ದೇವರ ತಲೆಯ ಮೇಲೆ ಹೂ ತಪ್ಪಿದರೂ ನಾವು ಪ್ರತಿ ದಿನ ಮುಂಜಾನೆ ವಾಕ್‌ ಹೋಗೋದು ತಪ್ಪಲ್ಲ. ಹೋಗುವಾಗ ಉದ್ದಕ್ಕೂ ಕಾಣುವ ಮರಗಳನ್ನು ಕಂಡು ನನ್ನವರು ಯಾವಾಗಲೂ ಉದ್ಗರಿಸುವ ಮಾತು, `ಮರಗಳನ್ನು ನೆಡುವಾಗ ಹಣ್ಣಿನ ಮರಗಳನ್ನು ನೆಡಬಾರದೇ,' ಎಂದು. ಅದಕ್ಕೆ ನಾನು ಉತ್ತರಿಸುತ್ತಿದ್ದೆ, `ಹಣ್ಣಿನ ಮರಗಳನ್ನು ನೆಟ್ಟರೂ ಹಣ್ಣುಗಳು ಉಳಿಯೋಕೆ ಎಲ್ಲಿ ಬಿಡ್ತಾರೆ, ಯಾರಾದರೂ ತಿಂದು ಬಿಡ್ತಾರೆ,' ಎನ್ನುತ್ತಿದ್ದೆ.

`ಯಾರಾದರೂ ತಿನ್ನಲಿ ಬಿಡು, ಯಾರು ತಿಂದರೇನು?' ಎನ್ನುವುದು ಅವರ ಉತ್ತರ. ಹೌದಲ್ಲವೇ ಹಣ್ಣಿನ ಮರಗಳನ್ನು ನೆಟ್ಟರೆ ಯಾರಿಗಾದರೂ ಹಣ್ಣು ಸಿಗುತ್ತೆ ಅಲ್ಲವೇ ಎಂದು ನನಗೆ ಆಗ ಜ್ಞಾನೋದಯವಾಯಿತು.

ಈ ರೀತಿ ಯೋಚಿಸುತ್ತಿರುವಾಗಲೇ ಕಳೆದ ಜೂನ್‌ ಐದನೇ ತಾರೀಖು ವಿಶ್ವ ಪರಿಸರ ದಿನ ಬಂದಾಗ ಕೆಲವು ಹಣ್ಣಿನ ಮರಗಳನ್ನು ನೆಡುವುದು ಎಂದುಕೊಂಡೆ. ಆಗ ನೆನಪಿಗೆ ಬಂದಿದ್ದು ನಮ್ಮ ಬೆಂಗಳೂರಿನ ಎಚ್‌.ಎಸ್‌.ಆರ್‌ ಲೇಔಟ್‌ ನಲ್ಲಿ ಪರಿಸರವನ್ನು ಶುದ್ಧವಾಗಿಡುವ ಸಲುವಾಗಿ ಸದಾ ದುಡಿಯುವ ಸಿಟಿಜನ್‌ ಫೋರಂ, ಪ್ಲಾಸ್ಟಿಕ್‌ ಬಳಕೆಯನ್ನು ತಡೆಯಲು ನಿರಂತರವಾಗಿ ಶ್ರಮಿಸುತ್ತಿದೆ ಎಂಬುದು.

ಮನೆಯ ತ್ಯಾಜ್ಯವನ್ನು ಬಳಸಿ ಗೊಬ್ಬರ ಮಾಡುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬಂದು, ಕಲಿಕಾ ಕೇಂದ್ರದಲ್ಲಿ ಮಿಕ್ಕವರಿಗೂ ಗೊಬ್ಬರ ತಯಾರು ಮಾಡಲು ತರಬೇತಿ ನೀಡುತ್ತಿದೆ. ಕಸದ ಸಂಸ್ಕರಣೆ ಇತರ ಬೇರೆಲ್ಲಾ ಭಾಗಗಳಿಗಿಂತಾ ಎಚ್.ಎಸ್‌.ಆರ್‌. ಬಡಾವಣೆಯಲ್ಲಿ ಸಮರ್ಥವಾಗಿ ನಡೆಯಲು ಮುಖ್ಯ ಕಾರಣ ಸಿಟಿಜನ್‌ ಫೋರಂ.

ಅವರು ಪರಿಸರ ಕಾಪಾಡುವ ದೃಷ್ಟಿಯಿಂದ ಮಾಡುತ್ತಿರುವ ಕೆಲಸಗಳು ಅನೇಕ. ಅಂತೆಯೇ ಇದೂ ಒಂದಷ್ಟೇ. ಕಟ್ಟಡ ನಿರ್ಮಾಣದ ತ್ಯಾಜ್ಯಗಳನ್ನು ತುಂಬಿಸುತ್ತಿದ್ದ ಪಾಳು ಬಿದ್ದಿದ್ದ ಒಂದು ಸಣ್ಣ ಬಿ.ಬಿ.ಎಂ.ಪಿ.ಯ ನಿವೇಶನದಲ್ಲಿ ಹರಸಾಹಸ ಮಾಡಿ ಅಗತ್ಯವಿರುವ ಅನುಮತಿ ಪಡೆದು ಮರಗಳನ್ನು ನೆಟ್ಟು ಅದನ್ನು ಬಯೋ ಡೈವರ್ಸಿಟಿ ಪಾರ್ಕ್‌ ಎಂದು ಹೆಸರಿಸಿ ಸುತ್ತಲಿನ ಪರಿಸರಕ್ಕೆ ಶುದ್ಧ ಗಾಳಿಯನ್ನು ನೀಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ನಾವು ಅಲ್ಲಿಯೇ ಕೆಲವು ಹಣ್ಣಿನ ಮರಗಳನ್ನು ನೆಡಲು ನಿಶ್ಚಯಿಸಿದೆ.

ಭಾನುವಾರ ಮನೆ ಮಂದಿಯೆಲ್ಲಾ ಹೋಗಿ ಎಚ್‌.ಎಸ್‌.ಆರ್‌ನ ಸಿಟಿಜನ್‌ ಫೋರಂನ ಸಕ್ರಿಯ ಸದಸ್ಯರಾದ ರತ್ನಾಕರ್‌,  ಅಧ್ಯಕ್ಷರಾದ ರಜಿನಿ ಭೋಪಯ್ಯ, ಕಾರ್ಯದರ್ಶಿ ಸುರೇಶ್‌ ಬಾಲಸುಬ್ರಹ್ಮಣ್ಯಂ ಇವರೆಲ್ಲರ ಸಹಕಾರದಿಂದ ಹಣ್ಣಿನ ಮರಗಳು, ಮಾವು, ನೇರಳೆ ಮತ್ತು ಸಪೋಟಾ ಅಲ್ಲದೆ ಮತ್ತಷ್ಟು ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಸಿದ್ದಾಯಿತು.

ವಿಶ್ವ ಪರಿಸರ ದಿನ

ಪ್ರತಿ ವರ್ಷ ಜೂನ್‌ ಐದರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. 1873 ರಿಂದ ನಡೆಸಿಕೊಂಡು ಬಂದ ವಿಶ್ವ ಪರಿಸರ ದಿನದ ಉದ್ದೇಶ, ಜನಸಂಖ್ಯಾ ಸ್ಛೋಟ ಮಿತಿಯಿಲ್ಲದೆ ನೀರನ್ನು ಬಳಸುವುದು, ನೀರನ್ನು ಕಲುಷಿತಗೊಳಿಸುವುದು ಈ ಎಲ್ಲದರಿಂದ ಭೂಮಿತಾಯಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ 143 ದೇಶಗಳಲ್ಲಿ ಆಚರಿಸಲಾಗುತ್ತದೆ. ಭೂಮಿತಾಯಿ ಮೂರು ಕಡೆಗಳಿಂದ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಹವಾಮಾನ ಮತ್ತು ಪ್ರಕೃತಿ, ಜನರು ತಡೆಯಲಾಗದಷ್ಟು ವಿಪರೀತವಾಗಿ ಬಿಸಿಯಾಗುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ