ಇಂದು ಸಾಮಾಜಿಕ ಜಾಲತಾಣಗಳನ್ನು ಬಳಸದ ಜನರೇ ಇಲ್ಲ. ಆಬಾಲವೃದ್ಧರಾಗಿ ಇಂದು ಇದು ಎಲ್ಲರಿಗೂ ಅತ್ಯಗತ್ಯ. ಸಾಮಾಜಿಕ ಜಾಲತಾಣಗಳಿಂದ ದೊರಕುವ ಲಾಭ ಅಷ್ಟಿಷ್ಟಲ್ಲ. ಆದರೆ ಇಂದು ಇದರ ದುರ್ಬಳಕೆ ಅತಿಯಾಗುತ್ತಿದೆ. ಹಾಗಾದರೆ ಇದು ವರವೋ ಶಾಪವೋ.....?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ಸಾರ್ವಜನಿಕ ಸಮೂಹ ಮಾಧ್ಯಮವನ್ನು ಮೀರಿ ಬೆಳೆಯುತ್ತಿದ್ದು, ಜನಸಾಮಾನ್ಯರ ಮಧ್ಯೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರಲ್ಲಿ ಜನಸಾಮಾನ್ಯರು ಸಾರ್ವಜನಿಕ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಧ್ಯವಿರುವುದರಿಂದ ಕೆಲವು ಮಾಧ್ಯಮ ತಜ್ಞರು ಇದನ್ನು ಜನಸಾಮಾನ್ಯರ ಸಬಲೀಕರಣದ ಬೆಳವಣಿಗೆ ಎಂದು ಬಣ್ಣಿಸಿರುವುದುಂಟು. ಆದರೆ ಇಂದು ಈ ಮಾಧ್ಯಮ ಬೆಳೆಯುತ್ತಿರುವ ರೀತಿ, ಅದರ ದಿಕ್ಕು ಸ್ವರೂಪ ಮತ್ತು ಬಳಕೆಯಾಗುತ್ತಿರುವ ಉದ್ದೇಶಗಳನ್ನು ಗಮನಿಸಿದರೆ ಮೈ ಜುಮ್ಮೆನ್ನುತ್ತದೆ.

ಮೊದ ಮೊದಲು ಕೆಲವು ಸಂಘಟಿತ ಗುಂಪುಗಳು ಈ ಮಾಧ್ಯಮವನ್ನು ತಾವು ನಂಬಿದ ರಾಜಕೀಯ ಸಿದ್ಧಾಂತ ಹರಡಲೆಂದು ಬಳಸಿಕೊಳ್ಳಲು ಪ್ರಾರಂಭಿಸಿದವು. ನಂತರ ತನ್ನ ಹಾದಿಗೆ ಅಡ್ಡ ಬರುವುದೆಂದು, ಈ ಅವಹೇಳನ ತಾತ್ವಿಕ ವಾದವಿವಾದಗಳ ಚೌಕಟ್ಟಿನಲ್ಲಿ ಇರುವವರೆಗೆ ಅದನ್ನು ಸಹಿಸಬಹುದಾಗಿತ್ತು. ಆದರೆ ಇಂತಹ ಗುಂಪುಗಳು ಯಾವ ಮಟ್ಟಿಗೆ ಮುಟ್ಟಿದೆ ಎಂದರೆ, ಸಾರ್ವಜನಿಕ ಜೀವನದಲ್ಲಿ ಬಹು ಮಹತ್ವದ ವ್ಯಕ್ತಿತ್ವಗಳೆಂದು ಸ್ಥಾಪಿತವಾಗಿರುವ ಚಾರಿತ್ರಿಕ ವ್ಯಕ್ತಿಗಳ ವೈಯಕ್ತಿಕ ಅವಹೇಳನಗಳನ್ನು ಆರಂಭಿಸಲಾಗಿದೆ. ನಮ್ಮ ರಾಷ್ಟ್ರಪಿತನಿಂದ ಹಿಡಿದು ನಮ್ಮ ಸ್ವಾತಂತ್ರ್ಯ ಹೋರಾಟದ ಮುಖ್ಯ ವ್ಯಕ್ತಿಗಳ ಚಾರಿತ್ರ್ಯ ಹರಣದ ನಿರಂತರ ಪ್ರಯತ್ನಗಳು ನಿರಂತರವಾಗಿ ಸಾಗುತ್ತಲೇ ಇವೆ.

adhi-abadi

ಸಾಮಾಜಿಕ ಜಾಲತಾಣಗಳಿಲ್ಲದಿದ್ದಾಗ

ಸಾಮಾಜಿಕ ಜಾಲತಾಣಗಳಾದ ಫೇಸ್‌ ಬುಕ್‌, ಟ್ವಿಟರ್‌, ವಾಟ್ಸ್ ಆ್ಯಪ್‌ ಇವುಗಳು ಇಲ್ಲದೇ ಇದ್ದ ಕಾಲದಲ್ಲಿ ಓರ್ವ ವ್ಯಕ್ತಿ ತನ್ನ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಸೂಕ್ತ ವೇದಿಕೆ ಎನ್ನುವುದು ಇರಲಿಲ್ಲ. ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವವಿರುವುದು ಹೌದಾದರೂ ಕೂಡ ಅಭಿವ್ಯಕ್ತಿಗೊಳಿಸುವುದು ಎಲ್ಲಿ ಮತ್ತು ಹೇಗೆ ಎನ್ನುವ ಪ್ರಶ್ನೆಯಿತ್ತು. ಕಳೆದ 6-7 ವರ್ಷಗಳಿಂದ ಈ ಸಾಮಾಜಿಕ ಜಾಲತಾಣಗಳು ತಲೆಯೆತ್ತಿದ್ದು, ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿದೆ.

ಇವುಗಳ ಬಳಕೆಯ ಉದ್ದೇಶವೇನು?

ಈ ಮೊದಲು ಹೇಳಿದಂತೆ ಸಾಮಾಜಿಕ ಜಾಲತಾಣಗಳಾದ ಫೇಸ್‌ ಬುಕ್‌, ಟ್ವಿಟರ್‌, ವಾಟ್ಸ್ ಆ್ಯಪ್‌,  ಹೈಕ್‌, ಟೆಲಿಗ್ರಾಂ ಮೊದಲಾದವುಗಳನ್ನು ನಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವ ಒಂದು ವೇದಿಕೆಯನ್ನಾಗಿ ನಾವು ನಮ್ಮ ವೈಯಕ್ತಿಕ ನೆಲೆಯಲ್ಲಿ ಬಳಸಬೇಕು ಮತ್ತು ಈ ಅಭಿವ್ಯಕ್ತಿಗಾಗಿಯೇ ಇವುಗಳನ್ನು ಬಳಸುತ್ತಿದ್ದೇವೆ ಎಂದು ಅತ್ಮಾವಲೋಕನ ಮಾಡಿಕೊಳ್ಳಬೇಕು.

Lead-Galat-hai-gender-ke-hisab

ಇವನ್ನು ಬಳಸುವಲ್ಲಿ ಎಚ್ಚರ!

ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ಹೆಸರಿನಲ್ಲಿ ನಾವು ಮನಸ್ಸಿಗೆ ಬಂದಂತೆ ವರ್ತಿಸುವುದಕ್ಕೋ, ಮಾತನಾಡುವುದಕ್ಕೋ ಬರುವುದಿಲ್ಲ. ಹಾಗೆ ಮಾಡುವುದು ತಪ್ಪಾಗುತ್ತದೆ. ನಾಗರಿಕ ಸಮಾಜದ ನಿಯಮಾವಳಿಗಳಿಗೆ ಒಪ್ಪಿ ಬದುಕಬೇಕಾದದ್ದು ನಾಗರಿಕರು ಎನಿಸಿಕೊಂಡಿರುವ ನಿಮ್ಮ ಕರ್ತವ್ಯವೂ ಹೌದು. ನಮ್ಮ ಕರ್ತವ್ಯವನ್ನು ಪಾಲಿಸಿದಾಗಲಷ್ಟೇ ನಮಗೆ ಹಕ್ಕಿನ ಬಗ್ಗೆ ಮಾತನಾಡಲು ಮತ್ತು ನಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯ. ಸಾಮಾಜಿಕ ಜಾಲತಾಣ ಒಂದು ಸಾರ್ವಜನಿಕ ವೇದಿಕೆ ಅನಿಸಿಕೆ. ಇಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಎತ್ತರದ ವೇದಿಕೆಯಲ್ಲಿದ್ದೇವೆ. ವೇದಿಕೆಯ ಕೆಳಗಡೆ ಕೇಳುಗರು ಅನೇಕರಿದ್ದಾರೆ ಎನ್ನುವ ಪರಿಜ್ಞಾನ ನಮಗಿರಬೇಕು. ಈ ಪರಿಜ್ಞಾನ ಇಲ್ಲದೇ ಹೋದಾಗ ಎಡವಟ್ಟುಗಳಾಗುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸಂಸ್ಕಾರಯುತವಾಗಿದ್ದರೆ ಎಲ್ಲರಿಗೂ ಒಳ್ಳೆಯದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ