ಗಂಡಸರಿಗೆ ಹೋಲಿಸಿದಾಗ ಹೆಣ್ಣುಮಕ್ಕಳು ಹೂಡಿಕೆಗಳಲ್ಲಿ ಕಡಿಮೆ ಹಣ ತೊಡಗಿಸುತ್ತಾರೆ. ಇದರ ಹಿಂದಿನ ಕಾರಣ ತಿಳಿಯುವುದು ಹಾಗೂ ಯಶಸ್ವೀ ಇನ್ವೆಸ್ಟರ್ಆಗುವುದು ಎಷ್ಟು ಮುಖ್ಯ ಎಂದು ವಿವರಾಗಿ ತಿಳಿಯೋಣವೇ…..?

ಮಹಿಳೆಯರು ಮನೆಯ ಜ್ಯೋತಿಗಳಂತೆ, ಅದರಲ್ಲೂ ಗೃಹಿಣಿ ಮನೆಯ ಕೇಂದ್ರಬಿಂದು, ನಂದಾದೀಪ! ಇತ್ತೀಚೆಗೆ ಹೊರಗಿನ ಪ್ರಪಂಚದಲ್ಲೂ ಹೆಂಗಸರ ಪಾರುಪತ್ಯ ಪ್ರಬಲವಾಗಿದೆ. ತಮ್ಮ ಯೋಗ್ಯತೆಯ ಆಧಾರದಿಂದ ಉನ್ನತ ಹುದ್ದೆಗಳನ್ನೇರುತ್ತಾ, ಉನ್ನತ ಉದ್ದಿಮೆಗಳನ್ನು ನಿರ್ವಹಿಸುತ್ತಾ ಸೈ ಎನಿಸುತ್ತಿದ್ದಾರೆ. ಎಷ್ಟೋ ಸಲ ಇವರ ಸಂಬಳ ಪುರುಷ ಸಹೋದ್ಯೋಗಗಳಿಗಿಂತ ಹೆಚ್ಚೇ ಇರುತ್ತದೆ. ಆದರೂ ಅವರಿಗೆ ಆರ್ಥಿಕ ಸ್ವಾತಂತ್ರ್ಯದ ಅರಿವಿಲ್ಲ. ಅವರು ಹೋಮ್ ಮೇಕರ್‌ ಯಾ ಉದ್ಯೋಗದಲ್ಲಿರಲಿ, ಉಳಿತಾಯ ಮಾಡುವುದರಲ್ಲಿ ಎತ್ತಿದ ಕೈ! ಆದರೆ ಕೇವಲ ಗಳಿಸುವುದು ಹಾಗೂ ಉಳಿತಾಯ ಮಾಡುವುದು ಮಾತ್ರ ಸಾಲದು. ಅವರಿಗೆ ಉಳಿತಾಯದ ಹೂಡಿಕೆಯನ್ನು ಎಲ್ಲಿ, ಹೇಗೆ ಮಾಡಬೇಕು ಇತ್ಯಾದಿಗಳ ಟೆಕ್ನಿಕ್ಸ್ ತಿಳಿದಿರಬೇಕು. ಈ ಕುರಿತಾಗಿ ಆಳವಾದ ಆರ್ಥಿಕ ಜ್ಞಾನ ಹೊಂದಿರಬೇಕಾದದೂ ಅಷ್ಟೇ ಮುಖ್ಯ. ಹಾಗಾದಾಗ ಮಾತ್ರ ಭವಿಷ್ಯದಲ್ಲಿ ಅವರು ಆರ್ಥಿಕ ಸ್ವಾತಂತ್ರ್ಯದ ರುಚಿ ಸವಿಯಲು ಸಾಧ್ಯ.

ನೀವು ಸಣ್ಣ ಸಣ್ಣ ಕಡೆ ಉಳಿತಾಯ ಮಾಡಿ, ಸಾಕಷ್ಟು ಹಣ ಒಂದೆಡೆ ಸಂಗ್ರಹಿಸಿದ್ದೀರಿ ಎಂದಿಟ್ಟುಕೊಳ್ಳಿ. ಆದರೆ ನಂತರ ಇದನ್ನು ಎಲ್ಲಿ ಹೂಡಿಕೆ (ಇನ್‌ ವೆಸ್ಟ್) ಮಾಡುವುದು ಎಂದು ತಿಳಿಯದೆ ಗೊಂದಲಕ್ಕೆ ಈಡಾಗಬಾರದು. ಇದೇ ತರಹ ಆಕಸ್ಮಿಕ ದುರಂತದಿಂದಾಗಿ ನಿಮ್ಮ ಪತಿ ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದರೆ, ನೀವು ಬ್ಯಾಂಕಿಗೆ ಹೋಗಿ ಹಣ ಕಟ್ಟುವುದು/ಪಡೆಯುವುದು ಮಾಡುವುದೇ ಗೊತ್ತಿಲ್ಲ ಅಂದ್ರೆ ಬಹಳ ಕಷ್ಟಕ್ಕೆ ಬರುತ್ತದೆ. ಅವರ ಮೆಡಿಕ್ಲೇಮ್ ಪಾಲಿಸಿ ಹೇಗೆ ಕ್ಲೇಮ್ ಮಾಡುವುದು ಎಂಬುದೂ ತಿಳಿದಿರಬೇಕು. ಅಕಸ್ಮಾತ್‌ ಅವರು ಆ್ಯಕ್ಸಿಡೆಂಟ್‌ ನಿಂದಾಗಿ 1-2 ತಿಂಗಳು ಕಡ್ಡಾಯ ಬೆಡ್‌ ರೆಸ್ಟ್ ತೆಗೆದುಕೊಳ್ಳುವಂತಾದರೆ, ನೀವೇ 1-2 ತಿಂಗಳು ಅವರ ಎಲ್ಲಾ ವ್ಯವಹಾರ, ಮನೆವಾರ್ತೆ ಗಮನಿಸಬೇಕಾದೀತು. ಆಗ ಕಣ್‌ ಕಣ್‌ ಬಿಟ್ಟು ಕೂರುವುದರಿಂದ ಕೆಲಸ ಕೆಡುತ್ತದೆ.

ನೀವು ಇಬ್ಬರು ಮಕ್ಕಳ ತಾಯಿ ಆಗಿದ್ದರೂ, ಇನ್ನೂ ನಿಮಗೆ ಪತಿಯ ಬಿಸ್‌ ನೆಸ್‌, ಮನೆಗೆ ಸಂಬಂಧಿಸಿದ ಫೈನಾನ್ಸ್ ನಿಭಾಯಿಸಲು ಗೊತ್ತಿಲ್ಲ ಅಂದ್ರೆ ಕಡುಕಷ್ಟ. ಇಂಥ ಸಂದರ್ಭದಲ್ಲಿ ನೀವು ಹತ್ತಿರದವರ ನೆರವು ಬೇಡುತ್ತಾ ಎಷ್ಟು ದಿನ ಕಾಯಲು ಸಾಧ್ಯ? ಇಂಥ ಅನೇಕ ಉದಾಹರಣೆಗಳಿಂದ ನಮಗೆ ತಿಳಿದುಬರುವುದು ಅಂದ್ರೆ ಮಹಿಳೆಯರಿಗೆ ಫೈನಾನ್ಸಿಯಲ್ ನಾಲೆಜ್‌ ಬಲು ಮುಖ್ಯ ಎಂಬುದು. ಯಾರ ಕುಟುಂಬದಲ್ಲಿ ಯಾವಾಗ ಬೇಕಾದರೂ ಎಮರ್ಜೆನ್ಸಿ ಕಾಣಿಸಿಕೊಳ್ಳಬಹುದು. ಆಗ ನೀವು ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ಇರಬೇಕು. ಹೀಗಾಗಿ ಮಹಿಳೆಯರು ಆರ್ಥಿಕ ರೂಪದಲ್ಲಿ ಸ್ವತಂತ್ರರಾಗಿರುವುದು ಅತಿ ಅವಶ್ಯಕ.

ಮಹಿಳೆಯರು ಬೆಟರ್ಹೂಡಿಕೆದಾರರಾಗುವುದು ಹೇಗೆ?

ಮಹಿಳೆಯರ ಮ್ಯಾನೇಜ್‌ ಮೆಂಟ್‌ ಕುರಿತಾಗಿ ಯಾವುದೇ ಸಾಲು, ಪ್ರಶ್ನಾರ್ಥಕ ಚಿಹ್ನೆ ಮೂಡುವುದಿಲ್ಲ. ಅವರು ತಮ್ಮ ಕುಟುಂಬ ಮಾತ್ರವಲ್ಲದೆ, ಸಮಾಜ, ದೇಶ, ಮಹಾನ್‌ ದಿಗ್ಗಜ ಕಂಪನಿಗಳ ಸಿಇಓ ಆಗಿ ಖ್ಯಾತರಾಗಿದ್ದಾರೆ. ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಾವೆಂಥ ಪ್ರಾಬಲ್ಯ ವಹಿಸಬಲ್ಲೆವು ಎಂಬುದನ್ನು ಸಾಬೀತುಪಡಿಸಿದ್ದಾರೆ. ಆದರೆ ಒಂದು ವಿಷಯದಲ್ಲಿ ಮಾತ್ರ ದಟ್ಟ ನಿರಾಸೆ ಇದೆ. ನಮ್ಮ ದೇಶದ ಬಹುತೇಕ ಕುಟುಂಬಗಳಲ್ಲಿ ಹೆಣ್ಣನ್ನು ಹಣದ ಹೂಡಿಕೆಯ ವಿಷಯದಲ್ಲಿ, ಅದರ ಮ್ಯಾನೇಜ್‌ ಮೆಂಟ್‌ ಕುರಿತಾಗಿ ದೂರ ಇರಿಸಲಾಗುತ್ತದೆ. ಹಣದ ಕುರಿತಾದ ಎಲ್ಲಾ ನಿರ್ಧಾರಗಳನ್ನೂ ಗಂಡಸರೇ ಫೈನಲ್ ಮಾಡುತ್ತಾರೆ. ಹೆಂಗಸರಿಗಿಂತ ತಾವೇ ಬೆಟರ್‌ ಇನ್‌ ವೆಸ್ಟರ್‌ ಎಂದು ಗಂಡಸರು ಬೀಗುತ್ತಾರೆ. ಅದನ್ನು ರೂಢಿಸಲು ಶಿಸ್ತು, ಧೈರ್ಯ, ಏಕಾಗ್ರತೆ ಹಾಗೂ ಅಪಾರ ಪರಿಶ್ರಮದ ಗುಣಗಳ ಅಗತ್ಯವಿದೆ. ಬಹುತೇಕ ಮಹಿಳೆಯರು ಈ ಗುಣಗಳಿಂದ ಖಂಡಿತಾ ಸಂಪನ್ನರಾಗಿರುತ್ತಾರೆ, ಹೀಗಾಗಿ ಗಂಡಸರಿಗಿಂತ ಅವರೇ ಬೆಟರ್‌ ಇನ್‌ ವೆಸ್ಟರ್ಸ್‌ ಆಗಬಲ್ಲರು!

ಅಧ್ಯಯನಗಳಿಂದ ತಿಳಿದು ಬಂದ ಅಂಶವೆಂದರೆ, ಗಂಡಸರಿಗೆ ಹೋಲಿಸಿದಾಗ ಹೆಂಗಸರು ಸರಾಸರಿ 40% ಕಡಿಮೆ ಹಣವನ್ನು ಹೂಡಿಕೆ ಮಾಡಬಯಸುತ್ತಾರೆ. ಜೆಂಡರ್‌ ಡಿಸ್‌ ಕ್ರಿಮಿನೇಶನ್‌ ಕಾರಣ, ಗಂಡಸರಿಗೆ ಹೋಲಿಸಿದಾಗ ಹೆಂಗಸರಿಗೆ ಕೇವಲ 81% ವೇತನ ಸಿಗುತ್ತದೆ. ಇನ್‌ ವೆಸ್ಟ್ ಮೆಂಟ್‌ ಮಾಡದ ಕಾರಣ, ಮೊದಲೇ ಇದ್ದ ಹಣದ ಅಂತರ ಮತ್ತಷ್ಟು ಹೆಚ್ಚುತ್ತಾ ಹೋಗುತ್ತದೆ.

ಮಹಿಳೆಯರನ್ನು ತಡೆಯುತ್ತಿರುವುದಾದರೂ ಏನು?

ಗಂಡಸರಿಗೆ ಹೋಲಿಸಿದಾಗ ಹೆಂಗಸರು ಖಂಡಿತಾ ಕಡಿಮೆ ಪ್ರಮಾಣದಲ್ಲಿ ಹಣ ಹೂಡಲು ಬಯಸುತ್ತಾರೆ. ಇದರ ಹಿಂದಿರುವ ಕಾರಣಗಳನ್ನು ಗುರುತಿಸುವುದು ಕಷ್ಟಕರ. ಬಹುತೇಕ ಹೆಂಗಸರಿಗೆ ಇದನ್ನು ಆರಂಭಿಸುವುದು ಹೇಗೆ ಎಂದೇ ಗೊತ್ತಾಗುವುದಿಲ್ಲ. ಬಹುತೇಕ ಹೆಂಗಸರು ಮನಿ ಮ್ಯಾನೇಜ್‌ ಮೆಂಟ್‌ ನ ಹೊಣೆಯನ್ನು ಮನೆಯ ಗಂಡಸರದೇ ಜವಾಬ್ದಾರಿ ಎಂದು ತಂದೆ, ಅಣ್ಣತಮ್ಮ, ಪತಿ, ಬಾಯ್‌ ಫ್ರೆಂಡ್‌ ಹೆಗಲಿಗೇರಿಸಿ ಸುಮ್ಮನಾಗುತ್ತಾರೆ. ಆದರೆ ಹೀಗೆ ಮಾಡುವುದು ಸರಿಯಲ್ಲ. ರಿಸ್ಕ್ ನಿಂದ ತಪ್ಪಿಸಿಕೊಳ್ಳಲು ಪ್ರಾಫಿಟೆಬಲ್ ಇನ್‌ ವೆಸ್ಟ್ ಮೆಂಟ್‌ ಕುರಿತಾಗಿ ಯೋಚಿಸಲು ಹೋಗುವುದಿಲ್ಲ. ತನ್ನ ಆದಾಯದ ಕುರಿತಾಗಿ ಹೆಚ್ಚಾಗಿ ಖರ್ಚು ಮಾಡಬಾರದು ಎಂದು, ಕ್ರೆಡಿಟ್‌ ಕಾರ್ಡ್‌ ನ್ನು ಹೆಚ್ಚಾಗಿ ಬಳಸಲು ಹೋಗುವುದಿಲ್ಲ. ಇವೆರಡನ್ನೂ ಕೇವಲ ಎಮರ್ಜೆನ್ಸಿಯಲ್ಲಿ ಮಾತ್ರ ಬಳಸಿಕೊಳ್ಳಬೇಕು. ಬ್ಯಾಂಕ್‌ ನಿಂದ ಹಣ ಡ್ರಾ ಮಾಡಿ ಕ್ಯಾಶ್‌ ಖರ್ಚು ಮಾಡುವ ಅಭ್ಯಾಸ ಇರಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಸ್ವಂತ ಖರ್ಚಿಗೆ ಹಣ ಬೇಕೆಂದಾಗಲೂ ಸದಾ ಪ್ರೆಶರ್‌ ಗೆ ತುತ್ತಾಗುವುದು ಸರಿಯಲ್ಲ.

ಇನ್ವೆಸ್ಟ್ ಮೆಂಟ್ಶುರು ಮಾಡಿ

ಎಷ್ಟು ಸಾಧ್ಯವೋ ಅಷ್ಟು, ನೀವು ಆದಷ್ಟು ಬೇಗ ಹಣದ ಹೂಡಿಕೆಗೆ ತೊಡಗಬೇಕು. ಆಗ ಮಾತ್ರ ನೀವು ನಿಮ್ಮ ಹಣದ ಪೂರ್ತಿ ಲಾಭ ಪಡೆಯಲು ಸಾಧ್ಯ. ನಿಮ್ಮ ಬಳಿ ಸ್ವಲ್ಪವೇ ಹಣ ಇದ್ದರೂ ಸರಿ, ಆದರೆ ಪ್ರತಿ ತಿಂಗಳೂ ಹಣ ಇನ್‌ ವೆಸ್ಟ್ ಮಾಡುವ ಪರಿಪಾಠ ಬೆಳೆಸಿಕೊಳ್ಳಿ. ನಿಮ್ಮ ಹಣವನ್ನು ದೀರ್ಘಾವಧಿ ಕಾಲದವರೆಗೆ ಹೂಡಿಕೆಗೆ ತೊಡಗಿಸಿ. ಈ ಮೂಲಕ ಬಂದ ಲಾಭವನ್ನು ಮತ್ತೆ ಹೂಡಿಕೆಯಲ್ಲೇ ತೊಡಗಿಸಿರಿ. ಇದುವರೆಗೂ ನೀವು ಹೂಡಿಕೆಗೆ ತೊಡಗಿಯೇ ಇರದಿದ್ದರೆ, ಆರಂಭಿಸಲು ಹಿಂಜರಿಯಬೇಡಿ. ಅದರಿಂದ ಬರುವ ಲಾಭ ಸಣ್ಣದಿರಲಿ ದೊಡ್ಡದಿರಲಿ, ಪ್ರಕ್ರಿಯೆ ಶುರು ಆಗಲೇಬೇಕು.

ಕೇವಲ ಉಳಿತಾಯ ಮಾತ್ರವಲ್ಲ ಹೂಡಿಕೆ ಕಡೆಯೂ ಗಮನ ಕೊಡಿ

ಮಹಿಳೆಯರ ಗಮನವೆಲ್ಲ ಕೇವಲ ಉಳಿತಾಯದ ಕಡೆ ಮಾತ್ರ ಇರುತ್ತದೆ. ಬದಲಿಗೆ ಅವರು ಹೂಡಿಕೆ ಕುರಿತಾಗಿ ಅರ್ಥ ಮಾಡಿಕೊಂಡು, ಅಗತ್ಯವಾಗಿ ಅದರಲ್ಲಿ ತೊಡಗಬೇಕು. ಇಷ್ಟೊಂದು ಭಾರಿ ತುಟ್ಟಿಯ ಈ ಕಾಲದಲ್ಲಿ, ದಿನೇದಿನೇ ಹಣದ ಮೌಲ್ಯ ಕುಸಿಯುತ್ತಾ ಹೋಗುತ್ತಿರುತ್ತದೆ. ಹೀಗಾಗಿ ಉತ್ತಮ ಹೂಡಿಕೆಗೆ ತೊಡಗಿಕೊಂಡು, ಹೆಚ್ಚು ರಿಟರ್ನ್ಸ್ ಸಿಗುವ ಹಾಗೆ ಮಾಡಿಕೊಳ್ಳಿ.

ನಿಮ್ಮ ಹಣದ ಹೂಡಿಕೆಗೆ ತೊಡಗಬೇಕು ಎಲ್ಲಿ?

ಇತ್ತೀಚೆಗೆ ಬಂದ ಒಂದು ಸ್ಟಡಿ ಪ್ರಕಾರ, ಭಾರತೀಯ ನಗರವಾಸಿ ಮಹಿಳೆಯರು ಫಿಕಸ್ಡ್ ಡೆಪಾಸಿಟ್‌ ಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಇದು ಅವರ ಒಟ್ಟು ಅಸೆಟ್‌ ನ ಅಲೋಕೇಶನ್‌ 50% ಗಳಲ್ಲಿ ಹಾಗೂ ಸೇವಿಂದ್ಸ್ ಅಕೌಂಟ್‌ ನಲ್ಲಿ ಉಳಿದ್ದನ್ನು ಇರಿಸಿಕೊಳ್ಳುತ್ತಾರೆ. ಕೇವಲ 7% ಮಾತ್ರನ್ನೇ ಸ್ಟಾಕ್ಸ್ ಶೇರ್‌ ಗಳಲ್ಲಿ ತೊಡಗಿಸುತ್ತಾರೆ. ಬ್ಯಾಂಕ್‌ ಇಂಡಿಯಾ, ಕ್ರಿಸಿಲ್ ‌ಜೊತೆ ಬೆರೆತು, ಮಹಿಳೆ ಹಾಗೂ ವಿತ್ತ (ವುಮನ್‌ಫೈನಾನ್ಸ್)ದ ಕುರಿತಾಗಿ ಒಂದು ಸ್ಟಡಿ ಜಾರಿಗೊಳಿಸಿದೆ. ಇದರಲ್ಲಿ 10 ಭಾರತೀಯ ನಗರಗಳಲ್ಲಿ 800 ಹೈ ಇನ್‌ ಕಮ್ ವುಳ್ಳ ಮಹಿಳೆಯರು ಸಂಬಳ ಪಡೆಯುವಂಥ ಹಾಗೂ ಸೆಲ್ಫ್ ಎಂಪ್ಲಾಯ್ಡ್ ಇಬ್ಬರನ್ನೂ ಒಳಗೂಡಿಸಲಾಗಿದೆ. ಈ ಸಮೀಕ್ಷೆಯಲ್ಲಿ ಶಾಮೀಲಾದ ಮಹಿಳೆಯರ ವಾರ್ಷಿಕ ಆದಾಯ 10 ಲಕ್ಷದಿಂದ ಹಿಡಿದ 55 ಲಕ್ಷದವರೆಗೂ ಇತ್ತು ಎಂಬುದು ಇಲ್ಲಿ ಗಮನಾರ್ಹ.

ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಅಂದ್ರೆ, ಅಕೌಂಟ್‌ ಗಳಿಂದ ನಿಮಗೆ ಲಾಭ ಇದೆ ನಿಜ, ಹಾಗೇಂತ ನಿಮ್ಮ ಎಲ್ಲಾ ಮೂಲದ ಹಣವನ್ನೂ ಇಲ್ಲಿ ತೊಡಗಿಸಬಾರದು. ಬದಲಿಗೆ ಇತರ ಮೂಲಗಳಲ್ಲೂ ತೊಡಗಿಸಬೇಕು. ಇದರಿಂದ ನಮ್ಮ ಪೋರ್ಟ್‌ಪೋಲಿಯೋದಲ್ಲಿ ಡೈರ್ಸಿಫಿಕೇಶನ್‌ ಸಿಗುವುದಲ್ಲದೆ, ನೀವು ಸುಲಭವಾಗಿ ತೆರಿಗೆಯ ಹೊರೆಯಿಂದಲೂ ಹೊರಬರುವಿರಿ. ಜೊತೆಗೆ ಹೈ ಯೀಲ್ಡ್ ಸಹ ದೊರಕುತ್ತಿರುತ್ತದೆ.

ಹೂಡಿಕೆ ಮಾಡುವಾಗ ಹೆಜ್ಜೆ ಹೆಜ್ಜೆಗೂ ಎಚ್ಚರ!

ನಿಮ್ಮ ಹಲವು ವರ್ಷಗಳ ಪರಿಶ್ರಮದ ಹಣವನ್ನು ಒಂದೆಡೆ ಹೂಡಿಕೆ ಮಾಡುವಾಗ, ಎಲ್ಲಕ್ಕಿಂತಲೂ ಮೊದಲು ನೀವು ಯೋಚಿಸಬೇಕಾದುದು, ನಿಮ್ಮ ಗುರಿ ಏನು ಅಂತ. ಹೂಡಿಕೆ ನಿಮ್ಮ ಗುರಿಯನ್ನೇ ಆಧರಿಸಿರಬೇಕು. ನಿಮ್ಮ ವಯಸ್ಸು ಈಗ 25-27 ರಿಂದ 30-32 ಅಂತ ಇಟ್ಟುಕೊಂಡರೆ, ನಿವೃತ್ತಿಯಲ್ಲಿ ಪೆನ್‌ ಶನ್‌ ತರಹ ನಿಗದಿತ ಹಣ ಬರಲಿ ಎಂದು ನೀವು ಬಯಸಿದರೆ, ಇದರ ನೇರ ಅರ್ಥ, ನಿಮ್ಮ ಬಳಿ ಪ್ಲಾನಿಂಗ್‌ ಮಾಡಲು ಸಾಕಷ್ಟು ಸಮಯವಿದೆ ಅಂತ.

ಇದಾದ ಮೇಲೆ ಮುಖ್ಯ ಕ್ರಮ ಅಂದ್ರೆ, ನಿಮ್ಮ ಹಾಗೂ ನಿಮ್ಮನ್ನು ಅವಲಂಬಿಸಿದರ (ತಾಯಿತಂದೆ/ಮಕ್ಕಳು) ಸುರಕ್ಷತಾ ಕ್ರಮ. ತಮ್ಮ ತಂಗಿ, ಮಕ್ಕಳು, ತಾಯಿತಂದೆ ಯಾರೇ ನಿಮ್ಮನ್ನು ಅವಲಂಬಿಸಿದ್ದಲ್ಲಿ ಮೊದಲು ಅಗತ್ಯವಾಗಿ ಜೀವವಿಮೆ ಮಾಡಿಸಿ. ಜೊತೆಗೆ ನಿಮಗಾಗಿ ಆ್ಯಕ್ಸಿಡೆಂಟ್‌ ಯಾ ಮೆಡಿಕಲ್ ಕವರೇಜ್‌ ತೆಗೆದುಕೊಳ್ಳುವುದು ಸಹ ಅಷ್ಟೇ ಮುಖ್ಯ. ಇದರಿಂದ ಭವಿಷ್ಯದಲ್ಲಿ ನೀವು ಯಾವುದೇ ದುರ್ಘಟನೆಗೆ ತುತ್ತಾದರೂ, ನಿಮ್ಮ ಕುಟುಂಬದವರಿಗೆ ಆರ್ಥಿಕ ಸುಭದ್ರತೆ ಒದಗಿಸಿ ಕೊಟ್ಟಂತಾಗುತ್ತದೆ.

IB140946_140946121439000_CU397248

ಕಿರಿ ವಯಸ್ಸಿನ ಮಹಿಳೆಯರು ರಿಸ್ಕ್ ಗೆ ರೆಡಿ

ಇತ್ತೀಚೆಗೆ ನಡೆಸಲಾದ ಒಂದು ಸಮೀಕ್ಷೆಯ ಪ್ರಕಾರ, 18-25ರ ಹರೆಯದ ಹೆಣ್ಣುಮಕ್ಕಳು, ಸುರಕ್ಷಿತ ಹೂಡಿಕೆಗಾಗಿ, ಕೇವಲ   ಒಂದನ್ನೇ ಆಧರಿಸದೆ, ತುಸು ಹೆಚ್ಚು ರಿಸ್ಕ್ ಇರುವಂಥ ಹೂಡಿಕೆಗಳಲ್ಲಿ ತೊಡಗಿಕೊಳ್ಳುವ ಅವಕಾಶ, ಹಿಂದಿಗಿಂತ 3 ಪಟ್ಟು ಹೆಚ್ಚಾಗಿದೆ. ಈ ಸಮೀಕ್ಷೆ `ಸರ್ವೇಗ್ರೋ’ಯಿಂದ ನಡೆಸಲ್ಪಟ್ಟು, ಮಾಹಿತಿ ಖಚಿತ ಎನಿಸಿದೆ. ಇದರಲ್ಲಿ 28 ಸಾವಿರ ಜನರಿಂದ ಪ್ರತಿಕ್ರಿಯೆ ತೆಗೆದುಕೊಳ್ಳಲಾಗಿದೆ. ಸಮೀಕ್ಷೆಯಲ್ಲಿ ಮಹಿಳೆಯರ ಹೂಡಿಕೆಯ ಗುರಿಯ ಬಗ್ಗೆಯೂ ಗಮನ ವಹಿಸಲಾಗಿದೆ.

ಈ ಸಮೀಕ್ಷೆ ಪ್ರಕಾರ, 57% ಯುವತಿಯರು ತಮ್ಮ ಖಾಸಗಿ ಗುರಿಯನ್ನೇ ಗಮನದಲ್ಲಿರಿಸಿಕೊಂಡು ಹೂಡಿಕೆಗೆ ತೊಡಗಿಸಿಕೊಂಡಿದ್ದಾರೆ. 28% ಜನ  ತಮ್ಮ ಮುಂದಿನ ಪ್ರವಾಸ, ಖಾಸಗಿ ಖರ್ಚು ಇತ್ಯಾದಿಗಳಿಗಾಗಿ ಹೂಡಿಕೆ ಮಾಡಿದ್ದಾರೆ. ಉಳಿದ 28% ತಮ್ಮ ಉನ್ನತ ಶಿಕ್ಷಣಕ್ಕಾಗಿ ಹೂಡಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ಹೇಳಾಗಿರುವುದು ಎಂದರೆ, ಆದಾಯ ಮತ್ತು ವಯಸ್ಸನ್ನು ಗಣನೆಗೆ ತೆಗೆದುಕೊಂಡೇ ಹೂಡಿಕೆಯ ಗುರಿ ಬದಲಾಗುತ್ತಿರುತ್ತದೆ.

ಅಸಲಿಗೆ, ಕೇವಲ ಹಣ ಗಳಿಕೆ ಹಾಗೂ ಉಳಿತಾಯ ಒಂದೇ ಸಾಕಾಗುವುದಿಲ್ಲ. ನಿಮ್ಮ ಹಣವನ್ನು ಉತ್ತಮ ಆರ್ಥಿಕ ಭದ್ರತೆ ಇರುವಂಥ ಕಡೆ ಹೂಡಿಕೆ ಮಾಡಬೇಕಾದುದು ಬಲು ಮುಖ್ಯ. ಆಗ ಮಾತ್ರ ನಿಮ್ಮ ಹಣ ಬೇಗ ಬೆಳೆಯಲು ಸಾಧ್ಯ. ಆಗ ದೀರ್ಘಕಾಲದ ಹೂಡಿಕೆಯಿಂದಾಗಿ, ದೊಡ್ಡ ಮೊತ್ತದ ಹಣ ನಿಮ್ಮ ಕೈ ಸೇರಲು ಸಾಧ್ಯ. ಇದಕ್ಕಾಗಿ ಹಲವು ದಾರಿಗಳಿವೆ. ಆದರೆ ಇವುಗಳಲ್ಲಿ ಮುಖ್ಯವಾಗಿ ನೆನಪಿಡ ಬೇಕಾದುದು ಎಂದರೆ, ಇದರಲ್ಲಿ ಯಾವುದೇ ಶಾರ್ಟ್‌ ಕಟ್‌ ಇಲ್ಲ. ಹೀಗಾಗಿ ನಿಮ್ಮ ಮೊದಲ ಜವಾಬ್‌ ಶುರು ಮಾಡುತ್ತಿದ್ದಂತೆಯೇ, ಹೂಡಿಕೆ ಬಗ್ಗೆ ಬಲವಾಗಿ ಯೋಚಿಸಿ. ನೀವು ಗೃಹಿಣಿ ಅಥವಾ ಉದ್ಯೋಗಸ್ಥ ವನಿತೆ ಆಗಿರಲಿ, ಮದುವೆ ನಂತರ, ನೀವು ಉಳಿತಾಯ ಹಾಗೂ ಹೂಡಿಕೆ ಎರಡನ್ನೂ ಮರೆಯದೆ ಆರಂಭಿಸಬೇಕು. ಈ ಸಂದರ್ಭದಲ್ಲಿ ನೀವು ಕೇವಲ ಖರ್ಚಿಗೆ ಮಾತ್ರ ಮಹತ್ವ ಕೊಡುತ್ತಾ, ಉಳಿತಾಯ/ಹೂಡಿಕೆ ಬಗ್ಗೆ ನಿರ್ಲಕ್ಷಿಸಿದರೆ, ನಿಮ್ಮ ಭವಿಷ್ಯ ಬಹಳ ಕಠಿಣವಾಗುತ್ತದೆ. ಈ ಸಂದರ್ಭದಲ್ಲಿ ನೀವು ಮಾಡಿದ ಉಳಿತಾಯ/ಹೂಡಿಕೆ, ನಿಮ್ಮ ಹಾಗೂ ನಿಮ್ಮ ಕುಟುಂಬದವರ ಉಜ್ವಲ ಭವಿಷ್ಯಕ್ಕೆ ಸಹಕಾರಿ ಆಗಿರುತ್ತದೆ. ಹೀಗಾಗಿ  ಕೆಳಗೆ ತಿಳಿಸಲಾದ ವಿವಿಧ ಹೂಡಿಕೆಗಳ ಕುರಿತ ಮಾಹಿತಿ, 20-35ರ ಹರೆಯದ ಹೆಣ್ಣುಮಕ್ಕಳಿಗೆ ಹೆಚ್ಚು ನೆರವಾಗಲಿದೆ. ಅದೇ ತರಹ ಅವಿವಾಹಿತ ಹೆಣ್ಣುಮಕ್ಕಳೂ ಸಹ ಇದನ್ನು ಪಾಲಿಸಿದರೆ, ಅವರ ಭವಿಷ್ಯಕ್ಕೆ ಎಷ್ಟೋ ನೆಮ್ಮದಿ ಸಿಗುತ್ತದೆ. ವಿವಾಹಿತರಿಗಿಂತ ಇವರ ಬಳಿ ಉಳಿತಾಯ/ಹೂಡಿಕೆಗೆ ಹೆಚ್ಚು ಸದವಕಾಶ ಇರುತ್ತದೆ. ನಿಮ್ಮ ವೇತನ ಅಥವಾ ಇನ್ನಿತರ ಮೂಲದ ಆದಾಯವನ್ನು ಇಂಥವರು ಖಂಡಿತಾ ವ್ಯರ್ಥಕ್ಕಾಗಿ ಖರ್ಚು ಮಾಡಬಾರದು.

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (ಪಿಪಿಎಫ್) ನೀವು ವರ್ಕಿಂಗ್‌ ವುಮನ್‌ ಯಾ ಗೃಹಿಣಿಯೇ ಇರಲಿ, ಪಿಪಿಎಫ್ ನಿಮಗೆ ಹೂಡಿಕೆ ಮಾಡಲು ಅತ್ಯುತ್ತಮ ವಿಧಾನ ಆಗಿದೆ. ಇದರಲ್ಲಿ ಕನಿಷ್ಠ 15 ವರ್ಷಗಳವರೆಗೂ ಹೂಡಿಕೆ ಮಾಡುತ್ತಿರಬೇಕು. ಇದಕ್ಕೆ ಸರ್ಕಾರ 7.1%ನಷ್ಟು ಬಡ್ಡಿ ಕೊಡುತ್ತದೆ. ವಾರ್ಷಿಕ ಹೂಡಿಕೆಯ ಮೊತ್ತ 500 ರಿಂದ 1.5 ಲಕ್ಷದವರೆಗೂ, ನಿಮ್ಮ ಆದಾಯಕ್ಕೆ ತಕ್ಕಂತೆ ಮಾಡಿಕೊಳ್ಳಬಹುದು. ಇದನ್ನು ನೀವು ಯಾವುದೇ ಪೋಸ್ಟ್ ಆಫೀಸ್‌ ಯಾ ಬ್ಯಾಂಕಿನಲ್ಲಿ ತೆರೆಯಬಹುದು. ಇದರಲ್ಲಿ ನಿಮಗೆ ಹೂಡಿಕೆಯ ಹಣಕ್ಕಾಗಿ ತೆರಿಗೆ ವಿನಾಯಿತಿ ಸಹ ಸಿಗುತ್ತದೆ. ಜೊತೆಗೆ ಇದರಿಂದ ಸಿಗುವ ಬಡ್ಡಿ ಹಣಕ್ಕೂ ನೀವು ತೆರಿಗೆ ಕಟ್ಟಬೇಕಿಲ್ಲ.

ಒಂದು ಉದಾಹರಣೆ ಗಮನಿಸಿ, ಈ ಸ್ಕೀಮಿನ ಲಾಭಗಳ ಕುರಿತು ಅರ್ಥ ಮಾಡಿಕೊಳ್ಳೋಣ. ನೀವು ಪಿಪಿಎಫ್ ಖಾತೆಯಲ್ಲಿ ಪ್ರತಿ ತಿಂಗಳೂ 5 ಸಾವಿರ ರೂ.ಗಳನ್ನು 15 ವರ್ಷಗಳ ತನಕ ಜಮಾ ಮಾಡುತ್ತಾ ಹೋದರೆ, ಒಟ್ಟು ಜಮೆಗೊಂಡ ಮೊತ್ತ 9 ಲಕ್ಷ ರೂ. ಆಗುತ್ತದೆ. ಇದಕ್ಕೆ 7.1% ಬಡ್ಡಿ ದರದಂತೆ, ನಿಮಗೆ 7.27 ಲಕ್ಷ ರೂ. ಹಣ ಬಡ್ಡಿಯಾಗಿ ದೊರಕುತ್ತದೆ. ಈ ರೀತಿ ಮೆಚ್ಯುರಿಟಿ ನಂತರ ನಿಮಗೆ ಒಟ್ಟು 16.27 ಲಕ್ಷ ರೂ. ಹಣ ದೊರಕಲಿದೆ!

ನ್ಯಾಶನಲ್ ಸೇವಿಂಗ್ಸ್ ಸರ್ಟಿಫಿಕೇಟ್‌ ಎಲ್ಲಾ ಸ್ಕೀಮುಗಳಿಗಿಂತ ಹಣ ತೊಡಗಿಸುವುದು ಒಂದು ಅತಿ ಸುರಕ್ಷಿತ ಹೂಡಿಕೆ ಆಗಿದೆ. ಇದರಲ್ಲಿ ನೀವು ಒಂದು ನಿಗದಿತ ಮೊತ್ತದ ಹಣವನ್ನು ನಿಗದಿತ ಸಮಯದವರೆಗೂ ಹೂಡಿಕೆ ಮಾಡಬಹುದು. ಇದಕ್ಕೆ ನಿಮಗೆ 8% ದರದಂತೆ ಬಡ್ಡಿ ಸಿಗಲಿದೆ. ಈ ಸ್ಕೀಮ್ ಮೆಚ್ಯೂರ್‌ ಗೊಂಡ ನಂತರ, ನಿಮಗೆ ಪೂರ್ತಿ ಹಣ ದೊರಕಲಿದೆ. ಇದು ಹೆಂಗಸರಿಗೆ ಏಕೆ ಉತ್ತಮ ಸ್ಕೀಮ್ ಅಂದ್ರೆ, ಒಂದು ನಿಗದಿತ ಕಾಲಾವಧಿಯಲ್ಲಿ ನಿಮ್ಮ ಹಣ ಬಡ್ಡಿ ಸಮೇತ, ಸುರಕ್ಷಿತವಾಗಿ ವಾಪಸ್ಸು ಸಿಗಲಿದೆ.

ಉದಾ : ನೀವು ಒಂದು ಪಕ್ಷ 1 ಲಕ್ಷ ಹಣವನ್ನು 5 ವರ್ಷಗಳಿಗೆ ತೊಡಗಿಸಿದ್ದರೆ, ಅದು ಮೆಚ್ಯೂರಿಟಿ ನಂತರ ನಿಮಗೆ 1.46 ಲಕ್ಷ ರೂ.ಗಳಾಗಿ ದೊರಕಲಿದೆ. ಜೊತೆಗೆ ನೀವು ಸೇವಿಂಗ್ಸ್ ಸಹ ಮಾಡಬಹುದು.

ಬ್ಯಾಂಕ್‌ ಫಿಕ್ಡ್ಸ್ ಡೆಪಾಸಿಟ್‌ (FD) ಈ ಸ್ಕೀಮ್ ನಿಮಗೆ ಹೂಡಿಕೆ ಮಾತ್ರವಲ್ಲದೆ ಸೇವಿಂಗ್ಸ್ ನ ಸಾಧನವಾಗಿಯೂ ನೆರವಾಗುತ್ತದೆ. ನಿಮ್ಮ ಖಾತೆಯಲ್ಲಿ ಉಳಿತಾಯದಿಂದಾಗಿ ಒಂದು ದೊಡ್ಡ ಮೊತ್ತದ ಹಣ ಜಮೆಗೊಂಡಾಗ, ಅದರಿಂದ FD ಖಾತೆ ತೆರೆದು ಹಣ ಹೂಡಬಹುದು. ಬೇರೆ ಬೇರೆ ಬ್ಯಾಂಕುಗಳಲ್ಲಿ ಬೇರೆ ಬೇರೆ ತರಹ FD ಗೆ ಬಡ್ಡಿಯ ಹಣ ದೊರಕುತ್ತದೆ. ಅಗತ್ಯ ಬಿದ್ದಾಗ, ಮೆಚ್ಯೂರಿಟಿಗೆ ಮೊದಲೂ ಸಹ ಹಣ ಹಿಂಪಡೆಯಬಹುದಾಗಿದೆ. 1 ವರ್ಷ ಎಂದು ನಿಗದಿಪಡಿಸಿದ್ದನ್ನು 6 ತಿಂಗಳಿಗೇ ತೆಗೆಯುವಂತಾದರೆ, ನಿಮಗೆ 6 ತಿಂಗಳಿಗೆ ತಗಲುವಷ್ಟು ಬಡ್ಡಿ ಹಣ ಮಾತ್ರ ದೊರಕುತ್ತದೆ. ಇದನ್ನು ಯಾವ ಬ್ಯಾಂಕಿನಲ್ಲಿಯಾದರೂ ತೆರೆಯಬಹುದು.

ಉದಾ : ಒಂದು ಬ್ಯಾಂಕಿನಲ್ಲಿ ನೀವು 5 ವರ್ಷಗಳಿಗಾಗಿ 1 ಲಕ್ಷ ರೂ. ಹಣ FD ಮೂಲಕ ಹೂಡಿದರೆ, 6.5% ವಾರ್ಷಿಕ ಬಡ್ಡಿ ದರದಂತೆ ನಿಮಗೆ 5 ವರ್ಷಗಳ ನಂತರ 1.38 ಲಕ್ಷ ರೂ. ಹಣ ಕೈಗೆ ಸಿಗಲಿಗೆ. ಇದು ಹೂಡಿಕೆಯ ಸುರಕ್ಷಿತ ಕ್ರಮವಾಗಿದೆ.

ಮ್ಯೂಚುಯೆಲ್ ‌ಫಂಡ್ಸ್ ಇದೀಗ ನೀವು ತುಸು ರಿಸ್ಕ್ ತೆಗೆದುಕೊಂಡು ಹಣ ತೊಡಗಿಸ ಬಯಸಿದರೆ, ಮ್ಯೂಚುಯೆಲ್ ‌ಫಂಡ್‌ ಒಂದು ಅದ್ಭುತ ಅವಕಾಶವಾಗಿದೆ! ಇಲ್ಲಿ ರಿಟರ್ನ್ಸ್ ಸಹ ಹೆಚ್ಚು. ಷೇರು ಮಾರುಕಟ್ಟೆಯಲ್ಲಿ ಈ ಫಂಡ್ಸ್ ನೇರವಾಗಿ ಇನ್‌ ವೆಸ್ಟ್ ಆಗುವುದಿಲ್ಲ. ಇದನ್ನು ನೀವು ಫಂಡ್‌ ಮ್ಯಾನೇಜರ್‌ ನೆರವಿನಿಂದ ಹೂಡಿಕೆ ಮಾಡುವಿರಿ. ನೀವು ಸಿಸ್ಟಮ್ಯಾಟಿಕ್‌ ಇನ್‌ ವೆಸ್ಟ್ ಮೆಂಟ್‌ ಪ್ಲಾನ್‌ ಮೂಲಕ ಸ್ವಲ್ಪ ಸ್ವಲ್ಪ ಹಣವನ್ನು ಇದರಲ್ಲಿ ಇನ್ಸ್ ವೆಸ್ಟ್ ಮಾಡುತ್ತಾ, ಹೋಗಬಹುದು. ನೀವು ನಿಮ್ಮ ಮೊಬೈಲ್ ‌ಫೋನ್‌ ಮೂಲಕ ಅಪ್ಲಿಕೇಶನ್‌ ಡೌನ್‌ ಲೋಡ್‌ ಮಾಡಿಕೊಂಡು, ಇದರಲ್ಲಿ ಇನ್‌ ವೆಸ್ಟ್ ಮೆಂಟ್‌ಶುರು ಮಾಡಬಹುದು.

ಈ ಇನ್‌ ವೆಸ್ಟ್ ಮೆಂಟ್‌ ನಿಂದ ಸಿಗುವ ಪ್ರಾಫಿಟ್‌ ನಿಂದ ಮ್ಯೂಚುವಲ್ ಫಂಡ್‌ ಕಂಪನಿ, ತನ್ನ ಫೀಸ್‌ ಕಡಿತ ಮಾಡಿಕೊಂಡು, ಉಳಿದ ಹಣವನ್ನು ನಿಮ್ಮ ಖಾತೆಗೆ ತುಂಬುತ್ತದೆ. ಇದರ ಹಲವು ಬಗೆಯ ಸ್ಕೀಮ್ಸ್ ಮಾರುಕಟ್ಟೆಯಲ್ಲಿ ಲಭ್ಯ. ಉದಾ : ಡೆಟ್‌ ಫಂಡ್ಸ್, ಈಕ್ವಿಟಿ ಫಂಡ್ಸ್, ಬ್ಯಾಲೆನ್ಸ್ಡ್ ಫಂಡ್‌ ಇತ್ಯಾದಿ. ಈಕ್ವಿಟಿ ಫಂಡ್‌ ನಲ್ಲಿ ರಿಸ್ಕ್ ರಿಟರ್ನ್ಸ್ ಚಾನ್ಸೆಸ್‌ ಹೆಚ್ಚು. ಇದಾದ ನಂತರ ಹೈಬ್ರಿಡ್‌ ಫಂಡ್‌ಡೆಟ್‌ ಫಂಡ್‌, ಇದೆ. ಈಕ್ಟಿಟಿ ಫಂಡ್ಸ್ ದೀರ್ಘ ಕಾಲ ಚಾಲ್ತಿಯಲ್ಲಿರುತ್ತದೆ. ಆದರೆ ಡೆಟ್‌ ಫಂಡ್‌ ಲಘು ಕಾಲಾವಧಿಗೆ ಸೀಮಿತ. ಹೆಂಗಸರು ಮ್ಯೂಚುಯೆಲ್ ‌ಫಂಡ್‌ ನಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭ ಗಳಿಸಬಹುದು. ಕೇವಲ ಪ್ರತಿ ತಿಂಗಳೂ 500/ ರೂ. ಹೂಡಿಕೆಯಿಂದಲೂ ಶುರು ಮಾಡಬಹುದು. ಇದರಲ್ಲಿ ನಡೆಯುವಂಥ ಲಾಂಗ್‌ ಟರ್ಮ್ ಕ್ಯಾಪಿಟಲ್ ಗೇನ್‌ ಟ್ಯಾಕ್ಸ್ ಫ್ರೀ ಆಗಿದೆ. ಇದರಿಂದ ನಿಮಗೆ ತೆರಿಗೆ ವಿನಾಯಿತಿಯೂ ಸಿಗುತ್ತದೆ.

ಸಾರೆನ್ಗೋಲ್ಡ್ ಬಾಂಡ್

ಚಿನ್ನದಲ್ಲಿ ಹೂಡಿಕೆಗಾಗಿ ಹಲವು ವಿಧಾನಗಳಿವೆ. ಅಂದ್ರೆ ಒಡವೆ, ಚಿನ್ನದ ನಾಣ್ಯಗಳು, ಗೋಲ್ಡ್ ಬುಲಿಯನ್ಸ್ ಇತ್ಯಾದಿ. ಆದರೆ ಇವೆಲ್ಲಗಳಲ್ಲಿ ಅತಿ ಉತ್ತಮ ಆಯ್ಕೆ ಎಂದರೆ, ಸಾರೆನ್‌ ಗೋಲ್ಡ್ ಬಾಂಡ್‌! ಈ ಸರ್ಕಾರಿ ಸ್ಕೀಮಿನಲ್ಲಿ ಹೂಡಿಕೆಯ ನೆಪದಲ್ಲಿ ರಿಸ್ಕ್ ಬಹಳ ಕಡಿಮೆ ಆಗಿಬಿಡುತ್ತದೆ. ನಿಶ್ಚಿಂತೆಯಿಂದ ನೀವು ರಿಟರ್ನ್ಸ್ ಪಡೆದುಕೊಳ್ಳಬಹುದು. ಸಾರಿನ್‌ ಗೋಲ್ಡ್ ಬಾಂಡ್‌ ನ್ನು ಜಾರಿಗೊಳಿಸುತ್ತದೆ. ಹೀಗಾಗಿ ಈ ಚಿನ್ನದ ನಾಣ್ಯ/ಗಟ್ಟಿಗಳ ಕುರಿತಾಗಿ ಶುದ್ಧತೆಯ ಟೆನ್ಶನ್‌ ಇಲ್ಲವೇ ಇಲ್ಲ.

ಗೋಲ್ಡ್ ಬಾಂಡ್‌ ಗಾಗಿ ನೀವು ವಾರ್ಷಿಕ 2.50%ನಷ್ಟು ಬಡ್ಡಿ ಪಡೆಯಬಹುದು. ಇದು ಮೆಚ್ಯೂರ್‌ ಆದ ನಂತರ ಆ ಸಮಯದಲ್ಲಿ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಯಾವ ದರ ಇರುತ್ತದೋ, ಅದೇ ದರಕ್ಕೆ ನಿಮ್ಮ ಚಿನ್ನವನ್ನು ಮಾರಿ ಹಣ ಪಡೆದುಕೊಳ್ಳಬಹುದು. ಇದರ ವೈಶಿಷ್ಟ್ಯ ಅಂದ್ರೆ, ಫಿಸಿಕಲ್ ಚಿನ್ನದ ಹಾಗೆ ಇದರ ಸ್ಟೋರೇಜ್‌ ಕುರಿತಾಗಿ ನೀವು ಚಿಂತಿಸಬೇಕಿಲ್ಲ.

ಹೂಡಿಕೆಯ ಇನ್ನಿತರ ಆಯ್ಕೆಗಳು

ಜೀವವಿಮೆ : ಅತಿ ಹಳೆಯ ತರಹದ ಹೂಡಿಕೆಗಳಲ್ಲಿ ಹೆಂಗಸರಿಗೆ ನೆರವಾಗುವ ಇನ್‌ ವೆಸ್ಟ್ ಮೆಂಟ್‌ ಅಂದ್ರೆ ಇದೇ. ಯಾರು ಪಾಲಿಸಿ ಕೊಂಡಿರುತ್ತಾರೋ, ಅವರು ಸತ್ತಾಗ, ಅವರ ನಾಮಿನಿಗೆ ಈ ಹಣ ನೇರವಾಗಿ, ಸುರಕ್ಷಿತವಾಗಿ ಸಿಗುತ್ತದೆ. ಪಾಲಿಸಿದಾರರು ತಮ್ಮ ಜೀವಿತ ಕಾಲದಲ್ಲಿ ಕಟ್ಟಿರಬಹುದಾದ ಪ್ರೀಮಿಯಂಗೆ ಬದಲಾಗಿ, ನಾಮಿನಿಗೆ ಒಂದು ದೊಡ್ಡ ಮೊತ್ತ (ಮೃತ್ಯು ಲಾಭ)ವನ್ನು ಪಾವತಿಸಲಾಗುತ್ತದೆ. ಹೆಂಗಸರು ವಿಶೇಷವಾಗಿ, ತಮ್ಮನ್ನು ಆಶ್ರಯಿಸಿದವರ ಹೆಸರಲ್ಲಿ ಈ ರೀತಿ ಹೂಡಿಕೆ ಮಾಡುವುದರಿಂದ, ಅವರ ಮರಣದ ನಂತರ, ಕುಟುಂಬದವರಿಗೆ ಆರ್ಥಿಕ ತೊಂದರೆ ಆಗದಂತೆ, ಸುರಕ್ಷಿತವಾಗಿ ದೊಡ್ಡ ಮೊತ್ತದ ಹಣ ಲಭಿಸುತ್ತದೆ. ದುಡಿಯುವ ಗಂಡಸು/ಹೆಂಗಸು ಯಾರೇ ಇರಲಿ, ಭವಿಷ್ಯತ್ತಿನಲ್ಲಿ ತಮ್ಮ ಮರಣಾನಂತರ ಮನೆಯವರಿಗೆ ಆರ್ಥಿಕ ತೊಂದರೆ ಆಗದಿರಲು ಇದನ್ನು ಅಗತ್ಯ ಮಾಡಿಸಲೇಬೇಕು.

ನೌಕರರ ಭವಿಷ್ಯ ನಿಧಿ (ಪಿಎಫ್) : ಪಿಎಫ್ ಭಾರತದಲ್ಲಿ ನೌಕರರಿಗೆಂದೇ ರೂಪಿಸಲಾದ ಒಂದು ನಿವೃತ್ತಿ ಉಳಿತಾಯ ಯೋಜನೆ ಆಗಿದೆ. ಇದು ಸರ್ಕಾರದ ವತಿಯಿಂದ ವಾರ್ಷಿಕವಾಗಿ ಲಭ್ಯವಿರುವ ಒಂದು ನಿಶ್ಚಿತ ಬಡ್ಡಿ ದರ ಒದಗಿಸುತ್ತದೆ. ಯಾವ ಹೆಂಗಸರು ಅತಿ ಕನಿಷ್ಠ ರಿಸ್ಕ್ ನೊಂದಿಗೆ ಒಂದು ವಿಶ್ವಸನೀಯ ದೀರ್ಘಕಾಲಿಕ ಹೂಡಿಕೆ ಬಯಸುತ್ತಾರೋ, ಅಂಥ ಹೆಂಗಸರಿಗೆ ಅತಿ ಉಪಯುಕ್ತ ಹೂಡಿಕೆಗಳಲ್ಲಿ ಇದು ಒಂದಾಗಿದೆ.

ಖಾಸಗಿ ಕ್ಷೇತ್ರದಲ್ಲಿ ದುಡಿಯು ಮಹಿಳೆಯರು, ಪಿಎಫ್ ಯೋಜನೆಯಡಿ ಗರಿಷ್ಠ 2.5 ಲಕ್ಷ ರೂ.ಗಳ ತನಕ ಹೂಡಿಕೆ ಮಾಡಬಹುದಾಗಿದೆ. ಸರ್ಕಾರಿ ಕೆಲಸದಲ್ಲಿರುವ ಮಹಿಳೆಯರು 5 ಲಕ್ಷ ರೂ.ಗಳವರೆಗೂ ಹೂಡಿಕೆ ಮಾಡಬಹುದಾಗಿದೆ.

ಮಹಿಳೆಯರಿಗಾಗಿ ಭಾರತ ಸರ್ಕಾರದ ಇನ್‌ ವೆಸ್ಟ್ ಮೆಂಟ್‌ ಯೋಜನೆಗಳು ಈ ಎಲ್ಲಾ ಯೋಜನೆಗಳ ಜೊತೆ ಜೊತೆಗೇ, ಭಾರತ ಸರ್ಕಾರ ಮಹಿಳೆಯರಿಗಾಗಿ ಹೂಡಿಕೆಯ ಆಯ್ಕೆಗಳ ಒಂದು ಪಟ್ಟಿಯನ್ನೇ ಒದಗಿಸುತ್ತದೆ. ಇದು ಎಲ್ಲಾ ಮಹಿಳೆಯರಿಗೂ ಹೆಚ್ಚು ಲಾಭಕರ.

ಸುಕನ್ಯಾ ಸಮೃದ್ಧಿ ಯೋಜನೆ : ಈ ಯೋಜನೆ ಮಹಿಳೆಯರಿಗಾಗಿ ಅತಿ ಉತ್ತಮ ಹೂಡಿಕೆಗಳಲ್ಲಿ ಒಂದಾಗಿದೆ. ಇದು ಸರ್ಕಾರದಿಂದ ಸಮರ್ಥಿಸಲ್ಪಟ್ಟ ಉಳಿತಾಯ ಯೋಜನೆ ಆಗಿದೆ. ಇದನ್ನು ವಿಶೇಷ ರೂಪದಲ್ಲಿ ಹೆಣ್ಣು ಕೂಸು ಹುಟ್ಟಿದಾಗ ಅವರ ಹೆಸರಲ್ಲಿ ಮಾಡಿಸುವುದಾಗಿದೆ. ಮುಂದೆ ಆ ಹೆಣ್ಣುಮಗಳು ದೊಡ್ಡವಳಾದಾಗ, ಇದು ಹೆಚ್ಚಿನ ರೂಪದಲ್ಲಿ ಆಕೆಗೆ ನೆರವಾಗುತ್ತದೆ. ಇದರ ಮೂಲ ಗುರಿ, ಹೆಣ್ಣುಮಕ್ಕಳಿಗೆ ಆರ್ಥಿಕ ಸುರಕ್ಷತೆ ಒದಗಿಸಿ, ಅವರ ಉನ್ನತ ಶಿಕ್ಷಣಕ್ಕಾಗಿ, ಒಂದು ದೀರ್ಘಕಾಲಿಕ ಹೂಡಿಕೆಯಾಗಿದೆ. ಹೆಣ್ಣುಮಗು ಹುಟ್ಟಿದ ತಕ್ಷಣ, ಆ ಮಗುವಿನ ತಾಯಿತಂದೆ ಅಥವಾ ಇನ್ನೂ 10 ವರ್ಷ ದಾಟಿರದ ಮಗಳ ತಾಯಿತಂದೆ ಈ ಯೋಜನೆ ಆರಂಭಿಸಬಹುದು. ಆ ಹುಡುಗಿ 21ರ ಹರೆಯದವಳಾಗುವವರೆಗೂ, ಈ ಖಾತೆಗೆ ಹಣ ಕಟ್ಟುತ್ತಿರಬಹುದು. ಹುಡುಗಿಗೆ 21 ತುಂಬಿದ ನಂತರ, ಅವಳ ಉನ್ನತ ಶಿಕ್ಷಣ ಯಾ ವಿವಾಹಕ್ಕಾಗಿ, ಇದರ ಮೆಚ್ಯೂರ್‌ ಆದ ಹಣ ಬಳಸಿಕೊಳ್ಳಬಹುದು, ಇದನ್ನು ಮಧ್ಯದಲ್ಲಿ  (FD ಹಣ ಹಿಂಪಡೆಯುವಂತೆ) ಕೇಳುವಂತಿಲ್ಲ.

ಪೋಸ್ಟ್ ಆಫೀಸ್ಮಹಿಳಾ ಸಮ್ಮಾನ್ಬಚತ್ಯೋಜನೆ

ಮಹಿಳೆಯರಿಗಾಗಿ ಅತ್ಯುತ್ತಮ  ಹೂಡಿಕೆಗಳ ಯೋಜನೆಗಳಲ್ಲಿ ಇದೂ ಒಂದು. ಇದನ್ನು ಭಾರತೀಯ ಅಂಚೆ ಸೇವೆ, ಮಹಿಳೆಯರಿಗೆಂದೇ ವಿಶೇಷವಾಗಿ ರೂಪಿಸಿದೆ. ಇದು ಮಹಿಳೆಯರಿಗೆ ಅತಿ ಸುರಕ್ಷಿತ ಹಾಗೂ ವಿಶ್ವಸನೀಯ ಹೂಡಿಕೆಯಾಗಿದೆ. ಇದರಲ್ಲಿ ಅವರು ತಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡಿ, ಬಡ್ಡಿ ಹಣ ಪಡೆಯಬಹುದು. ಇದು ಪ್ರತಿ ವರ್ಷ 7.5%ನ ಒಂದು ನಿಶ್ಚಿತ ಬಡ್ಡಿ ದರ ಒದಗಿಸುತ್ತದೆ. ನೀವು ಈ ಯೋಜನೆಯಡಿ ಕನಿಷ್ಠ 1,000/ ಹಾಗೂ ಗರಿಷ್ಠ 2 ಲಕ್ಷದಷ್ಟು ಹಣವನ್ನು ಹೂಡಬಹುದಾಗಿದೆ.

ಮುಖ್ಯಮಂತ್ರಿ ಮಹಿಳಾ ಸಮ್ಮಾನ್ಯೋಜನೆ

ಈ ಯೋಜನೆಯು 2024ರಲ್ಲಿ ದೆಹಲಿ ಬಜೆಟ್‌ ನಲ್ಲಿ ವಿಶೇಷ ರೂಪದಲ್ಲಿ ಮಹಿಳೆಯರಿಗೆಂದೇ ಘೋಷಿಸಲ್ಪಟ್ಟಿತು. ಇದರ ಗುರಿ, ಸಂಬಂಧಿಸಿದ ಮಹಿಳೆಯರಿಗೆ ಪ್ರತಿ ತಿಂಗಳೂ 1 ಸಾವಿರ ರೂ. ಹಣ ನೀಡುವುದಾಗಿದೆ. ಇದರ ಗುರಿ, ದೆಹಲಿ ರಾಜ್ಯದ ಮಹಿಳೆಯರಿಗೆಂದೇ (ಇತರ ರಾಜ್ಯಗಳಲ್ಲಿ ಈ ಯೋಜನೆ ಇಲ್ಲ, ಆದರೂ ಸಹ, ಇದೇ ತರಹದ `ಮಹಿಳಾ ಸಮ್ಮಾನ್‌ ಸೇವಿಂಗ್ಸ್ ಸರ್ಟಿಫಿಕೇಟ್‌’ ಯೋಜನೆ ಇಡೀ ದೇಶದ ಎಲ್ಲಾ ಮಹಿಳೆಯರಿಗೂ ಲಭ್ಯ) ವಿಶೇಷವಾಗಿ, ಆರ್ಥಿಕವಾಗಿ ದುರ್ಬಲರಾದ ವರ್ಗದ ಮಹಿಳೆಯರನ್ನು ಸಶಕ್ತಗೊಳಿಸಲೆಂದೇ ಅವರಿಗೆ ಆರ್ಥಿಕ ನೆರವು ನೀಡಲು ರೂಪಿಸಲಾಗಿದೆ.

ಲಕ್ಷಾಧಿಪತಿ ದೀದೀ ಯೋಜನೆ

ಈ ಯೋಜನೆ ಮುಖ್ಯವಾಗಿ ಭಾರತದ ಎಲ್ಲಾ ಮಹಿಳೆಯರಿಗೂ ಉಪಕಾರಿ. ಭಾರತ ಸರ್ಕಾರದ ಗ್ರಾಮೀಣ ಮಹಿಳಾ ವಿಕಾಸ ಸಚಿವಾಲಯ, ಭಾರತೀಯ ಮಹಿಳೆಯರಿಗೆಂದೇ ಇದನ್ನು ಶುರು ಮಾಡಿದೆ. ಇದೊಂದು ನವೀನತಮ ಇನ್‌ ವೆಸ್ಟ್ ಮೆಂಟ್ ಆಯ್ಕೆಗಳಲ್ಲಿ ಒಂದಾಗಿದೆ. ಇದು ಗ್ರಾಮೀಣ ಕ್ಷೇತ್ರಗಳಲ್ಲಿ ವಾಸಿಸುವ ಮಹಿಳೆಯರನ್ನೇ ಮುಖ್ಯವಾಗಿ ಗುರಿಯಾಗಿಸಿಕೊಂಡು ರೂಪಿಸಲಾದ ಯೋಜನೆ, ನಗರದವರೂ ಸಹ ಇದರ ಲಾಭ ಪಡೆಯಬಹುದು. ಗ್ರಾಮೀಣ ಮಹಿಳೆಯರ ಆರ್ಥಿಕ ಸಶಕ್ತೀಕರಣಕ್ಕೆ, ಅವರನ್ನು ಆರ್ಥಿಕ ಸ್ವಾವಲಂಬಿಗಳಾಗಿಸಲು ಕೇಂದ್ರಿತ ಯೋಜನೆಯಾಗಿದೆ. ಈ ದೀದೀ ಒಬ್ಬ ಸ್ವಯಂ ಸಹಾಯಕ ಸಮೂಹದ ಸದಸ್ಯೆ ಆಗಿರಬೇಕು. ಈಕೆಯ ವಾರ್ಷಿಕ ಗೃಹ ಆದಾಯ 1 ಲಕ್ಷ ಯಾ ಅಧಿಕ ಆಗಿರಬಹುದು.

ಪ್ರತಿನಿಧಿ

ಸಣ್ಣಪುಟ್ಟದಾಗಿ ಉಳಿತಾಯ ಆರಂಭಿಸಿ

ಮಹಿಳೆಯರು ತಮ್ಮ ಮನೆಯ ಪ್ರತಿ ತಿಂಗಳ ಬಜೆಟ್‌ ರೂಪಿಸುತ್ತಾರಷ್ಟೆ. ಇದಾದ ನಂತರ ಮನೆಯ ಆದಾಯದಲ್ಲಿ ಉಳಿಯಬಹುದಾದ ಹಣವನ್ನು, ಸಣ್ಣಪುಟ್ಟ ಮೊತ್ತವಾದರೂ ನಿರ್ಲಕ್ಷಿಸದೆ, ಬ್ಯಾಂಕಿನ ಖಾತೆಯಲ್ಲಿ ಕೂಡಿಡುತ್ತಾ ಬರಬೇಕು. ಮಹಿಳೆಯರು ಈ ಖಾತೆಯ ಮೂಲಕ ತಾನೇ ಬ್ಯಾಂಕಿಗೆ ಹೋಗಿ ಹಣ ಕಟ್ಟು, ವಿತ್‌ ಡ್ರಾ ಮಾಡುವ ಪ್ರಕ್ರಿಯೆಯಲ್ಲಿ ತೊಡಗಬೇಕು. ಈಗೆಲ್ಲ ಮೊಬೈಲ್ ‌ನ ಆ್ಯಪ್‌ ಮೂಲಕ, ಎಟಿಎಂ ನೆರವಿನಿಂದ ಸಹ ಹಣ ಪಡೆಯಬಹುದು. ಅಗತ್ಯ ಬಿದ್ದಾಗ, ಆನ್‌ ಲೈನ್‌ ಮೂಲಕ ಇತರರಿಗೆ ಟ್ರಾನ್ಸ್ ಫರ್‌ ಸಹ ಮಾಡಬಹುದು, ಆನ್‌ ಲೈನ್‌ ಶಾಪಿಂಗ್‌ ಗೂ ಬಳಸಿಕೊಳ್ಳಬಹುದು. ಪಾಸ್‌ ಬುಕ್‌, ಲಾಕರ್‌, ಎಟಿಎಂನಂಥ ಸಾಧನಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು. ಬ್ಯಾಂಕಿಗೆ ಸಂಬಂಧಿಸಿದ ಪ್ರತಿ ಟ್ರಾನ್‌ ಸಾಕ್ಷನ್‌ ಅವರೇ ಮಾಡಬೇಕು, ಇದರಿಂದ ಹೊರಗಿನ ವ್ಯವಹಾರ ಅವರಿಗೆ ಸಲೀಸಾಗುತ್ತದೆ. ಈ ಮೂಲಕ ಜೀವವಿಮೆ ಹಣ ಕಟ್ಟಲಿಕ್ಕೂ ಅವಕಾಶ ಕಲ್ಪಿಸಿಕೊಳ್ಳಬೇಕು. ಇಲ್ಲಿನ ಹಣ ತೆಗೆದು ಸತತ ಖರ್ಚು ಮಾಡು ಚಪಲ ಬಿಟ್ಟು, ತಿಂಗಳಿಗೆ ಕನಿಷ್ಠ 500/ ಯಾ 1000/ ರೂ.ಗಳನ್ನು ನಮ್ಮದಲ್ಲ ಎಂದುಕೊಂಡು ಮುಖಾಂತರ ನಿಗದಿತ ಒಂದು ಮೊತ್ತನ್ನು ಬ್ಯಾಂಕಿಗೆ ಕಟ್ಟುತ್ತಾ, 1 ವರ್ಷ ಆದನಂತರ ಆ ಹಣನ್ನು FDಗೆ ಹೂಡಿಕೆ ಮಾಡಬೇಕು. ಹೆಂಗಸರು ಗಟ್ಟಿ ಮನಸ್ಸು ಮಾಡಿ ಹೀಗೆ ಮಾಡದಿದ್ದಲ್ಲಿ, ಎಂದೆಂದೂ ಅವರು ಉಳಿತಾಯ ಮಾಡಲು ಆಗುವುದೇ ಇಲ್ಲ!

ಮಹಿಳೆಯರಿಗೆ ಹೂಡಿಕೆಯ ಮಹತ್ವ

ಮಹಿಳೆಯರಿಗೆ ಹೂಡಿಕೆಯ ಆಯ್ಕೆಯು ಅವರ ಆರ್ಥಿಕ ಸ್ವಾತಂತ್ರ್ಯ ಹಾಗೂ ಸಂಪೂರ್ಣತೆಯ ಸ್ವಾವಲಂಬಿ ಜೀವನ ನಡೆಸುವ ಅವಕಾಶ ನೀಡುತ್ತದೆ. ಇದರಿಂದ ಅವರು ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳಬಹುದು, ತಮ್ಮ ಆರ್ಥಿಕ ಭವಿಷ್ಯತ್ತನ್ನು ಸುರಕ್ಷಿತ ಗೊಳಿಸಿಕೊಳ್ಳಲು ಉತ್ತಮ ಅವಕಾಶ ಕಲ್ಪಿಸುತ್ತದೆ. ಅವರ ವೈವಾಹಿಕ ಯಾ ಸಂಪಾದನೆಯ ಸ್ಥಿತಿ ಏನೇ ಇರಲಿ, ಅವರು ದೃಢ ಮನಸ್ಸು ಮಾಡಿ ಹೂಡಿಕೆ ಮಾಡಲೇಬೇಕು. ಈ ಅವಕಾಶ ಅವರ ಸ್ವಾತಂತ್ರ್ಯ ಹೆಚ್ಚಿಸುವುದಲ್ಲದೆ, ಅವರು ಮನೆಯ ಆರ್ಥಿಕ ನಿರ್ಧಾರಗಳಲ್ಲಿ ಪಾಲ್ಗೊಳ್ಳಲು, ತಮ್ಮ ಭವಿಷ್ಯ ಸುರಕ್ಷಿತ, ಸಕ್ರಿಯವಾಗಿರಲು, ಉತ್ತಮ ಆಕಾರ ನೀಡುವಲ್ಲಿ ಸಶಕ್ತರಾಗುತ್ತಾರೆ.

ಹೆಂಗಸರಿಗೆ ಹೂಡಿಕೆ ಅನೇಕ ಅವಕಾಶಗಳೊಂದಿಗೆ, ಸಿಂಗಲ್ ಮದರ್‌ ತನ್ನ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಒಂದು ದೊಡ್ಡ ಮೊತ್ತವನ್ನು ಬೇರೆಯಾಗಿ ಸಂಗ್ರಹಿಸಿಡಬಹುದಾಗಿದೆ. ಇದು ಖಂಡಿತಾ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿ. ಹೀಗಾಗಿ ಆರ್ಥಿಕ ಸ್ವಾತಂತ್ರ್ಯದತ್ತ ಹೆಂಗಸರು ವೇಗವಾಗಿ ಹೆಜ್ಜೆ ಹಾಕಲು ಮುಂದುವರಿಯಬೇಕು, ತಮ್ಮ ಹಣವನ್ನು ತಮ್ಮ ಇಷ್ಟದಂತೆ ಹೂಡಿಕೆ ಮಾಡುವಂತಾಗಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ