ಮೊನ್ನೆ ಅಮೇರಿಕಾದಿಂದ ಭಾರತಕ್ಕೆ ಬಂದಿದ್ದ ಸ್ನೇಹಿತರ ಕುಟುಂಬವೊಂದನ್ನು ಎಲ್ಲಾದರೂ ಹೊರಗೆ ಊಟಕ್ಕೆ ಕರೆದುಕೊಂಡು ಹೋಗೋಣ ಎಂದು ಯೋಚಿಸಿ ಅವರಿಗೆ ಕರೆ ಮಾಡಿ, ಬಹಳ ವರ್ಷಗಳಿಂದ ಅಲ್ಲೇ ನೆಲೆಸಿರುವ ಕಾರಣ ನಮ್ಮ ಆಹಾರ ಪದ್ದತಿ ಅವರಿಗೆ ಹಿಡಿಸದೇ ಇರಬಹುದು ಎಂದು ಭಾವಿಸಿ, ಏನ್ ಪಾ ದೋಸ್ತಾ? ಊಟಕ್ಕೆ ಎಲ್ಲಿಗೆ ಹೋಗೋಣು? ಇಲ್ಲೇ ಹತ್ತಿರದಲ್ಲೇ ಪಿಜ್ಜಾ ಬರ್ಗರ್ ಎಲ್ಲಾ ಸಿಕ್ತೈತೀ. ಅಲ್ಲಿಗೇ ಹೋಗೋಣು ಎಂದೆ. ಕೂಡಲೇ, ಏಕಾಏಕಿ ನನ್ನ ಗೆಳೆಯ ಸಿಟ್ಟಾಗಿ  ಯಾಕಪ್ಪಾ ದೋಸ್ತಾ? ನಾವ್ ಆರಾಮ್ ಆಗಿ ಇರೋದ್ ನಿನಗ್ ಇಷ್ಟಾ ಇಲ್ಲೇನ್? ಎಂದು ಹೇಳಿ ಅಮೇರಿಕಾದ ಆಹಾರ ಪದ್ದತಿಯ ಬಗ್ಗೆ ಕೆಲವೊಂದು ವಿಷಯಗಳನ್ನು ತಿಳಿಸಿದ್ದದ್ದನ್ನು ಕೇಳಿ ನನಗೆ ನಿಜಕ್ಕೂ ಅಚ್ಚರಿ ಮತ್ತು ಆಶ್ಚರ್ಯವಾಗಿದ್ದಲ್ಲದೇ, ನನಗೇ ಅರಿವಿಲ್ಲದಂತೆಯೇ ನಮ್ಮ ಆಹಾರ ಪದ್ದತಿಗಳ ಬಗ್ಗೆ ಹೆಮ್ಮೆ ಮೂಡಿದ್ದಂತೂ ಸತ್ಯ.

mcd

ನನ್ನ ಸ್ನೇಹಿತನೇ ಹೇಳಿದಂತೆ, ಅಮೆರಿಕಾದಲ್ಲಿ ಎಲ್ಲರೂ ಸಿರಿವಂತರೇನಲ್ಲ, ಅಲ್ಲಿಯೂ ಸಹಾ ಅತ್ಯಂತ ಬಡ ಕಾರ್ಮಿಕ ವರ್ಗದವರು ಇದ್ದು ಅವರೆಲ್ಲರೂ ತಮ್ಮ ದಿನ ನಿತ್ಯದ ಆಹಾರವಾಗಿ  ಮೆಕ್ಡೊನಾಲ್ಡ್ಸ್, ಕೆ.ಎಫ್.ಸಿ  ಪಿಜ್ಜಾ ಹಟ್ ಗಳಿಂದ ಬರ್ಗರ್, ಚಿಕನ್ ಮತ್ತು ಪಿಜ್ಜಾಗಳಂತಹ  ಜಂಕ್ ಫುಡ್ ಅಂದರೆ ಕಡಿಮೆ ಪೌಷ್ಠಿಕಾಂಶವುಳ್ಳ ಆಹಾರ ತಿನ್ನುವ ಮೂಲಕ ತಮ್ಮ ಹೊಟ್ಟೆ ತುಂಚಿಸಿಕೊಂಡರೆ, ಅಮೆರಿಕ ಮತ್ತು ಯುರೋಪಿನ ಸಿರಿವಂತ  ಮಿಲಿಯನೇರ್ಗಳು ಮಾತ್ರಾ ತಾಜಾ ತರಕಾರಿಗಳನ್ನು ಬೇಯಿಸಿ ತಿನ್ನುತ್ತಾರೆ. ಅಲ್ಲಿ  ತಾಜಾ ಹಿಟ್ಟಿನಿಂದ ತಯಾರಿಸಿದ ಬಿಸಿ ಬಿಸಿ ಬ್ರೆಡ್ (ರೊಟ್ಟಿ)ಗಳ ಜೊತೆ ತಾಜಾ ಹಣ್ಣುಗಳು ಮತ್ತು ತರಕಾರಿಗಳ ಸಲಾಡ್ ಗಳನ್ನು ತಿನ್ನುವವರು ನಿಜಕ್ಕೂ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಅಂದರೆ ಅಲ್ಲಿ ಶ್ರೀಮಂತರಿಗೆ ಮಾತ್ರ ತಾಜಾ ತರಕಾರಿಗಳನ್ನು ಖರೀದಿಸಲು ಶಕ್ತರಾಗಿರುತ್ತಾರೆ.

ದುರಾದೃಷ್ಟವಷಾತ್ ಬಡ ಜನರು ಮಾತ್ರಾ  ಪ್ಯಾಕೇಜ್ ಮಾಡಿದ ಆಹಾರವನ್ನು ತಿನ್ನುತ್ತಾರೆ. ವಾರಕ್ಕೊಮ್ಮೆ ತಮಗೆ ಅವಶ್ಯಕವಾಗಿರುವ ಆಹಾರವನ್ನು ಖರೀದಿಸಿ ಅವುಗಳನ್ನು  ಫ್ರೀಜರ್ನಲ್ಲಿ ಇಟ್ಟುಕೊಂಡು ಅಗತ್ಯವಿದ್ದಾಗ  ಮೈಕ್ರೋ ವೇವ್ ಒಲೆಯಲ್ಲಿ ಬಿಸಿ ಮಾಡಿ ಸೇವಿಸುತ್ತಾರೆ.

kfc

ಆದರೆ ಅದೇ ಭಾರತದಲ್ಲಿ ಇದಕ್ಕೆ ತದ್ವಿರುದ್ಧವಾಗಿ, ಶ್ರೀಮಂತರು ಇತ್ತೀಚೆಗೆ ತಮ್ಮ ಮನೆಗಳ ಫ್ರೀಜರ್ಗಳಲ್ಲಿ ಇದೇ ಪ್ಯಾಕ್ಡ್ ಜಂಕ್ ಪುಡ್ ಗಳನ್ನು ಸಂಗ್ರಹಿಸಿಕೊಳ್ಳುವುದು ಐಶಾರಾಮ್ಯ ಎಂದು ಭಾವಿಸಿರುವುದು ನಿಜಕ್ಕೂ ಸೋಜಿಗವೆನಿಸುತ್ತದೆ. ಇಷ್ಟಕ್ಕೇ ಸೀಮಿತವಾಗಿರಿಸದೇ,  ಮಕ್ಕಳ ಹುಟ್ಟುಹಬ್ಬ ಅಥವಾ ತಮ್ಮ ಕುಟುಂಬ ಅಥವಾ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಇದೇ  ಮೆಕ್ಡೊನಾಲ್ಡ್ಸ್ ಪಿಜ್ಜಾ ಹಟ್ , ಕೆ.ಎಫ್.ಸಿಗಳಲ್ಲಿ ಆಚರಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ. ನಿಜ ಹೇಳಬೇಕೆಂದರೆ, ಅದೇ  ಅಮೆರಿಕದಲ್ಲಿನ  ಶ್ರೀಮಂತರು ಬಿಡಿ ಯಾವುದೇ, ಮಧ್ಯಮ ವರ್ಗದವರೂ ಸಹಾ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಈ ಜಂಕ್ ಪುಡ್ ಜಾಯಿಂಟ್ಸ್ ಗಳಲ್ಲಿ ಆಚರಿಸಲು ಇಚ್ಚಿಸುವುದಿಲ್ಲ ಎಂಬುದು ಗಮನಾರ್ಹವಾಗಿದೆ.

ft1

ಅದೇ ಭಾರತದ ಪ್ರತೀ ಬಡವರ ಮನೆಗಳಲ್ಲಿಯೂ ತಾಜಾ ತಾಜವಾಗಿ ತಯಾರಿಸಿದ ಬಿಸಿ ಬಿಸಿ ರೊಟ್ಟಿ, ಅನ್ನದೊಂದಿಗೆ ತಾಜಾ ತರಕಾರಿಗಳಿಂದ ತಯಾರಿಸಿದ ಪಲ್ಯಗಳು, ವಿಧ ವಿಧವಾದ ದಾಲ್ ಮತ್ತು ತಾಜಾವಾದ ಕ್ಯಾರೆಟ್, ಸೌತೆಕಾಯಿ ಮತ್ತು ಈರುಳ್ಳಿಗಳ ಜೊತೆ ಇಡೀ ಮನೆಯವರೆಲ್ಲಾ ಒಟ್ಟಾಗಿ ಸಂತೋಷದಿಂದ ಆಹಾರವನ್ನು ಸೇವಿಸುತ್ತಾರೆಯೇ ಹೊರತು ಶೈತ್ಯೀಕರಿಸಿದ ಆಹಾರವನ್ನು ಸೇವಿಸುವುದಿಲ್ಲ, ಸೇವಿಸುವುದಿಲ್ಲ ಎನ್ನುವುದಕ್ಕಿಂತ ಅಂತಹ ಆಹಾರ ಪದಾರ್ಥಗಳನ್ನು ಖರೀದಿಸಲು ಶಕ್ತರಾಗಿಲ್ಲ ಎನ್ನುವುದು ವಾಸ್ತವಾಂಶವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ