿ, ಅಸೋಸಿಯೇಟಿವ್ ಪಾರ್ಟ್‌ ನರ್ಸ್‌ ಹೆಲ್ತ್ ಕೇರ್‌ ಮೋಲ್ ‌ಬಿಯೋ ಹಾಗೂ KMF ನಂದಿನಿ, ಮೀಡಿಯಾ ಪಾರ್ಟ್‌ ನರ್‌ ಪ್ರಜಾಪ್ರಗತಿ  ಪ್ರಗತಿ ಟಿವಿ.

ಈ ಕಾರ್ಯಕ್ರಮದ ಇಡೀ ಫೋಕಸ್‌ ಸಾಮಾನ್ಯ ಮಹಿಳೆಯರಿಗೆ ಆಹಾರ ಉದ್ಯಮದಲ್ಲಿ ತೊಡಗಿಸಿಕೊಳ್ಳುವತ್ತ KAPPEC ಸಂಸ್ಥೆ ನೆರವು, ಸಭಿಕರಾಗಿ ಭಾಗವಹಿಸಿದ ಮಹಿಳೆಯರು ಈ ಸಂಸ್ಥೆಯ ಯೋಜನೆಗಳನ್ನು ಅರ್ಥ ಮಾಡಿಕೊಳ್ಳುವುದು, ಇದರ ಮೂಲಕ ತಾವು ಹೇಗೆ ಆಹಾರ ಉದ್ಯಮದಲ್ಲಿ ತೊಡಗಿಸಿಕೊಳ್ಳಬಹುದು ಎಂಬುದನ್ನು ಸವಿವರವಾಗಿ ತಿಳಿಯಲು ನೂರಾರು ಮಹಿಳೆಯರು ಇಲ್ಲಿ ಸೇರಿದ್ದರು.

ಉದ್ಘಾಟನೆಯ ಸೆಷನ್‌: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್‌, IAS, ಅವರು ಜ್ಯೋತಿ ಬೆಳಗಿಸುವುದರ ಮೂಲಕ ಪ್ರಾರಂಭೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ಇವರೊಂದಿಗೆ ಕರ್ನಾಟಕ ಹಾಲು ಒಕ್ಕೂಟದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀ ಬಿ. ಶಿವಸ್ವಾಮಿ, KAS, KAPPEC ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀ ಸಿ.ಎನ್‌. ಶಿವ ಪ್ರಕಾಶ್ ಹಾಗೂ ಪ್ರಜಾಪ್ರಗತಿ ಮತ್ತು ಪ್ರಗತಿ ಟಿವಿ ಸಂಪಾದಕರಾದ ಡಾ. ಎಸ್‌. ನಾಗಣ್ಣ ವೇದಿಕೆ ಅಲಂಕರಿಸಿದ್ದರು.

Dr.Shalini_Rajneesh

ಡಾ. ಶಾಲಿನಿಯವರು ಸಭಿಕರನ್ನು ಉದ್ದೇಶಿಸಿ, ಯಾವ ರೀತಿ ಮಹಿಳೆಯರು ಆಹಾರ ಉದ್ದಿಮೆ ಆರಂಭಿಸಬಹುದು ಎಂಬುದರ ಸೂಕ್ಷ್ಮ ವಿಚಾರಗಳನ್ನು ತಿಳಿಸಿಕೊಟ್ಟು, ಶ್ರದ್ಧೆ ಆಸಕ್ತಿಗಳಿಂದ ಅದನ್ನು ನಡೆಸಿಕೊಂಡು ಹೋಗಲು, KAPPEC ಸಂಸ್ಥೆ ಹೇಗೆ ಮಾರ್ಗದರ್ಶನ ನೀಡುತ್ತದೆ, ಜೊತೆಗೆ ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿಕೊಟ್ಟರು.

ನಂತರ ಶಿವಸ್ವಾಮಿಯವರು KAPPEC ಸಂಸ್ಥೆ ಯಾವ ರೀತಿ ಮಹಿಳಾ ಉದ್ದಿಮೆದಾರರಿಗೆ ಬೆನ್ನೆಲುಬಾಗಿರುತ್ತದೆ, ಸಣ್ಣ ಮೊತ್ತದ ಹೂಡಿಕೆಯಿಂದ ಉದ್ದಿಮೆ ಆರಂಭಿಸಿ, ಈ ಸಂಸ್ಥೆಯಿಂದ ಎಷ್ಟು ಮೊತ್ತದ ಸಬ್ಸಿಡಿ ಹಣದ ನೆರವು ಪಡೆಯಬಹುದು, ಮುಂದೆ ಹೇಗೆ ತಮ್ಮ ಉದ್ದಿಮೆ ಬೆಳೆಸಿಕೊಳ್ಳಬಹುದು ಎಂದು ವಿವರವಾಗಿ ತಿಳಿಸಿಕೊಟ್ಟರು.

ಆ ನಂತರ ಶಿವ ಪ್ರಕಾಶ್‌ ರವರು ಸವಿವರವಾಗಿ ಈ ಸಂಸ್ಥೆಯ ಆದರ್ಶ ಯೋಜನೆ, ರೂಪುರೇಷೆ ಇತ್ಯಾದಿಗಳನ್ನು ಸಾಮಾನ್ಯ ಮಹಿಳೆಯರಿಗೂ ಅರ್ಥವಾಗುವಂತೆ ಸರಳ ಮಾತುಗಳಲ್ಲಿ ಮನದಟ್ಟು ಮಾಡಿಕೊಟ್ಟರು. ನಿರುದ್ಯೋಗ ಸಮಸ್ಯೆ ನಿವಾರಣೆ, ಸಿರಿಧಾನ್ಯಗಳ ಮಹತ್ವ, ಅದರ ಆಹಾರ ಸಂಸ್ಕರಣೆಯನ್ನು ರೂಢಿಸಿಕೊಳ್ಳುವ ಕ್ರಮ, DRP ಗಳು ಅಂದ್ರೆ ಪ್ರತಿ ಜಿಲ್ಲೆಯಲ್ಲೂ ಇರುವ ತಮ್ಮ ಪ್ರತಿನಿಧಿಗಳ ಕುರಿತು ವಿವರಿಸಿ ಅವರಿಂದ ಉದ್ದಿಮೆ ಆರಂಭಿಸಲು ಸಲಹೆ, ಕ್ರಮ ಇತ್ಯಾದಿಗಳ ಬಗ್ಗೆ ತಿಳಿಸಿದರು.

ಅನಂತರ ಡಾ.ನಾಗಣ್ಣನವರು ಮಹಿಳೆಯರು ಎಂಥ ಉತ್ತಮ ಉದ್ಯಮಶೀಲರಾಗಬಹುದು, ಅವರ ಪ್ರಾಬಲ್ಯದಿಂದ ಹೇಗೆ ಉದ್ಯಮ ಬೆಳೆಯುತ್ತದೆ, ಹಳ್ಳಿಗಾಡು ಪ್ರದೇಶದಿಂದ ನವ ನಗರಗಳವರೆಗಿನ ಮಹಿಳಾ ಉದ್ಯಮಗಳ ಬೆಳವಣಿಗೆ, ಇಂದಿನ ದಿನಗಳಲ್ಲಿ ಇದರ ಅನಿವಾರ್ಯತೆ, ಹೆಣ್ಣುಮಕ್ಕಳಿಗೆ ಇದು ಹೇಗೆ ಪೂರಕ ಎಂಬುದರ ಕುರಿತು ಹಲವು ಕಿವಿಮಾತುಗಳನ್ನು ತಿಳಿಸಿಕೊಟ್ಟರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ