ಪ್ರಾಣಿಗಳು ಚಳ್ಳೆಹಣ್ಣು ತಿನ್ನಿಸುವುದರಲ್ಲಿ ಅದೆಷ್ಟು ಪ್ರಾವೀಣ್ಯತೆ ಪಡೆದುಕೊಂಡಿರುತ್ತವೆ ಎಂದರೆ, ಮನುಷ್ಯರು ಕೂಡ ಅವುಗಳ ಮುಂದೆ ಮಂಡಿಯೂರಬೇಕು. ಅನುಕರಣೆ ಮಾಡುವುದರಲ್ಲಿ, ವಾಸನೆ, ಧ್ವನಿ ಹಾಗೂ ವರ್ತನೆ (ಉದಾಹರಣೆಗಾಗಿ ರೆಡ್‌ ಸ್ನೇಕ್‌ ಅಪಾಯಕಾರಿ ಸ್ಥಿತಿಯಲ್ಲಿ ತನ್ನ ಬಣ್ಣವನ್ನು ಅಪಾಯಕಾರಿ ಕೋರ್‌ ಸ್ನೇಕ್‌ನ ಹಾಗೂ ಕಂದುಬಣ್ಣದ ರೀತಿಯಲ್ಲಿ ಪರಿವರ್ತಿಸಿಕೊಳ್ಳುತ್ತದೆ) ವೇಷ ಬದಲಿಸಿಕೊಳ್ಳುವಿಕೆ, ಸತ್ತಂತೆ ಅಥವಾ ಗಾಯಗೊಂಡಂತೆ ನಟಿಸುವುದು, ಅಪಾಯಕಾರಿ ಭಂಗಿಯಲ್ಲಿ ಪ್ರತ್ಯಕ್ಷಗೊಳ್ಳುವುದು, ಮೌಖಿಕ ಅಥವಾ ಪೂರ್ವ ನಿಯೋಜಿತವಾಗಿ ವಂಚಿಸುವುದು ಇವನ್ನೆಲ್ಲ ಸಾಮಾನ್ಯವಾಗಿ ಪ್ರಾಣಿಗಳು ತಮಗೆ ತೀರಾ ಹಸಿವಾದಾಗ ಮಾಡುತ್ತವೆ. ಇಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳ ಬೇಕಾದ ಸಂದರ್ಭದಲ್ಲೂ ಈ ರೀತಿ ವರ್ತಿಸುತ್ತವೆ. ಒಮ್ಮೊಮ್ಮೆ ತಮ್ಮ ಈ ಕಲೆಯನ್ನು ಪ್ರಯೋಗಿಸಲು ಬಂದ ಸಾಧಾರಣ ಪ್ರಾಣಿ ಕೂಡ ಅಪಾಯಕಾರಿ ಪ್ರಾಣಿಯಂತೆ ಗೋಚರಿಸುತ್ತದೆ.

ಕೆಲವು ಪ್ರಾಣಿಗಳು ತಮ್ಮ ಹಾವಭಾವವನ್ನು ಯಾವ ರೀತಿ ಬದಲಿಸಿಕೊಳ್ಳುತ್ತವೆ ಎಂದರೆ, ಅವುಗಳ ಬೇಟೆ ತಂತಾನೇ ಅವುಗಳ ಹತ್ತಿರವೇ ದುರಾಸೆಯಿಂದ ಬಂದುಬಿಡುತ್ತದೆ. ಪೇರೆಂಟ್‌ ಬರ್ಡ್‌ ಬೇಟೆಗಾರ ಹಕ್ಕಿಯಿಂದ ತನ್ನ ಮರಿಗಳನ್ನು ದೂರವಿಡಲು ಎಂತಹ ಒಂದು ನಾಟಕವನ್ನು ಮಾಡುತ್ತದೆ ಎಂದರೆ, ತನ್ನ ರೆಕ್ಕೆಗೆ ಏಟು ಬಿದ್ದು ತಾನು ನಿಸ್ಸಹಾಯಕ ಸ್ಥಿತಿಯಲ್ಲಿರುವಂತೆ ನಟಿಸುತ್ತದೆ. ಅದರ ಈ ನಡವಳಿಕೆಯಿಂದ ಬೇಟೆಗಾರ ಪಕ್ಷಿ ಮರಿಗಳನ್ನು ಬಿಟ್ಟು ತಾಯಿಯ ಕಡೆ ತನ್ನ ಗಮನಹರಿಸುತ್ತದೆ. ಕೆಲವು ಬಗೆಯ ಪತಂಗಗಳು ಬಾವಲಿಗಳನ್ನು ಮೋಸಗೊಳಿಸಲು ಒಂದು ವಿಶಿಷ್ಟ ತಂತ್ರ ಅನುಸರಿಸುತ್ತವೆ. ಬಾವಲಿಗಳು ಬರುವ ಸೂಚನೆ ಸಿಗುತ್ತಿದ್ದಂತೆಯೇ ಟೈಗರ್‌ ಪತಂಗಗಳ ಹಾಗೆ ಧ್ವನಿ ಹೊರಡಿಸಲಾರಂಭಿಸುತ್ತವೆ. ಆ ಧ್ವನಿ ನಿರಂತರವಾಗಿ ಮುಂದುವರಿಯುತ್ತದೆ. ಆ ಪತಂಗಗಳು ರುಚಿಕರವಾಗಿಲ್ಲ, ಅವು ಟೈಗರ್‌ ಪತಂಗಗಳೆಂದು ಭಾವಿಸಿ ಬಾವಲಿಗಳು ಬೇರೆ ಕಡೆಗೆ ಹೋಗಿಬಿಡುತ್ತವೆ.

ತಲೆ ಯಾವುದು ಬಾಲ ಯಾವುದು?

ಮಧ್ಯ ಆಫ್ರಿಕಾದ 2 ತಲೆಯ ಹಾವಿನ ಬಾಲ ಅದರ ತಲೆಯ ಹಾಗೆಯೇ ಕಾಣುತ್ತದೆ. ಇದು ತನ್ನ ಬಾಲವನ್ನು ಹೇಗೆ ಅಲ್ಲಾಡಿಸುತ್ತದೆ ಎಂದರೆ ಬೇರೆ ಹಾವುಗಳು ತಮ್ಮ ತಲೆಯನ್ನು ಅಲ್ಲಾಡಿಸುವ ರೀತಿಯಲ್ಲಿ. ಈ ಹಾವಿನ ಇಂಥ ವೈಶಿಷ್ಟ್ಯತೆ ವೈರಿ ಪ್ರಾಣಿಗೆ ಯಾವ ಕಡೆಯಿಂದ ದಾಳಿ ಮಾಡಬೇಕೆಂಬ ಬಗ್ಗೆ ಗೊಂದಲದಲ್ಲಿ ಕೆಡವುತ್ತದೆ.

ಬಣ್ಣ ಬದಲಿಸುವ ವಿಶೇಷತೆ

ಬಹಳಷ್ಟು ಪ್ರಾಣಿಗಳು ತಮ್ಮ ದೇಹದ ಬಣ್ಣವನ್ನು ವಾತಾವರಣಕ್ಕೆ ತಕ್ಕಂತೆ ಬದಲಿಸಿಕೊಳ್ಳುವ (ಕೆಮೋಫ್ಲೇಜ್‌) ಸಾಮರ್ಥ್ಯವನ್ನು ಪಡೆದಿರುತ್ತವೆ. ಏಕೆಂದರೆ ಬೇಟೆಗಾರ ಪ್ರಾಣಿಗೆ ಅದರ ಸುಳಿವು ಕೂಡ ಸಿಗಬಾರದು ಎಂಬುದಾಗಿರುತ್ತದೆ. ಯೂರೊಪ್ಲೆಟಸ್‌ ಎಂಬ ಹಲ್ಲಿಗೆ ಪರಿಪೂರ್ಣವಾಗಿ ಮಾಯವಾಗುವ ಕಲೆ ಕರಗತಾಗಿಬಿಟ್ಟಿದೆ. ಕೆಟಿಟಡ್‌ ಎಂಬ ಪತಂಗ ತನ್ನ ಬಣ್ಣ ಹಾಗೂ ಆಕಾರವನ್ನು ಬಗೆಬಗೆಯ ರೀತಿಯಲ್ಲಿ ಪರಿವರ್ತಿಸಿಕೊಳ್ಳುತ್ತದೆ. ಪರಿಪೂರ್ಣ ಎಲೆಯ ಆಕಾರದಲ್ಲಿ, ಅರ್ಧ ತಿಂದ ಎಲೆಯ ಆಕಾರದಲ್ಲಿ ತನ್ನನ್ನು ಬಿಂಬಿಸುತ್ತದೆ. ಗೋಸುಂಬೆ ಅಥವಾ ಊಸರವಳ್ಳಿ ಬೇರೆ ಬೇರೆಯ ಜಾತಿಯಲ್ಲಿ ನೇರಳೆ, ಕೇಸರಿ, ಹಸಿರು, ಕಂದು, ಹಳದಿ, ಬದನೆ, ನೀಲಿ, ಕೆಂಪು ಮಿಶ್ರಿತ ಬಣ್ಣದಲ್ಲಿ ತನ್ನ ದೇಹವನ್ನು ಪರಿವರ್ತಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಕೆಲವು ಆಕ್ಟೋಪಸ್‌ಗಳು ತಮ್ಮ ಚರ್ಮದ ಮಾಂಸಖಂಡಗಳನ್ನು ಬಳಸಿಕೊಂಡು ಬಣ್ಣ ಹಾಗೂ ಹಾವಭಾವ ಎರಡನ್ನೂ ಬದಲಿಸಿ ಸಮುದ್ರ ಪಾಚಿಯಂತೆ ರೂಪಧಾರಣೆ ಮಾಡುತ್ತವೆ. ಅಷ್ಟೇ ಅಲ್ಲ, ಸಮುದ್ರ ಬಂಡೆಯಂತಹ ಒರಟು, ಕ್ರೂರ ರೂಪವನ್ನು ಧರಿಸಬಲ್ಲದು. ಈ ರೀತಿಯ ವಿಶೇಷತೆಯುಳ್ಳ ಆಕ್ಟೋಪಸ್‌ ತನ್ನ ಫ್ಲೆಕ್ಸಿಬಲ್ ದೇಹ ಹಾಗೂ ಬಣ್ಣ ಬದಲಿಸುವ ಸಾಮರ್ಥ್ಯವುಳ್ಳ ಅವು ಒಮ್ಮೊಮ್ಮೆ ಅಪಾಯಕಾರಿ ಜೀವಿ, ಲಯನ್‌ ಫಿಶ್‌, ಸಮುದ್ರ ಹಾವಿನ ರೂಪ ಸಹ ಪಡೆದುಕೊಳ್ಳಬಲ್ಲದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ