ಏಂಜಲ್ಸ್ ಎಂಬ ಕಲ್ಪನೆ : ಏಂಜಲ್ಸ್ ಎಂಬುದು ಒಂದು ಕಲ್ಪನೆ  ಆದರೆ ಭಾರಿ ಮಜಾ ಸಿಗುವಂಥದು. ಇದನ್ನೇ ಜೀವಂತವಾಗಿಡಲು ನ್ಯೂಯಾರ್ಕ್‌ನಲ್ಲಿ 1983ರಿಂದ ಮರ್ಮೇಡ್‌ ಪೆರೇಡ್‌ ಹೊರಡುತ್ತದೆ. ಇದರಲ್ಲಿ ಜನ  ಮರ್ಮೇಡ್‌ (ಮನುಷ್ಯ ದೇಹ, ಸೊಂಟದಿಂದ ಮೀನು) ಪೋಷಾಕು ಧರಿಸಿ ರಸ್ತೆಗಳಲ್ಲಿ ಮೆರವಣಿಗೆ ಹೊರಡುತ್ತಾರೆ. ಇದರಲ್ಲಿನ ಡಿಸೈನಿಂಗ್‌ ಅತ್ಯುದ್ಭುತ! ಹೀಗಾಗಿಯೇ ಇದನ್ನು ವೀಕ್ಷಿಸಲು ಸಾವಿರಾರು ಜನ ಸೇರುತ್ತಾರೆ.

ಈಕೆ ಸಶಕ್ತೀಕರಣದ ಪ್ರತೀಕ : ಇಲ್ಲಿನ ಮುಗ್ಧ ಮುಖದ ವ್ಯಕ್ತಿ ಎಷ್ಟೋ ಅತ್ಯಾಚಾರ ಸಹಿಸಿದ್ದಾಳೆ. ಈ ಪಾಕಿಸ್ತಾನಿ ಮಹಿಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಪಟ್ಟವಳು. ಆದರೆ ಅಳುತ್ತಾ ಸುಮ್ಮನಿರುವ ಬದಲು, ಈಕೆ ಪಾಕಿಸ್ತಾನದಂಥ ಕಂದಾಚಾರಿಗಳ ನಾಡಿನಲ್ಲಿ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ಕೊಡಿಸಿದಳು. ಈಗ ಈಕೆ ಸಶಕ್ತೀಕರಣದ ಪ್ರತೀಕ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಾಗ, ಈಕೆ ಅಮೆರಿಕಾದಲ್ಲಿ ಜಾನಪದ ಗಾಯನದ ಕಾರ್ಯಕ್ರಮ ನೀಡಿ ಶಭಾಷ್‌ಗಿರಿ ಗಿಟ್ಟಿಸಿದಳು. ಹೆಣ್ಣು ಎಲ್ಲೇ ಇರಲಿ, ತನಗೆ ನ್ಯಾಯ ಬೇಕಾದರೆ ಹೋರಾಟ ನಡೆಸಲೇಬೇಕು. ಸ್ವಾತಂತ್ರ್ಯ, ಸಮಾನತೆ ಮೇಲಿನಿಂದ ಇಳಿದು ಬರುವುದಿಲ್ಲ, ನಾವೇ ಗಿಟ್ಟಿಸಿಕೊಳ್ಳಬೇಕಷ್ಟೆ!

ಮೇಲೇರಿದ ಚೀನೀ ತಾಂತ್ರಿಕತೆ : ಚೀನೀ ಇನ್ವೆಂಟರ್‌ ಇದೀಗ ವಿಶ್ವವಿಡೀ ಪ್ರಭಾವ ಬೀರುತ್ತಿದ್ದಾರೆ. ಪುರಾಣಗಳಲ್ಲಿ ಪವಾಡ ನಡೆಯಿತು ಎನ್ನುವುದನ್ನು ಬಿಟ್ಟು ಚೀನೀ, ಜಪಾನಿ, ಕೊರಿಯಾಯೀ, ಏಷ್ಯನ್‌ ಥಾಯ್‌ ದೇಶಗಳು ಹೊಸ ಹೊಸ ಸಂಶೋಧನೆಗಳಲ್ಲಿ ಮುಳುಗಿವೆ. ಯೂರೋಪ್‌, ಅಮೆರಿಕಾಗಳ ಪೈಪೋಟಿಗೆ ಸಡ್ಡು ಹೊಡೆದಿವೆ. ಅಮೆರಿಕಾದ ಲಾಸ್‌ ಏಂಜಲೀಸ್‌ನ ಎಕ್ಸ್ ಪೋನಲ್ಲಿ ಎಲೆಕ್ಟ್ರಾನಿಕ್‌ ಉಪಕರಣಗಳ ವಿಭಾಗದಲ್ಲಿ ಚೀನಾವನ್ನು ಮೀರಿಸುವವರೇ ಇಲ್ಲ! ನಮ್ಮ ದೇಶದಲ್ಲಿ ಇನ್ನಾದರೂ ಎಚ್ಚೆತ್ತುಗೊಂಡು ಇಂಥವರಿಗೆ ಟಾಂಗ್‌ ಕೊಡಬೇಕಾಗಿದೆ.

ಹೀಗೊಂದು ಸೆಲ್ಫಿ ಕ್ರೇಜ್ : ಪಿಂಕ್‌ ಹೌಸ್‌ ತುಂಬಾ ಚಂದ ಅನಿಸದಿದ್ದರೂ, ಅದರ ಮುಂದೆ ಸೆಲ್ಛೀ ತೆಗೆದುಕೊಂಡು ಇನ್‌ಸ್ಟಾಗ್ರಾಮ್ ಗೆ ಹಾಕಿದಾಗ ಅದರ ಆನಂದವೇ ಬೇರೆ. ಹೀಗೆ ಒಬ್ಬ ಡೆವಲಪರ್‌, ಮುರಿದು ಜೋಡಿಸಬಹುದಾದ ಮನೆಗಳನ್ನು ಪಿಂಕ್‌ ಬಣ್ಣದಲ್ಲಿ ಮುಳುಗಿಸಿ. ಆ ದಾರಿಯಾಗಿ ಹಾದುಹೋಗುವ ಜನ ಇದರ ಮುಂದೆ ಫೋಟೋ ಕ್ಲಿಕ್ಕಿಸಿಕೊಳ್ಳಲಿ ಎಂದು. ಇದಂತೂ ದಿನೇದಿನೇ ಜನಪ್ರಿಯವಾಗುತ್ತಿದೆ. ಅಮೆರಿಕಾದ ಈ ಪದ್ಧತಿ ಗಮನಿಸಿ ಇನ್ನಾದರೂ ಹುಡುಗಿಯರು ಪಿಂಕ್‌ ಡ್ರೆಸ್‌ ತೊಡುವುದನ್ನು ಬಿಡಬೇಕು, ಇಲ್ಲದ್ದಿದರೆ ಕಿಡಿಗೇಡಿಗಳು ಮೇಲಿನ ಉದಾಹರಣೆ ಕೊಟ್ಟು, ಸೆಲ್ಛಿ ಕ್ಲಿಕ್ಕಿಸಲು ಧಾವಿಸಿದರೆ ಏನು ಮಾಡುವುದು?

ಸತ್ಯಕ್ಕೆ ನೆಲೆ ಇಲ್ಲ : ಸತ್ಯವನ್ನು ಕೊಲ್ಲಬೇಕೆಂದರೆ ಸತ್ಯ ಸಂದೇಶ ನೀಡುವವರನ್ನೇ ಕೊಂದುಬಿಡಿ! ಡ್ರಗ್ಸ್ ಮರ್ಡರ್‌ಗೆ ಖ್ಯಾತಿವೆತ್ತ ಮೆಕ್ಸಿಕೋ, ಇದೀಗ ಪತ್ರಕರ್ತರ ಪ್ರಾಣಹರಣ ಶುರು ಮಾಡಿದೆ. ಒಬ್ಬ ಪತ್ರಕರ್ತ ಸತ್ಯ ಸಂದೇಶ ನೀಡುತ್ತಿದ್ದ ಎಂಬ ಒಂದೇ ಕಾರಣಕ್ಕೆ ಡ್ರಗ್‌ ಕಂಟ್ರೋಲ್ ಅವನನ್ನು ಕೊಂದುಹಾಕಿತು. ನಮ್ಮಲ್ಲಿಯೂ ಸಹ ಇಲ್ಲಿ ಧರ್ಮದ ಹೆರಾಯಿನ್‌ ಮಾರುವವರು, ಧರ್ಮದ ಪರದೆ ಸರಿಸುತ್ತೇವೆ ಎನ್ನುವವರಿಗೆ ಇಂಥದೇ ಬೆದರಿಕೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೀಡುತ್ತಿದ್ದಾರೆ.

ನಾಜಿ ವಿರುದ್ಧ ಮೊಕದ್ದಮೆ : ಇಲ್ಲಿ ನಾಜಿಗಳನ್ನು ಬದುಕಿಸಬೇಕೆನ್ನುವ ಎಷ್ಟೋ ಗ್ರೂಪ್‌ ಜರ್ಮನಿ ಹಾಗೂ ಇನ್ನಿತರ ದೇಶಗಳಲ್ಲಿ ತಲೆಯೆತ್ತಿವೆ. ಇವು ಮುಸ್ಲಿಮರ ಹಾಗೂ ಅನ್ಯರ ಹೊರಗಿನ ಜನರಿಗೆ ಹಿಂಸೆ ನೀಡುತ್ತವೆ. 2000-2001ರವರೆಗೆ ಒಂದು ಗ್ರೂಪ್‌ 8 ಟರ್ಕಿಗಳಲ್ಲಿ ಒಬ್ಬ ಗ್ರೀಸ್‌, ಒಬ್ಬ ಜರ್ಮನಿಯ ಪೊಲೀಸರನ್ನು ಇದೇ ನಿಯೋಜಿಸಿ ನಾಜಿ ಹೆಸರಿನಲ್ಲಿ  ಕೊಂದುಹಾಕಿತು. ಈಗ ಅವರ ವಿರುದ್ಧ ಮೊಕದ್ದಮೆ ನಡೆಯುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ