ಕುಟುಂಬದ ಕೇಂದ್ರಬಿಂದು ಆಗಿರುವ ಗೃಹಿಣಿ, ಏನಾದರೂ ಮಾಡಿ ಒಂದಿಷ್ಟು ಹಣಕಾಸು ಉಳಿತಾಯ ಮಾಡಿದರೆ ಮಾತ್ರ, ಮುಂದೆ ಕುಟುಂಬಕ್ಕೆ ಸುಖವೇ ಭವಿಷ್ಯ ಗ್ಯಾರಂಟಿ. ಇದನ್ನು ಹಂತ ಹಂತವಾಗಿ ಸಾಧಿಸುವುದು ಹೇಗೆ......?    

ಮಹಿಳೆಯರು ತಮ್ಮ ಕುಟುಂಬದ ಸದಸ್ಯರೆಲ್ಲರ ದೈಹಿಕ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವರೆಂದೇ ಗುರುತಿಸಿ ಕೊಂಡವರು. ಹಾಗೆಯೇ ಮಹಿಳೆಯರಾದ ನಾವೆಲ್ಲರೂ ನಮ್ಮ ಹಣಕಾಸಿನ ಕಡೆಗೆ ಗಮನ ಹರಿಸುವುದು ಕೂಡ ಅಷ್ಟೇ ಅತ್ಯಗತ್ಯ. ಹಣಕಾಸನ್ನು ಸದಾ ನಾವು ಉಳಿತಾಯ ಮಾಡುತ್ತಾ ಬಂದು ಅದರ ಕಡೆಗೆ ವಿಶೇಷ ಗಮನಹರಿಸಿದರೆ, ಅದೇ ಹಣಕಾಸು ಕಷ್ಟ ಕಾಲದಲ್ಲಿ ನಮ್ಮ ನೆರವಿಗೆ ಬರುವುದು, ಕಂಡವರ ಬಳಿ ಸಾಲಕ್ಕೆ ಕೈ ಚಾಚುವ ಅಗತ್ಯವಿಲ್ಲ. ಹಣವನ್ನು ಸಮರ್ಪಕ ರೀತಿಯಲ್ಲಿ ಬಳಸುತ್ತಾ ನಿರಂತರವಾಗಿ ಉಳಿತಾಯ ಮಾಡುತ್ತಾ ಬಂದರೆ ನಮ್ಮ ಬಳಿ ಅಗತ್ಯಕ್ಕೆ ತಕ್ಕಷ್ಟು ಹಣವಿದೆ ಎಂಬ ಆತ್ಮವಿಶ್ವಾಸ ಕೂಡ ಬೆಳೆಯುವುದು.

ಈ ರೀತಿ ಹಣವನ್ನು ಉಳಿಸಿ ನಿಯಮಿತ ಖರ್ಚು ಮಾಡುವುದರಿಂದ ನಮಗೆ ಲಂಚಕ್ಕೆ ಕೈ ಒಡ್ಡಬೇಕೆಂದು ಅಥವಾ ಭ್ರಷ್ಟಾಚಾರವೆಸಗಿ ಅಪಾರ ದುಡ್ಡು ಮಾಡಬೇಕೆಂಬ ಕೆಟ್ಟ ಆಲೋಚನೆಗಳು ಬರುವುದು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ, ನಮಗೆ ಬೇರೆಯವರ ದುಡ್ಡಿಗೆ ಬಾಯಿ ಬಿಡಬೇಕೆಂದು ಎಂದಿಗೂ ಅನಿಸುವುದೇ ಇಲ್ಲ. ಮುಂದಿನ ದಿನಗಳಿಗಾಗಿ ಕುಟುಂಬದ ಹಣಕಾಸಿನ ಆರೋಗ್ಯವನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ನಾವೆಲ್ಲರೂ ಈ ಕೆಳಗಿನಂತೆ ಗಮನ ಹರಿಸೋಣವೇ?

ಅತಿ ಮುಖ್ಯ ಅಂಶಗಳು

ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ತಮ್ಮ ಖರ್ಚಿಗೆಂದು ಹೆತ್ತವರು ನೀಡಿದ ಪಾಕೆಟ್‌ ಮನಿಯಲ್ಲಿ ಸ್ವಲ್ಪ ಭಾಗವನ್ನು ಬ್ಯಾಂಕ್‌ ಖಾತೆ ತೆರೆದು ಅಲ್ಲಿ ಉಳಿತಾಯ ಮಾಡುವುದು ಒಳ್ಳೆಯ ಅಭ್ಯಾಸ. ಮುಂದೆ ಅದೇ ರೂಢಿಯಾಗಿ ಇನ್ನಷ್ಟು ಉಳಿತಾಯ ಮಾಡಲು ಪ್ರೇರಣೆ ಸಿಗುತ್ತದೆ.

ನೌಕರಿಗೆ ಸೇರಿ ಸಂಬಳ ದೊರಕಿದ ಕೂಡಲೇ ಸಂತಸ ಹಂಚಿಕೊಳ್ಳಲು ತಮ್ಮ ಪ್ರೀತಿ ಪಾತ್ರರಿಗೆ ಮೊದಲ ಸಂಬಳದಲ್ಲಿ ಉಡುಗೊರೆ ನೀಡುವುದು ಎಷ್ಟು ಮುಖ್ಯವೋ, ಮೊದಲ ತಿಂಗಳಿನಿಂದಲೇ ಹಣ ಉಳಿತಾಯ ಮಾಡುವುದೂ ಅಷ್ಟೇ ಮುಖ್ಯ. ದೊರೆತ ಸಂಬಳದಲ್ಲಿ ಕನಿಷ್ಠ ಶೇ.25 ರಷ್ಟನ್ನು ಉಳಿತಾಯ ಮಾಡುವುದು ಅಪೇಕ್ಷಣೀಯ. ಮನೆ ಖರ್ಚಿಗೆಂದು ಗಂಡಂದಿರು ತಿಂಗಳ ಆರಂಭದಲ್ಲಿ ನೀಡುವ ಹಣದಲ್ಲಿ ಸ್ವಲ್ಪ ಭಾಗವನ್ನು ಹೀಗೆ ಉಳಿತಾಯ ಮಾಡಬಹುದು.

ಪ್ರತಿ ತಿಂಗಳೂ ಹಣ ಉಳಿತಾಯ ಮಾಡಲು ಅನುಕೂಲವಾಗುವಂತೆ ಬ್ಯಾಂಕ್‌, ಅಂಚೆ ಕಛೇರಿಗಳಲ್ಲಿ ಆರ್ತಕ ಠೇವಣಿ (ರೆಕರಿಂಗ್‌ಡೆಪಾಸಿಟ್‌ ಅಥವಾ ಆರ್‌.ಡಿ) ಖಾತೆಗಳನ್ನು ತೆರೆಯುವ ಸೌಲಭ್ಯವಿದೆ. ಅಗತ್ಯ ಬಿದ್ದರೆ ಇಂತಹ ಆರ್‌.ಡಿ. ಖಾತೆಗಳಲ್ಲಿ ಜಮಾ ಮಾಡಿದ ಮೊತ್ತದ ಮೇಲೆ ಸಾಲ ಕೂಡ ಪಡೆಯಬಹುದು.

ಈ ಸಾಲಕ್ಕೆ ಆರ್‌.ಡಿ ಠೇವಣಿಗೆ ದೊರಕುವ ಬಡ್ಡಿಗಿಂತ ತುಸು ಹೆಚ್ಚಿನ ಬಡ್ಡಿ ಇರುವುದು. ಠೇವಣಿಯ ಮೇಲಿನ ಬಡ್ಡಿ ದೊರಕುತ್ತಲೇ ಇರುವುದು. ಬೇರೆ ಮೂಲಗಳಿಂದ ಹಣ ದೊರಕಿದರೆ ಇಂತಹ ಸಾಲವನ್ನು ತೀರಿಸಬಹುದು ಅಥವಾ ಠೇವಣಿ ಪರಿಪಕ್ವಗೊಂಡಾಗ ಅಂದರೆ ಅವಧಿ ಮುಗಿದಾಗ ಅದರಲ್ಲಿ ಸಾಲದ ಮೊತ್ತವನ್ನು ಕಳೆದು, ಉಳಿದ ಮೊತ್ತವನ್ನು ಪಡಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ